ನೈಸರ್ಗಿಕವಾಗಿ ತೂಕ ಇಳಿಸಲು ಈ ಪಾನೀಯವನ್ನು ನಿತ್ಯ ಸೇವಿಸಿ

ತೂಕ ಇಳಿಕೆ ಡ್ರಿಂಕ್ಸ್: ತೂಕ ಕಡಿಮೆ ಮಾಡಿಕೊಳ್ಳಲು ಹಲವಾರು ಪ್ರಯತ್ನ ಮಾಡಿದರೂ ಬಯಸಿದ ಫಲಿತಾಂಶ ಲಭ್ಯವಿಲ್ಲ ಎಂದು ಹೇಳುವುದನ್ನು ಕೇಳಿರಬಹುದು. ಅಂತಹ ಪರಿಸ್ಥಿತಿಯಲ್ಲಿ ವಿಶೇಷ ಪಾನೀಯವನ್ನು ಕುಡಿಯುವುದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು.

Written by - Yashaswini V | Last Updated : May 2, 2022, 12:56 PM IST
  • ಫೆನ್ನೆಲ್ ಬೀಜಗಳಲ್ಲಿ ಫೈಬರ್ ಸಮೃದ್ಧವಾಗಿವೆ.
  • ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಫೆನ್ನೆಲ್ ಸೀಡ್ಸ್ ನೀರು ಮಧುಮೇಹ ರೋಗಿಗಳಿಗೆ ಯಾವುದೇ ರಾಮಬಾಣ​ಕ್ಕಿಂತ ಕಡಿಮೆಯಿಲ್ಲ.
ನೈಸರ್ಗಿಕವಾಗಿ ತೂಕ ಇಳಿಸಲು ಈ ಪಾನೀಯವನ್ನು ನಿತ್ಯ ಸೇವಿಸಿ  title=
Fennel Seeds Water For Weight Loss

ತೂಕ ಇಳಿಕೆ ಡ್ರಿಂಕ್ಸ್: ಬೇಸಿಗೆ ಕಾಲದಲ್ಲಿ ಜನರು ಕೋಣೆಯಿಂದ ಹೊರಗೆ ಹೋಗಲು ಇಷ್ಟಪಡುವುದಿಲ್ಲ. ಮನೆ ಮತ್ತು ಕಚೇರಿಯಲ್ಲಿ ಕೂಲರ್ ಅಥವಾ ಎಸಿಯ ತಂಪಿನಲ್ಲಿ ಹೆಚ್ಚು ಸಮಯ ಕಳೆಯಲು ಜನರು ಇಷ್ಟಪಡುತ್ತಾರೆ. ಹೀಗಾಗಿ ಕಡಿಮೆ ದೈಹಿಕ ಚಟುವಟಿಕೆಯಿಂದಾಗಿ ತೂಕ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಇದರೊಂದಿಗೆ ಅನೇಕ ಅನಾರೋಗ್ಯಕರ ಆಹಾರಗಳು ಈ ಸಮಸ್ಯೆಯನ್ನು ಹೆಚ್ಚಿಸುತ್ತವೆ. ತೂಕ ಕಡಿಮೆ ಮಾಡಿಕೊಳ್ಳಲು ಹಲವಾರು ಪ್ರಯತ್ನ ಮಾಡಿದರೂ ನಿರೀಕ್ಷಿತ ಫಲಿತಾಂಶ ಲಭ್ಯವಿಲ್ಲ ಎಂದು ಹೇಳುವವರನ್ನು ನಾವು ನೋಡಿರಬಹುದು. ಆದರೆ, ವಿಶೇಷ ಪಾನೀಯವನ್ನು ಕುಡಿಯುವುದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ. ನೈಸರ್ಗಿಕವಾಗಿ ತೂಕ ಇಳಿಸಲು ಸಹಾಯಕವಾಗುವ ಪಾನೀಯದ ಬಗ್ಗೆ ತಿಳಿಯೋಣ...

ನೀವು ವ್ಯಾಯಾಮ ಮಾಡದೆ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಫೆನ್ನೆಲ್/ಸೋಂಪಿನ ನೀರನ್ನು ಬಳಸಬಹುದು. ಇದರಿಂದ ದೇಹ ಸದೃಢವಾಗಿರುವುದಲ್ಲದೆ ಹಲವು ರೋಗಗಳಿಂದ ದೂರ ಉಳಿಯಬಹುದು. 

ಫೆನ್ನೆಲ್/ಸೋಂಪಿನ ನೀರನ್ನು ಕುಡಿಯುವುದರಿಂದ ಸಿಗುವ 5 ಪ್ರಯೋಜನಗಳ ಬಗ್ಗೆ ತಿಳಿಯೋಣ...
1. ತೂಕ ನಷ್ಟದಲ್ಲಿ ಪರಿಣಾಮಕಾರಿ:

ಫೆನ್ನೆಲ್ ಬೀಜಗಳಲ್ಲಿ ಫೈಬರ್ ಸಮೃದ್ಧವಾಗಿವೆ, ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಸಹ ತೂಕ ಇಳಿಸಿಕೊಳ್ಳಲು ಬಯಸಿದರೆ, ಪ್ರತಿದಿನ ಬೆಳಿಗ್ಗೆ ಖಂಡಿತವಾಗಿಯೂ ಫೆನ್ನೆಲ್ ನೀರನ್ನು ಕುಡಿಯಿರಿ. ಕೆಲವು ವಾರಗಳ ಕಾಲ ಹೀಗೆ ಮಾಡುವುದರಿಂದ ಅಪೇಕ್ಷಿತ ಫಲಿತಾಂಶ ಸಿಗುತ್ತದೆ.

ಇದನ್ನೂ ಓದಿ- Weight Loss tips : ದೇಹ ಸಣ್ಣಗಾಗಬೇಕಾದರೆ ಈ ಎಲೆಯನ್ನು ಬಳಸಿ ನೋಡಿ

2. ರೋಗನಿರೋಧಕ ಶಕ್ತಿ:
ಕರೋನಾ ಯುಗದಲ್ಲಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಶೇಷ ಒತ್ತು ನೀಡಲಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಫೆನ್ನೆಲ್ ಸೀಡ್ಸ್ ವಾಟರ್ ನಿಮಗೆ ಹೆಚ್ಚು ಉಪಯುಕ್ತವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ವೈರಸ್ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ.

3. ದೇಹದಿಂದ ವಿಷವನ್ನು ತೆಗೆದುಹಾಕಲು ಸಹಕಾರಿ:
ಫೆನ್ನೆಲ್ ಸೀಡ್ಸ್ ನೀರು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಊಟ ಮಾಡಿದ ನಂತರ ಈ ಮಾಂತ್ರಿಕ ಪಾನೀಯವನ್ನು ಸೇವಿಸಿದರೆ, ಜೀರ್ಣಕ್ರಿಯೆಯ ಸಮಸ್ಯೆ ಇರುವುದಿಲ್ಲ, ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

4. ಮಧುಮೇಹದಲ್ಲಿ ಪ್ರಯೋಜನಕಾರಿ:
ಫೆನ್ನೆಲ್ ಸೀಡ್ಸ್ ನೀರು ಮಧುಮೇಹ ರೋಗಿಗಳಿಗೆ ಯಾವುದೇ ರಾಮಬಾಣಕ್ಕಿಂತ ಕಡಿಮೆಯಿಲ್ಲ. ಮುಂಜಾನೆ ಇದನ್ನು ಕುಡಿದರೆ ಇನ್ಸುಲಿನ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.

ಇದನ್ನೂ ಓದಿ- Belly Fat: ಜಿಮ್‌ಗೆ ಹೋಗದೆ ಹೊಟ್ಟೆಯ ಕೊಬ್ಬು ಕರಗಿಸಲು ಸಹಾಯಕಾರಿ ಈ ಡ್ರಿಂಕ್ಸ್

5. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ:
ನೀವು ಹೆಚ್ಚು ಕರಿದ ಮತ್ತು ಹುರಿದ ಆಹಾರವನ್ನು ಸೇವಿಸಿದರೆ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗುತ್ತದೆ, ಅದು ದೇಹಕ್ಕೆ ಮಾರಕವಾಗಬಹುದು. ನೀವು ಫೆನ್ನೆಲ್ ನೀರನ್ನು ಸೇವಿಸಿದರೆ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯವು ಕಡಿಮೆಯಾಗುತ್ತದೆ.

ಫೆನ್ನೆಲ್/ಸೋಂಪಿನ ನೀರನ್ನು ತಯಾರಿಸುವುದು ಹೇಗೆ?
ಮೊದಲನೆಯದಾಗಿ, ಒಂದು ದೊಡ್ಡ ಚಮಚ ಫೆನ್ನೆಲ್/ಸೋಂಪನ್ನು ತೆಗೆದುಕೊಂಡು ಅದನ್ನು ಒಂದು ಲೋಟ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಎದ್ದ ನಂತರ, ಫೆನ್ನೆಲ್ ಅನ್ನು ಚೆನ್ನಾಗಿ ಮ್ಯಾಶ್ ಮಾಡಿ ನಂತರ ಅದರ ನೀರನ್ನು ಫಿಲ್ಟರ್ ಮಾಡಿ ಕುಡಿಯಿರಿ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News