ಹಲವು ರೋಗಗಳನ್ನು ಹೊಡೆದೋಡಿಸುತ್ತದೆ ಕಡಲೆಕಾಯಿ

ಕಡಲೆಕಾಯಿಯಲ್ಲಿ ಪ್ರೋಟೀನ್ ಪ್ರಮಾಣವು ಅಧಿಕವಾಗಿರುತ್ತದೆ. ನೆನೆಸಿದ ಕಡಲೆಕಾಯಿಯನ್ನು ಪ್ರತಿನಿತ್ಯ ಒಂದು ಹಿಡಿ ತಿನ್ನುವ ಅಭ್ಯಾಸ ಮಾಡಿಕೊಂಡರೆ ಅನೇಕ ರೋಗಗಳಿಂದ ದೂರವಿರಬಹುದು.

Written by - Ranjitha R K | Last Updated : Dec 8, 2021, 06:22 PM IST
  • ಚಳಿಗಾಲದಲ್ಲಿ ಕಡಲೆಕಾಯಿಯನ್ನು ಹೆಚ್ಚು ಸೇವಿಸಲಾಗುತ್ತದೆ.
  • ಕಡಲೆಕಾಯಿ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ.
  • ಕಡಲೆಕಾಯಿಯನ್ನು ಸೇವಿಸುವ ಸರಿಯಾದ ವಿಧಾನ ಯಾವುದು ?
ಹಲವು ರೋಗಗಳನ್ನು ಹೊಡೆದೋಡಿಸುತ್ತದೆ ಕಡಲೆಕಾಯಿ   title=
ಕಡಲೆಕಾಯಿ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. (file photo)

ನವದೆಹಲಿ : ಚಳಿಗಾಲದಲ್ಲಿ ಕಡಲೆಕಾಯಿಯನ್ನು (Peanut)ಹೆಚ್ಚು ಸೇವಿಸಲಾಗುತ್ತದೆ. ಪ್ರತಿಯೊಬ್ಬರೂ ಚಳಿಗಾಲದಲ್ಲಿ ಬಿಸಿ ಹುರಿದ ಕಡಲೆಕಾಯಿಯನ್ನು ಇಷ್ಟಪಡುತ್ತಾರೆ. ಕಡಲೆಕಾಯಿ ಆರೋಗ್ಯಕ್ಕೂ (health benefits of peanut) ತುಂಬಾ ಪ್ರಯೋಜನಕಾರಿ. ಇನ್ನು ಸರಿಯಾದ ವಿಧಾನದಲ್ಲಿ ಕಡಲೆಕಾಯಿಯನ್ನು ಸೇವಿಸಿದರೆ ಅದು ಇನ್ನಷ್ಟು ಪ್ರಯೋಜನ ನೀಡಲಿದೆ. ಕಡಲೆಕಾಯಿಯನ್ನು ದೀರ್ಘಕಾಲ ನೆನೆಸಿದ ನಂತರ ಸೇವಿಸುವುದರಿಂದ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.  

ಕಡಲೆಕಾಯಿಯನ್ನು ಸೇವಿಸುವ ಸರಿಯಾದ ವಿಧಾನ ಯಾವುದು ? 
ಕಡಲೆಕಾಯಿಯಲ್ಲಿ (peanut) ಪ್ರೋಟೀನ್ ಪ್ರಮಾಣವು ಅಧಿಕವಾಗಿರುತ್ತದೆ. ನೆನೆಸಿದ ಕಡಲೆಕಾಯಿಯನ್ನು ಪ್ರತಿನಿತ್ಯ ಒಂದು ಹಿಡಿ ತಿನ್ನುವ ಅಭ್ಯಾಸ ಮಾಡಿಕೊಂಡರೆ ಅನೇಕ ರೋಗಗಳಿಂದ ದೂರವಿರಬಹುದು. ಪ್ರತಿದಿನ ಈ ರೀತಿ ಕಡಲೆಕಾಯಿಯನ್ನು ತಿನ್ನುವುದರಿಂದ  ದೇಹವು ಹಾಲು (Milk), ಬಾದಾಮಿ, ತುಪ್ಪ (ghee), ಮಾಂಸ ಮತ್ತು ಮೊಟ್ಟೆಗಳಲ್ಲಿರುವ (egg) ಎಲ್ಲಾ ಪೋಷಕಾಂಶಗಳನ್ನು ಪಡೆಯುತ್ತದೆ.

ಇದನ್ನೂ ಓದಿ : Papaya Side Effects: ನಿಮಗೆ ಈ ಆರೋಗ್ಯ ಸಮಸ್ಯೆಗಳಿದ್ದರೆ ಅಪ್ಪಿತಪ್ಪಿಯೂ ಪರಂಗಿ ತಿನ್ನಬೇಡಿ
ಕಡಲೆಕಾಯಿಯ ಪ್ರಯೋಜನಗಳು :
ಕ್ಯಾನ್ಸರ್ ತಡೆಗಟ್ಟುವಿಕೆ  : ಪ್ರತಿನಿತ್ಯ ಶೇಂಗಾ ತಿನ್ನುವುದರಿಂದ ಕ್ಯಾನ್ಸರ್ ನಂತಹ (cancer) ಅಪಾಯಕಾರಿ ರೋಗಗಳಿಂದ ದೂರವಿರಬಹುದು. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು, ಕಬ್ಬಿಣ, ಫೋಲೇಟ್, ಕ್ಯಾಲ್ಸಿಯಂ ಮತ್ತು ಸತುವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ರಕ್ತದ ನಷ್ಟವನ್ನು ಕಡಿಮೆ ಮಾಡುತ್ತದೆ : ಪ್ರತಿನಿತ್ಯ ಕಡಲೆಕಾಯಿಯನ್ನು ಸೇವಿಸುವುದರಿಂದ ದೇಹದಲ್ಲಿನ ರಕ್ತದ ಕೊರತೆ ದೂರವಾಗುತ್ತದೆ ಮತ್ತು ರಕ್ತ ಪರಿಚಲನೆ ಉತ್ತಮವಾಗಿರುತ್ತದೆ. ಇದು ರಕ್ತಹೀನತೆ ತಡೆಯುತ್ತದೆ. ಪೊಟ್ಯಾಸಿಯಮ್, ಮ್ಯಾಂಗನೀಸ್, ತಾಮ್ರ, ಕ್ಯಾಲ್ಸಿಯಂ, ಕಬ್ಬಿಣ, ಸೆಲೆನಿಯಮ್ ಇತ್ಯಾದಿಗಳು ಕಡಲೆಕಾಯಿಯಲ್ಲಿ ಕಂಡುಬರುತ್ತವೆ.

ಇದನ್ನೂ ಓದಿ : Corona Vaccine:ಬೆಳಿಗ್ಗೆಗಿಂತ ಮಧ್ಯಾಹ್ನ ತೆಗೆದುಕೊಂಡ ಲಸಿಕೆ ಹೆಚ್ಚು ಪರಿಣಾಮಕಾರಿ.. ಯಾಕೆ ಗೊತ್ತೇ?
 
ಅಸಿಡಿಟಿ ಸಮಸ್ಯೆ ದೂರವಾಗುತ್ತದೆ : ನೆನೆಸಿದ ಕಡಲೆಕಾಯಿಯನ್ನು ಪ್ರತಿನಿತ್ಯ ಒಂದು ಹಿಡಿ ತಿನ್ನುವುದರಿಂದ ಅಸಿಡಿಟಿ (acidity) ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ ಮತ್ತು ಹೊಟ್ಟೆಯನ್ನು ಸರಿಯಾಗಿಡುತ್ತದೆ.

ಕೀಲು ನೋವಿನಿಂದ ಉಪಶಮನ : ಕಡಲೆಕಾಯಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಕೀಲು ಮತ್ತು ಬೆನ್ನುನೋವಿನ ಸಮಸ್ಯೆ (back pain) ದೂರವಾಗುತ್ತದೆ. ಇದು ದೇಹಕ್ಕೆ ಕ್ಯಾಲ್ಸಿಯಂ ಅನ್ನು ಪೂರೈಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಂಧಿವಾತ ರೋಗಿಗಳಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News