ಭಾರತದಲ್ಲಿ ಝಿಕಾ ವೈರಸ್ ರೋಗ (ZVD) ಪ್ರಾರಂಭವಾದಾಗ ಈ ರೋಗವನ್ನು ನಿಯಂತ್ರಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಕೇವಲ ರಾಜಸ್ಥಾನ ಒಂದರಿಂದಲೇ ಝಿಕಾ ವೈರಸ್ ನ 29 ಪ್ರಕರಣಗಳ ಬಗ್ಗೆ ವರದಿಯಾಗಿದೆ. ಝಿಕಾ ವೈರಸ್ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಈಗಾಗಾಗಲೇ 150ರಿಂದ 200 ತಂಡಗಳು ಜೈಪುರದಲ್ಲಿ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ರಾಜಸ್ಥಾನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
ವೀಣಾ ಗುಪ್ತ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಕಚೇರಿಯಿಂದ ಈ ವಿಷಯದ ಬಗ್ಗೆ ಸಮಗ್ರ ವರದಿಗೆ ಆದೇಶಿಸಿದ್ದಾರೆ. ಆರೋಗ್ಯ ಸಚಿವ ಜೆ.ಪಿ. ನಡ್ಡ ಅವರು ಜನರಲ್ಲಿ ಈ ಬಗ್ಗೆ ಯಾವುದೇ ರೀತಿಯ ಗಾಬರಿ ಉಂಟಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇವು ಝಿಕಾ ವೈರಸ್ ಸೋಂಕಿನ ಲಕ್ಷಣಗಳು:
- ಝಿಕಾ ವೈರಸ್ ರೋಗದ ಲಕ್ಷಣಗಳು ಡೆಂಗ್ಯೂ ರೋಗದ ಲಕ್ಷಣಗಳನ್ನು ಹೋಲುತ್ತವೆ. ಜ್ವರ, ಕಾಂಜಂಕ್ಟಿವಿಟಿಸ್, ಸ್ನಾಯು ಮತ್ತು ಕೀಲು ನೋವು, ಅಸ್ವಸ್ಥತೆ ಮತ್ತು ತಲೆನೋವು.
- ಈ ರೋಗಲಕ್ಷಣಗಳು ಸಾಮಾನ್ಯವಾಗಿ ಎರಡು ರಿಂದ ಏಳು ದಿನಗಳವರೆಗೆ ಇರುತ್ತದೆ.
- ಎಡಿಸ್ ಸೊಳ್ಳೆಗಳು ಹಗಲಿನಲ್ಲಿ ಕಚ್ಚುವುದರಿಂದ ಈ ಕಾಯಿಲೆಗೆ ತುತ್ತಾಗುತ್ತಾರೆ. ಈ ಸೊಳ್ಳೆ ನಾಲ್ಕು ಜನರಿಗೆ ಕಚ್ಚಿದರೆ ಅದರಲ್ಲಿ ಒಬ್ಬರಿಗೆ ಮಾತ್ರ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ.
- ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರು ಝಿಕಾ ವೈರಸ್ ಸೋಂಕಿನ ರೋಗಲಕ್ಷಣಗಳ ಬಗ್ಗೆ ಎಚ್ಚರ ವಹಿಸಬೇಕು. ಅವರು ತಮ್ಮ ಗರ್ಭಧಾರಣೆಯ ನಿಕಟ ಮೇಲ್ವಿಚಾರಣೆ ಮಾಡಿ, ಈ ಸೋಂಕಿಗೆ ತುತ್ತಾಗದಂತೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ.