ಕೆಲವೇ ದಿನದಲ್ಲಿ ಹೊಟ್ಟೆಯ ಬೊಜ್ಜು ಕರಗಿಸಿ!

ತೂಕ ಕಡಿಮೆ ಮಾಡುವುದು ಮಹಿಳೆಯರಿಗೆ ಒಂದು ಸವಾಲಿನ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯನ್ನು ಮಹಿಳೆಯರು ಸಂಕೀರ್ಣ ಮತ್ತು ಸವಾಲಿನ ಪ್ರಕ್ರಿಯೆಯಾಗಿ ನೋಡುತ್ತಾರೆ. ದೇಹದಲ್ಲಿನ ಅನಗತ್ಯ ಬೊಜ್ಜು ತೊಡೆದುಹಾಕಲು, ಮಹಿಳೆಯರು ಸಾಕಷ್ಟು ತಲೆಕೆಡಿಸಿಕೊಳ್ಳುತ್ತಾರೆ. ಆದರೆ ನಮ್ಮ ಮನೆಯೊಳಗಿನ ಪದಾರ್ಥಗಳನ್ನು ಬಳಸಿಯೇ ಬೊಜ್ಜು ಕರಗಿಸುವ ಸುಲಭ ಮಾರ್ಗದ ಬಗ್ಗೆ ನಾವು ಒಂದಿಷ್ಟು ಮಾಹಿತಿ ನೀಡಲಿದ್ದೇವೆ.

Last Updated : Dec 3, 2019, 10:31 AM IST
ಕೆಲವೇ ದಿನದಲ್ಲಿ ಹೊಟ್ಟೆಯ ಬೊಜ್ಜು ಕರಗಿಸಿ! title=

ನವದೆಹಲಿ: ಆಗಾಗ್ಗೆ ನಾವು ನಮ್ಮ ಆಹಾರದಲ್ಲಿ ರುಚಿ ರುಚಿಯಾದ ಕುರುಕಲು ತಿಂಡಿ ತಿನ್ನಲು ಇಷ್ಟಪಡುತ್ತೇವೆ. ಈ ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರವನ್ನು ತಿನ್ನುವುದು ನಮ್ಮ ಹಸಿವನ್ನು ತೊಡೆದುಹಾಕುತ್ತದೆ. ಆದರೆ ನೆನಪಿಡಿ ನಮ್ಮ ತೂಕವನ್ನೂ  ಹೆಚ್ಚಿಸುತ್ತದೆ. ಅವು ನಮ್ಮ ದೇಹದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತವೆ. ಹಾಗಾಗಿ ದೇಹದಲ್ಲಿ ಶೇಖರಣೆಯಾಗಿರುವ ಅನಗತ್ಯ ಬೊಜ್ಜನ್ನು ಕರಗಿಸಲು, ಬಳ್ಳಿಯಂತ ಬಳಕುವ ಮೈಕಟ್ಟು ಯಾರಿಗೆ ತಾನೇ ಬೇಡ ಹೇಳಿ. ಆ ರೀತಿಯ ಮೈಕಟ್ಟು ಪಡೆಯಲು ಬಯಸಿದರೆ, ನಿಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಸುಧಾರಿಸುವುದು ಮುಖ್ಯ.

ತೂಕ ಕಡಿಮೆ ಮಾಡುವುದು ಮಹಿಳೆಯರಿಗೆ ಒಂದು ಸವಾಲಿನ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯನ್ನು ಮಹಿಳೆಯರು ಸಂಕೀರ್ಣ ಮತ್ತು ಸವಾಲಿನ ಪ್ರಕ್ರಿಯೆಯಾಗಿ ನೋಡುತ್ತಾರೆ. ದೇಹದಲ್ಲಿನ ಅನಗತ್ಯ ಬೊಜ್ಜು ತೊಡೆದುಹಾಕಲು, ಮಹಿಳೆಯರು ಸಾಕಷ್ಟು ತಲೆಕೆಡಿಸಿಕೊಳ್ಳುತ್ತಾರೆ. ಆದರೆ ನಮ್ಮ ಮನೆಯೊಳಗಿನ ಪದಾರ್ಥಗಳನ್ನು ಬಳಸಿಯೇ ಬೊಜ್ಜು ಕರಗಿಸುವ ಸುಲಭ ಮಾರ್ಗದ ಬಗ್ಗೆ ನಾವು ಒಂದಿಷ್ಟು ಮಾಹಿತಿ ನೀಡಲಿದ್ದೇವೆ. ಹೌದು, ಇಂದು ನಾವು ಅಂತಹ ಒಂದು ಪಾನೀಯದ ಬಗ್ಗೆ ನಿಮಗೆ ಹೇಳಲಿದ್ದೇವೆ. ಈ ಪಾನೀಯ ಸೇವಿಸುವುದರಿಂದ ಕೆಲವೇ ದಿನಗಳಲ್ಲಿ ದೇಹದ ಅನಗತ್ಯ ಬೊಜ್ಜು ಕರಗಲಿದೆ.

ನಿಮ್ಮ ಹೊಟ್ಟೆಯ ಕೊಬ್ಬನ್ನು ತೊಡೆದುಹಾಕುವಲ್ಲಿ ಪ್ರಮುಖ ಪಾತ್ರವಹಿಸುವಂತಹ ನೀವೇ ತಯಾರಿಸಬಹುದಾದ ನೈಸರ್ಗಿಕ ಪಾನೀಯವನ್ನು ತಯಾರಿಸಿ ಸೇವಿಸಿ.  ಅದರ ತ್ವರಿತ ಫಲಿತಾಂಶ ಕೆಲವೇ ದಿನಗಳಲ್ಲಿ ನಿಮಗೆ ತಿಳಿಯುತ್ತದೆ.

ಈ ಪಾನೀಯವನ್ನು ತಯಾರಿಸಲು ನಿಮಗೆ 5-6 ಪದಾರ್ಥಗಳು ಬೇಕಾಗುತ್ತವೆ. ಈ ಎಲ್ಲಾ ವಸ್ತುಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿರುತ್ತವೆ. ಸೌತೆಕಾಯಿ, ಸೀತಾಫಲ, ನಿಂಬೆರಸ, ಶುಂಠಿ ಮತ್ತು ಅಲೋವೆರಾ ರಸವನ್ನು ಮಿಶ್ರಣ ಮಾಡಿ ಅಗತ್ಯಕ್ಕೆ ತಕ್ಕಷ್ಟು ನೀರು ಬೆರೆಸಿ ರಾತ್ರಿಯಲ್ಲಿ ಮಲಗುವ ಮೊದಲು ನೀವು ಅದನ್ನು ಸೇವಿಸಬೇಕು. ನಿಯಮಿತವಾಗಿ ಹೀಗೆ ಮಾಡುವುದರಿಂದ ರಾತ್ರಿ ನಿದ್ರೆಯ ಸಮಯದಲ್ಲಿ ಜೀರ್ಣಕ್ರಿಯೆಯ ಪ್ರಕ್ರಿಯೆಯು ನಿಧಾನವಾಗುವುದರಿಂದ ಇದು ಈ ಪಾನೀಯವು ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತದೆ.

ನೆನಪಿಡಿ: ಯಾವುದಾದರೂ ಹಿತಮಿತವಾಗಿದ್ದರಷ್ಟೇ ಆರೋಗ್ಯಕ್ಕೆ ಒಳ್ಳೆಯದು, ಬೊಜ್ಜು ಕರಗುತ್ತದೆ ಎಂಬ ಕಾರಣಕ್ಕೆ ಇದನ್ನು ಹೆಚ್ಚಾಗಿ ಸೇವಿಸದಿರಿ.

Trending News