Eating Garlic Alert: ಈ ಜನರ ಪಾಲಿಗೆ ವಿಷಕ್ಕಿಂತ ಕಮ್ಮಿ ಏನಿಲ್ಲ ಬೆಳ್ಳುಳ್ಳಿ, ತಿನ್ನುವ ಮೊದಲು ಹಾನಿಯನ್ನು ತಿಳಿದುಕೊಳ್ಳಿ

Harful Effects Of Eating Garlic - ಅನೇಕ ಜನರಿಗೆ, ಬೆಳ್ಳುಳ್ಳಿ ವಿಷಕ್ಕಿಂತ ಕಡಿಮೆಯಿಲ್ಲ. ನೀವೂ ಕೂಡ ಯೋಚಿಸದೆ ಬೆಳ್ಳುಳ್ಳಿಯನ್ನು ತಿನ್ನಲು ಹೊರಟಿದ್ದರೆ ಸ್ವಲ್ಪ ಗಮನ ಕೊಡಿ. ಇದು ನಿಮಗೆ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು.  

Written by - Nitin Tabib | Last Updated : Feb 21, 2022, 10:26 PM IST
  • ಈ ಜನರ ಪಾಲಿಗೆ ವಿಷಕ್ಕಿಂತ ಕಮ್ಮಿ ಏನಿಲ್ಲ ಬೆಳ್ಳುಳ್ಳಿ ಸೇವನೆ
  • ತಿನ್ನುವ ಮೊದಲು ಅದರಿಂದಾಗುವ ಹಾನಿ ತಿಳಿದುಕೊಳ್ಳಿ
  • ಇಲ್ಲದಿದ್ದರೆ ನಿಮ್ಮ ಸಮಸ್ಯೆ ಉಲ್ಭಣಗೊಳ್ಳಬಹುದು
Eating Garlic Alert: ಈ ಜನರ ಪಾಲಿಗೆ ವಿಷಕ್ಕಿಂತ ಕಮ್ಮಿ ಏನಿಲ್ಲ ಬೆಳ್ಳುಳ್ಳಿ, ತಿನ್ನುವ ಮೊದಲು ಹಾನಿಯನ್ನು ತಿಳಿದುಕೊಳ್ಳಿ title=
Eating Garlic Alert (File Photo)

ನವದೆಹಲಿ: Garlic Bad Impacts - ಬೆಳ್ಳುಳ್ಳಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ ಎಂಬುದು ಎಲ್ಲರಿಗೂ ತಿಳಿದ ವಿಷಯ, ಆದರೆ ಪ್ರತಿಯೊಬ್ಬರ ಆರೋಗ್ಯಕ್ಕೆ ಎಲ್ಲವೂ ಒಳ್ಳೆಯದಾಗಿರಬೇಕು ಎಂದು ಯೋಚಿಸುವುದು ಸರಿಯಲ್ಲ. ನಮ್ಮ ಮನೆಗಳಲ್ಲಿ, ಬೆಳ್ಳುಳ್ಳಿಯನ್ನು (Garlic) ದಾಲ್ ರುಚಿ ಹೆಚ್ಚಿಸಲು ಅಥವಾ ತರಕಾರಿಗಳ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಇದನ್ನು ತಿಂದರೆ ದೇಹ ಆರೋಗ್ಯವನ್ತವಾಗಿರುತ್ತದೆ ಎಂದು ಹೇಳಲಾಗುತ್ತದೆ. ಅನೇಕ ಜನರಿಗೆ, ಬೆಳ್ಳುಳ್ಳಿ ವಿಷಕ್ಕಿಂತ ಕಡಿಮೆಯಿಲ್ಲ. ಹಾಗಾದರೆ ಬೆಳ್ಳುಳ್ಳಿಯನ್ನು ಯಾರು ತಿನ್ನಬಾರದು ಎಂದು ತಿಳಿಯೋಣ ಬನ್ನಿ.

ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನಬೇಡಿ (Garlic Side Effects)
ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಅನೇಕ ಜನರಲ್ಲಿ ಎದೆಯುರಿ, ವಾಕರಿಕೆ ಮತ್ತು ವಾಂತಿ ಸಮಸ್ಯೆ ಉಂಟಾಗುತ್ತದೆ. ಬೆಳ್ಳುಳ್ಳಿ ಆಮ್ಲೀಯತೆಯನ್ನು ಉಂಟುಮಾಡುವ ಕೆಲವು ಸಂಯುಕ್ತಗಳನ್ನು ಹೊಂದಿದೆ ಎಂಬುದು ಇಲ್ಲಿ ಗಮನಾರ್ಹ. ಹಾಗಾಗಿ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನದಿರಲು ಪ್ರಯತ್ನಿಸಿ. ಇಲ್ಲದಿದ್ದರೆ ನಿಮ್ಮ ಸಮಸ್ಯೆ ಹೆಚ್ಚಾಗುವುದು ಖಂಡಿತ.

ಇದನ್ನೂ ಓದಿ-Egg : ಪ್ರತಿದಿನ ಮೊಟ್ಟೆ ತಿನ್ನುವುದು ಈ ಗಂಭೀರ ಕಾಯಿಲೆಗೆ ಅಹ್ವಾನ ನೀಡಿದಂತೆ!

ಬೆಳ್ಳುಳ್ಳಿಯನ್ನು ಔಷಧದೊಂದಿಗೆ ಬಳಸಬೇಡಿ
ಮಾಧ್ಯಮ ವರದಿಗಳ ಪ್ರಕಾರ, ಬೆಳ್ಳುಳ್ಳಿಯನ್ನು ನೈಸರ್ಗಿಕ ರಕ್ತ ತೆಳುವಾಗಿಸುವ ಅಂಶವೆಂದು ಪರಿಗಣಿಸಲಾಗಿದೆ, ಆದ್ದರಿಂದ ನಾವು ಬೆಳ್ಳುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು ಮತ್ತು ರಕ್ತ ತೆಳುವಾಗಿಸುವ ಔಷಧಿಗಳಾದ ವಾರ್ಫರಿನ್, ಆಸ್ಪಿರಿನ್ ಇತ್ಯಾದಿಗಳ ಜೊತೆಗೆ ಸೇವಿಸಬಾರದು. ಏಕೆಂದರೆ ರಕ್ತ ತೆಳುವಾಗಿಸುವ ಔಷಧಿಗಳು  ಮತ್ತು ಬೆಳ್ಳುಳ್ಳಿಯ ಸಂಯೋಜಿತ ಪರಿಣಾಮಗಳು ಅಪಾಯಕಾರಿಯಾಗಿವೆ. ಇದು ಅಪಾಯವನ್ನು ಹೆಚ್ಚಿಸಬಹುದು.

ಇದನ್ನೂ ಓದಿ-Eyes Secrets: ನಿಮ್ಮ ಕಣ್ಣುಗಳು ಕೂಡ ನಿಮ್ಮ ಆರೋಗ್ಯದ ಗುಟ್ಟನ್ನು ಹೇಳುತ್ತವೆ ಗೊತ್ತಾ? ಈ ಲಕ್ಷಣಗಳನ್ನು ಇಗ್ನೋರ್ ಮಾಡ್ಬೇಡಿ

ಗರ್ಭಿಣಿಯರು ಬೆಳ್ಳುಳ್ಳಿ ತಿನ್ನಬಾರದು
ಗರ್ಭಿಣಿಯರು ಅಥವಾ ಹಾಲುಣಿಸುವ ಮಹಿಳೆಯರು ಬೆಳ್ಳುಳ್ಳಿ ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ ಇದು ಲೇಬರ್ ಪೆನ್ ಪ್ರೇರೇಪಿಸುತ್ತದೆ ಎಂದು ಹೇಳಲಾಗಿದೆ. ಅದೇ ಸಮಯದಲ್ಲಿ, ಹಾಲುಣಿಸುವ ತಾಯಂದಿರು ಹೆಚ್ಚು ಬೆಳ್ಳುಳ್ಳಿ ತಿನ್ನುವುದನ್ನು ತಪ್ಪಿಸಬೇಕು ಏಕೆಂದರೆ ಅದು ಹಾಲಿನ ರುಚಿಯನ್ನು ಬದಲಾಯಿಸುತ್ತದೆ.

ಇದನ್ನೂ ಓದಿ-Black Gram Health Benefits - ಈ ಬೇಳೆಯನ್ನು ತಕ್ಷಣವೇ ನಿಮ್ಮ ಡಯಟ್ ನಲ್ಲಿ ಶಾಮೀಲುಗೊಳಿಸಿ, ಹಲವು ರೋಗಗಳಿಂದ ಮುಕ್ತಿ ಪಡೆಯಿರಿ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನಕ್ಕಾಗಿ ಮಾತ್ರ ಬಳಸಬೇಕು. ಯಾವುದೇ ಒಂದು ಕಾಯಿಲೆ ಅಥವಾ ಸಮಸ್ಯೆಗೆ ಇದು ಪರಿಹಾರವಲ್ಲ. ಹೆಚ್ಚಿನ ಮಾಹಿತಿಗಾಗಿ ನುರಿತ ವೈದ್ಯರನ್ನು ಸಂಪರ್ಕಿಸಬೇಕು. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News