Moringa Leaves For Diabetes: ಮಧುಮೇಹ, ಹೃದಯ ಕಾಯಿಲೆಗಳಿಂದ ದೂರವಿರಲು ಸಹಕಾರಿ ಈ ಸೊಪ್ಪು

Moringa Leaves For Diabetes: ಮಧುಮೇಹ ರೋಗಿಯು ತನ್ನ ಆಹಾರದ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ, ಇಲ್ಲದಿದ್ದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ಯಾವುದೇ ಸಮಯದಲ್ಲಿ ಹೆಚ್ಚಾಗಬಹುದು, ಇದು ಆರೋಗ್ಯಕ್ಕೆ ಉತ್ತಮವೆಂದು ಪರಿಗಣಿಸಲಾಗುವುದಿಲ್ಲ.

Written by - Yashaswini V | Last Updated : May 9, 2022, 07:41 AM IST
Moringa Leaves For Diabetes: ಮಧುಮೇಹ, ಹೃದಯ ಕಾಯಿಲೆಗಳಿಂದ ದೂರವಿರಲು ಸಹಕಾರಿ ಈ ಸೊಪ್ಪು title=
Diabetes Control Tips

ಮಧುಮೇಹಕ್ಕೆ ನುಗ್ಗೆ ಸೊಪ್ಪು: ಇತ್ತೀಚಿನ ದಿನಗಳಲ್ಲಿ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಜನರು ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಮಧುಮೇಹವು ಅಂತಹ ಒಂದು ಕಾಯಿಲೆಯಾಗಿದ್ದು ಒಮ್ಮೆ ಈ ಕಾಯಿಲೆಗೆ ತುತ್ತಾದರೆ ಅದನ್ನು ನಿಯಂತ್ರಿಸಬಹುದೇ ಹೊರತು ಕೊನೆವರೆಗೂ ಅದು ದೂರವಾಗುವುದಿಲ್ಲ. ಹಾಗಾಗಿ, ಮಧುಮೇಹ ರೋಗಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಅನೇಕ ವೈದ್ಯರು ಮಧುಮೇಹ ರೋಗಿಗಳಿಗೆ ಮೊರಿಂಗಾ ಎಲೆಗಳನ್ನು ಅಂದರೆ ನುಗ್ಗೆ ಸೊಪ್ಪನ್ನು  ತಿನ್ನಲು ಸಲಹೆ ನೀಡುತ್ತಾರೆ. ಇದು ಅಮೈನೋ ಆಮ್ಲಗಳ ಸಮೃದ್ಧ ಮೂಲವಾಗಿದೆ. ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಸಿ, ರಂಜಕ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಮುಂತಾದ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. 

ಮಧುಮೇಹ ರೋಗಿಗಳಿಗೆ ದಿವ್ಯೌಷಧ ನುಗ್ಗೆ ಸೊಪ್ಪು:
ಮಧುಮೇಹ ಹೊಂದಿರುವ ರೋಗಿಗಳು ನುಗ್ಗೆ ಸೊಪ್ಪನ್ನು ತಮ್ಮ ಡಯಟ್ನಲ್ಲಿ ಸೇರಿಸಬೇಕು. ನುಗ್ಗೆ ಸೊಪ್ಪು  ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಸಾಮರ್ಥ್ಯವಿರುವ ಪ್ರಬಲವಾದ ಫೈಟೊಕೆಮಿಕಲ್‌ಗಳನ್ನು ಹೊಂದಿರುತ್ತದೆ. ಇದು ಲಿಪಿಡ್‌ಗಳು, ಕೊಲೆಸ್ಟ್ರಾಲ್ ಮತ್ತು ಆಕ್ಸಿಡೇಟಿವ್ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ, ಇವೆಲ್ಲವೂ ಮಧುಮೇಹವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಡ್ರಮ್ ಸ್ಟಿಕ್ ಎಲೆಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ, ಇದು ಜೀವಕೋಶದ ಹಾನಿಯಿಂದ ರಕ್ಷಿಸುತ್ತದೆ ಮತ್ತು ಸ್ವತಂತ್ರ ರಾಡಿಕಲ್ಗಳ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ.

ಇದನ್ನೂ ಓದಿ- ಡಯಾಬಿಟೀಸ್ ರೋಗಿಗಳು ದೇಹದಲ್ಲಿ ಕಾಣಿಸುವ ಈ ಬದಲಾವಣೆಗಳನ್ನು ನಿರ್ಲಕ್ಷಿಸಬಾರದು .! ಎದುರಾಗಬಹುದು ಭಾರೀ ಸಮಸ್ಯೆ

ನುಗ್ಗೆ ಸೊಪ್ಪಿನ ಇತರ ಪ್ರಯೋಜನಗಳು:
1. ಹೃದಯ ರೋಗಗಳನ್ನು ತಡೆಗಟ್ಟುವುದು:

ನುಗ್ಗೆ ಸೊಪ್ಪು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸಹಾಯಕವಾಗಿವೆ. ಇದು ರಕ್ತನಾಳಗಳಲ್ಲಿ ಅಡಚಣೆಯನ್ನು ಉಂಟುಮಾಡುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು ಮತ್ತು ಹೃದಯಾಘಾತದ ಅಪಾಯವೂ ಕಡಿಮೆ ಆಗುತ್ತದೆ ಎನ್ನಲಾಗಿದೆ.

2. ಸಾಕಷ್ಟು ಶಕ್ತಿ ಸಿಗುತ್ತದೆ:
ನುಗ್ಗೆ ಸೊಪ್ಪು ಸೇವಿಸುವುದರಿಂದ ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚುತ್ತದೆ ಮತ್ತು ಆಯಾಸ ಮಾಯವಾಗುತ್ತದೆ. ಈ ಎಲೆಗಳಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು, ದೇಹದ ದೌರ್ಬಲ್ಯವನ್ನು ಹೋಗಲಾಡಿಸುತ್ತದೆ.

ಇದನ್ನೂ ಓದಿ- Blood sugar: ಬ್ಲಡ್ ಶುಗರ್ ಕಂಟ್ರೋಲ್‌ಗೆ ತರಲು ಈ ಎಲೆಯ ನೀರು ಕುಡಿಯಿರಿ..

3. ರೋಗನಿರೋಧಕ ಶಕ್ತಿ ಬೂಸ್ಟ್ ಆಗುತ್ತದೆ:
ಮೊರಿಂಗಾ ಎಲೆಗಳು ಅಂದರೆ ನುಗ್ಗೆ ಸೊಪ್ಪು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಫೈಟೊನ್ಯೂಟ್ರಿಯೆಂಟ್‌ಗಳನ್ನು ಹೊಂದಿರುತ್ತವೆ, ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಈ ಕಾರಣದಿಂದಾಗಿ, ಇದು ಅನೇಕ ಸಾಂಕ್ರಾಮಿಕ ರೋಗಗಳು ಮತ್ತು ವೈರಸ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News