ನವದೆಹಲಿ : Flaxseed Recipes For Diabetes : ಮಧುಮೇಹವು ಒಂದು ಕಾಯಿಲೆಯಾಗಿದ್ದು, ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಇದನ್ನು ನಿಯಂತ್ರಿಸಬಹುದು. ಮಧುಮೇಹ ರೋಗಿಗಳಿಗೆ ಅನೇಕ ಆಹಾರ (food for diabetic patient) ವಸ್ತುಗಳನ್ನು ನಿಷೇಧಿಸಲಾಗುತ್ತದೆ. ಆದರೆ ಕೆಲವು ವಸ್ತುಗಳನ್ನು ತಮ್ಮ ಆಹಾರದಲ್ಲಿ ಸೇವಿಸುವುದರ ಮೂಲಕ ಶುಗರ ಲೆವೆಲ್ ಅನ್ನು (how to control sugar level) ನಿಯಂತ್ರಿಸಬಹುದು. ಇವುಗಳಲ್ಲಿ ಒಂದು ಅಗಸೆ ಬೀಜ. ಅಗಸೆಬೀಜ ಮಧುಮೇಹಿಗಳಿಗೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಅಗಸೆಬೀಜದಲ್ಲಿ ಅನೇಕ ಔಷಧೀಯ ಗುಣಗಳು ಕಂಡುಬರುತ್ತವೆ. ವಿಟಮಿನ್ ಬಿ , ,ಪ್ರೋಟೀನ್, ತಾಮ್ರ, ಮ್ಯಾಂಗನೀಸ್, ಒಮೆಗಾ -3 ಆಮ್ಲಗಳು, ಲಿಗ್ನಾನ್ ಸೇರಿದಂತೆ ಅನೇಕ ಸೂಕ್ಷ್ಮ ಪೋಷಕಾಂಶಗಳು ಅಗಸೆಬೀಜಗಳಲ್ಲಿ ಹೇರಳವಾಗಿ ಕಂಡುಬರುತ್ತವೆ. ಈ ಪೋಷಕಾಂಶಗಳನ್ನು ದೇಹಕ್ಕೆ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇದು ಮಾತ್ರವಲ್ಲ, ಇದರಲ್ಲಿ ಕಂಡುಬರುವ ಆಂಟಿ-ಆಕ್ಸಿಡೆಂಟ್ಗಳು ದೇಹವನ್ನು ಅನೇಕ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ನೀವು ಸಹ ಮಧುಮೇಹ ರೋಗಿಯಾಗಿದ್ದರೆ, ನಿಮ್ಮ ಆಹಾರದಲ್ಲಿ ಅಗಸೆಬೀಜವನ್ನು ಈ ರೀತಿ ಸೇರಿಸಿಕೊಳ್ಳಬಹುದು.
ಮಧುಮೇಹ ರೋಗಿಗಳು ಈ ರೀತಿಯ ಅಗಸೆಬೀಜಗಳನ್ನು ಸೇವಿಸಬೇಕು:
1. ಅಗಸೆಬೀಜ ಸ್ಮೂಥಿ: ನೀವು ಮಧುಮೇಹ ರೋಗಿಯಾಗಿದ್ದರೆ ನಿಮ್ಮ ಆಹಾರದಲ್ಲಿ ಅಗಸೆಬೀಜದ ಸ್ಮೂಥಿಯನ್ನು ಸೇರಿಸಿಕೊಳ್ಳಬಹುದು. ಇದನ್ನು ತಯಾರಿಸುವುದು ತುಂಬಾ ಸುಲಭ, ಇದಕ್ಕೆ ಬಾಳೆಹಣ್ಣು (Banana), ಸ್ಟ್ರಾಬೆರಿ ಮತ್ತು ಸೋಯಾ ಹಾಲನ್ನು (Soya Milk) ಸೇರಿಸಿ ತಯಾರಿಸಲಾಗುತ್ತದೆ. ಈ ಸ್ಮೂಥಿಯನ್ನು ತಯಾರಿಸಿ ಅದಕ್ಕೆ ಅಗಸೆಬೀಜವನ್ನು ಸೇರಿಸಲಾಗುತ್ತದೆ. ಇದರ ಸೇವನೆಯಿಂದ ಮಧುಮೇಹವನ್ನು ನಿಯಂತ್ರಿಸಬಹುದು.
ಇದನ್ನೂ ಓದಿ : How To Make Milk Conditioner: ಕೂದಲಿನ ಆರೈಕೆಗಾಗಿ ಹಾಲಿನಿಂದ ಮನೆಯಲ್ಲೇ ತಯಾರಿಸಿ ಹೇರ್ ಕಂಡಿಷನರ್
2. ಅಗಸೆಬೀಜ ರಾಯಿತಾ : ಅಗಸೆಬೀಜಗಳನ್ನು ಒಮೆಗಾ 3 ಕೊಬ್ಬಿನಾಮ್ಲಗಳ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ರೋಗ ನಿರೋಧಕ ಶಕ್ತಿಯನ್ನು (immunity) ಹೆಚ್ಚಿಸಲು, ಹೃದಯದ ಆರೋಗ್ಯಕ್ಕೆ ಇದು ಸಹಾಯಕ. ಅಗಸೆಬೀಜ ರಾಯಿತಾವನ್ನು ಮಧುಮೇಹಿಗಳಿಗೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದನ್ನು ತಯಾರಿಸಲು ಸೋರೆಕಾಯಿ, ಪುದೀನ ಎಲೆಗಳು, ಜೀರಿಗೆ ಮತ್ತು ಉಪ್ಪು ಅಗತ್ಯವಿದೆ. ಅಗಸೆಬೀಜ (Flaxseeds) ರಾಯಿತಾವನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎನ್ನಲಾಗಿದೆ. ಇದನ್ನು ಸೇವಿಸುವುದರಿಂದ ಕ್ಯಾಲ್ಸಿಯಂ ಕೊರತೆಯನ್ನು ಕೂಡಾ ನಿವಾರಿಸಬಹುದು.
3.ಅಗಸೆಬೀಜ ಮತ್ತು ಸಬ್ಬಕ್ಕಿ : ಮಧುಮೇಹ ರೋಗಿಗಳು ತಮ್ಮ ಆಹಾರದಲ್ಲಿ ಅಗಸೆಬೀಜವನ್ನು ಸಬ್ಬಕ್ಕಿ ಬೇಲ್ ಆಗಿಯೂ ಬಳಸಬಹುದು. ಇದನ್ನು ಬಹಳ ಬೇಗ ತಯಾರಿಸಬಹುದು ತಿನ್ನಲು ಕೂಡಾ ರುಚಿಕರವಾಗಿರುತ್ತದೆ. ಇದನ್ನು ಅಗಸೆಬೀಜ ಮತ್ತು ಸಬ್ಬಕ್ಕಿಯಿಂದ ತಯಾರಿಸಲಾಗುತ್ತದೆ. ಇದರಿಂದ ಮಧುಮೇಹವನ್ನು ನಿಯಂತ್ರಣಕ್ಕೆ ಬರುತ್ತದೆ.
ಇದನ್ನೂ ಓದಿ : Remedies For Constipation : ಮಲಬದ್ದತೆಯ ಸಮಸ್ಯೆಗೆ ಅಡುಗೆ ಮನೆಯಲ್ಲಿಯೇ ಇದೆ ಪರಿಹಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ