ಈ ಮೂರು ತರಕಾರಿ ಜೂಸ್‌ ಕುಡಿದರೆ ಸಾಕು ನಿಮ್ಮ ಆರೋಗ್ಯ ಗಟ್ಟಿ..! ಇಲ್ಲಿವೆ ನೋಡಿ

Healty vegetable juice : ಬೇಸಿಗೆಯ ಸಮಯದಲ್ಲಿ ಹಣ್ಣುಗಳ ಜ್ಯೂಸ್‌ಗಳಿಗಿಂದ ತರಕಾರಿಗಳ ಜ್ಯೂಸ್‌ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಅಲ್ಲದೆ, ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸುತ್ತದೆ. ಈ ಮೂರು ಜ್ಯೂಸ್‌ ಕುಡಿದ್ರೆ ನಿಮ್ಮ ಆರೋಗ್ಯ ಗಟ್ಟಿಯಾಗಿರುತ್ತದೆ..

Written by - Krishna N K | Last Updated : May 21, 2023, 08:38 PM IST
  • ಹಣ್ಣುಗಳ ಜ್ಯೂಸ್‌ಗಳಿಗಿಂದ ತರಕಾರಿಗಳ ಜ್ಯೂಸ್‌ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ.
  • ತಜ್ಞರು ಹೆಚ್ಚಿನ ನೀರಿನ ಅಂಶವಿರುವ ಆಹಾರಗಳ ಸೇವನೆಯನ್ನು ಹೆಚ್ಚಿಸಲು ಸಲಹೆ ನೀಡುತ್ತಾರೆ.
  • ತರಕಾರಿ ಜ್ಯೂಸ್ ಕುಡಿಯುವುದರಿಂದ ಬೇಸಿಗೆಯಲ್ಲೂ ನಿಮ್ಮ ಆರೋಗ್ಯ ಆರೋಗ್ಯಕರವಾಗಿರುತ್ತದೆ.
 ಈ ಮೂರು ತರಕಾರಿ ಜೂಸ್‌ ಕುಡಿದರೆ ಸಾಕು ನಿಮ್ಮ ಆರೋಗ್ಯ ಗಟ್ಟಿ..! ಇಲ್ಲಿವೆ ನೋಡಿ title=

Vegetable juice : ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ನಿಯಮಿತವಾಗಿ ಮತ್ತು ಸಮಯಕ್ಕೆ ಸರಿಯಾದ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಆದರೆ ಬೇಸಿಗೆ ಬಂತೆಂದರೆ ಏನನ್ನೂ ತಿನ್ನಲು ಮನಸ್ಸಾಗುವುದಿಲ್ಲ. ಈ ಸಮಯದಲ್ಲಿ ಶಾಖದ ಕಾರಣದಿಂದಾಗಿ ಜ್ಯೂಸ್‌ ಕುಡಿಯಬೇಕು ಅಂತ ಅನಿಸುತ್ತದೆ. ಬೇಸಿಗೆಯಲ್ಲಿ, ತಜ್ಞರು ಹೆಚ್ಚಿನ ನೀರಿನ ಅಂಶವಿರುವ ಆಹಾರಗಳ ಸೇವನೆಯನ್ನು ಹೆಚ್ಚಿಸಲು ಸಲಹೆ ನೀಡುತ್ತಾರೆ. 

ನೀವು ಬೇಸಿಗೆಯಲ್ಲಿ ಕಲ್ಲಂಗಡಿ, ಕಬ್ಬು, ಮಾವು ಇತ್ಯಾದಿಗಳ ಜ್ಯೂಸ್ ಅನ್ನು ಸಹ ಕುಡಿಯಬಹುದು. ಆದರೆ, ಬೇಸಿಗೆಯಲ್ಲಿ ಹಣ್ಣುಗಳಿಗಿಂತ ತರಕಾರಿ ರಸವನ್ನು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ? ಇಂದು ನಾವು ಬೇಸಿಗೆಯ ಅತ್ಯುತ್ತಮ ತರಕಾರಿ ರಸದ ಬಗ್ಗೆ ತಿಳಿಸಿ ಕೊಡುತ್ತೇವೆ. ಈ ಜ್ಯೂಸ್ ಕುಡಿಯುವುದರಿಂದ ಬೇಸಿಗೆಯಲ್ಲೂ ನಿಮ್ಮ ಆರೋಗ್ಯ ಆರೋಗ್ಯಕರವಾಗಿರುತ್ತದೆ.

ಇದನ್ನೂ ಓದಿ: Cardiac Arrest Symptoms: ಹೃದಯಾಘಾತದ ಈ ಸಂಕೇತಗಳನ್ನು ನಿರ್ಲಕ್ಷಿಸಬೇಡಿ!

ಇಲ್ಲಿವೆ ನೋಡಿ ಆರೋಗ್ಯಕರ ತರಕಾರಿ ಜ್ಯೂಸ್‌ಗಳು

ಸೌತೆಕಾಯಿ ಜ್ಯೂಸ್ - ಸೌತೆಕಾಯಿಯು ಬೇಸಿಗೆಯಲ್ಲಿ ದೇಹವನ್ನು ಕೂಲ್‌ ಆಗಿರಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಸೌತೆಕಾಯಿ ರಸವನ್ನು ಕುಡಿಯುವುದರಿಂದ ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸಬಹುದು. ಇದು ದೇಹವನ್ನು ನಿರ್ವಿಷಗೊಳಿಸುತ್ತದೆ.

ಸೋರೆಕಾಯಿ - ಸೋರೆಕಾಯಿ ಜ್ಯೂಸ್ ಹೆಚ್ಚಿನವರಿಗೆ ರುಚಿಸದಿರಬಹುದು ಆದರೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳಿಗೆ ಜ್ಯೂಸ್ ರಾಮಬಾಣವಿದ್ದಂತೆ. ಬೇಸಿಗೆಯಲ್ಲಿ ಇದನ್ನು ಕುಡಿಯುವುದರಿಂದ ನಿರ್ಜಲೀಕರಣ ಸಮಸ್ಯೆ ಬರುವುದಿಲ್ಲ.

ಹಾಗಲಕಾಯಿ ರಸ - ಹಾಗಲಕಾಯಿಯನ್ನು ಮಧುಮೇಹದ ಶತ್ರು ಎಂದು ಪರಿಗಣಿಸಲಾಗುತ್ತದೆ. ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿಲ್ಲದವರು ಒಂದು ವಾರದವರೆಗೆ ಈ ರಸವನ್ನು ಪ್ರತಿದಿನ ಕುಡಿಯಬೇಕು. ಹಾಗಲಕಾಯಿಯ ರಸವನ್ನು ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳೂ ಗುಣವಾಗುತ್ತವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News