Cow Milk or Buffalo Milk: ಹಸುವಿನ ಹಾಲು ಅಥವಾ ಎಮ್ಮೆಯ ಹಾಲು! ಯಾವುದು ಉತ್ತಮ?

Cow Milk or Buffalo Milk: ಸಾಮಾನ್ಯವಾಗಿ ಜನರು ಹಸುವಿನ ಹಾಲು ಮತ್ತು ಎಮ್ಮೆಯ ಹಾಲು ಇವೆರಡರಲ್ಲಿ ಉತ್ತಮ ಯಾವುದು ಎಂದು ಗೊಂದಲಕ್ಕೊಳಗಾಗುತ್ತಾರೆ. ಹಸುವಿನ ಹಾಲು ಸಾಮಾನ್ಯವಾಗಿ ನೀರಾಗಿರುತ್ತದೆ ಮತ್ತು ಎಮ್ಮೆ ಹಾಲು ಗಟ್ಟಿಯಾಗಿರುತ್ತದೆ, ಆದರೆ ಹಸುವಿನ ಹಾಲು ಮತ್ತು ಎಮ್ಮೆಯ ಹಾಲಿನ ನಡುವಿನ ವ್ಯತ್ಯಾಸವೇನು ಎಂದು ನಿಮಗೆ ತಿಳಿದಿದೆಯೇ? 

Written by - Chetana Devarmani | Last Updated : Nov 26, 2022, 05:19 PM IST
  • ಹಸುವಿನ ಹಾಲು ಅಥವಾ ಎಮ್ಮೆಯ ಹಾಲು!
  • ಆರೋಗ್ಯಕ್ಕೆ ಯಾವುದು ಉತ್ತಮ?
  • ಹಾಲು ಮತ್ತು ಎಮ್ಮೆಯ ಹಾಲಿನ ನಡುವಿನ ವ್ಯತ್ಯಾಸವೇನು?
Cow Milk or Buffalo Milk: ಹಸುವಿನ ಹಾಲು ಅಥವಾ ಎಮ್ಮೆಯ ಹಾಲು! ಯಾವುದು ಉತ್ತಮ? title=
ಹಸುವಿನ ಹಾಲು ಅಥವಾ ಎಮ್ಮೆಯ ಹಾಲು

Cow Milk or Buffalo Milk: ಹಾಲು ಒಂದು ಪರಿಪೂರ್ಣ ಆಹಾರ. ಹಾಲು ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹಾಲು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ. ಇದು ನಿಮ್ಮ ಹಲ್ಲುಗಳು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಅದಕ್ಕಾಗಿಯೇ ವೈದ್ಯರು ದೈನಂದಿನ ಆಹಾರದಲ್ಲಿ ಹಾಲನ್ನು ಸೇರಿಸಲು ಶಿಫಾರಸು ಮಾಡುತ್ತಾರೆ, ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳಿಗೆ ಹಾಲು ಕುಡಿಯುವುದು ಅವಶ್ಯಕ.  

ಹಸುವಿನ ಹಾಲು ಹೆಚ್ಚು ಪೌಷ್ಟಿಕವಾಗಿದೆಯೇ ಅಥವಾ ಎಮ್ಮೆಯ ಹಾಲು ಪೌಷ್ಟಿಕವಾಗಿದೆಯೇ ಎಂಬ ಗೊಂದಲ ಅನೇಕ ಜನರಿಗಿದೆ. ಹಸುವಿನ ಹಾಲನ್ನು ಕುಡಿಯಬೇಕೇ ಅಥವಾ ಎಮ್ಮೆಯ ಹಾಲನ್ನು ಕುಡಿಯಬೇಕೇ ಎಂಬ ಪ್ರಶ್ನೆ ಬಹುತೇಕ ಜನರಿಗೆ ಕಾಡುತ್ತದೆ. ಯಾವುದೇ ರೀತಿಯ ಹಾಲು ಆರೋಗ್ಯಕ್ಕರ ಪ್ರಯೋಜನಕಾರಿ, ಆದರೆ ನಿಮಗೂ ಗೊಂದಲವಿದ್ದರೆ, ಹಸು ಮತ್ತು ಎಮ್ಮೆ ಹಾಲಿನ ನಡುವಿನ ವ್ಯತ್ಯಾಸವೇನು ಮತ್ತು ಯಾವ ಹಾಲನ್ನು ಕುಡಿಯುವುದರಿಂದ ಏನು ಪ್ರಯೋಜನ ಎಂದು ತಿಳಿಯಿರಿ.

ಇದನ್ನೂ ಓದಿ :   ರಾತ್ರಿ ಹೊತ್ತು ಈ ಲಕ್ಷಣಗಳು ಕಂಡುಬಂದರೆ ಎಚ್ಚರ! ಕಿಡ್ನಿ ವೈಫಲ್ಯದ ಸಂಕೇತವಾಗಿಬಹುದು

ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಹಸುವಿನ ಹಾಲು ಕುಡಿಯಿರಿ. ತೂಕವನ್ನು ಕಳೆದುಕೊಳ್ಳಲು ನೀವು ಹಸುವಿನ ಹಾಲನ್ನು ಕುಡಿಯಬಹುದು, ಏಕೆಂದರೆ ಹಸುವಿನ ಹಾಲು ಎಮ್ಮೆಯ ಹಾಲಿಗಿಂತ ಕಡಿಮೆ ಕೊಬ್ಬನ್ನು ಹೊಂದಿರುತ್ತದೆ. ಹಸುವಿನ ಹಾಲಿನಲ್ಲಿ 3 ರಿಂದ 4 ಪ್ರತಿಶತದಷ್ಟು ಕೊಬ್ಬನ್ನು ಹೊಂದಿರುತ್ತದೆ, ಆದರೆ ಎಮ್ಮೆಯ ಹಾಲಿನಲ್ಲಿ ಅದೇ ಪ್ರಮಾಣದಲ್ಲಿ 7 ರಿಂದ 8 ಪ್ರತಿಶತದಷ್ಟು ಕೊಬ್ಬು ಇರುತ್ತದೆ.

ಹಸುವಿನ ಹಾಲು ತೆಳುವಾಗಿದ್ದರೆ, ಎಮ್ಮೆಯ ಹಾಲು ಗಟ್ಟಿಯಾಗಿರುತ್ತದೆ. ಹಸುವಿನ ಹಾಲು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಎಮ್ಮೆಯ ಹಾಲು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ನೀವು ತೂಕ ಇಳಿಸುವ ಆಹಾರಕ್ರಮದಲ್ಲಿದ್ದರೆ ಮತ್ತು ಹೆಚ್ಚುವರಿ ಕೊಬ್ಬನ್ನು ತಪ್ಪಿಸಲು ಬಯಸಿದರೆ, ಹಸುವಿನ ಹಾಲನ್ನು ಮಾತ್ರ ಕುಡಿಯಿರಿ.

ಹಸುವಿನ ಹಾಲು ಕುಡಿಯುವುದರಿಂದ ದೇಹದಲ್ಲಿನ ನೀರಿನ ಕೊರತೆ ಪೂರ್ಣವಾಗುತ್ತದೆ. ಕಡಿಮೆ ನೀರು ಕುಡಿದರೆ ಹಸುವಿನ ಹಾಲು ಕುಡಿಯಿರಿ. ಹಸುವಿನ ಹಾಲಿನಲ್ಲಿ ಶೇಕಡಾ 90ರಷ್ಟು ನೀರು ಇರುತ್ತದೆ. ಅದಕ್ಕಾಗಿಯೇ ಇದು ದೇಹವನ್ನು ಹೈಡ್ರೇಟ್ ಆಗಿಡುತ್ತದೆ.

ಇದನ್ನೂ ಓದಿ :  Weight Loss Tips: ತೂಕ ಇಳಿಕೆಗೆ ಬಾದಾಮಿಯನ್ನು ಈ ರೀತಿ ತಿನ್ನಿರಿ!

ಎಮ್ಮೆ ಹಾಲಿನಲ್ಲಿ ಹಸುವಿನ ಹಾಲಿಗಿಂತ 10 ರಿಂದ 11 ಪ್ರತಿಶತ ಹೆಚ್ಚು ಪ್ರೋಟೀನ್ ಇರುತ್ತದೆ. ಪ್ರೋಟೀನ್ ಕಾರಣ, ಇದು ಶಾಖ ನಿರೋಧಕವಾಗಿದೆ. ವಯಸ್ಸಾದವರು ಮತ್ತು ಚಿಕ್ಕ ಮಕ್ಕಳು ಇದನ್ನು ಕುಡಿಯದಂತೆ ಸೂಚಿಸಲಾಗಿದೆ.

ಎಮ್ಮೆ ಮತ್ತು ಹಸುವಿನ ಹಾಲಿನಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಎಮ್ಮೆಯ ಹಾಲಿನಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿದ್ದು, ಹಸುವಿನ ಹಾಲಿನಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಿರುವುದರಿಂದ ಅಧಿಕ ರಕ್ತದೊತ್ತಡ ಹಾಗೂ ಕಿಡ್ನಿ ರೋಗಿಗಳಿಗೆ ಇದು ಪ್ರಯೋಜನಕಾರಿ.

ಎಮ್ಮೆಯ ಹಾಲಿನಲ್ಲಿ ಹಸುವಿನ ಹಾಲಿಗಿಂತ ಹೆಚ್ಚಿನ ಕ್ಯಾಲೋರಿಗಳಿವೆ. ಎಮ್ಮೆಯ ಹಾಲಿನಲ್ಲಿ ಹೆಚ್ಚು ಪ್ರೋಟೀನ್ ಮತ್ತು ಕೊಬ್ಬು ಇರುತ್ತದೆ. ಅದಕ್ಕಾಗಿಯೇ ಇದು ಹೆಚ್ಚಿನ ಪ್ರಮಾಣದ ಕ್ಯಾಲೊರಿಗಳನ್ನು ಸಹ ಹೊಂದಿದೆ. 1 ಕಪ್ ಎಮ್ಮೆಯ ಹಾಲಿನಲ್ಲಿ 273 ಕ್ಯಾಲೋರಿಗಳಿವೆ. ಮತ್ತೊಂದೆಡೆ, 1 ಕಪ್ ಹಸುವಿನ ಹಾಲು 148 ಕ್ಯಾಲೋರಿಗಳನ್ನು ಹೊಂದಿರುತ್ತದೆ. ನಿದ್ರಾಹೀನತೆಯ ಸಮಸ್ಯೆ ಇದ್ದರೆ ಎಮ್ಮೆಯ ಹಾಲು ಕುಡಿಯಿರಿ, ಈ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುತ್ತದೆ. ಹಸುವಿನ ಹಾಲಿನಲ್ಲಿ ಕಡಿಮೆ ಕೊಬ್ಬಿನಂಶವಿದೆ, ಆದ್ದರಿಂದ ಅದರ ಹಾಲು ಕುಡಿಯಲು ಸುರಕ್ಷಿತವಾಗಿದೆ.

(Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News