Pneumonia Outbreak: ಚೀನಾದಲ್ಲಿ ನಿಗೂಢ ನ್ಯುಮೋನಿಯಾದಿಂದಾಗಿ ಮಕ್ಕಳಲ್ಲಿ ಉಸಿರಾಟದ ಕಾಯಿಲೆಗಳು ಹೆಚ್ಚಾಗುತ್ತಿರುವ ವರದಿಗಳ ನಡುವೆ ಇದೀಗ ಕರ್ನಾಟಕ ಸೇರಿದಂತೆ ಭಾರತದ ಐದು ರಾಜ್ಯಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕ, ರಾಜಸ್ಥಾನ, ಗುಜರಾತ್, ಉತ್ತರಾಖಂಡ, ತಮಿಳುನಾಡಿನಲ್ಲಿ ಹೊಸ ನ್ಯುಮೋನಿಯಾ ಕುರಿತು ಅಲರ್ಟ್ ಘೋಷಿಸಲಾಗಿದೆ.
ಚೀನಾ ನಿಗೂಢ ನ್ಯುಮೋನಿಯಾ ಕುರಿತಂತೆ ಕರ್ನಾಟಕ ಆರೋಗ್ಯ ಇಲಾಖೆ ಸಲಹೆ:
ಕರ್ನಾಟಕ ಆರೋಗ್ಯ ಇಲಾಖೆ ಕೂಡ ನಿಗೂಢ ನ್ಯುಮೋನಿಯಾ ವಿಚಾರವಾಗಿ ಎಚ್ಚರವಾಗಿರುವಂತೆ ತಿಳಿಸಿದೆ. ಕಾಲೋಚಿತ ಜ್ವರವು ಸಾಂಕ್ರಾಮಿಕ ರೋಗವಾಗಿದ್ದು, ಇದು ಸಾಮಾನ್ಯವಾಗಿ ಐದರಿಂದ ಏಳು ದಿನಗಳವರೆಗೆ ಇರುತ್ತದೆ. ಇದು ಹರಡುವ ವೇಗ ಮತ್ತು ಮರಣ ಪ್ರಮಾಣ ಕಡಿಮೆ ಇರಲಿದೆ.
ಇದನ್ನೂ ಓದಿ- ಇಲ್ಲಿಯವರೆಗೆ ಚೀನಾದಿಂದ ಹೊರಹೊಮ್ಮಿದ ಯಾವ್ಯಾವ ವೈರಸ್‌ಗಳು ವಿಶ್ವದಾದ್ಯಂತ ವಿನಾಶ ಸೃಷ್ಟಿಸಿವೆ!
ಆದಾಗ್ಯೂ, ಈ ನಿಗೂಢ ನ್ಯುಮೋನಿಯಾ ಇದು ಶಿಶುಗಳು, ವೃದ್ಧರು, ಗರ್ಭಿಣಿಯರು, ಇಮ್ಯುನೊಕೊಂಪ್ರೊಮೈಸ್ಡ್ ಮತ್ತು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಲ್ಲಿ ಈ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಇಂತಹವರು ಜಾಗರೂಕರಾಗಿರಬೇಕು ಎಂದು ಆರೋಗ್ಯ ಇಲಾಖೆಯಿಂದ ಸಲಹೆ ನೀಡಲಾಗಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಚೀನಾದಲ್ಲಿ ಉಸಿರಾಟದ ಕಾಯಿಲೆಯ ಉಲ್ಬಣವನ್ನು ಪರಿಗಣಿಸಿ, ವಿಶ್ವ ಆರೋಗ್ಯ ಸಂಸ್ಥೆ ಜನರಿಗೆ ಸಾಮಾನ್ಯ ಸಲಹೆಯನ್ನು ಬಿಡುಗಡೆ ಮಾಡಿದೆ. ರೋಗಲಕ್ಷಣಗಳು ಉಲ್ಬಣಗೊಂಡರೆ, ದಯವಿಟ್ಟು ಸಕಾಲಿಕ ಚಿಕಿತ್ಸೆಗಾಗಿ ನಿಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ. ಜನರು ಭಯಭೀತರಾಗದೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ನಾನು ವಿನಂತಿಸುತ್ತೇನೆ ಎಂದು ಬರೆದಿದ್ದಾರೆ.
Considering the surge in respiratory illness in China, WHO has released a general advisory for people. I request the public to follow the instructions, know the Dos and Don’ts and take measures to prevent influenza.
If symptoms aggravate, please visit your nearest Government… pic.twitter.com/rRxxUmqK3r
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) November 28, 2023
ಇದನ್ನೂ ಓದಿ- ಚೀನಾದ ಹೊಸ ನಿಗೂಢ ವೈರಸ್‌ನಿಂದ ಮಕ್ಕಳ ರಕ್ಷಣೆಗಾಗಿ ಈ ರೀತಿ ಮುನ್ನೆಚ್ಚರಿಕೆ ಕೈಗೊಳ್ಳಿ
ಗಮನಾರ್ಹವಾಗಿ, ಕೇಂದ್ರ ಆರೋಗ್ಯ ಸಚಿವಾಲಯ ನವೆಂಬರ್ 26 ರಂದು ಎಲ್ಲಾ ರಾಜ್ಯಗಳಿಗೆ ತಕ್ಷಣವೇ ಪಬ್ಲಿಕ್ ಹೆಲ್ತ್ ಮತ್ತು ಆಸ್ಪತ್ರೆಗಳಿಗೆ ಈ ಹೊಸ ಸೋಂಕನ್ನ ಫೇಸ್ ಮಾಡೋಕೆ ರೆಡಿ ಮಾಡಿಕೊಳ್ಳಿ ಅಂತ ಸುತ್ತೋಲೆ ಹೊರಡಿಸಿತ್ತು. ಇದರ ಬೆನ್ನಲ್ಲೇ ಇದೀಗ 5 ರಾಜ್ಯಗಳಲ್ಲಿ ಈ ಬೆಳವಣಿಗೆ ಕಂಡುಬಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.