Joint Pain: ಬಿಸಿ ಹಾಲಿನಲ್ಲಿ ಇದನ್ನು ಬೆರೆಸಿ ಸೇವಿಸಿದರೆ ಕೀಲು ನೋವು ದೂರವಾಗುತ್ತೆ

Hot Milk Benefits: ಹಾಲನ್ನು ಸಂಪೂರ್ಣ ಆಹಾರ ಎಂದು ಕರೆಯುತ್ತಾರೆ. ಆದರೆ ಅದರೊಂದಿಗೆ ವಿಶೇಷ ಹಾಲಿನ ಉತ್ಪನ್ನವನ್ನು ಬೆರೆಸಿ ಕುಡಿಯುವುದು ಆರೋಗ್ಯವನ್ನು ವೃದ್ಧಿಸುತ್ತದೆ. ಇದರಿಂದಾಗಿ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು.  

Written by - Chetana Devarmani | Last Updated : Jun 9, 2023, 05:27 PM IST
  • ಹಾಲನ್ನು ಸಂಪೂರ್ಣ ಆಹಾರ ಎಂದು ಕರೆಯುತ್ತಾರೆ
  • ಬಿಸಿ ಹಾಲಿನಲ್ಲಿ ಇದನ್ನು ಬೆರೆಸಿ ಸೇವಿಸಿ
  • ಕೀಲು ನೋವು, ನಿದ್ರಾ ಹೀನತೆಯಿಂದ ಮುಕ್ತರಾಗುವಿರಿ
Joint Pain: ಬಿಸಿ ಹಾಲಿನಲ್ಲಿ ಇದನ್ನು ಬೆರೆಸಿ ಸೇವಿಸಿದರೆ ಕೀಲು ನೋವು ದೂರವಾಗುತ್ತೆ title=

Hot Milk Benefits: ನಮ್ಮ ದೈನಂದಿನ ಜೀವನದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತೇವೆ. ಇದಕ್ಕೆ ಹಾಲು ರಾಮಬಾಣವಿದ್ದಂತೆ ಎಂದರೆ ತಪ್ಪಲ್ಲ. ಬಹುತೇಕ ಎಲ್ಲಾ ರೀತಿಯ ಪೋಷಕಾಂಶಗಳು ಹಾಲಿನಲ್ಲಿ ಕಂಡುಬರುತ್ತವೆ. ದಿನಕ್ಕೆ 2 ಲೋಟ ಹಾಲು ಕುಡಿದರೆ ದೇಹಕ್ಕೆ ಹಲವಾರು ಪ್ರಯೋಜನಗ ಸಿಗುತ್ತವೆ. ಹಾಗೆಯೇ ಬಿಸಿ ಹಾಲಿಗೆ ತುಪ್ಪ ಬೆರೆಸಿ ಕುಡಿದರೆ ಅದರ ಪೌಷ್ಟಿಕಾಂಶ ಇಮ್ಮಡಿಗೊಳ್ಳುತ್ತದೆ. ಬಿಸಿ ಹಾಲು ಮತ್ತು ದೇಸಿ ತುಪ್ಪವನ್ನು ಒಟ್ಟಿಗೆ ಸೇವಿಸುವುದರಿಂದ ಅನೇಕ ಪ್ರಯೋಜನಗಳು ದೊರೆಯುತ್ತವೆ. 

ಬಿಸಿ ಹಾಲು ಮತ್ತು ತುಪ್ಪ ಕುಡಿಯುವ ಪ್ರಯೋಜನಗಳು : 

1. ಕೀಲು ನೋವಿನಿಂದ ಪರಿಹಾರ:

ನೀವು ಆಗಾಗ್ಗೆ ಕೀಲು ನೋವಿನಿಂದ ಬಳಲುತ್ತಿದ್ದರೆ ಬಿಸಿ ಹಾಲು ಮತ್ತು ತುಪ್ಪವನ್ನು ಒಟ್ಟಿಗೆ ಸೇರಿಸಿ ಕುಡಿಯಿರಿ. ಹಾಲು ಉರಿಯೂತವನ್ನು ಕಡಿಮೆ ಮಾಡುತ್ತದೆ. ಅಲ್ಲದೇ, ಹಾಲಿನಲ್ಲಿ ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಇದರಿಂದ ಜಾಯಿಂಟ್‌ ಪೇನ್‌ನಿಂದ ಮುಕ್ತಿ ಪಡೆಯಬಹುದು. 

2. ಶಾಂತ ನಿದ್ರೆ:

ರಾತ್ರಿ ಮಲಗುವ ಮುನ್ನ ಹಾಲಿಗೆ ತುಪ್ಪವನ್ನು ಬೆರೆಸಿ ಕುಡಿದರೆ ಮೆದುಳಿನ ನರಗಳನ್ನು ಶಾಂತಗೊಳಿಸುತ್ತದೆ. ಇದರಿಂದ ಚಿಂತೆಗಳಿಂದ ಮುಕ್ತರಾಗಿ ರಿಲ್ಯಾಕ್ಸ್‌ ಅನುಭವಿಸಲು ಪ್ರಾರಂಭಿಸುತ್ತೀರಿ. ಮತ್ತೊಂದೆಡೆ, ತುಪ್ಪದ ಸೇವನೆಯು ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ರಾತ್ರಿ ಹೊತ್ತು ಉತ್ತಮ ನಿದ್ರೆ ಪಡೆಯುವಿರಿ.

ಇದನ್ನೂ ಓದಿ: ಫ್ಯಾಟಿ ಲೀವರ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಆಹಾರಗಳು ವರದಾನಕ್ಕೆ ಸಮ!

3. ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ:

ಹಾಲು ಮತ್ತು ತುಪ್ಪ ಹೊಟ್ಟೆಗೆ ತುಂಬಾ ಒಳ್ಳೆಯದು. ಹಾಲಿನ ಜೊತೆ ತುಪ್ಪ ಬೆರೆಸಿ ಕುಡಿದರೆ ಜೀರ್ಣಕಾರಿ ಕಿಣ್ವಗಳು ಬಿಡುಗಡೆಯಾಗುತ್ತವೆ. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಅಜೀರ್ಣ, ಮಲಬದ್ಧತೆ, ಗ್ಯಾಸ್ ನಂತಹ ಸಮಸ್ಯೆಗಳು ಹತ್ತಿರ ಸುಳಿಯುವುದಿಲ್ಲ.

4. ಚರ್ಮಕ್ಕೆ ಪ್ರಯೋಜನಕಾರಿ:

ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಒಂದು ಲೋಟ ಬಿಸಿ ಹಾಲಿಗೆ ಒಂದು ಚಮಚ ತುಪ್ಪ ಬೆರಸಿ ಕುಡಿಯಿರಿ. ಇದರಿಂದ ಚರ್ಮಕ್ಕೆ ನೈಸರ್ಗಿಕ ಹೊಳಪು ಸಿಗುತ್ತದೆ.  

ಇದನ್ನೂ ಓದಿ: ಬಿಳಿ ಮಾವಿನ ಹಣ್ಣು ನೋಡಿದ್ದೀರಾ? ಕ್ಯಾನ್ಸರ್ ಸೇರಿ ಈ 5 ಮಾರಕ ಕಾಯಿಲೆಗೆ ಇದೇ ಮದ್ದು

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News