Ragi Mudde Benefits: ವಾರಕ್ಕೊಂದು ಅಲ್ಲ, ದಿನಕ್ಕೊಂದು ರಾಗಿ ಮುದ್ದೆ ಸೇವಿಸಿ ಅದರ ಪ್ರಯೋಜನ ನಿಮಗೆ ತಿಳಿಯುವುದು..!

Ragi Mudde Benefits: ಹಳ್ಳಿಗಳಲ್ಲಿ ಊಟಕ್ಕೆ ಮಿಸ್‌ ಇಲ್ಲದಂತೆ ಪ್ರತಿನಿತ್ಯ ರಾಗಿ ಮುದ್ದೆ ಸೇವಿಸುತ್ತಾರೆ. ರಾಗಿ ಮುದ್ದೆ ಸೇವನೆಯಿಂದ ಅದರ ಉಪಯೋಗ ತಿಳಿದು ಸೇವಿಸಿದರೇ ಆರೋಗ್ಯಕ್ಕೆ ಇನ್ನಷ್ಟು ಸಹಕಾರಿಯಾಗುತ್ತದೆ. 

Written by - Zee Kannada News Desk | Last Updated : Jun 1, 2023, 05:50 PM IST
  • ಉತ್ತಮ ಆಹಾರ ಪದ್ದತಿಯಲ್ಲಿ ರಾಗಿ ಮುದ್ದೆಯು ಒಂದಾಗಿದೆ
  • ಅನೇಕ ಪೋಷಕಾಂಶ ಹೊಂದಿರುವ ಮುದ್ದೆ
  • ಪ್ರತಿನಿತ್ಯ ಇದರ ಸೇವನೆಯೂ ಉತ್ತಮ ಆರೋಗ್ಯಕ್ಕೆ ಸಹಕಾರಿ
 Ragi Mudde Benefits: ವಾರಕ್ಕೊಂದು ಅಲ್ಲ, ದಿನಕ್ಕೊಂದು ರಾಗಿ ಮುದ್ದೆ ಸೇವಿಸಿ ಅದರ ಪ್ರಯೋಜನ ನಿಮಗೆ ತಿಳಿಯುವುದು..!  title=

Health Tipes: ಪ್ರಸ್ತುತ ದಿನಗಳಲ್ಲಿ ಆಧುನಿಕರಣ ಜೊತೆಯಲ್ಲಿ ಊಟ ಪದ್ದತಿಯು ಬದಲಾಗಿದೆ. ಇಂದು ಆಹಾರವನ್ನು ತಾವೇ ತಯಾರಿಸಿ ತಿನ್ನುವುದು ಸ್ಪಲ್ಪ ಮಟ್ಟಿಗೆ ಬದಲಾಗಿ ಎಲ್ಲವನ್ನೂ ಆನ್‌ಲೈನ್‌ ಮೂಲಕ ತರಿಸಿ ತಿನ್ನುವವರ ಸಂಖ್ಯೆ ಹೆಚ್ಚು. ಆದರೆ ಹಳ್ಳಿಗಳಲ್ಲಿ ಊಟಕ್ಕೆ ಮಿಸ್‌ ಇಲ್ಲದಂತೆ ಪ್ರತಿನಿತ್ಯ ರಾಗಿ ಮುದ್ದೆ ಸೇವಿಸುತ್ತಾರೆ. ರಾಗಿ ಮುದ್ದೆ ಸೇವನೆಯಿಂದ ಅದರ ಉಪಯೋಗ ತಿಳಿದು ಸೇವಿಸಿದರೇ ಆರೋಗ್ಯಕ್ಕೆ ಇನ್ನಷ್ಟು ಸಹಕಾರಿಯಾಗಬಹುದು. 

ರಾಗಿ ಮುದ್ದೆಯಲ್ಲಿ  ಕ್ಯಾಲ್ಸಿಯಂ , ವಿಟಮಿನ್ ಡಿ ,ಅಮಿನೋ ಆಮ್ಲ, ಲೆಸಿಥಿನ್ ಮತ್ತು ಮೆಥಿಯೋನಿನ್ ಅಂಶಗಳನ್ನು ಒಳಗೊಂಡಿದೆ. 

ಇದನ್ನೂ ಓದಿ: Benefits Of Horse Gram: ಅತಿಸಾರ ಸೇರಿದಂತೆ ಹಲವು ಸಮಸ್ಯೆಗೆ ಮದ್ದು ಮೊಳಕೆ ಕಟ್ಟಿದ ಹುರುಳಿಕಾಳು!

ರಾಗಿಯಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಹೇರಳವಾಗಿರುವುದರಿಂದ ಮೂಳೆಗಳನ್ನು ಬಲಿ ಪಡಿಸಿ, ಸ್ನಾಯುಗಳ ಬೆಳವಣಿಗೆಗೆ ಸಹಕರಿಸುತ್ತದೆ. ಹಾಗೆಯೇಇದರಲ್ಲಿ ಹೇರಳ ನೀರಿನಾಂಶ ಇರುವುದರಿಂದ ಜೀರ್ಣಕ್ರಿಯೆಗೂ ಸಹಕರಿಸುತ್ತದೆ.

ಇತ್ತೀಚೆಗೆ ಮಧುಮೇಹ ರೋಗಿಗಳ ಸಂಖ್ಯೆಯು ಏರಿಕೆಯಾಗುತ್ತಿದೆ. ಅಂಥವರಿಗೂ ಇದು ಉತ್ತಮ ಆಹಾರವಾಗಿದೆ. ರಾಗಿಮುದ್ದೆಯು ನಾರಿನಾಂಶ ಹೊಂದಿದೆ. ಸಕ್ಕರೆ ಮಟ್ಟ,ಗ್ಲೈಸೆಮಿಕ್ ಇಂಡೆಕ್ಸ್ ಅಂಶವಿರುವುದರಿಂದ ಅನಿಯಮಿತ್ತ ಹಸಿವನ್ನು ತಡೆಯುತ್ತದೆ. 

ಕೊಲೆಸ್ಟ್ರಾಲ್ ನಿಯಂತ್ರಣ 
ರಾಗಿ ಮುದ್ದೆಯಲ್ಲಿ ಅಮಿನೋ ಆಮ್ಲವಾಗಿರುವಂತಹ ಲೆಸಿಥಿನ್ ಮತ್ತು ಮೆಥಿಯೋನಿನ್ ಅಂಶ ಹೆಚ್ಚು ಇದೆ. ಆದ್ದರಿಂದ ದೇಹದ ಬೇಡವಾದ ತ್ಯಾಜ್ಯವನ್ನು ಹೊರ ಹಾಕುತ್ತದೆ.

ಇದನ್ನೂ ಓದಿ: Coconut Health Benefits: ತೆಂಗು - ಇಂಗು ಇದ್ದರೆ ಮಂಗ ಸಹ ಚೆನ್ನಾಗಿ ಅಡುಗೆ ಮಾಡಬಲ್ಲದು: ಆದ್ರೆ ತೆಂಗಿನ ಕಾಯಿ ಉಪಯೋಗ ಬಲ್ಲಿರಾ..

ರಕ್ತಹೀನತೆ ನಿಯಂತ್ರಣ
ಪ್ರಸ್ತುತ ದಿನಗಳಲ್ಲಿ ಎಲ್ಲಾ ವಯಸ್ಸಿನವರು  ಹಿಮೋಗ್ಲೋಬಿನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದಂತೆ ಅನೇಕ ರೋಗಗಳು ಬರುತ್ತವೆ. ಮುದ್ದೆ ಸೇವನೆಯಿಂದ ಕಾಲಕ್ರಮೇಣ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News