ಈ ಹಣ್ಣಿನ ಬಗ್ಗೆ ನಿಮಗೆ ತಿಳಿದಿದೆಯೇ..? ಮಧುಮೇಹಕ್ಕೆ ಉತ್ತಮ, ಆರೋಗ್ಯಕ್ಕೆ ಒಳ್ಳೆಯದು 

Seeme Hunase health benefits : ಈ ಹಣ್ಣಿನ ಬಗ್ಗೆ ಹೆಚ್ಚು ತಿಳಿದಿಲ್ಲದ ಅನೇಕ ಜನರಿದ್ದಾರೆ. ಈ ಹಣ್ಣು ರುಚಿಯಲ್ಲಿ ಸಿಹಿಯಾಗಿರುತ್ತದೆ ಅಲ್ಲದೆ, ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಜಿಲೇಬಿಯಂತೆ ದುಂಡಗಿರುವ ಈ ಹಣ್ಣು ಹೆಚ್ಚಾಗಿ ಕಾಡಿನಲ್ಲಿ ಬೆಳೆಯುತ್ತದೆ. ಇದನ್ನು ಸೀಮೆ ಹುಣಸೆ, ಸಿಹಿ ಹುಣಸೆ, ಕಾಡು ಹುಣಸೆ, ಇಲಾಚಿ ಹಣ್ಣು, ದೊರ ಹುಣಸೆ, ಚಕ್ಕುಲಿ ಮರ, ಇಲಾಚಿ ಹುಂಚಿ ಎಂದೂ ಕರೆಯುತ್ತಾರೆ. 

Written by - Krishna N K | Last Updated : May 7, 2023, 04:07 PM IST
  • ಸೀಮೆ ಹುಣಸೆ ಆರೋಗ್ಯ ರಹಸ್ಯ ಬಗ್ಗೆ ಹೆಚ್ಚಾಗಿ ಜನರಿಗೆ ತಿಳಿದಿಲ್ಲ.
  • ಈ ಹಣ್ಣು ನೋಡೋಕೆ ಎಷ್ಟು ಸುಂದರವಾಗಿದೆಯೋ ಅಷ್ಟೇ ಆರೋಗ್ಯಕ್ಕೆ ಉತ್ತಮ.
  • ಇದನ್ನು ತಿನ್ನುವುದರಿಂದ ಆರೋಗ್ಯ ಮತ್ತು ಅನೇಕ ಪ್ರಯೋಜನಗಳು ಹಲವು.
ಈ ಹಣ್ಣಿನ ಬಗ್ಗೆ ನಿಮಗೆ ತಿಳಿದಿದೆಯೇ..? ಮಧುಮೇಹಕ್ಕೆ ಉತ್ತಮ, ಆರೋಗ್ಯಕ್ಕೆ ಒಳ್ಳೆಯದು  title=

Health tips : ಕಾಡು ಹುಣಸೆ, ಸೀಮೆ ಹುಣಸೆ, ಸಿಹಿ ಹುಣಸೆ ಹೀಗೆ ವಿಭಿನ್ನ ಹೆಸರುಗಳಿಂದ ಕರೆಯಲ್ಪಡುವ ಈ ಹಣ್ಣು ನೋಡೋಕೆ ಎಷ್ಟು ಸುಂದರವಾಗಿದೆಯೋ ಅಷ್ಟೇ ಆರೋಗ್ಯಕ್ಕೆ ಉತ್ತಮವೂ ಕೂಡ ಹೌದು. ಹೆಚ್ಚಾಗಿ ಕಾಡಿನಲ್ಲಿ ಬೆಳೆಯುವ ಈ ಹಣ್ಣಿನ ಮಹತ್ವದ ಕುರಿತು ಜನರಿಗೆ ತಿಳಿದಿಲ್ಲ. ಭಾರತದಾದ್ಯಂತ ಕಂಡುಬರುವ ಈ ಹಣ್ಣನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಹೆಸರು ವಿಭಿನ್ನವಾಗಿರಬಹುದು ಆದರೆ ಇದನ್ನು ತಿನ್ನುವುದರಿಂದ ಆರೋಗ್ಯ ಮತ್ತು ಅನೇಕ ಪ್ರಯೋಜನಗಳು ಹಲವು.

ಆರೋಗ್ಯ ತಜ್ಞರ ಪ್ರಕಾರ, ಸೀಮೆ ಹುಣಸೆ ಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿರುತ್ತವೆ ಎಂದು ಹೇಳಲಾಗುತ್ತದೆ. ಈ ಹಣ್ಣು ವಿಟಮಿನ್ ಸಿ, ಪ್ರೋಟೀನ್, ಕಾರ್ಬೋಹೈಡ್ರೇಟ್, ಪೊಟ್ಯಾಸಿಯಮ್, ಥಯಾಮಿನ್ ಮುಂತಾದ ಪೋಷಕಾಂಶಗಳು ಸಮೃದ್ಧವಾಗಿವೆ. 

ಇದನ್ನೂ ಓದಿ: ಮಧುಮೇಹ ರೋಗಿಗಳಿಗೆ ವರದಾನಕ್ಕೆ ಸಮಾನ ಕೆಂಪು ಪಾಲಕ್, ಕೆಲವೇ ನಿಮಿಷಗಳಲ್ಲಿ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಬರುತ್ತೆ!

ಗೋರಸ್ ಹುಣಸೆ ಹಣ್ಣಿನ ಪ್ರಯೋಜನಗಳು

  • ಸೀಮೆ ಹುಣಸೆಯಲ್ಲಿ ಪೋಷಕಾಂಶಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ, ಆದ್ದರಿಂದ ಇದರ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 
  • ಸೀಮೆ ಹುಣಸೆ ಮಧುಮೇಹ ರೋಗಿಗಳಿಗೆ ಸಹ ಪ್ರಯೋಜನಕಾರಿಯಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಈ ಹಣ್ಣನ್ನು ನೇರವಾಗಿ ತಿನ್ನಬಹುದು ಅಲ್ಲದೆ, ಅದರ ರಸವನ್ನು ಸಹ ತಯಾರಿಸಬಹುದು. ಇದರ ಎಲೆಯ ಸಾರವು ಮಧುಮೇಹಕ್ಕೆ ಉತ್ತಮ ಎಂದು ಹೇಳಲಾಗುತ್ತದೆ.
  • ಯಾವುದೇ ರೀತಿಯ ಹೊಟ್ಟೆಯ ಸಮಸ್ಯೆಯಿದ್ದರೆ ಸೀಮೆ ಹುಣಸೆ ತಿಂದರೆ ಗುಣವಾಗುತ್ತದೆ ಎಂದು ಹೇಳಲಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಂದ ರಕ್ಷಿಸುತ್ತದೆ.
  • ಸೀಮೆ ಹುಣಸೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಬಹುದು. ಇದರಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಈ ಹಣ್ಣು ಹೃದ್ರೋಗಿಗಳಿಗೆ ಉತ್ತಮ
  • ರಕ್ತದ ಕೊರತೆ ಇರುವವರು ಈ ಸೀಮೆ ಹುಣಸೆ ಹಣ್ಣನ್ನು ತಿನ್ನಬೇಕು. ಇದರಲ್ಲಿ ಕಬ್ಬಿಣದ ಅಂಶ ಹೆಚ್ಚಿರುವುದರಿಂದ ರಕ್ತಹೀನತೆಯ ಸಮಸ್ಯೆ ನಿವಾರಣೆಯಾಗುತ್ತದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News