ಬೆಂಗಳೂರು : ಅಮ್ಮನ ಕೈಯಡುಗೆ ಎಲ್ಲರಿಗೂ ಇಷ್ಟ ಯಾಕೆ ಗೊತ್ತಾ..? ಅದಕ್ಕೆ ಒಂದು ಕಾರಣ ಅಮ್ಮ ಮೈದಾ ಬಳಸಿ ಏನನ್ನೂ ಮಾಡಲ್ಲ. ಬ್ರೆಡ್ (Bread), ಬಿಸ್ಕೆಟ್ (Biscuit), ಪಿಜ್ಜಾ (Pizza), ಬರ್ಗರ್ (Burger), ನೂಡಲ್ಸ್(Noodles), ಮೈದಾ ದೋಸೆ ಇತ್ಯಾದಿ ಅಮ್ಮ ಮನೆಯಲ್ಲಿ ಮಾಡಲ್ಲ. ಯಾಕಂದರೆ ಅದನ್ನು ಮೈದಾ ಬಳಸಿಯೇ ಮಾಡುತ್ತಾರೆ. ನೀವು ಬ್ರೆಡ್, ಪಿಜ್ಜಾ ಬರ್ಗರ್, ನೂಡಲ್ಸ್, ಮೈದಾ ದೋಸೆ ತುಂಬಾ ತಿನ್ನುವಿರಾದರೆ ನಿಮಗಿದು ಮುಖ್ಯ ಸುದ್ದಿ. ಮೈದಾ ನಿಮ್ಮ ದೇಹದ ಮೇಲೆ ಉಂಟು ಮಾಡುವ ಪರಿಣಾಮವನ್ನು ಓದಲೇ ಬೇಕು.
16 ವರ್ಷದ ಆ ಸಂಶೋಧನೆ ಹೇಳಿದ್ದೇನು..?
ಕೆನಡಾದ ವಿಶ್ವವಿದ್ಯಾಲಯವೊಂದು (Canada University) ಮೈದಾ ಅಂದರೆ ರಿಫೈನ್ಡ್ ಫುಡ್ (Refined food) ಮೇಲೆ 17 ವರ್ಷ ವಿಸ್ತೃತ ಸಂಶೋಧನೆ ಮಾಡಿದೆ. ತನ್ನ ಸಂಶೋಧನಾ ವರದಿಯನ್ನು ಅದೀಗ ಬಿಡುಗಡೆ ಮಾಡಿದ್ದು, ಮೈದಾ ತಿನ್ನುವುದರಿಂದ ಆಗುವ ಆರೋಗ್ಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದೆ.
ಇದನ್ನೂ ಓದಿ : Vitamin C ಸಮೃದ್ಧವಾಗಿರುವ ಈ 5 ಆಹಾರಗಳನ್ನು ಸೇವಿಸಿ ರೋಗನಿರೋಧಕ ಶಕ್ತಿ ಹೆಚ್ಚಿಸಿ
ಸಂಶೋಧನೆ ಹೇಗೆ ನಡೆದಿತ್ತು ಗೊತ್ತಾ..?
ವಿವಿಧ ವಯೋಮಾನದ 1.37 ಲಕ್ಷ ಜನರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. 16 ವರ್ಷ ಸಂಶೋಧನೆ ನಡೆದಿತ್ತು. 1.37 ಲಕ್ಷ ಜನರಲ್ಲಿ ಒಂದಷ್ಟು ಜನರಿಗೆ ರಿಫೈನ್ಡ್ ಧಾನ್ಯ (ಮೈದಾ ಇತ್ಯಾದಿ), ಇನ್ನೊಂದಷ್ಟು ಜನರಿಗೆ ಪರಿಪೂರ್ಣ ಧಾನ್ಯ (ಅಂದರೆ ಗೋಧಿ, ಜೋಳ ಇತ್ಯಾದಿ) ಹಾಗೂ ಉಳಿದವರಿಗೆ ಅನ್ನವನ್ನು (White Rice)ತಿನ್ನಲು ನೀಡಲಾಗಿತ್ತು. ಗೋಧಿ, ಜೋಳ, ಅನ್ನ ತಿಂದವರ ಆರೋಗ್ಯದಲ್ಲಿ ಯಾವುದೇ ವ್ಯತ್ಯಯ ಉಂಟಾಗಲಿಲ್ಲ. ಆದರೆ, ಮೈದಾ ತಿಂದವರ ಆರೋಗ್ಯ (Health) ಹದಗೆಟ್ಟಿದ್ದು ಸಂಶೋಧನೆ ದೃಢಪಡಿಸಿದೆ.
ಮೈದಾ ಯಾಕೆ ಆರೋಗ್ಯಕ್ಕೆ ಹಾನಿಕರ..?
ಮೈದಾ ಮಾಡೋದು ಹೇಗೆ ಅನ್ನೋದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಧಾನ್ಯಗಳನ್ನು ಪ್ರೊಸೆಸಿಂಗ್ (Processed grain) ಮಾಡಿ ಮೈದಾ ಉತ್ಪಾದಿಸುತ್ತಾರೆ. ಮೈದಾ ಒಂದು ರೀತಿಯಲ್ಲಿ ಸಂಸ್ಕರಿತ ಆಹಾರ (Processed food) . ಮುಖ್ಯ ವಿಚಾರ ಏನೆಂದರೆ, ಈ ಪ್ರೊಸೆಸಿಂಗ್ ಮಾಡುವಾಗಿ ಅದರಲ್ಲಿರುವ ಪೌಷ್ಟಿಕಾಂಶಗಳು ಖತಂ ಆಗುತ್ತವೆ. ಅದರಲ್ಲಿ ಫೈಬರ್ (fiber) ಸಂಪೂರ್ಣ ನಷ್ಟವಾಗುತ್ತದೆ. ಒಂದು ರೀತಿಯಲ್ಲಿ ಅದು ಪೌಷ್ಟಿಕಾಂಶಗಳೇ ಇಲ್ಲದ ವ್ಯರ್ಥ ಹಿಟ್ಟು. ಈ ಮೈದಾದಲ್ಲೇ ಬ್ರೆಡ್, ಬಿಸ್ಕಿಟ್, ಪಾಸ್ತಾ, ಪರೋಟಾ ಇತ್ಯಾದಿ ಖಾದ್ಯಗಳನ್ನು ತಯಾರಿಸಲಾಗುತ್ತದೆ.
ಇದನ್ನೂ ಓದಿ : Health tips : ಆರೋಗ್ಯಕ್ಕೆ ತೆಂಗಿನ ಕಾಯಿ ಎಷ್ಟೊಂದು ಹಿತಕಾರಿ ತಿಳಿಯಿರಿ..!
ಮೈದಾ ಡೇಂಜರ್ ಯಾಕೆ..?
ಕೆನಡಾ ರಿಸರ್ಚ್ ಫಲಿತಾಂಶದ ಪ್ರಕಾರ ಮೈದಾ ಉತ್ಪನ್ನಗಳನ್ನು ಹೆಚ್ಚು ತಿಂದರೆ
1. ಬೊಜ್ಜು (obesity) ಬೆಳೆಯುತ್ತದೆ.
2. ಬಿಪಿ (Blood Pressure), ಶುಗರ್ (Sugar) ಹೆಚ್ಚಾಗುತ್ತದೆ.
3. ದೇಹದಲ್ಲಿ ಕ್ಯಾಲ್ಸಿಯಂ (Calcium) ಕೊರತೆ ಉಂಟಾಗುತ್ತದೆ. ಅಂದರೆ ಇದರ ನೇರ ಪರಿಣಾಮ ಮೂಳೆಗಳ ಮೇಲೆ ಬೀಳುತ್ತದೆ.
4. ಮೈದಾದಿಂದ ಮಾಡಿದ ಖಾದ್ಯಗಳು ಬೇಗ ಜೀರ್ಣವಾಗುವುದಿಲ್ಲ.
5. ಮೈದಾದಲ್ಲಿ ಬಹುಮುಖ್ಯವಾದ ಫೈಬರ್ ಅಂಶ ಇರುವುದೇ ಇಲ್ಲ.
ಮೈದಾ ತಿಂದರೆ ಆಗುವ ದುಷ್ಪರಿಣಾಮಗಳೇನು..?
1. ಶೇ 27ರಷ್ಟು ಜನರು ಹೃದ್ರೋಗದಿಂದ ಸಾಯಬಹುದು
2. ಶೇ. 33 ರಷ್ಟು ಜನರಿಗೆ ಹೃದ್ರೋಗ (heart disease) ಆವರಿಸಬಹುದು
3. ಶೇ. 46 ರಷ್ಟು ಜನರಿಗೆ ಸ್ಟ್ರೋಕ್ ಉಂಟಾಗಬಹುದು.
ಇದನ್ನೂ ಓದಿ : Health Tips : ಏಳು ಮಹಾರೋಗಕ್ಕೆ ರಾಮಬಾಣ ಈ ನುಗ್ಗೆ ಸೊಪ್ಪು..!
ಹಾಗಾಗಿ, ಆರೋಗ್ಯಬೇಕಾ..? ಹಾಗಾದರೆ, ಮೈದಾದಿಂದ ದೂರ ಇರಿ. ನಿಮಗೆ ಗೊತ್ತಿರಲಿ ಅಮ್ಮ ಮಾಡಿದ ಅಡುಗೆಯಲ್ಲಿ ಮೈದಾ ಇರೋದಿಲ್ಲ. ಮೈದಾ ಒಳ್ಳೆಯದಲ್ಲ ಅನ್ನೋದು ನಿಮ್ಮ ಅಮ್ಮನಿಗೆ ಚೆನ್ನಾಗಿ ಗೊತ್ತು. ಆದರೆ, ಬೇಕರಿ ತಿನಿಸುಗಳನ್ನು ಬಹುತೇಕ ಮೈದಾದಿಂದಲೇ ಮಾಡಲಾಗುತ್ತದೆ. ಹಾಗಾಗಿ, ರುಚಿ ರುಚಿ ತಿಂಡಿಗಾಗಿ ಬೇಕರಿಯನ್ನು ಅವಲಂಬಿಸುವುದು ಕಡಿಮೆ ಮಾಡಿ. ಅಮ್ಮನ ಕೈಯಡುಗೆಯನ್ನೇ ತಿನ್ನಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.