Health Tipes: ಕರ್ಬೂಜ ಸೌತೆಕಾಯಿ, ಕಲ್ಲಂಗಡಿ, ಕುಂಬಳಕಾಯಿ ಜಾತಿಗೆ ಸೇರಿದ ಹಣ್ಣಾಗಿದೆ. ಮೊದಲು ಪರ್ಷಿಯಾ ದೇಶದಲ್ಲಿ ಇದನ್ನು ಪರಿಚಯಿಸಲಾಯಿತು ಆ ಬಳಿಕ ವಿದೇಶದಲ್ಲೂ ಇದನ್ನು ಉತ್ತಮ ಆಹಾರವೆಂದು ಪರಿಗಣಿಸಿ ಪ್ರತಿನಿತ್ಯ ಸೇವನೆ ಮಾಡಲಾರಂಭಿಸಿದರು. ಭಾರತದಲ್ಲಿ ಪಂಜಾಬ್, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಆಂಧ್ರ ಪ್ರದೇಶಗಳಲ್ಲಿ ಹೆಚ್ಚಾಗಿ ಈ ಹಣ್ಣುಗಳನ್ನು ಬೆಳೆಯುತ್ತಾರೆ.
ಈ ಹಣ್ಣಿನಲ್ಲಿ ಪ್ರೋಟೀನ್, ಫೈಬರ್, ಸೋಡಿಯಂ, ವಿಟಮಿನ್ ಎ, ಫೋಲಿಕ್ ಆಮ್ಲ, ವಿಟಮಿನ್ ಬಿ6, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಸೇರಿದಂತೆ ಅನೇಕ ಪೋಷಕಾಂಶ ಹೊಂದಿದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಾಗಿ ಕಂಡು ಬರುತ್ತದೆ.
ಇದನ್ನೂ ಓದಿ:Blue Berry Seeds Benefits: ನೇರಳೆ ಹಣ್ಣು, ಬೀಜದಲ್ಲಿ ಅಡಗಿದೆ ಆರೋಗ್ಯದಾಯಕ ಗುಣ!
ಕರ್ಬೂಜ ಹಣ್ಣಿನಲ್ಲಿರುವ ವಿಟಮಿನ್ ಸಿ ಪ್ರೋಟಿನ್ ಮೂಳೆಗಳ ಬೆಳವಣಿಗೆ, ರಕ್ತನಾಳದ ಆರೋಗ್ಯ , ಗಾಯ ಗುಣಪಡಿಸುವಿಕೆಗೆ ಗುಣ ಹೊಂದಿದೆ. ಈ ಹಣ್ಣುನ್ನು ಬೇಸಿಗೆಯಲ್ಲಿ ನಿಯಮಿತ್ತವಾಗಿ ಸೇವನೆ ಮಾಡುವುದರಿಂದ ದೇಹವನ್ನು ತಂಪಾಗಿರಿಸುತ್ತದೆ.
ಇದರ ಪ್ರಯೋಜನಗಳು
ಈ ಹಣ್ಣಿನಲ್ಲಿ ನೀರಿನಾಂಶ ಹೆಚ್ಚಿದ್ದು, ಸಕ್ಕರೆ ಗುಣ ಕಡಿಮೆ ಹೊಂದಿದೆ. ಆದ್ದರಿಂದ ಇದು ಮಧುಮೇಹಿಗಳಿಗೆ ಉತ್ತಮ ಆಹಾರವಾಗಿದೆ.
ಇದನ್ನೂ ಓದಿ:Prawns Benefits : ʼಸಿಗಡಿ ಮೀನುʼಎಂದೊಡನೆ ಬಾಯಲ್ಲಿ ನೀರು ಬಂತಾ.... ಹಾಗಿದ್ರೆ ಪ್ರಯೋಜನ ತಿಳಿಯಿರಿ.!
ಉತ್ತಮ ಜೀರ್ಣಕ್ರಿಯೆಗೆ ಸಹಕಾರಿ
ಜೀರ್ಣತೆ ಹಾಗೂ ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕರ್ಬುಜ ಹಣ್ಣು ಒಂದು ಒಳ್ಳೆಯ ಔಷಧಿಯಾಗಿದೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ಇದನ್ನು ನಿಯಮಿತ್ತ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸಬಹುದಾಗಿದೆ.
ರಕ್ತದ ಒತ್ತಡ ಸಮತೋಲನಕ್ಕೆ ಉತ್ತಮ ಪರಿಹಾರವಾಗಿದೆ. ಕರ್ಬೂಜ ಸೇವನೆಯಿಂದ ರಕ್ತ ಸಮಸ್ಯೆ ಹಾಗೂ ಹೃದಯದ ತೊಂದರೆಯನ್ನು ಕಾಪಾಡಲು ಸಹಕರಿಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.