Processed Foodನ ಅತಿಯಾದ ಸೇವನೆ ಸಾವಿಗೂ ಕಾರಣವಾಗಬಹುದು ಎಚ್ಚರ ..!

ಉತ್ತಮ ಆರೋಗ್ಯಕ್ಕಾಗಿ ದೈಹಿಕ ವ್ಯಾಯಾಮ ಎಷ್ಟು ಮುಖ್ಯವೋ ಆರೋಗ್ಯಕರ ಆಹಾರ ಸೇವನೆಯೂ ಅಷ್ಟೇ ಮುಖ್ಯ.

Written by - Ranjitha R K | Last Updated : Jan 12, 2021, 07:24 PM IST
  • ಸಂಸ್ಕರಿಸಿ ಆಹಾರ ಆರೋಗ್ಯಕ್ಕೆ ಹಾನಿಕಾರಕ
  • ಸಂಸ್ಕರಿಸಿದ ಆಹಾರದಿಂದ ಹೃದ್ರೋಗಕ್ಕೆ ಒಳಗಾಗಬಹುದು
  • ಸಂಸ್ಕರಿಸಿದ ಆಹಾರದ ಅತಿಯಾದ ಸೇವನೆಯಿಂದ ಸಾವು ಸಮೀಪಿಸಬಹುದು
 Processed Foodನ ಅತಿಯಾದ ಸೇವನೆ ಸಾವಿಗೂ ಕಾರಣವಾಗಬಹುದು ಎಚ್ಚರ ..! title=
ಸಂಸ್ಕರಿಸಿದ ಆಹಾರದ ಅತಿಯಾದ ಸೇವನೆಯಿಂದ ಸಾವು ಸಮೀಪಿಸಬಹುದು (file photo)

ಬೆಂಗಳೂರು : ಇತ್ತೀಚೆಗೆ ಯಾರನ್ನೇ ಕೇಳಿದರೂ ನಾವು ತುಂಬಾ ಬ್ಯುಸಿ ಅನ್ನೋ ಉತ್ತರ ಸಿದ್ಧವಿರುತ್ತದೆ. ತಮ್ಮ ದೈನಂದಿನ ಚಟುವಟಿಕೆಯಲ್ಲಿ ಎಷ್ಟು ನಿರತರಾಗಿರುತ್ತಾರೆ ಎಂದರೆ ತಮ್ಮ  ಊಟ ತಿಂಡಿಯ ಯೋಚನೆಯೂ ಕೆಲವರಿಗೆ ಇರುವುದಿಲ್ಲ. ಇನ್ನು ಕೆಲವರು ಮಾನಸಿಕ, ಶಾರೀರಿಕ ಒತ್ತಡಗಳ ಮಧ್ಯೆಯೇ ಜೀವನ ಕಳೆಯುತ್ತಾರೆ. ಇಂಥಹ ಪರಿಸ್ಥಿತಿಯಲ್ಲಿ ಶಾರೀರಿಕ, ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಉತ್ತಮ ಆರೋಗ್ಯಕ್ಕಾಗಿ ದೈಹಿಕ ವ್ಯಾಯಾಮ ಎಷ್ಟು ಮುಖ್ಯವೋ ಆರೋಗ್ಯಕರ ಆಹಾರ ಸೇವನೆಯೂ ಅಷ್ಟೇ ಮುಖ್ಯ.

ಸಂಸ್ಕರಿಸಿದ ಆಹಾರ ಆರೋಗ್ಯಕ್ಕೆ ಹಾನಿಕರ :
ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಸಂಸ್ಕರಿಸಿದ ಆಹಾರಗಳತ್ತ (Processed Food) ವಾಲುತ್ತಿದ್ದಾರೆ.  ಆದರೆ, ಸಂಸ್ಕರಿಸಿದ ಆಹಾರ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು (Side Effects) ಬೀರುತ್ತದೆ. ಈ ಕಾರಣದಿಂದಾಗಿ ಸಮಯದ ಅಭಾವ  ಎಂದು  ಹೇಳಿ ಬೇಕಾಬಿಟ್ಟಿ ಸಂಸ್ಕರಿಸಿದ ಆಹಾರವನ್ನು ಸೇವಿಸಬಾರದು. ಸಂಸ್ಕರಿಸಿದ ಆಹಾರವನ್ನು ನಾವು ಎಷ್ಟು ಕಡಿಮೆ ಸೇವಸುತ್ತೇವೆಯೋ ಅಷ್ಟು ಆರೋಗ್ಯದಿಂದ (Health) ಇರಬಹುದು.

ಇದನ್ನೂ ಓದಿ : Hair Care Tips: ವಾರಕ್ಕೆ ಎರಡು ಬಾರಿ ಈ ಪ್ಯಾಕ್ ಹಾಕಿ ದಟ್ಟವಾದ ಕೂದಲು ನಿಮ್ಮದಾಗಿಸಿ

ಸಂಸ್ಕರಿಸಿದ ಆಹಾರ ಸೇವನೆಯಿಂದ ಸಾವು ಸಮೀಪಿಸಬಹುದು :
American Journal Of Clinical Nutrition ಪ್ರಕಾರ ಪಿಜ್ಹಾ (Pizza), ಬರ್ಗರ್ (Burger), ಕೇಕ್ (Cake)  ಮುಂತಾದ ತಿನಿಸುಗಳ ಅತಿಯಾದ ಸೇವನೆಯಿಂದ ಹೃದಯಕ್ಕೆ ಸಂಬಂಧಿಸಿದ ರೋಗಗಳು ಕಾಣಿಸಿಕೊಳ್ಳಬಹುದು. ಸಂಸ್ಕರಿಸಿದ ಆಹಾರವನ್ನು ಅತಿಯಾಗಿ ಸೇವಿಸುವುದರಿಂದ ಸಾವು ಸಮೀಪಿಸಬಹುದು.

ಸಂಸ್ಕರಿಸಿದ ಆಹಾರ ಸೇವನೆ ಅನೇಕ ರೋಗಗಳಿಗೆ ಆಹ್ವಾನ ನೀಡಬಹುದು : 
Insider Reportನ ಪ್ರಕಾರವೂ ಬೆಚ್ಚಿ ಬೀಳುವ ಮಾಹಿತಿ ಹೊರಬಿದ್ದಿದೆ. ವರದಿಯ ಪ್ರಕಾರ ಇಟಲಿಯಲ್ಲಿ(Italy) 35ವರ್ಷ ಮೇಲ್ಪಟ್ಟ 24,324ಮಂದಿಯ ಜೀವನ ಶೈಲಿಯ ಬಗ್ಗೆ ಸುಮಾರು 10ವರ್ಷಗಳವರೆಗೆ ನಿಗಾ ಇಡಲಾಗಿತ್ತು. ಈ ಸಂಶೋಧನೆಯ ಪ್ರಕಾರ ಸಂಸ್ಕರಿಸಿದ ಆಹಾರ ಸೇವಿಸುವವರಿಗೆ ಹೃದ್ರೋಗ, (Heart Disease) ಸ್ಟ್ರೋಕ್ ನಂಥಹ ಸಮಸ್ಯೆಗಳು ಎದುರಾಗಬಹುದು. ಸಂಸ್ಕರಿಸಿದ ಆಹಾರದೊಂದಿಗೆ 300ರಿಂದ 1200ರಷ್ಟು ಕ್ಯಾಲರಿ ದೇಹ ಸೇರುತ್ತದೆ. ಸಂಸ್ಕರಿಸಿದ ಆಹಾರ ಸೇವಿಸುವವರಲ್ಲಿ ಶೇ. 58ರಷ್ಟು ಮಂದಿ ಹೃದಯ ಸಂಬಂಧಿ ಕಾಯಿಲೆಯಿಂದಲೇ ಸಾವಿಗೀಡಾಗುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News