Ghee Benefits: ಬೆಳಿಗ್ಗೆ ಎದ್ದು ಕೇವಲ ಒಂದು ಚಮಚ ತುಪ್ಪವನ್ನು ತಿನ್ನಿರಿ, ಅದ್ಭುತ ಚಮತ್ಕಾರ ನೋಡಿರಿ

ನೀವು ತುಪ್ಪವನ್ನು ನೇರವಾಗಿ ತಿನ್ನಲು ಬಯಸದಿದ್ದರೆ, ಅದನ್ನು ವಿವಿಧ ರೀತಿಯಲ್ಲಿ ಆಹಾರದಲ್ಲಿ ಸೇರಿಸಿ ಸೇವಿಸಬಹುದು.

Written by - Puttaraj K Alur | Last Updated : Oct 30, 2021, 11:12 AM IST
  • ಪ್ರತಿದಿನವೂ ತುಪ್ಪ ಸೇವಿಸುವುದರಿಂದ ಅನೇಕ ಆರೋಗ್ಯಕರ ಪ್ರಯೋಜನ ಪಡೆಯಬಹುದು
  • ನಿಯಮಿತವಾಗಿ ತುಪ್ಪವನ್ನು ತಿನ್ನುವುದರಿಂದ ತೂಕ ಹೆಚ್ಚಾಗುವುದಿಲ್ಲ
  • ತುಪ್ಪದಲ್ಲಿ ವಿಟಮಿನ್ ಎ, ಡಿ, ಕ್ಯಾಲ್ಸಿಯಂ ಮುಂತಾದ ಪೋಷಕಾಂಶಗಳಿವೆ
Ghee Benefits: ಬೆಳಿಗ್ಗೆ ಎದ್ದು ಕೇವಲ ಒಂದು ಚಮಚ ತುಪ್ಪವನ್ನು ತಿನ್ನಿರಿ, ಅದ್ಭುತ ಚಮತ್ಕಾರ ನೋಡಿರಿ   title=
ತುಪ್ಪ ಸೇವಿಸುವುದರ ಪ್ರಯೋಜನಗಳು

ನವದೆಹಲಿ: ದೇಹದಲ್ಲಿ ಕೊಬ್ಬು ಹೆಚ್ಚುತ್ತದೆ ಎಂಬ ಭಯದಿಂದ ಹೆಚ್ಚಿನ ಜನರು ತುಪ್ಪ ಸೇವಿಸುವುದನ್ನು ತಪ್ಪಿಸುತ್ತಾರೆ. ಆದರೆ ತುಪ್ಪ ತಿನ್ನುವುದರಿಂದ ನಿಮಗೆ ಹಾನಿಯಾಗುವುದಿಲ್ಲ. ಇದರಿಂದ ನಿಮಗೆ ಅನೇಕ ಆರೋಗ್ಯಕರ ಪ್ರಯೋಜನಗಳು(Ghee Benefits) ಸಿಗುತ್ತವೆ. ಪ್ರತಿದಿನವೂ ದೇಸಿ ತುಪ್ಪವನ್ನು ತಿನ್ನುವುದರಿಂದ ಅದ್ಭುತ  ಚಮತ್ಕಾರವನ್ನೇ ನೀವು ಕಾಣಬಹುದು. ನಿಯಮಿತವಾಗಿ ತುಪ್ಪುವನ್ನು ತಿನ್ನುವುದರಿಂದ ತೂಕ ಹೆಚ್ಚಾಗುವುದಿಲ್ಲ ಎಂಬುದು ಕೂಡ ನಿಜ.

ತುಪ್ಪದಲ್ಲಿ ವಿಟಮಿನ್ ಎ(Vitamin A), ಡಿ, ಕ್ಯಾಲ್ಸಿಯಂ, ಫಾಸ್ಫರಸ್, ಖನಿಜಗಳು ಮತ್ತು ಪೊಟ್ಯಾಸಿಯಮ್ ಮುಂತಾದ ಪೋಷಕಾಂಶಗಳಿವೆ. ಇದರಲ್ಲಿರುವ ಸಂಯೋಜಿತ ಲಿನೋಲಿಯಿಕ್ ಆಮ್ಲವು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದು ಕ್ಯಾನ್ಸರ್ ಅಪಾಯವನ್ನೂ ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Sleeping : ಕುಳಿತಲ್ಲೆ ನಿದ್ದೆ ಮಾಡುವುದರಿಂದ ಬರಬಹುದು ಸಾವು! ಇದರಿಂದಾಗುವ ಸಮಸ್ಯೆ ಮತ್ತು ಪ್ರಯೋಜನಗಳೇನು? ಇಲ್ಲಿದೆ

ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ

ನೀವು ಪ್ರತಿದಿನ ಬೆಳಿಗ್ಗೆ ಎದ್ದು ಕೇವಲ ಒಂದು ಚಮಚ ತುಪ್ಪ(Desi Ghee)ವನ್ನು ಸೇವಿಸಿದರೆ, ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. ಹಲವಾರು ರೋಗಗಳನ್ನು ಗುಣಪಡಿಸಲು ಇದು ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ತುಪ್ಪದಲ್ಲಿ ಜೀವಸತ್ವಗಳು ಮತ್ತು ಪೋಷಕಾಂಶಗಳು ಸಮೃದ್ಧವಾಗಿವೆ. ಇದು ದೇಹದಿಂದ ಹಾನಿಕಾರಕ ವಿಷವನ್ನು ತೆಗೆದುಹಾಕುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತುಪ್ಪ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

ಹೊಟ್ಟೆಯ ಸಮಸ್ಯೆಗಳಿಗೆ ಸಹಕಾರಿ

ತುಪ್ಪದಲ್ಲಿ ವಿಟಮಿನ್ ಎ, ಡಿ, ಇ ಮತ್ತು ಕೆ ಸಮೃದ್ಧವಾಗಿವೆ. ಇದು ನಿಮ್ಮ ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ಇದು ಮಲಬದ್ಧತೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಮಲಬದ್ಧತೆ, ಗ್ಯಾಸ್, ಬಾಯಿ ಹುಣ್ಣು ಮುಂತಾದ ಸಮಸ್ಯೆ ಇದ್ದರೆ ದಿನವೂ ದೇಸಿ ತುಪ್ಪವನ್ನು ತಿನ್ನಿ. ಇದರ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡುತ್ತದೆ. ತುಪ್ಪದಲ್ಲಿರುವ ಅಮೈನೋ ಆಮ್ಲಗಳು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Onion Benefits : ಮುಖದ ಮೇಲಿನ ಕಲೆ, ಹೊಳಪಿಗಾಗಿ ಬಳಸಿ 1 ಈರುಳ್ಳಿ : ಇದನ್ನ ಬಳಸುವ ಸರಿಯಾದ ಮಾರ್ಗ ಇಲ್ಲಿದೆ 

ಮೂಳೆ ಸಂಬಂಧಿಸಿದ ಸಮಸ್ಯೆಗೆ ರಾಮಬಾಣ

ಕೀಲು ನೋವು ಮತ್ತು ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆ ಇದ್ದರೆ ತುಪ್ಪದಿಂದ ನಿಮ್ಮ ದಿನಚರಿಯನ್ನು ಪ್ರಾರಂಭಿಸಿ. ಇದು ನಿಮ್ಮ ಸಮಸ್ಯೆಯನ್ನು ಸಾಕಷ್ಟು ಮಟ್ಟಿಗೆ ಪರಿಹರಿಸುತ್ತದೆ.

ಚರ್ಮ ಮತ್ತು ಕೂದಲಿಗೆ ಉಪಯುಕ್ತ

ತುಪ್ಪದಲ್ಲಿರುವ ಕೊಬ್ಬಿನಾಮ್ಲಗಳು ನಿಮ್ಮ ಚರ್ಮ ಮತ್ತು ಕೂದಲನ್ನು ಒಳಗಿನಿಂದ ಪೋಷಿಸುತ್ತದೆ. ಇದು ನಿಮ್ಮ ಚರ್ಮ ಮತ್ತು ನೆತ್ತಿಯನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ.

ನೆನಪಿನ ಶಕ್ತಿ ಹೆಚ್ಚುತ್ತದೆ

ದೇಸಿ ತುಪ್ಪವನ್ನು ನಿಯಮಿತವಾಗಿ ಬಳಸುವುದರಿಂದ ನೆನಪಿನ ಶಕ್ತಿ(Memory Power)ಹೆಚ್ಚುತ್ತದೆ. ತುಪ್ಪವನ್ನು ತಿನ್ನುವುದು ಮೆದುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ನೀವು ತುಪ್ಪವನ್ನು ನೇರವಾಗಿ ತಿನ್ನಲು ಬಯಸದಿದ್ದರೆ, ಅದನ್ನು ವಿವಿಧ ರೀತಿಯಲ್ಲಿ ಆಹಾರದಲ್ಲಿ ಸೇರಿಸಿ ಸೇವಿಸಬಹುದು. ಆದರೆ ಹೆಚ್ಚು ತುಪ್ಪವನ್ನು ತಿನ್ನಬಾರದು ಎಂಬ ಅಂಶವನ್ನು ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕು.

(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಸಲಹೆಗಳನ್ನು ಪಾಲಿಸುವ ಮುನ್ನ ತಪ್ಪದೇ ವೈದ್ಯಕೀಯ ಸಲಹೆ ಪಡೆದುಕೊಳ್ಳಿರಿ. ZEE NEWS ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News