Benefits of betel leaf : ನಿಮಗೆ ಗೊತ್ತಾ..? ವೀಳ್ಯದೆಲೆಯ ನಾಲ್ಕು ಮಹತ್ವದ ಆರೋಗ್ಯಕಾರಿ ಗುಣ

ವೀಳ್ಯದೆಲೆಯ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಪಾನ್ ಪ್ರಿಯರಿಗೆ ವೀಳ್ಯದೆಲೆ ತುಂಬಾ ಇಷ್ಟ. ಹಿಂದೂ ಧರ್ಮದಲ್ಲಿ ಪೂಜೆಗೂ ವೀಳ್ಯದೆಲೆ ಬೇಕು. ಒಳ್ಳೆ ಕೆಲಸಕ್ಕೆ ವೀಳ್ಯ ಬೇಕೇ ಬೇಕು. ನಿಮಗೆ ಗೊತ್ತಾ. ವೀಳ್ಯದೆಲೆ ಆರೋಗ್ಯಕ್ಕೂ ಬಹಳ ಒಳ್ಳೆಯದು. 

Written by - Ranjitha R K | Last Updated : Jun 16, 2021, 11:49 AM IST
  • ಪಾನ್ ಅಥವಾ ವೀಳ್ಯದೆಲೆಯ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ
  • ವೀಳ್ಯ ಪೂಜೆಗೂ ಬೇಕು. ಆರೋಗ್ಯಕ್ಕೂ ಒಳ್ಳೆಯದು
  • ವೀಳ್ಯದೆಲೆ ತಿಂದರೆ ಆರೋಗ್ಯಕ್ಕಾಗುವ ಲಾಭ ಏನು ನೋಡೋಣ
Benefits of betel leaf : ನಿಮಗೆ ಗೊತ್ತಾ..? ವೀಳ್ಯದೆಲೆಯ ನಾಲ್ಕು ಮಹತ್ವದ ಆರೋಗ್ಯಕಾರಿ ಗುಣ title=
ವೀಳ್ಯದೆಲೆ ತಿಂದರೆ ಆರೋಗ್ಯಕ್ಕಾಗುವ ಲಾಭ (file photo zee news)

ಬೆಂಗಳೂರು :  ವೀಳ್ಯದೆಲೆಯ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಪಾನ್ ಪ್ರಿಯರಿಗೆ ವೀಳ್ಯದೆಲೆ (betel leaf) ತುಂಬಾ ಇಷ್ಟ. ಹಿಂದೂ ಧರ್ಮದಲ್ಲಿ ಪೂಜೆಗೂ ವೀಳ್ಯದೆಲೆ ಬೇಕು. ಒಳ್ಳೆ ಕೆಲಸಕ್ಕೆ ವೀಳ್ಯ ಬೇಕೇ ಬೇಕು. ನಿಮಗೆ ಗೊತ್ತಾ. ವೀಳ್ಯದೆಲೆ ಆರೋಗ್ಯಕ್ಕೂ ಬಹಳ (Health benefits of betel) ಒಳ್ಳೆಯದು.  ವೀಳ್ಯದಲ್ಲಿ ಪ್ರೊಟೀನ್, ಮಿನರಲ್, ಫೈಬರ್, ವಿಟಮಿನ್ ಸಿ, ವಿಟಮಿನ್ ಎ, ಪೊಟ್ಯಾಶಿಯಂ ಮತ್ತು ಅಯೋಡಿನ್ ಮೊದಲಾದ ಪೋಷಕಾಂಶಗಳು ಬೇಕಾದಷ್ಟಿರುತ್ತದೆ.  ಇವು ದೇಹವನ್ನು ಹಲವು ರೋಗಗಳಿಂದ ರಕ್ಷಿಸುತ್ತದೆ. ಇದರಲ್ಲಿ ಆಂಟಿಆಕ್ಸಿಡೆಂಟ್, ಅಂಟಿ ಡಯಾಬಿಟಿಕ್, ಆಂಟಿ ಇನ್ ಫ್ಲೇಮೇಟರಿ ಗುಣಗಳಿರುತ್ತವೆ.  ವೀಳ್ಯದೆಲೆ ಅತ್ಯಂತ ಒಳ್ಳೆಯ ಡಿಟಾಕ್ಸಿಫೈಯರ್. ಅಂದರೆ ದೇಹದಲ್ಲಿರುವ ವಿಷ ಹೊರಗೆ ಹಾಕಿಸುವ ಆಹಾರ. ವೀಳ್ಯದೆಲೆ ತಿಂದರೆ ಆರೋಗ್ಯದ ಮೇಲಾಗುವ ಲಾಭದ ಪಟ್ಟಿ ಮಾಡೋಣ.

ವೀಳ್ಯ ತಿಂದರೆ ಆಗುವ ಆರೋಗ್ಯ ಲಾಭ:
1. ಮಲಬದ್ದತೆ:
ಮಲಬದ್ದತೆಯಿಂದ (Constipation) ಸಮಸ್ಯೆ ಎದುರಿಸುತಿದ್ದರೆ ವೀಳ್ಯದೆಲೆ ತಿನ್ನಬೇಕು. ಇದರಿಂದ ನೈಸರ್ಗಿಕವಾಗಿ ಜೀರ್ಣಕ್ರಿಯೆ (Good for digestion) ವ್ಯವಸ್ಥಿತವಾಗಿ ನಡೆಯುತ್ತದೆ.  ಫ್ರೀ ರ್ಯಾಡಿಕಲ್ ಗಳಿಂದ ಆಗುವ ಸಮಸ್ಯೆಗಳನ್ನು ವೀಳೈದೆಲೆ ನಿವಾರಿಸುತ್ತದೆ.  

ಇದನ್ನೂ ಓದಿ : Men Health : ವಿವಾಹಿತ ಪುರುಷರಿಗೆ ಅಗತ್ಯವಾದ 7 ಸ್ಥಳೀಯ ಗಿಡಮೂಲಿಕೆಗಳು : ಇವುಗಳನ್ನು ಸೇವಿಸುವುದರಿಂದ ಅದ್ಭುತ ಲಾಭ!

2.  ತಲೆನೋವು ಕಡಿಮೆ ಮಾಡುತ್ತದೆ.
ನಿಮಗೆ ತಲೆ ನೋವು (Head ache)ಸದಾ ಬಾಧಿಸುತ್ತಿದ್ದರೆ, ಅದಕ್ಕೆ ವೀಳೈದೆಲೆ ರಾಮಬಾಣ. ವೀಳ್ಯದಲ್ಲಿ ಆನಾಲ್ಜೆಸಿಕ್ ಗುಣವಿದೆ.  ಇದು ತಲೆನೋವು ನಿವಾರಿಸಲು ನೆರವಾಗುತ್ತದೆ.

3. ಬಾಯಿಯ ದುರ್ವಾಸನೆ
ವೀಳ್ಯ ಮೌತ್ ಫ್ರೆಶ್ನರ್ (Mouth freshner) ರೂಪದಲ್ಲಿಯೂ ಕಾರ್ಯನಿರ್ವಹಿಸುತ್ತದೆ.  ಬಾಯಿಯಲ್ಲಿ ಬ್ಯಾಕ್ಟೀರಿಯ ಕಾರಣದಿಂದಾಗಿ ಉಂಟಾಗುವ ದುರ್ವಾಸನೆಯನ್ನು ವೀಳ್ಯದೆಲೆ ನಿವಾರಿಸುತ್ತದೆ.

ಇದನ್ನೂ ಓದಿ : ಕೆಲವೊಂದು ತರಕಾರಿಗಳನ್ನು ಹಸಿ ಹಸಿ ತಿನ್ನಬೇಕು, ಯಾಕೆ ಗೊತ್ತಾ..?

4. ನೋವು ನಿವಾರಕ
ದೇಹದ ನೋವು ನಿವಾರಿಸಿ ರಿಲ್ಯಾಕ್ಸ್ ಮೂಡಿಗೆ ತರುತ್ತದೆ ವೀಳ್ಯ. ಅದರಲ್ಲಿರುವ ಅಂಟಿ ಇನ್ ಫ್ಲಮೇಟರಿ ಗುಣ ದೇಹಾಯಾಸ ಕಡಿಮೆ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News