ನವದೆಹಲಿ: ಹೆಚ್ಚಿನ ಜನರು ಮೊಟ್ಟೆಗಳನ್ನು ಸೇವಿಸುತ್ತಾರೆ. ಏಕೆಂದರೆ ಪ್ರೋಟೀನ್ ಭರಿತ ಮೊಟ್ಟೆಯು ಸ್ನಾಯುಗಳನ್ನು ಬಲಪಡಿಸುವುದಷ್ಟೇ ಅಲ್ಲ, ಇದು ಹೃದಯದ ಕಾರ್ಯನಿರ್ವಹಣೆಗೂ ಸಹ ಬೆಂಬಲಿಸುತ್ತದೆ. ಪ್ರೋಟೀನ್, ವಿಟಮಿನ್ಗಳು ಮತ್ತು ಫೈಬರ್ ಮೊಟ್ಟೆಯಲ್ಲಿ ಹೇರಳವಾಗಿದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಶಕ್ತಿ ಉಳಿದುಕೊಳ್ಳುತ್ತದೆ ಮತ್ತು ರೋಗನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ. ಆದರೆ ನೀವು ಮೊಟ್ಟೆಗಳನ್ನು ಸರಿಯಾಗಿ ಸೇವಿಸದಿದ್ದರೆ ಹಲವಾರು ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ನೀವು ಮೊಟ್ಟೆಗಳೊಂದಿಗೆ ಕೆಲವು ಆಹಾರ ಸೇವಿಸುವುದನ್ನು ತಪ್ಪಿಸಬೇಕು. ಹಾಗಾದ್ರೆ ಮೊಟ್ಟೆಗಳ ಜೊತೆಗೆ ಯಾವ ಆಹಾರ ಸೇವಿಸಬಾರದು ಎನ್ನುವುದರ ಮಾಹಿತಿ ಇಲ್ಲಿದೆ ನೋಡಿ.
ಈ ಆಹಾರಗಳೊಂದಿಗೆ ಮೊಟ್ಟೆ ಸೇವಿಸಬಾರದು
ಸೋಯಾ ಹಾಲು: ಸೋಯಾ ಹಾಲು ಸಸ್ಯ ಆಧಾರಿತ ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಮೊಟ್ಟೆಯೊಂದಿಗೆ ಅಪ್ಪಿತಪ್ಪಿಯೂ ಇದನ್ನು ಸೇವಿಸಬಾರದು. ಏಕೆಂದರೆ ಈ 2 ಪದಾರ್ಥಗಳನ್ನು ಒಟ್ಟಿಗೆ ತಿನ್ನುವುದರಿಂದ ದೇಹದಲ್ಲಿ ಪ್ರೋಟೀನ್ ವೇಗವಾಗಿ ಹೆಚ್ಚಾಗುತ್ತದೆ. ನೀವು ಅನೇಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ತುತ್ತಾಗಬಹುದು. ಆದ್ದರಿಂದ ನೀವು ಈ ಎರಡನ್ನು ಒಟ್ಟಿಗೆ ಸೇವಿಸುವುದನ್ನು ತಪ್ಪಿಸಬೇಕು.
ಇದನ್ನೂ ಓದಿ: ಈ ಸಸ್ಯಾಹಾರಗಳಲ್ಲೂ ಸಮೃದ್ಧವಾಗಿದೆ ವಿಟಮಿನ್ ಬಿ -12
ಮೊಟ್ಟೆ ಮತ್ತು ನಿಂಬೆ: ಹೆಚ್ಚಿನವರು ಆಹಾರದ ರುಚಿ ಹೆಚ್ಚಿಸಲು ನಿಂಬೆಯನ್ನು ಸೇವಿಸುತ್ತಾರೆ. ಆದರೆ ಮೊಟ್ಟೆಯೊಂದಿಗೆ ನಿಂಬೆ ಸೇವನೆಯು ಹಾನಿಕಾರಕ. ಇದರ ಸೇವನೆಯಿಂದ ಹೃದಯ ಸಂಬಂಧಿ ಖಾಯಿಲೆಗಳು ಬರಬಹುದು. ಹೀಗಾಗಿ ಇವುಗಳ ಸೇವನೆಯಿಂದ ದೂರವಿರಬೇಕು.
ಮೊಟ್ಟೆ ಮತ್ತು ಚಹಾ: ಮೊಟ್ಟೆಯನ್ನು ಚಹಾದೊಂದಿಗೆ ಎಂದಿಗೂ ಸೇವಿಸಬಾರದು. ಏಕೆಂದರೆ ಈ ಆಹಾರ ಸಂಯೋಜನೆಯು ಮಲಬದ್ಧತೆ, ಗ್ಯಾಸ್ ಮತ್ತು ಆಮ್ಲೀಯತೆಯನ್ನು ಉಂಟುಮಾಡಬಹುದು . ಚಹಾದೊಂದಿಗೆ ಮೊಟ್ಟೆಗಳನ್ನು ತಿನ್ನುವುದರಿಂದ ದೇಹದಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚಬಹುದು. ಆದ್ದರಿಂದ ಇವೆರಡನ್ನೂ ಒಟ್ಟಿಗೆ ಸೇವಿಸುವುದನ್ನು ತಪ್ಪಿಸಬೇಕು.
ಇದನ್ನೂ ಓದಿ: ಬೆಳಗಿನ ಜಾವ ಬೆಲ್ಲ ಹಾಗೂ ಕಡಲೆ ಬೀಜವನ್ನು ಸೇವಿಸುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ ..
ಬಾಳೆಹಣ್ಣು: ಮೊಟ್ಟೆ ಮತ್ತು ಬಾಳೆಹಣ್ಣಿನ ಆಹಾರ ಸಂಯೋಜನೆಯು ಹೊಟ್ಟೆಗೆ ಹಾನಿಕಾರಕ. ಏಕೆಂದರೆ ಈ ಎರಡೂ ವಸ್ತುಗಳು ಒಟ್ಟಿಗೆ ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅದಕ್ಕಾಗಿಯೇ ಎರಡನ್ನೂ ಒಟ್ಟಿಗೆ ತಿನ್ನುವುದನ್ನು ತಪ್ಪಿಸಬೇಕು.
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿ ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.