Diabetes Control with Salad: ಈ ರೀತಿ ಸಲಾಡ್ ಮಾಡಿ ತಿಂದರೆ 7 ದಿನಗಳಲ್ಲಿ ನಿಯಂತ್ರಣವಾಗುತ್ತೆ ಡಯಾಬಿಟಿಸ್

Diabetes Control with Salad: ಜೀವನಶೈಲಿಯ ಬದಲಾವಣೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದರೆ ದಿನವೂ ಉತ್ತಮ ರೀತಿಯ ಆಹಾರವನ್ನು ಸೇವಿಸಿದರೆ ಮಧುಮೇಹವನ್ನು ಶಾಶ್ವತವಾಗಿ ನಿಯಂತ್ರಣ ಮಾಡಬಹುದು. ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನೂ ನಿವಾರಿಸಲು ನಮ್ಮ ಆಹಾರ ಪದ್ಧತಿ ಸಹಾಯ ಮಾಡುತ್ತದೆ.

Written by - Bhavishya Shetty | Last Updated : Nov 23, 2022, 03:54 PM IST
    • ಜೀವನಶೈಲಿಯ ಬದಲಾವಣೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ
    • ಉತ್ತಮ ರೀತಿಯ ಆಹಾರವನ್ನು ಸೇವಿಸಿದರೆ ಮಧುಮೇಹವನ್ನು ನಿಯಂತ್ರಣ ಮಾಡಬಹುದು
    • ಪ್ರತೀ ದಿನ ಸಲಾಡ್ ಗಳನ್ನು ತಿನ್ನುವ ಮೂಲಕ ಆರೋಗ್ಯವನ್ನು ರಕ್ಷಿಸಬಹುದು
Diabetes Control with Salad: ಈ ರೀತಿ ಸಲಾಡ್ ಮಾಡಿ ತಿಂದರೆ 7 ದಿನಗಳಲ್ಲಿ ನಿಯಂತ್ರಣವಾಗುತ್ತೆ ಡಯಾಬಿಟಿಸ್ title=
mexican salad

Diabetes Control with Salad: ಮಧುಮೇಹದಿಂದ ಬಳಲುತ್ತಿರುವ ಜನರು ತಮ್ಮ ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕು. ಕೆಲವು ಸಂದರ್ಭಗಳಲ್ಲಿ ರುಚಿಕರವಾದ ಆಹಾರವನ್ನು ಸೇವಿಸದಿರುವುದು ಉತ್ತಮ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇನ್ನು ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಲು ಪ್ರತಿದಿನ ಸೇವಿಸುವ ಆಹಾರದಲ್ಲಿ ಪಥ್ಯವನ್ನು ಅನುಸರಿಸುವುದು ಸೂಕ್ತ,

ಇದನ್ನೂ ಓದಿ: ಉತ್ತಮ ಆರೋಗ್ಯಕ್ಕಾಗಿ ಚಳಿಗಾಲದಲ್ಲಿ ಈ ಸೊಪ್ಪನ್ನು ತಪ್ಪದೇ ಸೇವಿಸಿ

ಜೀವನಶೈಲಿಯ ಬದಲಾವಣೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದರೆ ದಿನವೂ ಉತ್ತಮ ರೀತಿಯ ಆಹಾರವನ್ನು ಸೇವಿಸಿದರೆ ಮಧುಮೇಹವನ್ನು ಶಾಶ್ವತವಾಗಿ ನಿಯಂತ್ರಣ ಮಾಡಬಹುದು. ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನೂ ನಿವಾರಿಸಲು ನಮ್ಮ ಆಹಾರ ಪದ್ಧತಿ ಸಹಾಯ ಮಾಡುತ್ತದೆ. ಸಕ್ಕರೆ ಕಾಯಿಲೆ ಸಮಸ್ಯೆ ಉಳ್ಳವರು ಪ್ರತೀ ದಿನ ಸಲಾಡ್ ಗಳನ್ನು ತಿನ್ನುವ ಮೂಲಕ ಆರೋಗ್ಯವನ್ನು ರಕ್ಷಿಸಬಹುದು.

ಈ ಸಲಾಡ್‌ಗಳನ್ನು ಪ್ರತಿದಿನ ಸೇವಿಸಿ:

ಪ್ರತಿದಿನ ಮೆಕ್ಸಿಕನ್ ವೆಜಿಟೆಬಲ್ ಸಲಾಡ್ ತಿಂದರೆ ಮಧುಮೇಹದಿಂದ ಸುಲಭವಾಗಿ ಮುಕ್ತಿ ಪಡೆಯಬಹುದು. ಅದನ್ನು ತಯಾರಿಸಲು ಬೇಕಾಗುವ ಪದಾರ್ಥಗಳು ಹೀಗಿವೆ.

- ಆಲಿವ್ ಎಣ್ಣೆ 2 ಚಮಚ

- ಕೊತ್ತಂಬರಿ ಸೊಪ್ಪು

- 2 ಲವಂಗ, 2 ತುಂಡು ಬೆಳ್ಳುಳ್ಳಿ

- ಓರೆಗಾನೊ 2 ಚಮಚ

- ನಿಂಬೆ ರಸ 3 ಚಮಚ

- ಜೀರಿಗೆ ಪುಡಿ 3/4 ಚಮಚ

 - ಮೆಣಸಿನಕಾಯಿ 1/4

- 200 ಗ್ರಾಂ ಲೆಟಿಸ್

- 1/4 ಕಪ್ ಕಾರ್ನ್

- 1/2 ಕಪ್ ಬೇಯಿಸಿದ ಬೀನ್ಸ್

- 2 ಸಣ್ಣ ಗಾತ್ರದ ದೊಡ್ಡಮೆಣಸಿನ ಕಾಯಿ

ತಯಾರಿ ವಿಧಾನ:

- ಒಂದು ಬೌಲ್ ಆಲಿವ್ ಎಣ್ಣೆ, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಓರೆಗಾನೊ, ನಿಂಬೆ ರಸ, ಜೀರಿಗೆ, ಮೆಣಸಿನಕಾಯಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ

- ನಂತರ ಲೆಟಿಸ್, ಟೊಮ್ಯಾಟೊ, ಬೆಲ್ ಪೆಪರ್, ಕಾರ್ನ್ ಮತ್ತು ಬೀನ್ಸ್ ಸೇರಿಸಿ. ಈಗ ರುಚಿಕರವಾದ ಮೆಕ್ಸಿಕನ್ ಸಲಾಡ್ ಸಿದ್ಧವಾಗಿದೆ.

ಇದನ್ನೂ ಓದಿ: Rock Salt Water : ಕಲ್ಲು ಉಪ್ಪು ನೀರು ಕುಡಿಯುವುದರಿಂದ ಆರೋಗ್ಯಕ್ಕಿದೆ ಈ 6 ಲಾಭಗಳು!

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News