ನವದೆಹಲಿ: ದೇಹವನ್ನು ಆರೋಗ್ಯವಾಗಿಡಲು ಗಿಡ-ಸಸ್ಯಗಳು ಮಹತ್ವದ ಪಾತ್ರ ನಿರ್ವಹಿಸುತ್ತದೆ. ಪ್ರಕೃತಿ ನಮ್ಮ ಜೀವನದ ಒಂದು ಪ್ರಮುಖ ಭಾಗವಾಗಿದೆ, ಅದಕ್ಕಾಗಿಯೇ ಇಂದು ನಾವು ಅಂತಹ ಒಂದು ಹೂವಿನ ಬಗ್ಗೆ ಹೇಳಿಕೊದಲಿದ್ದೇವೆ. ಈ ಹೂವನ್ನು ನೀವು ಮನೆಯನ್ನು ಅಲಂಕರಿಸಲು ಸಾಕಷ್ಟು ಬಳಸುತ್ತೀರಿ. ಮಾರಿಗೋಲ್ಡ್ (Marigold) ಅಥವಾ ಚೆಂಡು ಹೂವನ್ನು ಅಲಂಕಾರದಲ್ಲಿ ಮತ್ತು ಅನೇಕ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಮಾರಿಗೋಲ್ಡ್ ಹೂವಿನಲ್ಲಿ ಇಂತಹ ಅನೇಕ ಅಂಶಗಳು ಕಂಡುಬರುತ್ತವೆ, ಇದು ನೋವು ನಿವಾರಣೆಗೆ ಸಹಾಯ ಮಾಡುತ್ತದೆ. ಅಷ್ಟ ಅಲ್ಲ ಇದು ಗಾಯಗಳನ್ನು ಗುಣಪಡಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ. ಆದ್ದರಿಂದ ಮಾರಿಗೋಲ್ಡ್ ಹೂವುಗಳನ್ನು ಮನೆಯ ಅಲಂಕಾರದ ಬಳಿಕ ಎಸೆಯಬೇಡಿ, ಅವುಗಳನ್ನು ಸಂಗ್ರಹಿಸಿಡಿ. ಬನ್ನಿ ಚೆಂಡು ಹೂವಿನ ಆರೋಗ್ಯಕಾರಿ (Health) ಗುಣಗಳನ್ನೊಮ್ಮೆ ತಿಳಿದುಕೊಳ್ಳೋಣ (ಫೋಟೋ ಕೃಪೆ- Getty Images)
ಇದನ್ನು ಓದಿ- Alert...! ಸಿಗರೇಟ್ ಸೇದುವ ಚಟ ಇರುವವರು ಈ ಸಂಶೋಧನಾ ವರದಿ ತಪ್ಪದೆ ಓದಿ
ಸ್ಕಿನ್ ಇನ್ಫೆಕ್ಷನ್ ನಿವಾರಕ
ಚೆಂಡು ಹೂವು ತ್ವಚೆಗೆ ಸಂಬಂಧಿಸಿದ ಕಾಯಿಲೆಗಳಾದ ಸ್ಕಿನ್ ಇನ್ಫೆಕ್ಷನ್ ಹಾಗೂ ಡರ್ಮೆಟೈಟಸ್ ನಿವಾರಣೆಗೆ ಸಹಾಯ ಮಾಡುತ್ತದೆ.
ವೃದ್ಧಾವಸ್ಥೆಯ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ
ಇದು ನಿಮ್ಮ ತ್ವಚೆಯನ್ನು ಹೈಡ್ರೇಟ್ ಆಗಿಡುತ್ತದೆ. ಇದರಿಂದ ವಯಸ್ಸಿಗೂ ಮುನ್ನ ಯಾವುದೇ ರೀತಿಯ ವೃದ್ಧಾಪ್ಯ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ.
ತ್ವಚೆಯ ಕೋಶಗಳನ್ನು ರಿಜೆನರೆಟ್ ಮಾಡುತ್ತದೆ
ಇದು ತ್ವಚೆಯನ್ನು ಆಳವಾಗಿ ಗುಣಪಡಿಸುತ್ತದೆ. ತ್ವಚೆಯ ಕೋಶಗಳನ್ನು ರೀಜನರೇಟ್ ಮಾಡಲು ಇದೊಂದು ಪರಿಣಾಮಕಾರಿ ಮದ್ದು.
ಕಿಡ್ನಿ ಸ್ಟೋನ್ ಸಮಸ್ಯೆಗೆ ಇದು ಲಾಭಕಾರಿ
ಮೂತ್ರಪಿಂಡದ ಹರಳು ಸಮಸ್ಯೆಗೆ ಇದು ಪರಿಣಾಮಕಾರಿ. ಈ ಹೂವಿನ ಎಳೆಗಳ 20-30 ಮಿಲಿ ಕಷಾಯವನ್ನು ತಯಾರಿಸಿ ಕೆಲ ದಿನಗಳು ಸೇವಿಸುವುದರಿಂದ ಹರಳು ಕರಗಿ ಶರೀರದಿಂದ ಹೊರಹೋಗುತ್ತದೆ.
ಮೊಡವೆ ನಿವಾರಕ
ಚೆಂಡು ಹೂವಿನಲ್ಲಿ ಆಂಟಿ ಬ್ಯಾಕ್ಟೀರಿಯಾ ಗುಣಗಳು ಇರುತ್ತವೆ. ಇದರಿಂದ ಮೊಡವೆಗಳು ನಿವಾರಣೆಯಾಗುತ್ತವೆ.
ಕಿವಿ ನೋವು ನಿವಾರಕ
ಕಿವಿ ನೋವಿನಿಂದ ಯಾರಾದರು ಬಳಲುತ್ತಿದ್ದರೆ 2 ಹನಿ ಚೆಂಡು ಹೂವಿನ ಗಿಡದ ಎಳೆಗಳ ರಸವನ್ನು ಕಿವಿಗೆ ಹಾಕಬೇಕು.
ಕಣ್ಣಿನ ಬಾವು ಹಾಗೂ ನೋವು ನಿವಾರಕ
ಚೆಂಡು ಹೂವು ಕಣ್ಣಿನ ಬಾವು, ನೋವು ಹಾಗೂ ಕಣ್ಣಿಗೆ ಸಂಬಂಧಿಸಿದ ಹಲವು ಕಾಯಿಲೆಗಳಿಗೆ ಲಾಭಕಾರಿ.
ಹಲ್ಲು ನೋವು ನಿವಾರಕ
ಚೆಂಡು ಹೂವು ಹಲ್ಲುಗಳ ಆರೋಗ್ಯಕ್ಕೆ ಲಾಭಕಾರಿ. ಚೆಂಡು ಹೂವಿನ ಕಷಾಯದಿಂದ ಬಾಯಿ ಮುಕ್ಕಳಿಸುವುದರಿಂದ ಹಲ್ಲುಗಳ ನೋವು ತಕ್ಷಣ ನಿವಾರಣೆಯಾಗಿ ಆರಾಮ ಸಿಗುತ್ತದೆ.
ಅಲ್ಸರ್ ನಂತಹ ಗಂಭೀರ ಕಾಯಿಲೆ ಗುಣಮುಖವಾಗುತ್ತದೆ
ಮಾರಿಗೋಲ್ಡ್ ಹೂವಿನಿಂದ ತಯಾರಿಸಲಾಗಿರುವ ಚಹಾ ಸೇವನೆಯಿಂದ ಅಲ್ಸರ್ ಹಾಗೂ ಹೊಟ್ಟೆಯೊಳಗಿನ ಗಾಯಗಳು ನಿವಾರಣೆಯಾಗುತ್ತವೆ. ಈ ಚಹಾ ನಿಮ್ಮ ತ್ವಚೆಗೂ ಕೂಡ ಲಾಭಕಾರಿ.
ಮೂಗಿನಿಂದಾಗುವ ರಕ್ತಸ್ರಾವ ನಿಲ್ಲಿಸುತ್ತದೆ
ಯಾರಿಗಾದರೂ ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರೆ. ಚೆಂಡು ಗಿಡದ ಎಳೆಗಳ ಎರಡು ಹನಿ ರಸವನ್ನು ಮೂಗಿನ ಹೊರಳೆಗೆ ಹಾಕಿ. ಇದರಿಂದ ರಕ್ತಸ್ರಾವ ನಿಲ್ಲುತ್ತದೆ.