Weight Loss Drink: ತೂಕ ಇಳಿಸಿಕೊಳ್ಳಲು ಈ ವಿಶೇಷ ಕಾಫಿ ಕುಡಿಯಿರಿ

Weight Loss Drink: ತೂಕ ಹೆಚ್ಚಳವು ಸೌಂದರ್ಯವನ್ನು ಹದಗೆಡಿಸುವುದು ಮಾತ್ರವಲ್ಲ ಅಧಿಕ ರಕ್ತದೊತ್ತಡ, ಹೃದಯಾಘಾತ ಮತ್ತು ಮಧುಮೇಹದಂತಹ ಕಾಯಿಲೆಗಳ ಅಪಾಯವನ್ನು ಸೃಷ್ಟಿಸುತ್ತದೆ. ಹಾಗಾಗಿ, ಉತ್ತಮ ಆರೋಗ್ಯಕ್ಕಾಗಿ ಅತಿಯಾದ ತೂಕವನ್ನು ನಿಯಂತ್ರಿಸುವುದು ಒಳ್ಳೆಯದು.

Written by - Yashaswini V | Last Updated : May 27, 2022, 06:52 AM IST
  • ನಿಂಬೆ ಮತ್ತು ಕಾಫಿ ಎರಡರಲ್ಲೂ ಬಹಳಷ್ಟು ಪೋಷಕಾಂಶಗಳು ಕಂಡುಬರುತ್ತವೆ.
  • ಅವು ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತವೆ.
  • ನಿಂಬೆ ಮತ್ತು ಕಾಫಿಯಲ್ಲಿ ತೂಕ ಇಳಿಸುವ ಗುಣಗಳಿವೆ.
Weight Loss Drink: ತೂಕ ಇಳಿಸಿಕೊಳ್ಳಲು ಈ ವಿಶೇಷ ಕಾಫಿ ಕುಡಿಯಿರಿ title=
Lemon Coffee For Weight Loss

ತೂಕ ನಷ್ಟಕ್ಕೆ ನಿಂಬೆ ಕಾಫಿ: ತೂಕ ಹೆಚ್ಚಳವು ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಆಹ್ವಾನ ನೀಡುತ್ತದೆ. ಜೊತೆಗೆ ಹಲವು ರೀತಿಯಲ್ಲಿ ಅದು ವ್ಯಕ್ತಿಯನ್ನು ತೊಂದರೆಗೆ ಒಳಪಡಿಸುತ್ತದೆ. ಹಾಗಾಗಿ, ಬೊಜ್ಜು ಹೆಚ್ಚಾಗುವುದರಿಂದ ಜನರು ಚಿಂತೆಗೀಡಾಗುತ್ತಾರೆ. ತೂಕ ಹೆಚ್ಚಳವು ಸೌಂದರ್ಯವನ್ನು ಹದಗೆಡಿಸುವುದು ಮಾತ್ರವಲ್ಲ ಅಧಿಕ ರಕ್ತದೊತ್ತಡ, ಹೃದಯಾಘಾತ ಮತ್ತು ಮಧುಮೇಹದಂತಹ ಕಾಯಿಲೆಗಳ ಅಪಾಯವನ್ನು ಸೃಷ್ಟಿಸುತ್ತದೆ. ಹಾಗಾಗಿ, ಉತ್ತಮ ಆರೋಗ್ಯಕ್ಕಾಗಿ ಅತಿಯಾದ ತೂಕವನ್ನು ನಿಯಂತ್ರಿಸುವುದು ಒಳ್ಳೆಯದು. 

ಸಾಮಾನ್ಯವಾಗಿ ತೂಕ ನಿಯಂತ್ರಿಸುವ ವಿಷಯಕ್ಕೆ ಬಂದಾಗ ಜನರು ಮಾಡುವ ಮೊದಲ ಕೆಲಸ ಎಂದರೆ ಊಟ ಕಡಿಮೆ ಮಾಡುವುದು ಮತ್ತು ಸಿಹಿ ಪದಾರ್ಥಗಳಿಂದ ದೂರವಿರುವುದು. ಇದರೊಂದಿಗೆ ಯೋಗ, ವ್ಯಾಯಾಮದಂತಹ ಆರೋಗ್ಯಕರ ಅಭ್ಯಾಸಗಳನ್ನೂ ರೂಢಿಸಿಕೊಳ್ಳುತ್ತಾರೆ. ಆದಾಗ್ಯೂ, ನಿರೀಕ್ಷಿತ ಫಲಿತಾಂಶ ದೊರೆಯುವುದಿಲ್ಲ ಎಂದು ಬೇಸರ ಮಾಡಿಕೊಳ್ಳುವವರ ಸಂಖ್ಯೆಯೇ ಹೆಚ್ಚು. ಆದರೆ, ನಿಮ್ಮ ಡಯಟ್ ನಲ್ಲಿ ಕೆಲವು ಪಾನೀಯಗಳನ್ನು ಸೇರಿಸುವುದರಿಂದಲೂ ತೂಕ ನಿಯಂತ್ರಿಸಬಹುದು ಎಂದು ನಿಮಗೆ ತಿಳಿದಿದೆಯೇ? ಅದರಲ್ಲಿ ಬಿಸಿ ನೀರಿನೊಂದಿಗೆ ನಿಂಬೆ ಬೆರೆಸಿ ಕುಡಿಯುವುದು ಒಂದು ವಿಧಾನವಾದರೆ "ತೂಕ ನಷ್ಟಕ್ಕೆ ನಿಂಬೆ ಕಾಫಿ" ಅತ್ಯುತ್ತಮವಾದ ಪಾನೀಯ ಎಂದು ಹೇಳಲಾಗುತ್ತದೆ. ಹಾಗಿದ್ದರೆ ಅದನ್ನು ಬಳಸುವುದು ಹೇಗೆ? ಅದರಿಂದಾಗುವ ಪ್ರಯೋಜನಗಳೇನು ಎಂದು ತಿಳಿಯೋಣ...

ಇದನ್ನೂ ಓದಿ-  Weight Loss Food: ಈ ಹಣ್ಣಿನ ಎಲೆಗಳನ್ನು ತಿನ್ನುವುದರಿಂದ ಕಡಿಮೆಯಾಗುತ್ತಂತೆ ತೂಕ

ತೂಕ ಇಳಿಸಿಕೊಳ್ಳಲು ನಿಂಬೆ ಕಾಫಿ:
ನಿಂಬೆ ಕಾಫಿಯನ್ನು ತೂಕ ಇಳಿಸುವ ಪಾನೀಯವಾಗಿ ಬಳಸಲಾಗುತ್ತದೆ. ಇದರಲ್ಲಿ, ಕಾಫಿಯನ್ನು ನಿಂಬೆ ರಸದೊಂದಿಗೆ ಬೆರೆಸಿ ಕುಡಿಯಬೇಕು. ಹೀಗೆ ಮಾಡುವುದರಿಂದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದು ಹೊಟ್ಟೆಯ ಸುತ್ತ ಸಂಗ್ರಹವಾಗಿರುವ ಅಧಿಕ ಪ್ರಮಾಣದ ಫ್ಯಾಟ್ ಅನ್ನು ಕರಗಿಸಲು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.

ನಿಂಬೆ ಕಾಫಿಗೆ ಸಕ್ಕರೆ ಸೇರಿಸಬೇಡಿ:
ಲೆಮನ್ ಕಾಫಿಯಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಲು, ನೀವು ಹಾಲಿನಿಂದ ತಯಾರಿಸುವ ಕಾಫಿ ಬದಲಿಗೆ ಬ್ಲಾಕ್ ಕಾಫಿಯನ್ನು ಬಳಸಬೇಕು ಮತ್ತು ಅದರಲ್ಲಿ ಸಕ್ಕರೆಯನ್ನು ಬೆರೆಸಬೇಡಿ. ಬದಲಾಗಿ, ಅರ್ಧ ನಿಂಬೆಹಣ್ಣಿನ ರಸವನ್ನು ಹಿಂಡಿ ಮತ್ತು ಪ್ರತಿದಿನ ಬೆಳಿಗ್ಗೆ ನಿಯಮಿತವಾಗಿ ಕುಡಿಯಿರಿ, ಹೀಗೆ ಮಾಡುವುದರಿಂದ ನಿಮ್ಮ ತೂಕವು ಕೆಲವೇ ದಿನಗಳಲ್ಲಿ ಕಡಿಮೆಯಾಗುತ್ತದೆ ಎನ್ನಲಾಗುತ್ತದೆ.

ಇದನ್ನೂ ಓದಿ-  ನಿಂಬೆ ನೀರು ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆಯೇ? ಏನಿದರ ಹಿಂದಿನ ಸತ್ಯ

ನಿಂಬೆ ಮತ್ತು ಕಾಫಿಯ ಪ್ರಯೋಜನಗಳು:
* ನಿಂಬೆ ಮತ್ತು ಕಾಫಿ ಎರಡರಲ್ಲೂ ಬಹಳಷ್ಟು ಪೋಷಕಾಂಶಗಳು ಕಂಡುಬರುತ್ತವೆ, ಅದಕ್ಕಾಗಿಯೇ ಅವು ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತವೆ. 
* ನಿಂಬೆ ಮತ್ತು ಕಾಫಿಯಲ್ಲಿ ತೂಕ ಇಳಿಸುವ ಗುಣಗಳಿವೆ. 
* ನಾವು ಕಾಫಿಯಿಂದ ಕೆಫೀನ್ ಅನ್ನು ಪಡೆಯುತ್ತೇವೆ, ಇದು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. 
* ಮತ್ತೊಂದೆಡೆ, ನಾವು ನಿಂಬೆ ಬಗ್ಗೆ ಹೇಳುವುದಾದರೆ ಅದರ ರಸವನ್ನು ಒಮ್ಮೆ ಕುಡಿದರೆ, ನಂತರ ದೀರ್ಘಕಾಲದವರೆಗೆ ಹಸಿವು ಇರುವುದಿಲ್ಲ ಮತ್ತು ಈ ಕಾರಣದಿಂದಾಗಿ ದೈನಂದಿನ ಕ್ಯಾಲೋರಿ ಸೇವನೆಯು ಕಡಿಮೆಯಾಗುತ್ತದೆ. 
* ಇದರೊಂದಿಗೆ, ನಿಂಬೆಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ ಕಾರಣ, ಇದು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಗಳಿಂದ ರಕ್ಷಿಸುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News