Stomach Bloating Home Remedies: ಹೊಟ್ಟೆ ಭಾರ ಎನಿಸುತ್ತಿದ್ದರೆ ತಕ್ಷಣ ಪರಿಹಾರಕ್ಕಾಗಿ ಇದನ್ನು ಸೇವಿಸಿ

Stomach Bloating Home Remedies: ನಿಮಗೆ ಆಗಾಗ್ಗೆ ಹೊಟ್ಟೆ ಭಾರವಾಗುತ್ತಿದ್ದರೆ ಅಥವಾ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಕಾಡುತ್ತಿದ್ದರೆ ಅದರಿಂದ ಪರಿಹಾರ ಪಡೆಯಲು ಮಾತ್ರೆಗಳ ಮೊರೆಹೋಗುವ ಮೊದಲು ಕೆಲವು ಮನೆ ಮದ್ದುಗಳನ್ನು ಪ್ರಯತ್ನಿಸಬಹುದು. 

Written by - Yashaswini V | Last Updated : Feb 16, 2022, 08:49 AM IST
  • ಹೊಟ್ಟೆ ಅಥವಾ ಕರುಳಿನಲ್ಲಿ ಹೆಚ್ಚುವರಿ ಅನಿಲ ನಿರ್ಮಾಣವಾದಾಗ ಸಾಮಾನ್ಯವಾಗಿ ಹೊಟ್ಟೆ ಉಬ್ಬರವಾಗುತ್ತದೆ
  • ಹೊಟ್ಟೆ ಉಬ್ಬುವಿಕೆಯಿಂದಾಗಿ, ಹೊಟ್ಟೆಯು ಸಾಮಾನ್ಯಕ್ಕಿಂತ ದೊಡ್ಡದಾಗಿ ಕಾಣುತ್ತದೆ
  • ಈ ಕಾರಣದಿಂದಾಗಿ, ಹೊಟ್ಟೆಯಲ್ಲಿ ಸ್ವಲ್ಪ ಅಥವಾ ತೀವ್ರವಾದ ನೋವು ಅನುಭವಿಸಬಹುದು
Stomach Bloating Home Remedies: ಹೊಟ್ಟೆ ಭಾರ ಎನಿಸುತ್ತಿದ್ದರೆ ತಕ್ಷಣ ಪರಿಹಾರಕ್ಕಾಗಿ ಇದನ್ನು ಸೇವಿಸಿ  title=
Stomach Bloating Home Remedies

Stomach Bloating Home Remedies: ಸಾಮಾನ್ಯವಾಗಿ ಸ್ವಲ್ಪ ಹೆಚ್ಚು ಆಹಾರ ಸೇವಿಸಿದಾದ ಹೊಟ್ಟೆ ಬಿಗಿಯಾದಂತೆ ಅಥವಾ ಭಾರವಾದಂತೆ ಭಾಸವಾಗುತ್ತದೆ. ಹಲವು ಬಾರಿ ಆಹಾರ ಜೀರ್ಣವಾಗದಿದ್ದಾಗ ಹೊಟ್ಟೆ ಉಬ್ಬರದಂತಹ ಸಮಸ್ಯೆ ಕಾಡುತ್ತದೆ. ಜಠರಗರುಳಿನ ಪ್ರದೇಶದಲ್ಲಿನ ಅನಿಲ ರಚನೆಯ ಕಾರಣದಿಂದಾಗಿ ಈ ಸಮಸ್ಯೆ ಉಂಟಾಗಬಹುದು. ಹೊಟ್ಟೆ  ಉಬ್ಬುವಿಕೆಯಿಂದಾಗಿ, ಹೊಟ್ಟೆಯು ಸಾಮಾನ್ಯಕ್ಕಿಂತ ದೊಡ್ಡದಾಗಿ ಕಾಣುತ್ತದೆ ಮತ್ತು ಈ ಕಾರಣದಿಂದಾಗಿ, ಹೊಟ್ಟೆಯಲ್ಲಿ ಸ್ವಲ್ಪ ಅಥವಾ ತೀವ್ರವಾದ ನೋವು ಅನುಭವಿಸಬಹುದು. ದೇಹದಲ್ಲಿ ನೀರಿನ ಕೊರತೆಯೂ ಹೊಟ್ಟೆ ಉಬ್ಬುವಿಕೆಗೆ ಕಾರಣವಾಗಬಹುದು. 

ಹೊಟ್ಟೆ ಅಥವಾ ಕರುಳಿನಲ್ಲಿ ಹೆಚ್ಚುವರಿ ಅನಿಲ ನಿರ್ಮಾಣವಾದಾಗ ಸಾಮಾನ್ಯವಾಗಿ ಹೊಟ್ಟೆ ಉಬ್ಬರ (Stomach Bloating) ವಾಗುತ್ತದೆ. ಕೆಲವರಿಗೆ ಅವರು ಸಾಮಾನ್ಯವಾಗಿ ಸೇವಿಸುವುದಕ್ಕಿಂತ ಹೆಚ್ಚಿನ ಆಹಾರ ಸೇವಿಸಿದಾಗ ಈ ಸಮಸ್ಯೆ ಕಾಡುತ್ತದೆ. ಅಂತಹ ಸಂದರ್ಭದಲ್ಲಿ ಅದು ಸ್ವಲ್ಪ ಸಮಯದ ನಂತರ ಸರಿಹೋಗುತ್ತದೆ. ಆದಾಗ್ಯೂ, ಹಲವು ಬಾರಿ ಇದು ಬಹಳ ಸಮಯದವರೆಗೆ ನಿಮ್ಮನ್ನು ಕಾಡಬಹುದು. ಅಜೀರ್ಣ, ಹೊಟ್ಟೆ ನೋವು, ಹೊಟ್ಟೆ ಉಬ್ಬರ ಹೀಗೆ ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರಿಂದ ಪರಿಹಾರ ಪಡೆಯಲು ಹಲವರು ಗ್ಯಾಸ್ಟ್ರಿಕ್ ಮಾತ್ರೆ ತೆಗೆದುಕೊಳ್ಳುತ್ತಾರೆ. ಆದರೆ ಮಾತ್ರೆಗೆ ಮೊರೆಹೋಗುವ ಮೊದಲು ಕೆಲವು ಮನೆಮದ್ದುಗಳನ್ನು (Home Remedies) ಪ್ರಯತ್ನಿಸುವುದರಿಂದಲೂ ತ್ವರಿತ ಪರಿಹಾರವನ್ನು ಪಡೆಯಬಹುದು.

ಇದನ್ನೂ ಓದಿ - Weight Loss Tips: 30 ದಿನಗಳಲ್ಲಿ 5 ಕೆಜಿ ತೂಕ ಕಡಿಮೆ ಮಾಡಲು ಈ ಡಯಟ್ ಪ್ಲಾನ್ ಟ್ರೈ ಮಾಡಿ ನೋಡಿ

ಹೊಟ್ಟೆ ಉಬ್ಬರ ಸಮಸ್ಯೆಗೆ ಮನೆಮದ್ದು:
ಅಜ್ವೈನ್:
ಅಜ್ವೈನ್ (Ajwain) ತಿನ್ನುವುದು ಶೀತ ಮತ್ತು ಕೆಮ್ಮಿನಿಂದ ಪರಿಹಾರವನ್ನು ನೀಡುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ, ಇದು ನಮ್ಮ ಜೀರ್ಣಾಂಗ ವ್ಯವಸ್ಥೆಗೂ ತುಂಬಾ ಪರಿಣಾಮಕಾರಿಯಾಗಿದೆ. ಅಜ್ವೈನ್ ಅನ್ನು ಬಿಸಿನೀರಿನೊಂದಿಗೆ ಸೇವಿಸುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಉಂಟಾಗುವುದಿಲ್ಲ ಮತ್ತು ಹೊಟ್ಟೆಯಲ್ಲಿ ಊತ ಉಂಟಾಗುವುದಿಲ್ಲ.

ಸೋಂಪು: ಹಲವರು ಚಹಾದೊಂದಿಗೆ ಸೋಂಪನ್ನು ಸೇವಿಸುತ್ತಾರೆ. ಇದರಿಂದ ಆಮ್ಲೀಯತೆ ಉಂಟಾಗುವುದಿಲ್ಲ. ಅದೇ ರೀತಿ ಹಬ್ಬ-ಹರಿದಿನಗಳಲ್ಲಿ ಅಥವಾ ವಿಶೇಷ ಊಟದ ನಂತರ ಸೋಂಪನ್ನು ತಿನ್ನುವುದರಿಂದ ಅಸಿಡಿಟಿ ಬರುವುದಿಲ್ಲ. ಗ್ಯಾಸ್ ಪ್ರಾಬ್ಲಮ್ ಇರುವವರು ಊಟದ ನಂತರ ಸೋಂಪನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿಂದ ದೂರವಿರಬಹುದು.

ಇದನ್ನೂ ಓದಿ- Fruit Juice: ನೀವೂ ಸಹ ಖಾಲಿ ಹೊಟ್ಟೆಯಲ್ಲಿ ಜ್ಯೂಸ್‌ ಸೇವಿಸುತ್ತೀರಾ?

ದೊಡ್ಡ ಏಲಕ್ಕಿ: ಏಲಕ್ಕಿ ತಿನ್ನುವುದರಿಂದ ಬಾಯಿಯ ವಾಸನೆ ಹೋಗುವುದಲ್ಲದೆ, ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ದೊಡ್ಡ ಏಲಕ್ಕಿಯ ನೀರನ್ನು ಕುಡಿಯುವುದರಿಂದ ಗ್ಯಾಸ್ ಉತ್ಪತ್ತಿಯಾಗುವುದಿಲ್ಲ ಮತ್ತು ನೀವು ಮತ್ತೆ ಮತ್ತೆ ವಾಂತಿ ಆಗುತ್ತಿದ್ದರೆ, ಆ ಸಮಸ್ಯೆಯಿಂದಲೂ ಪರಿಹಾರ ಪಡೆಯುತ್ತೀರಿ.

ಪುದೀನಾ: ಗ್ಯಾಸ್‌ನಿಂದ ಪರಿಹಾರ ಪಡೆಯಲು, ನೀವು ಯಾವುದಾದರೂ ಒಂದು ಹಂತದಲ್ಲಿ ಪುದೀನಾ ಹಸಿರು ಔಷಧವನ್ನು ಸೇವಿಸಿರಬಹುಡು. ವಾಸ್ತವವಾಗಿ, ಪುದೀನವು ಹೊಟ್ಟೆಯನ್ನು ತಂಪಾಗಿರಿಸಲು ಪರಿಣಾಮಕಾರಿಯಾಗಿದೆ. ಆದ್ದರಿಂದ, ತುಂಬಾ ಮಸಾಲೆಯುಕ್ತ ಅಥವಾ ಎಣ್ಣೆಯುಕ್ತ ಆಹಾರವನ್ನು ಸೇವಿಸಿದ ನಂತರ ಪುದೀನಾ ನೀರನ್ನು ಕುಡಿಯುವುದು ಹೊಟ್ಟೆಯಲ್ಲಿ ಉಪಶಮನವನ್ನು ನೀಡುತ್ತದೆ ಮತ್ತು ಹೊಟ್ಟೆ ಉಬ್ಬುವುದರಿಂದಲೂ ಸಹ ಪರಿಹಾರವನ್ನು ನೀಡುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಈ ಪ್ರಿಸ್ಕ್ರಿಪ್ಷನ್‌ಗಳನ್ನು ಅನುಮೋದಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News