Health Tips: ಅತಿಯಾಗಿ ಅಂಜೂರದ ಹಣ್ಣಿನ ಸೇವನೆಯಿಂದ ಏನಾಗುತ್ತೆ ಗೊತ್ತಾ..?

ಮೂತ್ರಪಿಂಡ ಮತ್ತು ಮೂತ್ರಕೋಶದ ಕಾಯಿಲೆ ಇರುವವರು ಅಂಜೂರದ ಹಣ್ಣುಗಳನ್ನು ಬಹಳ ಕಡಿಮೆ ಪ್ರಮಾಣದಲ್ಲಿ ತಿನ್ನಬೇಕು.

Written by - Puttaraj K Alur | Last Updated : Oct 7, 2022, 02:18 PM IST
  • ಹೆಚ್ಚು ಅಂಜೂರದ ಹಣ್ಣು ತಿನ್ನುವ ಜನರ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯುಂಟಾಗಬಹುದು
  • ಅಂಜೂರದ ಹಣ್ಣುಗಳನ್ನು ತಿಂದ ನಂತರ ಒಂದು ಲೋಟ ತಣ್ಣೀರನ್ನು ಕುಡಿಯಬೇಕು
  • ಅಗತ್ಯಕ್ಕಿಂತ ಹೆಚ್ಚು ಅಂಜೂರದ ಹಣ್ಣು ಸೇವಿಸಿದರೆ ನಿಮ್ಮ ಯಕೃತ್ತಿನಲ್ಲಿ ಸಮಸ್ಯೆ ಉಂಟಾಗಬಹುದು
Health Tips: ಅತಿಯಾಗಿ ಅಂಜೂರದ ಹಣ್ಣಿನ ಸೇವನೆಯಿಂದ ಏನಾಗುತ್ತೆ ಗೊತ್ತಾ..? title=
ಅತಿಯಾಗಿ ಅಂಜೂರ ತಿಂದರೆ ಏನಾಗುತ್ತೆ?

ನವದೆಹಲಿ: ಒಣ ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಉತ್ತಮ ಆರೋಗ್ಯಕ್ಕಾಗಿ ಡ್ರೈ ಫ್ರೂಟ್ಸ್ ಸೇವಿಸುವಂತೆ ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ಇವುಗಳಲ್ಲಿ ಪೌಷ್ಟಿಕಾಂಶದ ಮೌಲ್ಯವು ತುಂಬಾ ಹೆಚ್ಚಾಗಿರುತ್ತದೆ. ಆದರೆ ನಾವು ಇವುಗಳನ್ನು ಸೀಮಿತ ಪ್ರಮಾಣದಲ್ಲಿ ತಿನ್ನಬೇಕು, ಇಲ್ಲದಿದ್ದರೆ ಆರೋಗ್ಯಕ್ಕೆ ಗಂಭೀರ ಹಾನಿಯಾಗಬಹುದು. ಅಂಜೂರದ ಹಣ್ಣನ್ನು ಒಣಗಿಸಿ ತಿನ್ನಲಾಗುತ್ತದೆ. ದೀರ್ಘಕಾಲದವರೆಗೆ ಸಂರಕ್ಷಿಸಲು ಅಂಜೂರಕ್ಕೆ ಒಣ ಹಣ್ಣಿನ ಆಕಾರ ನೀಡಲಾಗುತ್ತದೆ. ಯಾವುದೇ ಆದರೂ ಅತಿಯಾದರೆ ಅಮೃತವೂ ವಿಷದಂತೆ ಹೆಚ್ಚ ತಿನ್ನಬಾರದು. ಅದರಂತೆ ಅತಿಯಾಗಿ ಅಂಜೂರವನ್ನು ಸಹ ಸೇವಿಸಬಾರದು. ಒಣ ಅಂಜೂರದ ಹಣ್ಣುಗಳನ್ನು ಏಕೆ ಹೆಚ್ಚು ತಿನ್ನಬಾರದು ಎಂದು ತಿಳಿದುಕೊಳ್ಳಿರಿ.

1. ಕ್ಯಾಲ್ಸಿಯಂ ಕೊರತೆ

ಹೆಚ್ಚು ಅಂಜೂರದ ಹಣ್ಣುಗಳನ್ನು ತಿನ್ನುವ ಜನರ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯುಂಟಾಗಬಹುದು. ಏಕೆಂದರೆ ಈ ಒಣ ಹಣ್ಣಿನಲ್ಲಿರುವ ಆಕ್ಸಲೇಟ್ಗಳು ನಮ್ಮ ದೇಹದಲ್ಲಿರುವ ಎಲ್ಲಾ ಕ್ಯಾಲ್ಸಿಯಂಅನ್ನು ಹೀರಿಕೊಳ್ಳುತ್ತವೆ. ಕ್ಯಾಲ್ಸಿಯಂ ಕೊರತೆಯಿಂದಾಗಿ ನಮ್ಮ ಮೂಳೆಗಳು ಮತ್ತು ದೇಹವು ದುರ್ಬಲಗೊಳ್ಳುತ್ತದೆ.

ಇದನ್ನೂ ಓದಿ: Papaya Seeds: ಪರಂಗಿ ಮಾತ್ರವಲ್ಲ ಅದರ ಬೀಜಗಳೂ ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ

2. ಹೊಟ್ಟೆ ಉಬ್ಬರಿಕೆ

ಕೆಲವು ಜನರು ಒಣ ಅಂಜೂರದ ಹಣ್ಣುಗಳನ್ನು ರುಚಿಗೆ ಹೆಚ್ಚು ತಿನ್ನಲು ಪ್ರಾರಂಭಿಸುತ್ತಾರೆ. ಆದರೆ ಇದರಿಂದ ಹೊಟ್ಟೆ ಭಾರವಾಗುತ್ತದೆ, ನಂತರ ಹೊಟ್ಟೆ ನೋವು ಮತ್ತು ವಾಯು ಉಂಟಾಗುತ್ತದೆ. ಇದನ್ನು ತಪ್ಪಿಸಲು ನೀವು ಅಂಜೂರದ ಹಣ್ಣುಗಳನ್ನು ತಿಂದ ನಂತರ ಒಂದು ಲೋಟ ತಣ್ಣೀರನ್ನು ಕುಡಿಯಬೇಕು.

3. ಕಿಡ್ನಿ ಮತ್ತು ಮೂತ್ರಕೋಶದ ಸಮಸ್ಯೆ

ಮೂತ್ರಪಿಂಡ ಮತ್ತು ಮೂತ್ರಕೋಶದ ಕಾಯಿಲೆ ಇರುವವರು ಅಂಜೂರದ ಹಣ್ಣುಗಳನ್ನು ಬಹಳ ಕಡಿಮೆ ಪ್ರಮಾಣದಲ್ಲಿ ತಿನ್ನಬೇಕು. ಏಕೆಂದರೆ ಇದರಲ್ಲಿ ಕಂಡುಬರುವ ಆಕ್ಸಲೇಟ್ ಈ ಅಂಗಗಳಿಗೆ ಹಾನಿ ಮಾಡುತ್ತದೆ. ಇದು ಬಿಳಿ ರಕ್ತ ಕಣಗಳನ್ನು ತಯಾರಿಸುವ ಗುಲ್ಮವನ್ನು ನಾಶಪಡಿಸುತ್ತದೆ.

ಇದನ್ನೂ ಓದಿ: ಈ ಪಾನೀಯ ಸೇವಿಸಿದರೆ ಕೇವಲ ಏಳು ದಿನಗಳಲ್ಲಿ ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದು .!

4. ರಕ್ತಸ್ರಾವದ ತೊಂದರೆ

ಅಂಜೂರದ ಪರಿಣಾಮವು ಬಿಸಿಯಾಗಿರುತ್ತದೆ. ಆದ್ದರಿಂದ ಇದನ್ನು ಬೇಸಿಗೆಯಲ್ಲಿ ಹೆಚ್ಚು ತಿನ್ನಬಾರದು. ಇದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗಬಹುದು. ಚಳಿಗಾಲದಲ್ಲಿಯೂ ಇದನ್ನು ನಿಗದಿತ ಪ್ರಮಾಣದಲ್ಲಿ ಸೇವಿಸಬೇಕು, ಇಲ್ಲದಿದ್ದರೆ ರಕ್ತಸ್ರಾವದ ಸಮಸ್ಯೆ ಬರಬಹುದು.

5. ಯಕೃತ್ತು ಮತ್ತು ಕರುಳಿಗೆ ಹಾನಿ

ನೀವು ಅಗತ್ಯಕ್ಕಿಂತ ಹೆಚ್ಚು ಅಂಜೂರದ ಹಣ್ಣುಗಳನ್ನು ಸೇವಿಸಿದರೆ, ನಿಮ್ಮ ಯಕೃತ್ತಿನಲ್ಲಿ ಸಮಸ್ಯೆ ಉಂಟಾಗಬಹುದು. ಇದರೊಂದಿಗೆ ಕರುಳಿನಲ್ಲಿ ಅಡಚಣೆಯ ಅಪಾಯವೂ ಬರುತ್ತದೆ. ಕಾರಣ ಈ ಹಣ್ಣಿನ ಬೀಜಗಳು ಜೀರ್ಣಿಸಿಕೊಳ್ಳಲು ಸುಲಭವಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News