ಅನ್ನದ ಬದಲು ಚಪಾತಿ ತಿನ್ನುತ್ತಿರಾ? ಹಾಗಿದ್ದರೆ ದಿನಕ್ಕೆ ಇಷ್ಟೇ ಚಪಾತಿ ತಿನ್ನಬೇಕು

How Many chapati Should You Eat In A Day:ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಅನ್ನದ ಬದಲು  ಚಪಾತಿ ಸೇವಿಸುತ್ತಾರೆ. ಆದರೆ ದಿನಕ್ಕೆ ಎಷ್ಟು ಚಪಾತಿ  ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ನಿಮಗೆ ತಿಳಿದಿದೆಯೇ? ಹಾಗಿದ್ದರೆ ಈ ಲೇಖನ ಓದಿ . 

Written by - Ranjitha R K | Last Updated : Apr 28, 2023, 11:54 AM IST
  • ಅನ್ನದಂತೆ ಚಪಾತಿ ಕೂಡಾ ನಮ್ಮ ದೈನಂದಿನ ಆಹಾರದ ಪ್ರಮುಖ ಭಾಗ
  • ಬೇರೆ ಬೇರೆ ವಿಧಗಳಲ್ಲಿ ಚಪಾತಿಯನ್ನು ತಿನ್ನುತ್ತೇವೆ.
  • ಅದೆಷ್ಟೋ ಮಂದಿಗೆ ಊಟದಲ್ಲಿ ಚಪಾತಿ ಬೇಕೇ ಬೇಕು.
ಅನ್ನದ ಬದಲು ಚಪಾತಿ ತಿನ್ನುತ್ತಿರಾ? ಹಾಗಿದ್ದರೆ ದಿನಕ್ಕೆ ಇಷ್ಟೇ ಚಪಾತಿ ತಿನ್ನಬೇಕು  title=

How Many chapati Should You Eat In A Day : ಅನ್ನದಂತೆ ಚಪಾತಿ ಕೂಡಾ ನಮ್ಮ ದೈನಂದಿನ ಆಹಾರದ ಪ್ರಮುಖ ಭಾಗವಾಗಿದೆ. ಚಪಾತಿ, ಪರಾಠಾ, ಫುಲ್ಕಾ, ತವಾ ರೊಟ್ಟಿ, ತಂದೂರಿ ರೊಟ್ಟಿ, ರುಮಾಲಿ ರೊಟ್ಟಿ,  ಹೀಗೆ ಬೇರೆ ಬೇರೆ  ವಿಧಗಳಲ್ಲಿ   ಚಪಾತಿಯನ್ನು ತಿನ್ನುತ್ತೇವೆ. ಅದೆಷ್ಟೋ ಮಂದಿಗೆ ಊಟದಲ್ಲಿ ಚಪಾತಿ ಬೇಕೇ ಬೇಕು. ಅವರಿಗೆ ಚಪಾತಿ ಇಲ್ಲದೆ ಹೋದರೆ ಭೋಜನ ಪರಿಪೂರ್ಣವಾಗುವುದಿಲ್ಲ. ಇನ್ನು ಕೆಲವರು ಆರೋಗ್ಯದ ದೃಷ್ಟಿಯಿಂದ ಅನ್ನದ ಬದಲು ಚಪಾತಿ ಸೇವಿಸುತ್ತಾರೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಅನ್ನವನ್ನು ಸೇವಿಸುವ ಅದಲು ಚಪಾತಿಯ ಮೊರೆ ಹೋಗುತ್ತಾರೆ.  ಹಾಗಾದರೆ ಅನ್ನ ತಿನ್ನದೇ ಎಷ್ಟು ಬೇಕೋ ಅಷ್ಟು ಚಪಾತಿ ತಿನ್ನಬಹುದೇ? ಎನ್ನುವ ಪ್ರಶ್ನೆ ಏಳುತ್ತದೆ.  ಇಲ್ಲ, ಅತಿಯಾದರೆ ಅಮೃತವೂ ವಿಷ ಎನ್ನುವ ಮಾತಿನಂತೆ ಒಂದು ಮಿತಿಯನ್ನು ದಾಟಿ ಏನನ್ನು  ತಿಂದರೂ ಅದು ಅಪಾಯಕಾರಿಯಾಗಿ ಪರಿಣಮಿಸುವುದು ಖಂಡಿತಾ. ಹಾಗಿದ್ದರೆ ದಿನಕ್ಕೆ ಎಷ್ಟು ಚಪಾತಿ ತಿನ್ನಬಹುದು ? ದಿನಕ್ಕೆ ಎಷ್ಟು ಚಪಾತಿ ತಿನ್ನುವ  ಮಿತಿಯನ್ನು ನಿಗದಿ ಮಾಡಿಕೊಳ್ಳಬೇಕು ಎನ್ನುವ ಮಾಹಿತಿ ಇಲ್ಲಿದೆ.  

ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು? : 
ತೂಕ ಇಳಿಸುವ ಪ್ರಕ್ರಿಯೆಯಲ್ಲಿ ತೊಡಗಿರುವವರು, ಚಪಾತಿ ತಿನ್ನುವುದರಲ್ಲಿಯೂ ಮಿತಿಯನ್ನು ನಿಗದಿಪಡಿಸಬೇಕು. ಆರೋಗ್ಯವಂತ ವಯಸ್ಕ ಪುರುಷನು ದಿನಕ್ಕೆ ಸುಮಾರು 1700 ಕ್ಯಾಲೊರಿಗಳನ್ನು ಸೇವಿಸಬೇಕು. ಅದರ ಪ್ರಕಾರ ಒಬ್ಬ ವ್ಯಕ್ತಿ ತನ್ನ ಒಂದು ಹೊತ್ತಿನ ಭೋಜನದಲ್ಲಿ ಮೂರು ಚಪಾತಿ ತಿನ್ನಬಹುದು. ಅಂದರೆ ದಿನಕ್ಕೆ ಎರಡು ಬಾರಿ ಊಟ ಮಾಡುವುದಾದರೆ ಆರು ಚಪಾತಿ ತಿನ್ನಬಹುದು. ಇನ್ನು ಮಹಿಳೆಯರ ಬಗ್ಗೆ ಹೇಳುವುದಾದರೆ, ಮಹಿಳೆಯರು ದಿನಕ್ಕೆ 1,400 ಕ್ಯಾಲೊರಿಗಳನ್ನು ಸೇವಿಸಬೇಕು. ಇದರ ಪ್ರಕಾರ,  ಒಬ್ಬ ಮಹಿಳೆ  ಒಂದು ಹೊತ್ತಿನ ಊಟದಲ್ಲಿ 2 ಚಪಾತಿ ತಿನ್ನಬಹುದು.  ಈ ಪ್ರಕಾರ ಇಡೀ ದಿಂದ ಊಟದಲ್ಲಿ ನಾಲ್ಕು ಚಪಾತಿಗಳನ್ನು ಸೇವಿಸಬಹುದು. ಇದು ತೂಕವನ್ನು ಕಾಪಾಡಿಕೊಳ್ಳಲು  ಸಹಾಯ ಮಾಡುತ್ತದೆ. 

ಇದನ್ನೂ ಓದಿ : Health Tips: ಹಲವು ದೊಡ್ಡ ಕಾಯಿಲೆಗಳ ಅಪಾಯ ತಗ್ಗಿಸುತ್ತದೆ ಕೆಫೆನ್, ನಿತ್ಯ ಎಷ್ಟು ಸೇವಿಸಬೇಕು?

ಚಪಾತಿ ತಿನ್ನುವವರು ಈ ವಿಚಾರದ ಬಗ್ಗೆ ಎಚ್ಚರ ವಹಿಸಬೇಕು : 
ಅನ್ನಕ್ಕಿಂತ ಚಪಾತಿ ತಿನ್ನುವುದು ಆರೋಗ್ಯಕರವೆಂದು ಪರಿಗಣಿಸಲ್ಪಟ್ಟಿದೆ. ಚಪಾತಿಯನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆಲವು ವಿಷಯಗಳ ಬಗ್ಗೆ  ಕಾಳಜಿ ವಹಿಸದಿದ್ದರೆ ಮಲಬದ್ಧತೆ, ಅಜೀರ್ಣ ಮತ್ತು ಗ್ಯಾಸ್ ನಂತಹ ಸಮಸ್ಯೆ ಎದುರಾಗಬಹುದು. ರಾತ್ರಿ ಊಟಕ್ಕೆ ಚಪಾತಿ ತಿಂದರೆ, ಊಟ  ಮುಗಿಸಿದ ನಂತರ ಕಡ್ಡಾಯವಾಗಿ 15 ರಿಂದ 20 ನಿಮಿಷಗಳ ಕಾಲ  ವಾಕ್ ಮಾಡಬೇಕು. ಹೀಗೆ ಮಾಡುವುದರಿಂದ ಜೀರ್ಣಕ್ರಿಯೆಯು ಸರಿಯಾಗಿ ಆಗುತ್ತದೆ. ಕೆಲವರು ರಾತ್ರಿಯ ಊಟದಲ್ಲಿ ಚಪಾತಿ ತಿಂದು ತಕ್ಷಣ ನಿದ್ದೆಗೆ ಜಾರುತ್ತಾರೆ. ಹೀಗೆ ಮಾಡುವುದು ಸರಿಯಲ್ಲ. ರಾತ್ರಿ ಭೋಜನದ ಬಳಿಕ  ಸುಮಾರು ಒಂದು ಗಂಟೆಯ ನಿದ್ದೆಗೆ ತೆರಳುವುದು ಆರೋಗ್ಯದ ದೃಷ್ಟಿಯಿಂದ ಸರಿಯಾದ ಕ್ರಮ. 

ಬಹುಧಾನ್ಯಗಳಿಂದ ತಯಾರಿಸಿದ ಚಪಾತಿ : 
ಇನ್ನು ಆದಷ್ಟು ಬೇಗ ತೂಕ ಇಳಿಸಿಕೊಳ್ಳಲು ಬಯಸುವುದಾದರೆ,  ಗೋಧಿಯ ಬದಲಿಗೆ ಬಹುಧಾನ್ಯಗಳಿಂದ ಮಾಡಿದ ಚಪಾತಿಯನ್ನು ಸೇವಿಸುವುದು ಉತ್ತಮ. ಜೋಳ, ಮೆಕ್ಕೆ, ರಾಗಿ, ಹುರುಳಿ ಮತ್ತು ಬಾಜ್ರಾ ಹಿಟ್ಟಿನಿಂದ ಮಾಡಿದ ಚಪಾತಿಯನ್ನು ತಿನ್ನುವುದರಿಂದ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಚಪಾತಿಯಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಕಂಡು ಬರುತ್ತವೆ. ಈ ಧಾನ್ಯಗಳಿಂದ ಮಾಡಿದ ಚಪಾತಿ ಸೇವಿಸುವುದರಿಂದ ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ.  ಹೆಚ್ಚು ಸಮಯದವರೆಗೆ ಹಸಿವಾಗುವುದಿಲ್ಲ ಎಂದಾದರೆ ಪದೇ ಪದೇ ತಿನ್ನುವ ಅಗತ್ಯವೂ ಇರುವುದಿಲ್ಲ. 
 
ಇದನ್ನೂ ಓದಿ :  High Cholesterol ನಿಂದ ಪಾರಾಗಬೇಕೆ? ತಕ್ಷಣ ಈ ಸಂಗತಿಗಳಿಂದ ಅಂತರ ಕಾಯ್ದುಕೊಳ್ಳಿ!

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News