Ivermectin 12mg In Corona Treatment - 'Corona ಮಹಾಮಾರಿಯ ಅಂತ್ಯ ಹಾಡಲಿದೆ ಈ ಔಷಧಿ' ಎಂದ ವಿಜ್ಞಾನಿಗಳು, ಗೋವಾ ಸರ್ಕಾರದ ಅನುಮತಿ

Ivermectin 12mg In Corona Treatment - ಗೋವಾ ಸರ್ಕಾರ 18 ವರ್ಷ ವಯಸ್ಸಿಗಿಂತ ಮೇಲ್ಪಟ್ಟ ಎಲ್ಲಾ ಸೊಂಕಿತರಿಗೆ Ivermectin ಬಳಕೆಗೆ ಅನುಮತಿ ನೀಡಿದೆ. ಜ್ವರ ಗಂಭೀರ ಸ್ವರೂಪ ಪಡೆದುಕೊಳ್ಳಬಾರದು ಎಂಬುದು ಇದರ ಹಿಂದಿನ ಉದ್ದೇಶ. 

Written by - Nitin Tabib | Last Updated : May 10, 2021, 09:03 PM IST
  • ತನ್ನ ಕೊವಿಡ್-19 ಪ್ರೋಟೋಕಾಲ್ ನಲ್ಲಿ Ivermectin ಅಧಿಕೃತ ಶಾಮೀಲುಗೊಳಿಸಿದ ಗೋವಾ ಸರ್ಕಾರ,
  • ಈ ರೀತಿ ಮಾಡಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಗೋವಾ ಪಾತ್ರ,
  • ಜಾಗತಿಕ ಕೊವಿಡ್-19 ಮಹಾಮಾರಿಯ ಅಂತ್ಯಕ್ಕೆ ಈ ಔಷಧಿ ಪರಿಣಾಮಕಾರಿ ಎಂದ ವಿಜ್ಞಾನಿಗಳು.
Ivermectin 12mg In Corona Treatment - 'Corona ಮಹಾಮಾರಿಯ ಅಂತ್ಯ ಹಾಡಲಿದೆ ಈ ಔಷಧಿ' ಎಂದ ವಿಜ್ಞಾನಿಗಳು, ಗೋವಾ ಸರ್ಕಾರದ ಅನುಮತಿ title=
Ivermectin 12mg In Corona Treatment (File Photo)

Ivermectin 12mg In Corona Treatment - ಗೋವಾ ಸರ್ಕಾರ 18 ವರ್ಷ ವಯಸ್ಸಿಗಿಂತ ಮೇಲ್ಪಟ್ಟ ಎಲ್ಲಾ ಸೊಂಕಿತರಿಗೆ Ivermectin ಬಳಕೆಗೆ ಅನುಮತಿ ನೀಡಿದೆ. ಜ್ವರ ಗಂಭೀರ ಸ್ವರೂಪ ಪಡೆದುಕೊಳ್ಳಬಾರದು ಎಂಬುದು ಇದರ ಹಿಂದಿನ ಉದ್ದೇಶ. ಈ ಕುರಿತು ಹೇಳಿಕೆ ನೀಡಿರುವ ರಾಜ್ಯದ ಅರೋಗ್ಯ ಸಚಿವ ವಿಶ್ವಜೀತ್ ರಾಣೆ, 'ಐವರ್ಮ್ಯಾಕ್ಟೀನ್' ಔಷಧಿ ಎಲ್ಲಾ ಆರೋಗ್ಯಕೇಂದ್ರಗಳಲ್ಲಿ ಲಭಿಸುತ್ತದೆ. ಕೊರೊನಾ ರೋಗದ ಲಕ್ಷಣಗಳು ಇರಲಿ ಅಥವಾ ಇರದೇ ಇರಲಿ, ಈ ಔಷಧಿಯನ್ನು ಪ್ರತಿಯೊಬ್ಬರೂ ಸೇವಿಸಬೇಕು ಎಂದು ಹೇಳಿದ್ದಾರೆ. 

ಪಣಜಿ: Ivermectin 12mg In Corona Treatment - ಗೋವಾ ಸರ್ಕಾರ ಸೋಮವಾರ ಕೊರೊನಾ ರೋಗಿಗಳ ಚಿಕಿತ್ಸೆಗಾಗಿ 'ಐವರ್ಮ್ಯಾಕ್ಟೀನ್' ಔಷಧಿಯ ಬಳಕೆಗೆ ಅನುಮತಿ ನೀಡಿದೆ. ರಾಜ್ಯ ಸರ್ಕಾರ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಸೊಂಕಿತರಿಗೆ ಈ ಔಷಧಿಯ ಬಳಕೆ ಮಾಡಲು ಅನುಮತಿ ನೀಡಿದೆ. ಇದರಿಂದ ಜ್ವರ ಗಂಭೀರ ಸ್ವರೂಪ ಪಡೆಯಬಾರದು ಎಂಬುದು ಸರ್ಕಾರದ ಉದ್ದೇಶ. ತೀವ್ರ ಅಥವಾ ಸಣ್ಣ ಪ್ರಮಾಣದ ಜ್ವರ ಕಾಣಿಸಿಕೊಳ್ಳುವುದು ಕೊರೊನಾ ಸೋಂಕಿನ ಪ್ರಮುಖ ಲಕ್ಷಣಗಳಲ್ಲಿ ಶಾಮೀಲಾಗಿದೆ. 

ಈ ಕುರಿತು ಹೇಳಿಕೆ ನೀಡಿರುವ ರಾಜ್ಯದ ಆರೋಗ್ಯ ಸಚಿವ ವಿಶ್ವಜೀತ್ ರಾಣೆ,  'Ivermectin' ಔಷಧಿ ರಾಜ್ಯದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಲಭಿಸುತ್ತದೆ. ಈ ಔಷಧಿಯನ್ನು ಎಲ್ಲರೂ ಸೇವಿಸಬೇಕು. ಕೊರೊನಾ ಲಕ್ಷಣಗಳು ಇರಲಿ ಅಥವಾ ಇರದೇ ಇರಲಿ. ನಾವು ಈ ಔಷಧಿಯ ಬಳಕೆಯನ್ನು 'ಪ್ರೆವೆಂಟೀವ್ ಕ್ಯೋರ್' ಅಂದರೆ ರಕ್ಷಣೆಯ (Corona Treatment) ರೂಪದಲ್ಲಿ ಬಳಸುತ್ತಿದ್ದೇವೆ. ಸರ್ಕಾರದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ಈ ಔಷಧಿ ಸಿಗಲಿದೆ' ಎಂದು ಹೇಳಿದ್ದಾರೆ.

Ivermectin 12mg ಔಷಧಿಯನ್ನು ಐದು ದಿನಗಳವರೆಗೆ ಸೇವಿಸಬೇಕು
ಔಷಧಿಯ ಪ್ರಮಾಣದ ಕುರಿತು ಹೇಳಿರುವ ಆರೋಗ್ಯ ಸಚಿವರು 'Ivermectin 12mg'ಮಾತ್ರೆಗಳನ್ನು ಒಟ್ಟು ಐದು ದಿನಗಳವರೆಗೆ ಸೇವಿಸಬೇಕು. ಯುಕೆ, ಇಟಲಿ, ಸ್ಪೇನ್ ಹಾಗೂ ಜಪಾನ್ ತಜ್ಞರು, ಈ ಔಷಧಿ ಕೊರೊನಾ ಮೃತ್ಯುದರ ಇಳಿಕೆಯಲ್ಲಿ ಪರಿಣಾಮಕಾರಿಯಾಗಿದೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಕೇವಲ ಮೃತ್ಯುದರ ಅಷ್ಟೇ ಅಲ್ಲ ರಿಕವರಿ ಹಾಗೂ ವೈರಲ್ ಲೋಡ್ ತಗ್ಗಿಸುವಲ್ಲಿಯೂ ಕೂಡ ಇದು ಉತ್ತಮ ಸಹಕಾರ ನೀಡುತ್ತದೆ' ಎಂದಿದ್ದಾರೆ.

ಇದನ್ನೂ ಓದಿ- Good News: ಭಾರತೀಯ ಮಾರುಕಟ್ಟೆಯಲ್ಲಿ ತನ್ನ Covid-19 Drug ಬಿಡುಗಡೆಗೊಳಿಸಿದ Bajaj Health Care

'ದೇಶದಲ್ಲಿ ಕೊವಿಡ್-19 (Covid-19) ಚಿಕಿತ್ಸೆಯ ಪ್ರೋಟೋಕಾಲ್ ಗಳಲ್ಲಿ ಈ ಔಷಧಿಯನ್ನು ಶಾಮೀಲುಗೊಳಿಸುತ್ತಿರುವ ಮೊದಲ ರಾಜ್ಯ ಗೋವಾ ಆಗಿದೆ ಎಂದು ರಾಣೆ ಹೇಳಿದ್ದಾರೆ. ಆದೆ, ರೋಗ ಗಂಭೀರ ಹಂತಕ್ಕೆ ತಲುಪುವುದನ್ನು ತಡೆಯುವ ಈ ಔಷಧಿ ಪರಿಣಾಮಕಾರಿಯಾಗಿದೆ. ರಾಜ್ಯದಲ್ಲಿ ಪ್ರತಿಯೊಬ್ಬರೂ ಕೂಡ ಕೊವಿಡ್-19 (Coronavirus)ಮಾರ್ಗಸೂಚಿಗಳನ್ನು ಕಠಿಣವಾಗಿ ಪಾಲಿಸಬೇಕು. ಕೊವಿಡ್ ಸೋಂಕಿನ ಹರಡುವಿಕೆಯನ್ನು ತಡೆಯಲು ಕೊರೊನಾ ನಿಯಮಗಳಲ್ಲಿ ಯಾವುದೇ ರೆತಿಯ ಸಡಿಲಿಕೆ ನೀಡಬಾರದು' ಎಂದು ರಾಣೆ ಹೇಳಿದ್ದಾರೆ.

ಇದನ್ನೂ ಓದಿ-Good News: Corona ಚಿಕಿತ್ಸೆಗಾಗಿ DRDO ಔಷಧಿ 2-DG ತುರ್ತು ಬಳಕೆಗೆ DGCI ಅನುಮತಿ

ಸಂಶೋಧನೆಯಲ್ಲಿ ಈ ಔಷಧಿ ಅಚ್ಚರಿಯ ಫಲಿತಾಂಶ ನೀಡಿದೆ
ಇತ್ತೀಚೆಗಷ್ಟೇ ನಡೆಸಲಾಗಿರುವ ಒಂದು ಸಂಶೋಧನೆ 'Ivermectin'ಔಷಧಿ ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಸ್ (Global Corona Pandemic) ನ ಅಂತ್ಯಕ್ಕೆ ಪ್ರಮುಖ ಪಾತ್ರ ನಿರ್ವಹಿಸಲಿದೆ ಎನ್ನಲಾಗಿದೆ. ಈ ಔಷಧಿ ಕೊರೊನಾ ಚಿಕಿತ್ಸೆಯಲ್ಲಿ ತುಂಬಾ ಪರಿಣಾಮಕಾರಿಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ವಿಶ್ವಾದ್ಯಂತ ವೈದ್ಯರು ಹಾಗೂ ವಿಜ್ಞಾನಿಗಳು ಈ ಔಷಧಿಯನ್ನು ಕೊರೊನಾ ಚಿಕಿತ್ಸೆಗಾಗಿ ಅಚ್ಚರಿಯ ಔಷಧಿಯ ರೂಪದಲ್ಲಿ ನೋಡಲಾಗುತ್ತಿದೆ.

ಇದನ್ನೂ ಓದಿ- AYUSH 64- ಇಂದಿನಿಂದ ಇಲ್ಲಿ ಕೊರೋನಾದಿಂದ ಚೇತರಿಸಿಕೊಳ್ಳಲು ಪರಿಣಾಮಕಾರಿ ಆಯುರ್ವೇದ ಔಷಧ ಉಚಿತವಾಗಿ ಲಭ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News