Face Glowing : ಮಳೆಗಾಲದಲ್ಲಿ ಮುಖದ ಕಾಂತಿ ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ 

ಅಕ್ಕಿ ಹಿಟ್ಟನ್ನು ಸ್ಕ್ರಬ್ ಮಾಡಲು ಬಳಸಬಹುದು. ಚರ್ಮದ ಎಲ್ಲಾ ಕೊಳಕು, ಎಣ್ಣೆ ಮತ್ತು ಕಲ್ಮಶಗಳನ್ನು ತೆಗೆದುಹಾಕಲು ಇದು ಸಹಾಯ ಮಾಡುತ್ತದೆ

Last Updated : Jun 28, 2021, 10:46 AM IST
  • ನಮ್ಮ ಚರ್ಮ ಕಿರಿಕಿರಿ ಮತ್ತು ಮೊಡವೆಗಳಿಗೆ ಕಾರಣವಾಗುವ ಸೋಂಕು
  • ಮೊಡವೆಗಳ ಜೊತೆಗೆ, ಮಳೆಗಾಲದಲ್ಲಿ ಚರ್ಮವು ಎಣ್ಣೆಯುಕ್ತವಾಗಿ ಜಿಡ್ಡು ಜಿಡ್ಡಾಗಿರುತ್ತದೆ
  • ಚರ್ಮದ ಎಲ್ಲಾ ಕೊಳಕು, ಎಣ್ಣೆ ಮತ್ತು ಕಲ್ಮಶಗಳನ್ನು ತೆಗೆದುಹಾಕಲು ಇದು ಸಹಾಯ
Face Glowing : ಮಳೆಗಾಲದಲ್ಲಿ ಮುಖದ ಕಾಂತಿ ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ  title=

ಮಳೆಗಾಲದಲ್ಲಿ ತೇವಾಂಶದ ಮಟ್ಟ ಹೆಚ್ಚಾದಂತೆ, ನಮ್ಮ ಚರ್ಮ ಕಿರಿಕಿರಿ ಮತ್ತು ಮೊಡವೆಗಳಿಗೆ ಕಾರಣವಾಗುವ ಸೋಂಕುಗಳನ್ನು ಸುಲಭವಾಗಿ ಹಿಡಿದಿಡುತ್ತದೆ. ಮೊಡವೆಗಳ ಜೊತೆಗೆ, ಮಳೆಗಾಲದಲ್ಲಿ ಚರ್ಮವು ಎಣ್ಣೆಯುಕ್ತವಾಗಿ ಜಿಡ್ಡು ಜಿಡ್ಡಾಗಿರುತ್ತದೆ. ಈ ಸಮಸ್ಯೆಯನ್ನು ದೂರವಾಗಿಸಿ ಆಕರ್ಷಕ ತ್ಚಚೆ ನಿಮ್ಮದಾಗಿಸಬೇಕಿದ್ದರೆ ಇಲ್ಲಿ ಕೇಳಿ.

ಮುಖದಲ್ಲಿ ಜಿಡ್ಡಿನೊಂದಿಗೆ ಕಣ್ಣಿನಡಿಯೂ ಕಪ್ಪಾಗಿದ್ದರೆ ಅದಕ್ಕೆ ಅಲೂಗಡ್ಡೆ ತುರಿದು ಚಿಟಿಕೆ ಉಪ್ಪು, ನಿಂಬೆ(Lemon) ಹನಿ ಮತ್ತು ಗಂಧದ ಎಣ್ಣೆಯನ್ನು ಬೆರೆಸಿ ಮುಖದ ಮೇಲೆ ಹಚ್ಚಿಕೊಳ್ಳಿ. ಆಲೂಗಡ್ಡೆಯ ವೃತ್ತಾಕಾರದ ತುಣುಕುಗಳನ್ನು ಕಣ್ಣಿನ ಮೇಲೆಯೂ ಇಟ್ಟುಕೊಳ್ಳಿ. ಹದಿನೈದು ನಿಮಿಷದ ಬಳಿಕ ತಣ್ಣಗಿನ ನೀರಿನಲ್ಲಿ ಮುಖ ತೊಳೆಯಿರಿ.

ಇದನ್ನೂ ಓದಿ : Mobile : ಶರ್ಟ್ ಜೇಬಿನಲ್ಲಿ 'ಮೊಬೈಲ್' ಇಡುತ್ತೀರಾ? ಹಾಗಿದ್ರೆ ತಪ್ಪುದೇ ಈ ಸುದ್ದಿ ಓದಿ

ಅಕ್ಕಿ ಹಿಟ್ಟನ್ನು ಸ್ಕ್ರಬ್ ಮಾಡಲು ಬಳಸಬಹುದು. ಚರ್ಮ(Skin)ದ ಎಲ್ಲಾ ಕೊಳಕು, ಎಣ್ಣೆ ಮತ್ತು ಕಲ್ಮಶಗಳನ್ನು ತೆಗೆದುಹಾಕಲು ಇದು ಸಹಾಯ ಮಾಡುತ್ತದೆ. 1 ಟೀ ಚಮಚ ಅಕ್ಕಿ ಹಿಟ್ಟು ಮತ್ತು ಅಲೋವೆರಾ ಜೆಲ್ ತೆಗೆದುಕೊಂಡು, ಒಂದು ಚಿಟಿಕೆ ಉಪ್ಪು ಮತ್ತು 2 ಹನಿ ಲ್ಯಾವೆಂಡರ್ ತೈಲವನ್ನು ಸೇರಿಸಿ. ಇದನ್ನು ನಿಮ್ಮ ಮುಖದ ಮೇಲೆ ಹಚ್ಚಿ, 5-10 ನಿಮಿಷಗಳ ಕಾಲ ಇರಿಸಿ ಮತ್ತು ನಂತರ ಮುಖದ ಮೇಲೆ ನಿಧಾನಕ್ಕೆ ಮಸಾಜ್ ಮಾಡಿ ತೊಳೆಯಿರಿ. ಸ್ಕ್ರಬ್ ಬಳಸಿದ ನಂತರ ಯಾವಾಗಲೂ ನಿಮ್ಮ ಮುಖದ ಮೇಲೆ ತಿಳಿ ಮಾಯಿಶ್ಚರೈಸರ್ ಅನ್ನು ಬಳಸಲು ಮರೆಯದಿರಿ.

ಇದನ್ನೂ ಓದಿ : ಸೊಳ್ಳೆ ಕಚ್ಚಿದ ಜಾಗಕ್ಕೆ ತಕ್ಷಣ ಈ ವಸ್ತುಗಳನ್ನು ಹಚ್ಚಿದರೆ ಸಿಗಲಿದೆ ತುರಿಕೆ, ನೋವಿನಿಂದ ಮುಕ್ತಿ

ಚರ್ಮಕ್ಕೆ ಹೊಳಪು(Skin Glowing) ನೀಡಲು ಸೌತೆಕಾಯಿಯನ್ನು ಬಳಸಬಹುದು. ತುರಿದ ಸೌತೆಕಾಯಿ ಮತ್ತು ಕೆಲವು ಹನಿ ನಿಂಬೆ ರಸವನ್ನು ಬಳಸಿ. ಇದನ್ನು ನಿಮ್ಮ ಮುಖದ ಮೇಲೆ 10-15 ನಿಮಿಷಗಳ ಕಾಲ ಹಚ್ಚಿ ತೊಳೆಯಿರಿ. ನಿಂಬೆ ನಿಮ್ಮ ಚರ್ಮವನ್ನು ಬೆಳ್ಳಗಾಗಿಸಲು ಮತ್ತು ಬಿಗಿಗೊಳಿಸಲು ಸಹಾಯ ಮಾಡುತ್ತದೆ ಮತ್ತು ಸೌತೆಕಾಯಿ ನಿಮ್ಮ ಚರ್ಮವನ್ನು ತಂಪಾಗಿಸುತ್ತದೆ.

ಇದನ್ನೂ ಓದಿ : Pumpkin Flower Benefits: ಕುಂಬಳಕಾಯಿ ಮಾತ್ರವಲ್ಲ, ಅದರ ಹೂವಿನಿಂದಲೂ ಸಿಗುತ್ತೆ ಭಾರೀ ಪ್ರಯೋಜನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News