Potato ಸಿಪ್ಪೆ ಎಸೆಯುವ ಮೊದಲು ಅದರ ಪ್ರಯೋಜನಗಳ ಬಗ್ಗೆ ಒಮ್ಮೆ ತಿಳಿಯಿರಿ

ನೀವೂ ಸಹ ಆಲೂಗೆಡ್ಡೆಯಿಂದ ಆಹಾರ ತಯಾರಿಸುವ ಮೊದಲು ಅದರ ಸಿಪ್ಪೆ ತೆಗೆದು ಡಸ್ಟ್‌ಬಿನ್‌ನಲ್ಲಿ ಎಸೆಯುತ್ತಿದ್ದೀರಾ... ಹಾಗಿದ್ದರೆ ಮೊದಲು ನಿಮ್ಮ ಅಭ್ಯಾಸವನ್ನು ಬದಲಾಯಿಸಿ. ಆಲೂಗಡ್ಡೆಗಿಂತ ಆಲೂಗಡ್ಡೆಯ ತೊಗಟೆ/ಸಿಪ್ಪೆ ಹೆಚ್ಚು ಪ್ರಯೋಜನಕಾರಿ ಎಂದು ಬಹುಶಃ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ.

Written by - Yashaswini V | Last Updated : Feb 5, 2021, 03:10 PM IST
  • ಆಲೂಗಡ್ಡೆಯ ಸಿಪ್ಪೆಯು ಆಲೂಗಡ್ಡೆಗಿಂತಲೂ ಪ್ರಯೋಜನಕಾರಿ
  • ಆಲೂಗಡ್ಡೆ ಸಿಪ್ಪೆಯಲ್ಲಿ ಅನೇಕ ಪೋಷಕಾಂಶಗಳಿವೆ
  • ಆಲೂಗಡ್ಡೆ ಸಿಪ್ಪೆಯನ್ನು ಎಸೆಯುವ ಮೊದಲು ಅದರ ಪ್ರಯೋಜನಗಳೇನು ಎಂದು ತಿಳಿಯಿರಿ
Potato ಸಿಪ್ಪೆ ಎಸೆಯುವ ಮೊದಲು ಅದರ ಪ್ರಯೋಜನಗಳ ಬಗ್ಗೆ ಒಮ್ಮೆ ತಿಳಿಯಿರಿ title=
Health benefits of Potato

ಬೆಂಗಳೂರು : ವಿಶ್ವದ ಅತ್ಯಂತ ಜನಪ್ರಿಯ ತರಕಾರಿ ವಿಷಯಕ್ಕೆ ಬಂದಾಗ ಹೆಚ್ಚಿನ ಜನರಿಗೆ ನೆನಪಾಗುವ ತರಕಾರಿ ಎಂದರೆ ಬಹುಶಃ ಆಲೂಗಡ್ಡೆ ಇರಬಹುದು. ಆಲೂಗಡ್ಡೆಯ ಸಂಯೋಜನೆಯು ಪ್ರತಿ ತರಕಾರಿಗಳೊಂದಿಗೆ ಉತ್ತಮವಾಗಿದೆ. ಹಾಗಾಗಿಯೇ ಆಲೂಗಡ್ಡೆಯನ್ನು ಇಷ್ಟಪಡದವರ ಸಂಖ್ಯೆ ಕೂಡ ಕಡಿಮೆ ಎಂದೇ ಹೇಳಬಹುದು. ಆದರೆ ಆಲೂಗಡ್ಡೆ ಬಳಸಿ ಆಹಾರ ತಯಾರಿಸುವಾಗ ಸಾಮಾನ್ಯವಾಗಿ ನಾವು ಮೊದಲು ಅದನ್ನು ತೊಳೆದು ಸಿಪ್ಪೆ ತೆಗೆಯುತ್ತೇವೆ ಮತ್ತು ನಂತರವೇ ಅದನ್ನು ಭಕ್ಷ್ಯವಾಗಿ ತಯಾರಿಸುತ್ತೇವೆ. ಆದರೆ ಆಲೂಗೆಡ್ಡೆ ಸಿಪ್ಪೆಯನ್ನು ಡಸ್ಟ್‌ಬಿನ್‌ನಲ್ಲಿ ಎಸೆಯುವ ಮೊದಲು ಮತ್ತೊಮ್ಮೆ ಯೋಚಿಸಿ? ಆಲೂಗೆಡ್ಡೆ ಸಿಪ್ಪೆಯ ಹಲವು ಪ್ರಯೋಜನಗಳ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ, ಅದರ ನಂತರ ನೀವು ಆಲೂಗಡ್ಡೆಯನ್ನು ಅದರ ಸಿಪ್ಪೆಯೊಂದಿಗೆ ತಿನ್ನಲು ಇಷ್ಟಪಡುತ್ತೀರಿ.

ಆಲೂಗಡ್ಡೆಗಿಂತ ಸಿಪ್ಪೆ ಹೆಚ್ಚು ಪ್ರಯೋಜನಕಾರಿ :
ಆಲೂಗಡ್ಡೆಗಳನ್ನು ಪ್ರೋಟೀನ್ (Protein), ಕಾರ್ಬ್ಸ್ (Carbs), ಪೊಟ್ಯಾಸಿಯಮ್ (Potassium), ವಿಟಮಿನ್ ಸಿ, ವಿಟಮಿನ್ ಬಿ 6 ಮತ್ತು ಥಯಾಮಿನ್ ನಂತಹ ಪೋಷಕಾಂಶಗಳ (Nutrients) ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಆದರೆ ಈ ಎಲ್ಲಾ ಪೋಷಕಾಂಶಗಳು ಆಲೂಗಡ್ಡೆಗಿಂತ ಅದರ ಸಿಪ್ಪೆಯಲ್ಲಿ  ಹೆಚ್ಚಾಗಿ ಕಂಡುಬರುತ್ತವೆ, ಆದ್ದರಿಂದ ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ಬಳಸುವ ಬದಲಿಗೆ ಅದರ ಸಿಪ್ಪೆಯೊಂದಿಗೆ ಬಳಸಿ.

ಆಲೂಗೆಡ್ಡೆ ಸಿಪ್ಪೆಯನ್ನು ತಿನ್ನುವುದರಿಂದ ಏನು ಪ್ರಯೋಜನ?
1. ರಕ್ತದಲ್ಲಿನ ಸಕ್ಕರೆ ನಿಯಂತ್ರಣ- ನೀವು ಆಲೂಗೆಡ್ಡೆ ಸಿಪ್ಪೆಯನ್ನು ತೆಗೆದು ಆಲೂಗಡ್ಡೆ ತಿನ್ನುವಾಗ, ಆಲೂಗೆಡ್ಡೆ ಸಂಕೀರ್ಣವು ಸರಳ ಕಾರ್ಬೋಹೈಡ್ರೇಟ್ ಆಗಿ ಒಡೆಯುತ್ತದೆ, ಇದು ತಿನ್ನುವ ನಂತರ ರಕ್ತದಲ್ಲಿನ ಗ್ಲೂಕೋಸ್  (Blood Glucose) ಮಟ್ಟವನ್ನು ಹೆಚ್ಚಿಸುತ್ತದೆ. ಆದರೆ ಸಿಪ್ಪೆ ಸಮೇತ ಆಲೂಗಡ್ಡೆ ತಿನ್ನುವಾಗ, ದೇಹವು ಹೆಚ್ಚುವರಿ ಫೈಬರ್ ಅನ್ನು ಪಡೆಯುತ್ತದೆ, ಇದು ರಕ್ತದಲ್ಲಿನ ಸಕ್ಕರೆ (Blood sugar) ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ಇದನ್ನೂ ಓದಿ - ಆರೋಗ್ಯಕ್ಕೆ ಹೆಚ್ಚು ಉಪಯುಕ್ತ ಕರಿಬೇವು!

2. ರಕ್ತದೊತ್ತಡ ನಿಯಂತ್ರಣ- ಆಲೂಗಡ್ಡೆ ಸಿಪ್ಪೆ ಪೊಟ್ಯಾಸಿಯಮ್‌ನ ಅತ್ಯುತ್ತಮ ಮೂಲವಾಗಿದೆ. ಹೆಚ್ಚು ಪೊಟ್ಯಾಸಿಯಮ್ ತಿನ್ನುವುದರಿಂದ ದೇಹದಲ್ಲಿನ ಸೋಡಿಯಂ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ರಕ್ತನಾಳಗಳ ಒತ್ತಡವನ್ನು ಕಡಿಮೆ ಮಾಡುತ್ತದೆ, ಇದು ರಕ್ತದೊತ್ತಡವನ್ನು (Blood Pressure) ನಿಯಂತ್ರಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಬಿಪಿ ರೋಗಿಗಳು ಸಿಪ್ಪೆಯೊಂದಿಗೆ ಆಲೂಗಡ್ಡೆ ತಿನ್ನಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

3. ರಕ್ತಹೀನತೆಯಿಂದ ರಕ್ಷಣೆ- ಯಾವುದೇ ವ್ಯಕ್ತಿಯು ರಕ್ತಹೀನತೆಯಿಂದ (Anemia)  ಬಳಲುತ್ತಿದ್ದರೆ, ಅವನು ಆಲೂಗೆಡ್ಡೆ ಸಿಪ್ಪೆಯನ್ನು ಇತರ ಹಸಿರು ತರಕಾರಿಗಳೊಂದಿಗೆ ಸೇವಿಸಬೇಕು. ಆಲೂಗಡ್ಡೆ ಸಿಪ್ಪೆಯಲ್ಲಿ ಕಬ್ಬಿಣದ (Iron) ಅಂಶವಿದೆ, ಇದು ಕೆಂಪು ರಕ್ತ ಕಣಗಳ (Red Blood Cells) ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ - ನೀವು ಆಲೂಗಡ್ಡೆ ಬೆಳೆಗಾರರೇ? ಹಾಗಿದ್ದಲ್ಲಿ ಈ ಸಂರಕ್ಷಣಾ ಕ್ರಮಗಳನ್ನು ಅನುಸರಿಸಲೇಬೇಕು..!

4. ಮಲಬದ್ಧತೆಯ ಸಮಸ್ಯೆ ನಿವಾರಣೆ- ಆಲೂಗೆಡ್ಡೆ ಸಿಪ್ಪೆಯಲ್ಲಿ ಫೈಬರ್ (Fiber) ಕೂಡ ಇದೆ, ಇದು ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ.

5. ಚರ್ಮ ಮತ್ತು ಕೂದಲಿಗೆ- ಆಲೂಗೆಡ್ಡೆ ಸಿಪ್ಪೆಯ ಸಹಾಯದಿಂದ, ನೀವು ಕಣ್ಣುಗಳ ಕೆಳಗೆ ಮೂಡುವ ಡಾರ್ಕ್ ಸರ್ಕಲ್ (Dark Circles) ನಿವಾರಿಸಬಹುದು. ಇದಲ್ಲದೆ ನಿಮ್ಮ ಸ್ಕಿನ್ / ಚರ್ಮವು (Skin) ಎಣ್ಣೆಯುಕ್ತವಾಗಿದ್ದರೆ, ಮೊಡವೆ ಮತ್ತು ಬ್ಲ್ಯಾಕ್‌ಹೆಡ್‌ಗಳಂತಹ ಸಮಸ್ಯೆಗಳನ್ನು ಹೊಂದಿದ್ದರೆ, ಆಲೂಗೆಡ್ಡೆ ಸಿಪ್ಪೆ ಸಹ ನಿಮಗೆ ಸಹಾಯ ಮಾಡುತ್ತದೆ. ಆಲೂಗೆಡ್ಡೆ ಸಿಪ್ಪೆಯನ್ನು ಪುಡಿಮಾಡಿ ಅದರ ಜ್ಯೂಸ್ ಅನ್ನು ಕೂದಲ ಬುಡಕ್ಕೆ ಹಚ್ಚುವುದರಿಂದ ಕೂದಲಿನ (Hair) ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News