ದುಬಾರಿ ಕ್ರೀಮ್‌ಗಳಿಂದಲ್ಲ, ಈ ವಿಟಮಿನ್‌ಗಳಿಂದ ದೂರವಾಗುತ್ತೆ ಸ್ಟ್ರೆಚ್ ಮಾರ್ಕ್ಸ್

ಸ್ಟ್ರೆಚ್ ಮಾರ್ಕ್ಸ್ ಅನ್ನು ವಿಟಮಿನ್‌ಗಳ ಮೂಲಕವೂ ನಿವಾರಿಸಬಹುದು. 

Last Updated : Sep 20, 2019, 02:11 PM IST
ದುಬಾರಿ ಕ್ರೀಮ್‌ಗಳಿಂದಲ್ಲ, ಈ ವಿಟಮಿನ್‌ಗಳಿಂದ ದೂರವಾಗುತ್ತೆ ಸ್ಟ್ರೆಚ್ ಮಾರ್ಕ್ಸ್ title=

ಆಗಾಗ್ಗೆ, ಮಹಿಳೆಯರು ಚರ್ಮದ ಮೇಲೆ ಮೂಡುವ  ಸ್ಟ್ರೆಚ್ ಮಾರ್ಕ್‌ಗಳನ್ನು ಬಗ್ಗೆ ತುಂಬಾ ಬೇಸರ ವ್ಯಕ್ತಪಡಿಸುತ್ತಾರೆ. ಈ ಕಾರಣದಿಂದಾಗಿ, ಮಹಿಳೆಯರು ತಮ್ಮ ನೆಚ್ಚಿನ ಬಟ್ಟೆಗಳನ್ನು ಧರಿಸುವುದನ್ನು ಸಹ ತುಂಬಾನೇ ಯೋಚಿಸ್ತಾರೆ. ಏಕೆಂದರೆ ಸುಂದರವಾದ ಬಟ್ಟೆ ನಡುವೆ ಸ್ಟ್ರೆಚ್ ಮಾರ್ಕ್ಸ್ ಚೆನ್ನಾಗಿ ಕಾಣುವುದಿಲ್ಲ ಎಂದು ಕೆಲವರು ಭಾವಿಸುತಾರೆ.  ಅಂತಹ ಪರಿಸ್ಥಿತಿಯಲ್ಲಿ, ಮಹಿಳೆಯರು ಈ ಸ್ಟ್ರೆಚ್ ಮಾರ್ಕ್ಸ್ ಗಳನ್ನು ತೊಡೆದುಹಾಕಲು ವಿವಿಧ ರೀತಿಯ ಉತ್ಪನ್ನಗಳನ್ನು ಬಳಸುತ್ತಲೇ ಇರುತ್ತಾರೆ. ಹಲವು ಬಗೆಯ ಕ್ರೀಂ ಬಳಸಿದರೂ ಈ ಸ್ಟ್ರೆಚ್ ಮಾರ್ಕ್ಸ್ ಕಡಿಮೆಯೇ ಆಗಿಲ್ಲ ಎಂಬುದು ಹಲವರ ದೂರು.

ನೀವು ಸ್ಟ್ರೆಚ್ ಮಾರ್ಕ್ಸ್ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಡೋಂಟ್ ವರಿ. ದುಬಾರಿ ಕ್ರೀಮ್‌ಗಳನ್ನು ಬಿಟ್ಟುಬಿಡಿ, ಏಕೆಂದರೆ ಸ್ಟ್ರೆಚ್ ಮಾರ್ಕ್‌ಗಳನ್ನು ವಿಟಮಿನ್‌ಗಳ ಮೂಲಕವೂ ತೆಗೆದುಹಾಕಬಹುದು. ಆದ್ದರಿಂದ ಸ್ಟ್ರೆಚ್ ಮಾರ್ಕ್ಸ್ ಅನ್ನು ತೆಗೆದುಹಾಕುವಂತಹ ವಿಟಮಿನ್‌ಗಳ ಬಗ್ಗೆ ಒಂದಷ್ಟು ಮಾಹಿತಿ ತಿಳಿಯಿರಿ.

ವಿಟಮಿನ್ 'ಇ'
ವಿಟಮಿನ್ ಇ ಯ ಅನೇಕ ಪ್ರಯೋಜನಗಳ ಬಗ್ಗೆ ನೀವು ಕೇಳಿರಬಹುದು, ಆದರೆ 'ವಿಟಮಿನ್ ಇ' ಸಹಾಯದಿಂದ ಸ್ಟ್ರೆಚ್ ಮಾರ್ಕ್ಸ್ ಅನ್ನು ಸಹ ತೊಡೆದುಹಾಕಬಹುದು ಎಂದು ಕೆಲವೇ ಜನರಿಗೆ ತಿಳಿದಿದೆ. 'ವಿಟಮಿನ್ ಇ' ಹಾನಿಗೊಳಗಾಗಿರುವ ಚರ್ಮವನ್ನು ಸರಿಪಡಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಸ್ಟ್ರೆಚ್ ಮಾರ್ಕ್ಸ್ ಅನ್ನು ತೆಗೆದುಹಾಕಲು ಸಹ ಸಹಾಯ ಮಾಡುತ್ತದೆ. ಲೋಷನ್‌ನಲ್ಲಿ ಬೆರೆಸಿ ನೀವು ಇದನ್ನು ಬಳಸಬಹುದು.

ವಿಟಮಿನ್ 'ಸಿ'
ವಿಟಮಿನ್ 'ಸಿ' ಚರ್ಮವನ್ನು ಆರೋಗ್ಯಕರವಾಗಿ ಇರಿಸುತ್ತದೆ. ಕಾಲಜನ್ ಉತ್ಪಾದನೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ನೀವು ಸಾಕಷ್ಟು ವಿಟಮಿನ್ 'ಸಿ' ತೆಗೆದುಕೊಂಡರೆ, ಕೆಲವೇ ದಿನಗಳಲ್ಲಿ ಅದು ನಿಮ್ಮ ದೇಹದಲ್ಲಿರುವ ಸ್ಟ್ರೆಚ್ ಮಾರ್ಕ್ಸ್ ಅನ್ನು ತೆಗೆದುಹಾಕುತ್ತದೆ ಮತ್ತು ನಿಮಗೆ ಹೊಸ ಮತ್ತು ಹೊಳೆಯುವ ಚರ್ಮವನ್ನು ನೀಡುತ್ತದೆ. ಇದಕ್ಕಾಗಿ, ನೀವು ಕಿತ್ತಳೆ, ನಿಂಬೆ, ಆಮ್ಲಾ ಮುಂತಾದವುಗಳನ್ನು ಸೇರಿಸಬಹುದು.

ವಿಟಮಿನ್ 'ಎ'
ವಿಟಮಿನ್ 'ಎ' ಚರ್ಮವನ್ನು ಒಣಗಿಸುವ ಮೂಲಕ ಅದನ್ನು ಹೊಸದಾಗಿ ಮಾಡುತ್ತದೆ ಮತ್ತು ಸ್ಟ್ರೆಚ್ ಮಾರ್ಕ್ಸ್ ಅನ್ನು ತೆಗೆದುಹಾಕುತ್ತದೆ. ಜೀವಸತ್ವಗಳಿಗಾಗಿ, ನಿಮ್ಮ ಆಹಾರದಲ್ಲಿ ನೀವು ಕ್ಯಾರೆಟ್, ಏಪ್ರಿಕಾಟ್, ಮೀನು ಮತ್ತು ಉಷ್ಣವಲಯದ ಆಹಾರವನ್ನು ಸೇರಿಸಬಹುದು.

ವಿಟಮಿನ್ 'ಕೆ'
ವಿಟಮಿನ್ 'ಕೆ' ಸಹ ಚರ್ಮವನ್ನು ಸುಂದರವಾಗಿಸುವ ಮತ್ತು ಡಾರ್ಕ್ ಸರ್ಕಲ್ ಗಳನ್ನೂ ತೆಗೆದುಹಾಕುವ ಜೀವಸತ್ವಗಳಲ್ಲಿ ಒಂದಾಗಿದೆ. ವಿಟಮಿನ್ 'ಕೆ' ಪದಾರ್ಥಗಳ ಬಳಕೆ ಸ್ಟ್ರೆಚ್ ಮಾರ್ಕ್ಸ್ ಅನ್ನು ವೇಗವಾಗಿ ಕಡಿಮೆ ಮಾಡಲು ಸಹಾಯಕವಾಗಿವೆ.

Trending News