Side Effects Of Eating Curd: ಕೆಲವರಿಗೆ ಮೊಸರು ಇಲ್ಲದ ಊಟ ಅಪೂರ್ಣ ಎನಿಸುತ್ತದೆ. ಹೆಚ್ಚಿನ ಜನರು ಇದನ್ನು ಪ್ರತಿದಿನ ತಮ್ಮ ಆಹಾರದಲ್ಲಿ ಸೇವಿಸುತ್ತಾರೆ, ಆದರೆ ಮೊಸರು ಕೆಲವರಿಗೆ ಹಾನಿಕಾರಕ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಅಂದರೆ, ಈಗಾಗಲೇ ಕೆಲ ಕಾಯಿಲೆಗಳನ್ನು ಎದುರಿಸುತ್ತಿರುವ ಜನರು, ಮೊಸರು ಸೇವನೆಯಿಂದ ದೂರವಿರಬೇಕು, ಇಲ್ಲದಿದ್ದರೆ ಅವರ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೇ. ಉದಾಹರಣೆಗೆ ಅಸ್ತಮಾ ಮತ್ತು ಅಸಿಡಿಟಿ ಸಮಸ್ಯೆ ಇರುವ ರೋಗಿಗಳಿಗೆ ಇದು ವಿಷಕ್ಕಿಂತ ಕಡಿಮೆಯಿಲ್ಲ.
ಅಸ್ತಮಾ ರೋಗಿಗಳು ಮೊಸರಿನಿಂದ ಅಂತರ ಕಾಯ್ದುಕೊಳ್ಳಬೇಕು
ಮೊಸರಿನಲ್ಲಿ ವಿಟಮಿನ್‌ಗಳು, ಕ್ಯಾಲ್ಸಿಯಂ, ಪ್ರೊಟೀನ್‌ಗಳಂತಹ ಅನೇಕ ಪೋಷಕಾಂಶಗಳಿವೆ ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದು ಉದರ ಸಮಸ್ಯೆಗಳು, ಅಧಿಕ ಬಿಪಿ ಮತ್ತು ಅನೇಕ ರೀತಿಯ ಕಾಯಿಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ, ಆದರೆ ಉಸಿರಾಟದ ತೊಂದರೆ ಇರುವವರು ಮೊಸರು ಸೇವನೆಯಿಂದ ದೂರವಿರಬೇಕು. ಇವರು ಸೀಮಿತ ಪ್ರಮಾಣದಲ್ಲಿ ಮೊಸರನ್ನು ಸೇವಿಸಬೇಕು.
ಅಸಿಡಿಟಿ ರೋಗಿಗಳಿಗೂ ಅಪಾಯಕಾರಿ
ಅಸಿಡಿಟಿ ಸಮಸ್ಯೆ ಇರುವವರು ಮೊಸರು ಸೇವನೆಯಿಂದ ದೂರವಿರಬೇಕು, ಇಲ್ಲದಿದ್ದರೆ ಅವರ ಸಮಸ್ಯೆ ಹೆಚ್ಚಾಗಬಹುದು. ವಾಸ್ತವದಲ್ಲಿ, ಅಸಿಡಿಟೀ ಸಮಸ್ಯೆ ಹೊಂದಿರುವ ಜನರಿಗೆ ಮೊಸರನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಅವರು ವಾಂತಿ ಮಾಡುವ ಸಾಧ್ಯತೆಯಿದೆ. ಇಂತಹ ಪರಿಸ್ಥಿತಿಯಲ್ಲಿ, ಆಮ್ಲೀಯತೆಯ ಸಮಸ್ಯೆ ಇರುವ ರೋಗಿಗಳು ಮೊಸರನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.
ಇದನ್ನೂ ಓದಿ-Drumstick Benefits : ನುಗ್ಗೆ ಕಾಯಿ ಸೇವಿಸಿ ಈ 8 ಸಮಸ್ಯೆಗಳಿಗೆ ತಕ್ಷಣ ಪರಿಹಾರ ಪಡೆಯಿರಿ!
ಸಂಧಿವಾತ ಸಮಸ್ಯೆ ಇರುವವರು ಕೂಡ ಮೊಸರನ್ನು ಸೇವಿಸಬೇಡಿ
ಸಂಧಿವಾತದ ಸಮಸ್ಯೆಯಲ್ಲೂ ಸಹ, ನೀವು ಮೊಸರನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು, ಏಕೆಂದರೆ ಅದು ನಿಮ್ಮ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ರೋಗಿಗಳು ವಾರಕ್ಕೊಮ್ಮೆ ಮೊಸರು ಸೇವಿಸಬೇಕು, ಇಲ್ಲದಿದ್ದರೆ ಸಮಸ್ಯೆ ಹೆಚ್ಚಾಗಬಹುದು. ಇನ್ನೊಂದೆಡೆ, ಮೊಸರು ಸೇವನೆಯು ಹಲ್ಲು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ ಎಂದು ಹೇಳಲಾಗುತ್ತದೆ. ಹೀಗಿರುವಾಗ ಒಮ್ಮೆ ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಿದ ನಂತರ ಅದನ್ನು ಸೇವಿಸಬಹುದು.
ಇದನ್ನೂ ಓದಿ-Mens Health : ವಿವಾಹಿತ ಪುರುಷರೆ ನಿಮ್ಮ ಆರೋಗ್ಯಕ್ಕೆ ತಪ್ಪದೆ ಸೇವಿಸಿ ಈ ಚಟ್ನಿ!
(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ, ಮನೆಮದ್ದು ಮಾಹಿತಿ ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ