Ginger Water For Glowing Skin:ಹೊಳೆಯುವ ಚರ್ಮಕ್ಕಾಗಿ ನಿತ್ಯ ಬಳಸಿ ಶುಂಠಿ ನೀರು

Ginger Water For Glowing Skin: ಹೊಳೆಯುವ ಚರ್ಮಕ್ಕಾಗಿ ಶುಂಠಿ ನೀರನ್ನು ಹೇಗೆ ಬಳಸುವುದು ಎಂದು ತಿಳಿಯೋಣ.

Written by - Yashaswini V | Last Updated : Apr 8, 2021, 02:57 PM IST
  • ಶುಂಠಿ ಪಾನೀಯವನ್ನು ಹೇಗೆ ತಯಾರಿಸುವುದು?
  • ಶುಂಠಿ ನೀರು ಕುಡಿಯುವುದರಿಂದ ಆಗುವ ಲಾಭಗಳೇನು
  • ಚರ್ಮಕ್ಕಾಗಿ ಶುಂಠಿ ಪಾನೀಯದ ಪ್ರಯೋಜನಗಗಳೇನು ಎಂದು ತಿಳಿಯಿರಿ
Ginger Water For Glowing Skin:ಹೊಳೆಯುವ ಚರ್ಮಕ್ಕಾಗಿ ನಿತ್ಯ ಬಳಸಿ ಶುಂಠಿ ನೀರು   title=
Ginger Water For Glowing Skin

Ginger Water For Glowing Skin: ಭಾರತೀಯ ಪಾಕಪದ್ಧತಿಯಲ್ಲಿ ಶುಂಠಿಗೆ ಮಹತ್ವದ ಸ್ಥಾನವಿದೆ. ಆರೋಗ್ಯಕ್ಕೆ ಉತ್ತಮ ಎಂದು ಹಲವು ಆಹಾರಗಳಲ್ಲಿ ಶುಂಠಿಯನ್ನು ಬಳಸಲಾಗುತ್ತದೆ. ಬಹುತೇಕ ಜನರಿಗೆ ಶುಂಠಿಯಿಂದ ತಯಾರಿಸಿದ ಚಹಾ ಎಂದರೆ ಪ್ರೀತಿ. ಶುಂಠಿ ಆಹಾರಕ್ಕೆ ಮಾತ್ರವಲ್ಲದೆ ಚರ್ಮಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಹೊಳೆಯುವ ಚರ್ಮಕ್ಕಾಗಿ ಶುಂಠಿ ನೀರು ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
 
ಹೊಳೆಯುವ ಚರ್ಮವನ್ನು ಪಡೆಯಲು ಮಹಿಳೆಯರು ಅನೇಕ ಮನೆಮದ್ದುಗಳನ್ನು ಪ್ರಯತ್ನಿಸುತ್ತಾರೆ. ನೀವೂ ಕೂಡ ಅಂತಹವರಲ್ಲಿ ಒಬ್ಬರಾಗಿದ್ದರೆ ಶುಂಠಿ ನೀರು ನಿಮಗೆ ವರದಾನವಾಗಲಿದೆ. ಶುಂಠಿಯ ಈ ಪರಿಹಾರದಿಂದ ನೀವು ಸುಲಭವಾಗಿ ಹೊಳೆಯುವ ಚರ್ಮವನ್ನು ಪಡೆಯಬಹುದು. ನಿಮ್ಮ ಚರ್ಮಕ್ಕೆ ಮತ್ತು ಆರೋಗ್ಯಕ್ಕೆ ತುಂಬಾ ಉತ್ತಮವಾದ ಶುಂಠಿಯ ಪಾನೀಯ ಅಥವಾ ಶುಂಠಿ ನೀರಿನ  ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ. ಹೊಳೆಯುವ ಚರ್ಮಕ್ಕಾಗಿ ಶುಂಠಿ ನೀರನ್ನು ಹೇಗೆ ಬಳಸುವುದು ಎಂದು ತಿಳಿಯೋಣ-

ಇದನ್ನೂ ಓದಿ - Blood Cancer Signs: ನಿಮಗೂ ಈ ಲಕ್ಷಣಗಳಿದ್ದರೆ ತಡಮಾಡದೇ ವೈದ್ಯರನ್ನು ಸಂಪರ್ಕಿಸಿ

ಶುಂಠಿ ಪಾನೀಯವನ್ನು ಹೇಗೆ ತಯಾರಿಸುವುದು?

- ಶುಂಠಿಯನ್ನು ತೆಗೆದುಕೊಂಡು ಅದನ್ನು ಸ್ವಚ್ಛಗೊಳಿಸಿ.

- ಬಳಿಕ ಶುಂಠಿ (Ginger)ಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ.

- ಒಂದು ಲೋಟ ನೀರು ಹಾಗೂ ಶುಂಠಿಯನ್ನು ಒಂದು ಪಾರೆಯಲ್ಲಿ ಹಾಕಿ ಅದನ್ನು ಕಡಿಮೆ ಉರಿಯಲ್ಲಿ ಕಾಯಿಸಿ

- 10 ನಿಮಿಷಗಳ ನಂತರ ನೀರನ್ನು ಸೋಸಿ. ಬಳಿಕ ಇದರೊಂದಿಗೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಕುಡಿಯಬಹುದು.

ಶುಂಠಿ ನೀರು ಕುಡಿಯುವುದರಿಂದ ಆಗುವ ಲಾಭಗಳು :
ಈ ಶುಂಠಿ ಪಾನೀಯವನ್ನು ಪ್ರತಿದಿನ ಕುಡಿಯುವುದರಿಂದ ಮುಖವು ಹೊಳೆಯುತ್ತದೆ. ಈ ಪಾನೀಯವನ್ನು ದಿನಕ್ಕೆ ಎರಡು ಬಾರಿ ಮಾತ್ರ ಕುಡಿಯಿರಿ. ಆದರೆ ಬೇಸಿಗೆಯಲ್ಲಿ ಈ ಪಾನೀಯವನ್ನು ಹೆಚ್ಚು ಸೇವಿಸುವುದು ಸೂಕ್ತವಲ್ಲ ಎಂಬುದನ್ನು ನೆನಪಿನಲ್ಲಿಡಿ. 

ಇದನ್ನೂ ಓದಿ - Warm Water In Summers: ಚಳಿಗಾಲದಲ್ಲಿ ಮಾತ್ರವಲ್ಲ ಬೇಸಿಗೆಯಲ್ಲಿಯೂ ಬಿಸಿ ನೀರು ಸೇವಿಸಿ, ಈ ಸಮಸ್ಯೆಗಳಿಂದ ದೂರವಿರಿ

ಚರ್ಮಕ್ಕಾಗಿ ಶುಂಠಿ ಪಾನೀಯದ ಪ್ರಯೋಜನಗಳು :
- ಈ ಪಾನೀಯವು ನಿಮ್ಮ ರಕ್ತವನ್ನು ಶುದ್ಧಗೊಳಿಸುತ್ತದೆ. ಇದು ಹೊಸ ಚರ್ಮದ (Skin) ಕೋಶಗಳ ರಚನೆಯ ಪ್ರಕ್ರಿಯೆಯನ್ನು ಉತ್ತಮವಾಗಿಸುತ್ತದೆ. ಇದು ಕಲೆಗಳನ್ನು ಕಡಿಮೆ ಮಾಡುತ್ತದೆ.

- ಆಂಟಿ-ಆಕ್ಸಿಡೆಂಟ್‌ಗಳು ಶುಂಠಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತವೆ. ಅದು ಚರ್ಮ ಸುಕ್ಕಿನಂತಹ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

- ಈ ಪಾನೀಯವು ಮುಖದ ಮೇಲಿನ ಮೊಡವೆಗಳ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಏಕೆಂದರೆ ರಕ್ತವನ್ನು ಶುದ್ಧೀಕರಿಸುವುದರ ಹೊರತಾಗಿ, ಇದು ನಿಮ್ಮ ಚರ್ಮದಲ್ಲಿ ರಕ್ತದ ಹರಿವನ್ನು ಹೆಚ್ಚಿಸಲು ಸಹ ಕೆಲಸ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News