ಪ್ರತಿನಿತ್ಯ 7 ಗಂಟೆ ನಿದ್ರೆ ಮಾಡಿ, ಇಲ್ಲವಾದರೆ ಈ ಸಮಸ್ಯೆ ಖಂಡಿತ!

ಪ್ರತಿನಿತ್ಯ ಕನಿಷ್ಠ 7 ಗಂಟೆಗಳಿಗಿಂತ ಕಡಿಮೆ ನಿದ್ರಿಸುವವರು ಹೃದಯ ಸಮಸ್ಯೆಗಳಿಗೆ ಬೇಗ ಒಳಗಾಗುತ್ತಾರೆ ಎಂದು ಸಂಶೋಧನೆಯೊಂದು ಹೇಳಿದೆ.   

Last Updated : Jun 13, 2019, 02:31 PM IST
ಪ್ರತಿನಿತ್ಯ 7 ಗಂಟೆ ನಿದ್ರೆ ಮಾಡಿ, ಇಲ್ಲವಾದರೆ ಈ ಸಮಸ್ಯೆ ಖಂಡಿತ! title=

ನ್ಯೂಯಾರ್ಕ್: ಪ್ರತಿನಿತ್ಯ ಕನಿಷ್ಠ 7 ಗಂಟೆಗಳಿಗಿಂತ ಕಡಿಮೆ ನಿದ್ರಿಸುವವರು ಹೃದಯ ಸಮಸ್ಯೆಗಳಿಗೆ ಬೇಗ ಒಳಗಾಗುತ್ತಾರೆ ಎಂದು ಸಂಶೋಧನೆಯೊಂದು ಹೇಳಿದೆ. 

ಎಕ್ಸ್'ಪರಿಮೆಂಟಲ್ ಫಿಸಿಯಾಲಜಿ ಜರ್ನಲ್ ನಲ್ಲಿ ಪ್ರಕಟವಾದ ಸಂಶೋಧನಾ ವರದಿಗಳ ಪ್ರಕಾರ ಪ್ರತಿನಿತ್ಯ ರಾತ್ರಿ 7 ಗಂಟೆಗಿಂತ ಕಡಿಮೆ ನಿದ್ರಿಸುವವರಲ್ಲಿ ದೇಹದ ಮೈಕ್ರೋ-RNAಗಳ ರಕ್ತದ ಮಟ್ಟ ಕಡಿಮೆಯಾಗುತ್ತದೆ. ಮೈಕ್ರೋ RNA ರಕ್ತನಾಳಗಳ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನಲಾಗಿದೆ.

"ಈ ಸಂಶೋಧನೆಯು ಒಂದು ಹೊಸ ಸಂಭಾವ್ಯ ಕಾರ್ಯವಿಧಾನವನ್ನು ಸೂಚಿಸುತ್ತದೆ. ಇದರ ಪ್ರಕಾರ ನಿದ್ರೆಯು ಹೃದಯದ ಆರೋಗ್ಯ ಮತ್ತು ಒಟ್ಟಾರೆ ಶರೀರ ವಿಜ್ಞಾನದ ಮೇಲೆ ಪರಿಣಾಮ ಬೀರುತ್ತದೆ" ಎಂದು ಅಮೇರಿಕದ ಸಂಯುಕ್ತ ಸಂಸ್ಥಾನದ ಕೊಲೋರಾಡೋ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಕ್ರಿಸ್ಟೋಫರ್ ದಾಸುಜಾ ಹೇಳಿದ್ದಾರೆ.

ಈ ಸಂಶೋಧನೆಯಲ್ಲಿ 44 ರಿಂದ 62 ಯುವ ಮಹಿಳಾ ಮತ್ತು ಪುರುಷರನ್ನು ಒಳಪಡಿಸಲಾಗಿದ್ದು , ಅವರಿಗೆ ನಿದ್ರೆಗೆ ಸಂಬಂಧಿಸಿದಂತೆ ಒಂದು ಮಾದರಿ ಪ್ರಶ್ನೆಪತ್ರಿಕೆಯನ್ನು ನೀಡಿ ತುಂಬಲು ಹೇಳಲಾಗಿತ್ತು. ಅದರ ಪ್ರಕಾರ, ಈ ಜನರಲ್ಲಿ ಪ್ರತಿನಿತ್ಯ 7 ರಿಂದ 8.5 ಗಂಟೆ ನಿದ್ರಿಸುವವರು ಅರ್ಧ ಜನರಿದ್ದರೆ, ಉಳಿದವರು 5 ರಿಂದ 6.5 ಗಂಟೆ ನಿದ್ರಿಸುವವರಾಗಿದ್ದರು. ಇವರಲ್ಲಿ ಕಡಿಮೆ ಅವಧಿ ನಿದ್ರಿಸುವವರಲ್ಲಿ MIR-125A, MIR-126 ಮತ್ತು MIR-14A ಗಳ ಪ್ರಮಾಣ ಉತ್ತಮವಾಗಿ ನಿದ್ರಿಸುವವರಿಗಿಂತ ಶೇ.40 ರಿಂದ 60 ಪ್ರತಿಶತ ಕಡಿಮೆಯಾಗಿರುವುದು ಕಂಡುಬಂದಿದೆ.

Trending News