ಬೆಳಗಿನ ಉಪಹಾರದಲ್ಲಿ ಈ ಎರಡು ವಸ್ತುಗಳನ್ನು ಸೇವಿಸಿದರೆ ಸಾಕು, ಸಿಗಲಿದೆ ಭಾರೀ ಪ್ರಯೋಜನ

healthy breakfast tips: ದಿನವಿಡೀ ಬೇಕಾಗಿರುವ ಶಕ್ತಿಗಾಗಿ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.

Written by - Ranjitha R K | Last Updated : Oct 1, 2021, 05:27 PM IST
  • ಬೆಳಗಿನ ಉಪಾಹಾರದಲ್ಲಿ ಮೊಟ್ಟೆಗಳನ್ನು ತಿನ್ನುವುದು ಪ್ರಯೋಜನಕಾರಿ
  • ಬೆಳಗಿನ ಉಪಾಹಾರಕ್ಕೆ ಮೊಟ್ಟೆ ತಿನ್ನುವುದರಿಂದ ಆಗುವ ಲಾಭಗಳು ಯಾವುವು ತಿಳಿಯಿರಿ
  • ಬೆಳಗಿನ ಉಪಾಹಾರದಲ್ಲಿ ಓಟ್ಸ್ ಸೇವನೆಯ ಲಾಭಗಳು
ಬೆಳಗಿನ ಉಪಹಾರದಲ್ಲಿ ಈ ಎರಡು ವಸ್ತುಗಳನ್ನು ಸೇವಿಸಿದರೆ ಸಾಕು, ಸಿಗಲಿದೆ ಭಾರೀ ಪ್ರಯೋಜನ    title=
Healthy Breakfast tips (file photo)

ನವದೆಹಲಿ : healthy breakfast tips: ದಿನವಿಡೀ ಬೇಕಾಗಿರುವ ಶಕ್ತಿಗಾಗಿ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಬೆಳಗಿನ ಉಪಹಾರವು ದಿನವಿಡೀ ನಿಮ್ಮನ್ನು ಚೈತನ್ಯದಾಯಕವಾಗಿರಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ನಿಯಮಿತವಾಗಿ ಆರೋಗ್ಯಕರ ಉಪಹಾರವನ್ನು (Healthy breakfast)  ಸೇವಿಸದಿದ್ದರೆ, ತಲೆನೋವು ಮತ್ತು ಆಯಾಸದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.  

1. ಬೆಳಗಿನ ಉಪಾಹಾರದಲ್ಲಿ ಮೊಟ್ಟೆಗಳನ್ನು ತಿನ್ನುವುದು ಪ್ರಯೋಜನಕಾರಿ :
ಆಹಾರ ತಜ್ಞೆ ಡಾ.ರಂಜನಾ ಸಿಂಗ್ ಹೇಳುವಂತೆ, ಪ್ರತಿದಿನ ಮೊಟ್ಟೆಗಳನ್ನು (Egg) ಉಪಹಾರದಲ್ಲಿ ಸೇವಿಸಿದರೆ, ಅನೇಕ ರೋಗಗಳಿಂದ ದೂರವಿರಬಹುದು. ಏಕೆಂದರೆ ಮೊಟ್ಟೆಯಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಮತ್ತು ಪೋಷಕಾಂಶಗಳು ಇರುತ್ತವೆ. ಪ್ರತಿದಿನ ಒಂದು ಮೊಟ್ಟೆಯನ್ನು ತಿನ್ನುವುದರಿಂದ, ಇಡೀ ದಿನದ ವಿಟಮಿನ್ ಡಿ ಪ್ರಮಾಣವನ್ನು ದೇಹಕ್ಕೆ ಪೂರೈಸಬಹುದು.  

ಇದನ್ನೂ ಓದಿ : Hair Care: ಕೂದಲನ್ನು ನೈಸರ್ಗಿಕವಾಗಿ ಆರೋಗ್ಯವಾಗಿರಿಸಲು ಶಾಂಪೂ ಮಾಡುವ ಮೊದಲು ಈ ಸಣ್ಣ ವಿಧಾನವನ್ನು ಅನುಸರಿಸಿ

ಬೆಳಗಿನ ಉಪಾಹಾರಕ್ಕೆ ಮೊಟ್ಟೆ ತಿನ್ನುವುದರಿಂದ ಆಗುವ ಲಾಭಗಳು :
1.ಮೊಟ್ಟೆಗಳು ಕಣ್ಣಿನ ಆರೋಗ್ಯಕ್ಕೆ (egg for eye health) ಪ್ರಯೋಜನಕಾರಿ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಗುಣಗಳು ಇರುತ್ತವೆ. ಇದು ರೆಟಿನಾವನ್ನು ಬಲಪಡಿಸುತ್ತದೆ. 
2.  ಮೊಟ್ಟೆಗಳಲ್ಲಿ ಕೋಲಿನ್ ಕಂಡುಬರುತ್ತದೆ. ಈ ಕಾರಣದಿಂದಾಗಿ ಜ್ಞಾಪಕ ಶಕ್ತಿ ತೀಕ್ಷ್ಣವಾಗಿರುತ್ತದೆ ಮತ್ತು ಮೆದುಳು ಸಕ್ರಿಯವಾಗಿರುತ್ತದೆ. 
3. ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದರಿಂದ ಕೀಲು ನೋವು (Joint pain) ಉಂಟಾಗುವುದಿಲ್ಲ. ಇದು ತ್ರಾಣವನ್ನು ಹೆಚ್ಚಿಸುತ್ತದೆ.
4. ಬೇಯಿಸಿದ ಮೊಟ್ಟೆಗಳ ಮಸುಕಾದ ಭಾಗವನ್ನು ತಿನ್ನುವುದರಿಂದ ಐರನ್ ಕೊರತೆಯನ್ನು ನೀಗಿಸಬಹುದು. 
5. ಮೊಟ್ಟೆಯ ಬಿಳಿಭಾಗವನ್ನು ತಿನ್ನುವುದರಿಂದ ದೇಹ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

2. ಬೆಳಗಿನ ಉಪಾಹಾರದಲ್ಲಿ ಓಟ್ಸ್ ಸೇವನೆಯ ಲಾಭಗಳು :
ಬೆಳಗಿನ ಉಪಾಹಾರದಲ್ಲಿ ಓಟ್ಸ್ (Oats benefits) ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಓಟ್ಸ್ ಅನ್ನು ಬಾರ್ಲಿಯಿಂದ ತಯಾರಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ಬೇರೆ ಬೇರೆ ಫ್ಲೇವರ್ ಗಳಲ್ಲಿ ಓಟ್ಸ್ ಸಿಗುತ್ತದೆ. ಪ್ರತಿದಿನ ಇದನ್ನು 30 ರಿಂದ 40 ಗ್ರಾಂಗಳಷ್ಟು ಸೇವಿಸಬಹುದು. ಇದರಲ್ಲಿ ಕಂಡುಬರುವ ವಿಶೇಷ ರೀತಿಯ ಫೈಬರ್ 'ಬೀಟಾ ಗ್ಲುಕನ್' ದೇಹಕ್ಕೆ ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ. 

ಇದನ್ನೂ ಓದಿ : Ajwain Benefits : ನೀವು ಸ್ಥೂಲಕಾಯದಿಂದ ಬಳಲುತ್ತಿದ್ದೀರಾ? ಅಜ್ವಾನ್ ಈ ರೀತಿ ಸೇವಿಸಿ, ನಿಮ್ಮ ತೂಕ ವೇಗವಾಗಿ ಕಡಿಮೆಯಾಗುತ್ತೆ!

 ಓಟ್ಸ್ ನ ಅದ್ಬುತ ಪ್ರಯೋಜನಗಳು :
1.ಓಟ್ಸ್ ನಲ್ಲಿರುವ ಫೈಬರ್ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
2.ಬೆಳಗಿನ ಉಪಾಹಾರದಲ್ಲಿ ಓಟ್ಸ್ ತಿನ್ನುವುದರಿಂದ, ಹೊಟ್ಟೆಯು ಸ್ವಚ್ಛವಾಗುತ್ತದೆ. 
3. ಮಲಬದ್ಧತೆ (Constipation) ರೋಗಿಗಳು ಓಟ್ಸ್ ತಿನ್ನುವುದರಿಂದ ಪ್ರಯೋಜನ ಪಡೆಯುತ್ತಾರೆ. 
4. ಇದರ ನಿಯಮಿತ ಸೇವನೆಯು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ 
5.ಫೈಬರ್ ಮತ್ತು ಮೆಗ್ನೀಸಿಯಮ್ ಓಟ್ಸ್ ನಲ್ಲಿ ಕಂಡುಬರುತ್ತವೆ, ಇದು ಮೆದುಳಿನಲ್ಲಿ ಸಿರೊಟೋನಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. 
6.ಓಟ್ಸ್ ಕೂಡ ತೂಕವನ್ನು ಕಡಿಮೆ (Weight loss) ಮಾಡಲು ಸಹಾಯ ಮಾಡುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News