Pregnancy Diet Tips : ಗರ್ಭಾವಸ್ಥೆಯಲ್ಲಿ, ಮಹಿಳೆಯರು ತಮ್ಮನ್ನು ಮತ್ತು ತಮ್ಮ ಹೊಟ್ಟೆಯಲ್ಲಿರುವ ಮಗುವನ್ನು ನೋಡಿಕೊಳ್ಳಬೇಕು. ಹಾಗಾಗಿ, ಗರ್ಭಾವಸ್ಥೆಯಲ್ಲಿ ಕೆಲವು ಆಹಾರ, ಹಣ್ಣು ಸೇವಿಸಬಾರದು. ಇವುಗಳ ಸೇವನೆಯಿಂದಾಗಿ ಸಮಸ್ಯೆಗಳು ಉಂಟಾಗಬಹುದು.
ಗರ್ಭಾವಸ್ಥೆಯಲ್ಲಿ ಯಾವ ಆಹಾರಗಳನ್ನು ಸೇವಿಸಬಾರದು ಎಂಬುದನ್ನು ಮಹಿಳೆಯರು ತಿಳಿದಿರಬೇಕು.ಈ ಲೇಖನದ ಮೂಲಕ, ಗರ್ಭಿಣಿಯರು ಯಾವ ಆಹಾರಗಳನ್ನು ಸೇವಿಸಬಾರದು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ. ಮುಂದೆ ಓದಿ..
ಇದನ್ನೂ ಓದಿ : Winter Tips : ಚಳಿಗಾಲದಲ್ಲಿ ತಪ್ಪದೆ ಸೇವಿಸಿ ಬಾದಾಮಿ..!
ಗರ್ಭಾವಸ್ಥೆಯಲ್ಲಿ ಮಹಿಳೆಯರು ತುಳಸಿ ಸೇವನೆ ಮಾಡಬಾರದು. ಏಕೆಂದರೆ ತುಳಸಿಯೊಳಗೆ ಆಸ್ಟ್ರೋಗೋಲ್ ಎಂಬ ಅಂಶವಿದ್ದು. ತುಳಸಿ ಸೇವನೆಯಿಂದ ಗರ್ಭಪಾತವಾಗುವ ಸಾಧ್ಯತೆ ಹೆಚ್ಚುತ್ತದೆ.
ಗರ್ಭಾವಸ್ಥೆಯಲ್ಲಿ ಮಹಿಳೆಯರು ಹಸಿ ಮೊಟ್ಟೆಗಳನ್ನು ಸೇವಿಸಬಾರದು. ಏಕೆಂದರೆ ಇದರ ಸೇವನೆಯಿಂದ ಆಹಾರ ವಿಷದ ಸಮಸ್ಯೆ ಉಂಟಾಗುತ್ತದೆ.
ಗರ್ಭಾವಸ್ಥೆಯಲ್ಲಿ ಮಹಿಳೆಯರು ಹಸಿ ಪಪ್ಪಾಯಿಯನ್ನು ಸೇವಿಸುವುದನ್ನು ತಪ್ಪಿಸಬೇಕು. ಹಸಿ ಪಪ್ಪಾಯಿಯಲ್ಲಿ ಲ್ಯಾಟೆಕ್ಸ್ ಕಂಡುಬರುತ್ತದೆ. ಈ ಸಂದರ್ಭದಲ್ಲಿ, ಗರ್ಭಪಾತದ ಸಾಧ್ಯತೆಗಳು ಹೆಚ್ಚಾಗುತ್ತವೆ.
ಗರ್ಭಿಣಿಯರು ಕೂಡ ಮದ್ಯ ಸೇವಿಸಬಾರದು. ಇದು ಹುಟ್ಟಲಿರುವ ಮಗುವಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು, ಜೊತೆಗೆ ತಾಯಿಗೆ ಮಾರಕವಾಗಿದೆ.
ಇದನ್ನೂ ಓದಿ : Lips Care Tips : ಚಳಿಗಾಲದಲ್ಲಿ ತುಟಿಗಳ ರಕ್ಷಣೆಗೆ ಈ ಮನೆಮದ್ದುಗಳನ್ನು ಅನುಸರಿಸಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.