ಮಾಲಿನ್ಯದಿಂದ ರಕ್ಷಣೆ ಪಡೆಯಲು ಈ ಸಿಂಪಲ್ ಟಿಪ್ಸ್ ಅನುಸರಿಸಿ

ಪಂಜಾಬ್ ಮತ್ತು ಹರಿಯಾಣದಲ್ಲಿ ಈ ಸಮಯದಲ್ಲಿ ಬೆಳೆ ಕೂಳೆ ಸುಡುವುದರಿಂದ ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ಇದರಿಂದಾಗಿ ವಾಯು ವಿಷಪೂರಿತವಾಗುತ್ತಿದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವಾಲಯ ನಡೆಸುತ್ತಿರುವ ವಾಯು ಗುಣಮಟ್ಟದ ಸೂಚ್ಯಂಕ ಮೇಲ್ವಿಚಾರಣಾ ಸಂಸ್ಥೆ ಸಫರ್ ಇಂಡಿಯಾ ಹೇಳಿದೆ.

Last Updated : Nov 7, 2020, 03:00 PM IST
  • ಪಂಜಾಬ್ ಮತ್ತು ಹರಿಯಾಣದಲ್ಲಿ ಈ ಸಮಯದಲ್ಲಿ ಬೆಳೆ ಕೂಳೆ ಸುಡುವುದರಿಂದ ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ.
  • ಜನರು ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
  • ವಾಯು ವಿಷಪೂರಿತವಾಗುತ್ತಿದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವಾಲಯ ನಡೆಸುತ್ತಿರುವ ವಾಯು ಗುಣಮಟ್ಟದ ಸೂಚ್ಯಂಕ ಮೇಲ್ವಿಚಾರಣಾ ಸಂಸ್ಥೆ ಸಫರ್ ಇಂಡಿಯಾ ಹೇಳಿದೆ.
ಮಾಲಿನ್ಯದಿಂದ ರಕ್ಷಣೆ ಪಡೆಯಲು ಈ ಸಿಂಪಲ್ ಟಿಪ್ಸ್ ಅನುಸರಿಸಿ title=

ನವದೆಹಲಿ: ಒಂದೆಡೆ ಕರೋನಾ ಕಾಳಗ ಮುಂದುವರೆದಿದ್ದರೆ ಮತ್ತೊಂದೆಡೆ ವಾಯುಮಾಲಿನ್ಯ ಜನರ ಜೀವನವನ್ನು ಹಾನಿಗೊಳಿಸುತ್ತಿದೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿ (Delhi) ಮತ್ತು ಸುತ್ತಮುತ್ತಲಿನ ಎನ್‌ಸಿಆರ್‌ ಪ್ರದೇಶಗಳಲ್ಲಿ ವಾಯುಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಪರಿಸ್ಥಿತಿಗಳು ಜನಸಾಮಾನ್ಯರ ಜೀವನದ ಮೇಲೆ ತೀವ್ರ ಪರಿಣಾಮ ಬೀರಲು ಪ್ರಾರಂಭಿಸಿವೆ. ಜನರು ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದರಲ್ಲಿ ಉಸಿರಾಟದ ತೊಂದರೆ (Breathing Problem) ಯೊಂದಿಗೆ ಕಣ್ಣುನ ಸಮಸ್ಯೆಯೂ ಸಾಮಾನ್ಯವಾಗಿದೆ.  ಪಂಜಾಬ್ ಮತ್ತು ಹರಿಯಾಣದಲ್ಲಿ ಈ ಸಮಯದಲ್ಲಿ ಬೆಳೆ ಕೂಳೆ ಸುಡುವುದರಿಂದ ದೆಹಲಿ-ಎನ್‌ಸಿಆರ್‌ (Delhi-NCR)ನಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ಇದರಿಂದಾಗಿ ವಾಯು ವಿಷಪೂರಿತವಾಗುತ್ತಿದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವಾಲಯ ನಡೆಸುತ್ತಿರುವ ವಾಯು ಗುಣಮಟ್ಟದ ಸೂಚ್ಯಂಕ ಮೇಲ್ವಿಚಾರಣಾ ಸಂಸ್ಥೆ ಸಫರ್ ಇಂಡಿಯಾ ಹೇಳಿದೆ. ದೆಹಲಿಯಲ್ಲಿ ಮಾತ್ರವಲ್ಲದೆ ದೇಶದ ಹಲವು ಭಾಗಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ವಾಯುಮಾಲಿನ್ಯ (Air Pollution) ದಿಂದ ರಕ್ಷಣೆ ಪಡೆಯಲು ಕೆಲವು ಸಲಹೆಗಳು ಸಹಕಾರಿಯಾಗಿವೆ.

ದೆಹಲಿ ಕರೋನವೈರಸ್‌ನ ಮೂರನೇ ತರಂಗವನ್ನು ಎದುರಿಸುತ್ತಿದೆ- ಸಿಎಂ ಅರವಿಂದ್ ಕೇಜ್ರಿವಾಲ್

ಈ ಸುಲಭವಾದ ಮನೆಮದ್ದುಗಳು ನಿಮ್ಮನ್ನು ಮಾಲಿನ್ಯದಿಂದ ರಕ್ಷಿಸುತ್ತವೆ:-
ನಿರಂತರವಾಗಿ ಹೆಚ್ಚುತ್ತಿರುವ ಮಾಲಿನ್ಯದ ಹಾನಿಯನ್ನು ತಪ್ಪಿಸಲು, ಇಲ್ಲಿ ನಾವು ನಿಮಗೆ ಕೆಲವು ಖಚಿತ ಮತ್ತು ಸರಳ ಕ್ರಮಗಳನ್ನು ಹೇಳುತ್ತಿದ್ದೇವೆ. ಮಾಲಿನ್ಯದಿಂದ ನಿಮ್ಮನ್ನು ರಕ್ಷಿಸಲು ಈ ಸಲಹೆಗಳು ಸಹಾಯಕವಾಗುತ್ತವೆ. ನಿಮ್ಮ ದೈನಂದಿನ ಜೀವನದಲ್ಲಿ ಈ ಕ್ರಮಗಳನ್ನು ಅನುಸರಿಸುವ ಮೂಲಕ ಮಾಲಿನ್ಯದ ಈ ಸವಾಲನ್ನು ನೀವು ಸುಲಭವಾಗಿ ಎದುರಿಸಬಹುದು.

  • ಪ್ರತಿದಿನ 4 ಲೀಟರ್‌ಗಿಂತ ಹೆಚ್ಚು ನೀರು ಕುಡಿಯಿರಿ.
  • ಜೇನುತುಪ್ಪ, ಬೆಳ್ಳುಳ್ಳಿ, ಶುಂಠಿಯನ್ನು ಸಾಮಾನ್ಯಕ್ಕಿಂತ ಹೆಚ್ಚಾಗಿ ಸೇವಿಸಿ.
  • ಜೇನುತುಪ್ಪ ಮತ್ತು ಕರಿಮೆಣಸು ಕಫವನ್ನು ತೆಗೆದುಹಾಕುತ್ತದೆ.
  • ತುಳಸಿ ರಸ, ಆಮ್ಲಾ ತುಂಬಾ ಪ್ರಯೋಜನಕಾರಿ.
  • ಬೇವಿನ ಎಲೆಗಳನ್ನು ಕುದಿಸಿ ಮತ್ತು ಆ ನೀರನ್ನು ನೀವು ಸ್ನಾನ ಮಾಡುವ ನೀರಿಗೆ ಬೆರೆಸಿ ಸ್ನಾನ ಮಾಡಿ.
  • ಕಣ್ಣುಗಳಲ್ಲಿ ಸುಡುವ ಸಂವೇದನೆ ಇದ್ದರೆ ರೋಸ್ ವಾಟರ್ ಬಳಸಿ ಅಥವಾ ಸೌತೆಕಾಯಿಯ ಹೋಳನ್ನು ಕಣ್ಣಿನ ಮೇಲಿಟ್ಟು ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಳ್ಳಿ

ಮೋದಿ ಸರ್ಕಾರದ ಭರ್ಜರಿ ತಯಾರಿ: ನಿಮ್ಮೂರ ಅಂಗನವಾಡಿ, ಶಾಲೆ, ಪಂಚಾಯ್ತಿಯಲ್ಲೂ ಸಿಗಲಿದೆ ಕರೋನಾ ಲಸಿಕೆ

ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ ಮತ್ತು ಮಾಲಿನ್ಯವನ್ನು ತಪ್ಪಿಸಿ -

  • ಎಕ್ಯೂಐ (AQI) ಗಂಭೀರವಾಗಿದ್ದರೆ ಹೊರಗೆ ವ್ಯಾಯಾಮ ಮಾಡಬೇಡಿ.
  • ನಿಮ್ಮ ದಿನಚರಿಯಲ್ಲಿ ವ್ಯಾಯಾಮ ಮತ್ತು ಯೋಗವನ್ನು ಸೇರಿಸಿ. ಮನೆಯೊಳಗೆ ಲಘು ವ್ಯಾಯಾಮ ಅಥವಾ ಯೋಗ ಮಾಡಿ. 
  • ಮನೆಯಿಂದ ಹೊರಡುವ ಮೊದಲು ತಪ್ಪದೇ ಮಾಸ್ಕ್ ಧರಿಸಿ.
  • ಹೊರಗಿನಿಂದ ಬಂದ ನಂತರ ಮೊದಲು ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಸೋಂಕಿನ ಅಪಾಯ ಕಡಿಮೆಯಾಗುತ್ತದೆ.
  • ನೀವು ಆಸ್ತಮಾ ರೋಗಿಯಾಗಿದ್ದರೆ ಯಾವಾಗಲೂ ನಿಮ್ಮೊಂದಿಗೆ ಔಷಧಿಗಳನ್ನು ಇಟ್ಟುಕೊಳ್ಳಿ.
  • ಗರ್ಭಿಣಿಯರು ಹೆಚ್ಚು ಕಾಳಜಿ ವಹಿಸಬೇಕಾಗಿದೆ.
  • ಹೊರಗಿನಿಂದ ಬಂದ ನಂತರ ಬೆಚ್ಚಗಿನ ನೀರಿನಲ್ಲಿ ಬಾಯಿ, ಕಣ್ಣು ಮತ್ತು ಮೂಗನ್ನು ಸ್ವಚ್ಛಗೊಳಿಸಿ.
  • ಮಾಲಿನ್ಯದ ಅಪಾಯ ಹೆಚ್ಚಿರುವವರೆಗೂ, ಮಕ್ಕಳನ್ನು ಹೊರಗೆ ಆಟವಾಡಲು ಅಥವಾ ಸುತ್ತಾಡಲು ಬಿಡಬೇಡಿ.
  • ನಿಮ್ಮ ಮನೆಯ ಸುತ್ತಲೂ ಹೆಚ್ಚು ಆಮ್ಲಜನಕ ನೀಡುವ ಸಸ್ಯಗಳನ್ನು ನೆಡಿ, ಇದರಿಂದ ಮನೆಯಲ್ಲಿ ಶುದ್ಧ ಉಸಿರಾಟಕ್ಕೆ ಅನುಕೂಲವಾಗಲಿದೆ
  • ಬೆಳಿಗ್ಗೆ ಸಮಯದಲ್ಲಿ ಮಾಲಿನ್ಯ ಮಟ್ಟ ಹೆಚ್ಚಾಗಿರುವುದರಿಂದ ಬೆಳಿಗ್ಗೆ ನಡಿಗೆಗೆ ಅಂದರೆ ಮಾರ್ನಿಂಗ್ ವಾಕ್ ಗೆ ಹೋಗಬೇಡಿ. ಬಿಸಿಲು ಬಂದ ಬಳಿಕವಷ್ಟೇ ಮನೆಯಿಂದ ಹೊರಬನ್ನಿ. 
  • ಒಮೆಗಾ -3 ಇರುವ ಆಹಾರಗಳಲ್ಲಿ ವಿಟಮಿನ್ ಸಿ ಸೇರಿಸಿ.
     

Trending News