ಖಾಲಿ ಹೊಟ್ಟೆಯಲ್ಲಿ ಈ ಮೂರು ವಸ್ತುಗಳನ್ನು ಸೇವಿಸಿದರೆ ವಿಷದಂತೆ ಕಾಡುವುದು ಆರೋಗ್ಯವನ್ನು

Never Eat These Thing in Empty Stomach: ಖಾಲಿ ಹೊಟ್ಟೆಯಲ್ಲಿ ನಾವು ತೆಗೆದುಕೊಳ್ಳುವ ಆಹಾರ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಈ ಸಂದರ್ಭದಲ್ಲಿ ತಪ್ಪಾಗಿ ಏನನ್ನಾದರೂ ತಿಂದರೆ ಅದು ಸಮಸ್ಯೆಗಳಿಗೆ ಕಾರಣವಾಗುತ್ತದೆ.

Written by - Ranjitha R K | Last Updated : May 26, 2023, 10:07 AM IST
  • ಹೊಟ್ಟೆ ಖಾಲಿಯಿದ್ದಾಗ ಒಂದು ಸಣ್ಣ ಕೆಲಸ ಮಾಡುವುದು ಕೂಡಾ ಸಾಧ್ಯವಾಗುವುದಿಲ್ಲ
  • ಅಸಿಡಿಟಿ, ಹೊಟ್ಟೆ ನೋವು, ವಾಂತಿ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
  • ಖಾಲಿ ಹೊಟ್ಟೆಯಲ್ಲಿ ಏನನ್ನು ತಿನ್ನುತ್ತೇವೆ ಎನ್ನುವುದು ಬಹಳ ಮುಖ್ಯ.
ಖಾಲಿ ಹೊಟ್ಟೆಯಲ್ಲಿ ಈ ಮೂರು ವಸ್ತುಗಳನ್ನು ಸೇವಿಸಿದರೆ ವಿಷದಂತೆ ಕಾಡುವುದು ಆರೋಗ್ಯವನ್ನು  title=

Never Eat These Thing in Empty Stomach : ಹೊಟ್ಟೆ ಖಾಲಿಯಿದ್ದಾಗ ಒಂದು ಸಣ್ಣ ಕೆಲಸ ಮಾಡುವುದು ಕೂಡಾ ಸಾಧ್ಯವಾಗುವುದಿಲ್ಲ. ಸುಸ್ತು ನಮ್ಮನ್ನು ಕಾಡುತ್ತದೆ. ದೀರ್ಘಕಾಲ ಹಸಿದಿದ್ದರೆ, ಅಸಿಡಿಟಿ, ಹೊಟ್ಟೆ ನೋವು, ವಾಂತಿ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ರಾತ್ರಿ ಭೋಜನ ಮುಗಿಸಿ ಮಲಗಿದರೆ ಬೆಳಿಗ್ಗೆ ಎದ್ದಾಗ ಹೊಟ್ಟೆ ಖಾಲಿಯಾಗುರುತ್ತದೆ. ಸುಮಾರು  10 ರಿಂದ 12 ಗಂಟೆಗಳ ಕಾಲ ಏನನ್ನೂ ತಿಂದಿರುವುದಿಲ್ಲ. ಈ ಸಂದರ್ಭದಲ್ಲಿ ನಾವು ಏನನ್ನು ತಿನ್ನುತ್ತೇವೆ ಎನ್ನುವುದು ಬಹಳ ಮುಖ್ಯ. ಯಾಕೆಂದರೆ ಖಾಲಿ ಹೊಟ್ಟೆಯಲ್ಲಿ ನಾವು ತೆಗೆದುಕೊಳ್ಳುವ ಆಹಾರ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಈ ಸಂದರ್ಭದಲ್ಲಿ ತಪ್ಪಾಗಿ ಏನನ್ನಾದರೂ ತಿಂದರೆ ಅದು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಖ್ಯಾತ ಆಹಾರ ತಜ್ಞ ಡಾ. ಆಯುಷಿ ಯಾದವ್ ಅವರು ಖಾಲಿ ಹೊಟ್ಟೆಯಲ್ಲಿ ಯಾವ ವಸ್ತುಗಳನ್ನು ಸೇವಿಸಬಾರದು  ಎನ್ನುವುದನ್ನು ವಿವರವಾಗಿ ವಿವರಿಸಿದ್ದಾರೆ. 

ಖಾಲಿ ಹೊಟ್ಟೆಯಲ್ಲಿ ಈ ವಸ್ತುಗಳನ್ನು ಸೇವಿಸಬೇಡಿ :
ಆಲ್ಕೋಹಾಲ್ :
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎನ್ನುವುದನ್ನು ದಿನನಿತ್ಯ ಹೇಳುವುದನ್ನು ಕೇಳುತ್ತಿರುತ್ತೇವೆ. ಆದರೂ ಮದ್ಯ ಪ್ರಿಯರು ಮಾತ್ರ ಇದನ್ನೂ ಕಿವಿಗೆ ಹಾಕಿಕೊಳ್ಳುವುದಿಲ್ಲ. ಅವರ ಬಳಿ ಅವರದ್ದೇ ಆದ ಸಮಜಾಯಿಷಿ ಇರುತ್ತದೆ. ಮದ್ಯ ಒಂದು ಕ್ಷಣಕ್ಕೆ ಕಿಕ್ ನೀಡಬಹುದು. ಆದರೆ ಇದು ಉಂಟು ಮಾಡುವ ಸಮಸ್ಯೆಗಳ ಪಟ್ಟಿ ದೊಡ್ಡದಿದೆ. ಅದರ ಸೇವನೆಯು ಯಕೃತ್ತು ಹಾನಿ ಮತ್ತು ಹೃದಯಾಘಾತದ ಅಪಾಯವನ್ನು ಸೃಷ್ಟಿಸುತ್ತದೆ. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಮದ್ಯವನ್ನು  ಕುಡಿಯುವುದು ಇನ್ನೂ ಹೆಚ್ಚು ಹಾನಿಕಾರಕವಾಗಿರುತ್ತದೆ. ಏನನ್ನೂ ತಿನ್ನದೆ ಆಲ್ಕೋಹಾಲ್ ಸೇವಿಸಿದರೆ, ಅದು ನೇರವಾಗಿ ನಿಮ್ಮ  ಬ್ಲಡ್ ಸ್ಟ್ರೀಮ್ ಅನ್ನು ತಲುಪುತ್ತದೆ. ಇದರಿಂದಾಗಿ ಪಲ್ಸ್ ರೇಟ್ ಕಡಿಮೆಯಾಗಬಹುದು. ರಕ್ತದೊತ್ತಡವೂ ಹೆಚ್ಚಾಗುವ ಅಪಾಯವೂ  ಇರುತ್ತದೆ. 

ಇದನ್ನೂ ಓದಿ : Bottle Gourd Benefits: ಸೋರೆಕಾಯಿ ಕಂಡರೆ ಸಿಡಿಮಿಡಿ ಮಾಡುವವರು ಈ ಲೇಖನ ಓದಿ...

ಚೂಯಿಂಗ್ ಗಮ್ :
ಮಕ್ಕಳು ಮತ್ತು ಯುವಕರು ಚೂಯಿಂಗ್ ಗಮ್ ಅನ್ನು ತುಂಬಾ ಇಷ್ಟಪಡುತ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನುವುದು ಅಂದರೆ ತೊಂದರೆಗೆ ಆಹ್ವಾನ ನೀಡಿದಂತೆ. ನೈಸರ್ಗಿಕ ಪ್ರಕ್ರಿಯೆಯ ಪ್ರಕಾರ, ನಾವು ಯಾವುದೇ ವಸ್ತುವನ್ನು ಅಗಿಯಲು ಪ್ರಾರಂಭಿಸಿದಾಗ,  ಹೊಟ್ಟೆಯಲ್ಲಿ ಡೈಜೆಸ್ಟಿವ್ ಆಸಿಡ್ ಬಿಡುಗಡೆಯಾಗಲು ಪ್ರಾರಂಭಿಸುತ್ತವೆ. ಖಾಲಿ ಹೊಟ್ಟೆಯಲ್ಲಿ ಬಿಡುಗಡೆಯಾಗುವ ಈ ಡೈಜೆಸ್ಟಿವ್ ಆಸಿಡ್  ಅಲ್ಸರ್ ಅಥವಾ ಆಸಿಡಿಟಿ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಖಾಲಿ ಹೊಟ್ಟೆಯಲ್ಲಿ ಯಾವತ್ತೂ ಚೂಯಿಂಗ್ ಗಮ್ ಅಗಿಯಬಾರದು.  ಆಹಾರ ಸೇವಿಸಿದ ನಂತರವೇ ಚೂಯಿಂಗ್ ಗಮ್  ತಿನ್ನುವುದು ಒಳಿತು. 

ಕಾಫಿ :
ಕೆಲವರಿಗೆ ಫ್ರೆಶ್  ಫೀಲ್ ಆಗಬೇಕಾದರೆ ಒಂದು ಲೋಟ ಕಾಫಿ ಹೀರಬೇಕು. ಬೇಲಿಗೆ ಎದ್ದ ಕೂಡಲೇ ಕೆಲಸ ಆರಂಭಿಸುವ ಮೊದಲು ಒಂದು ಲೋಟ ಕಾಫಿ ಕುಡಿದರೇನೆ ಕೆಲವರಿಗೆ ಕೆಲಸ ಮಾಡಲು ಜೋಶ್  ಬರುವುದು. ಆದರೆ ಫ್ರೆಶ್ ನೆಸ್ ಗಾಗಿ, ಜೋಶ್ ಗಾಗಿ, ಉಲ್ಲಾಸಕ್ಕಾಗಿ ಯಾವುದೇ ಕಾನ ಇರಲಿ ಬೆಳಗ್ಗೆ ಖಾಲಿ ಹೊಟ್ಟೆಗೆ ಕಾಫಿ ಕುಡಿಯುವ ಅಭ್ಯಾಸ ವಿದ್ದರೆ ಅದನ್ನು ಇಂದೇ ಬಿಟ್ಟು ಬಿಡಿ. ಈ ಪಾನೀಯದಲ್ಲಿರುವ ಅಂಶಗಳು ಹೊಟ್ಟೆಯಲ್ಲಿ  ಹೈಡ್ರೋಕ್ಲೋರಿಕ್ ಆಮ್ಲವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.  ಇದರಿಂದಾಗಿ ಹೊಟ್ಟೆ ಉರಿ, ಎದೆ ಉರಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. 

ಇದನ್ನೂ ಓದಿ : Brinjal For Health : ಬದನೆಕಾಯಿ ಎಂದರೆ ಮೂಗು ಮುರಿಯುವವರು ಒಮ್ಮೆ ಈ ಲೇಖನ ಓದಿ....

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News