Mucormycosis: Covid-19ನಿಂದ ಚೇತರಿಸಿಕೊಂಡ ರೋಗಿಗಳು ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ, ಇಬ್ಬರ ಸಾವು

Mucormycosis: ಕರೋನಾದಿಂದ Covid-19) ಚೇತರಿಸಿಕೊಳ್ಳುವ ರೋಗಿಗಳು ಈಗ ಹೊಸ ಮಾರಕ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಈ ರೋಗವು ಜನರ ಕಣ್ಣಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಮ್ಯೂಕರ್ಮೈಕೊಸಿಸ್ (Mucormycosis) ಹೆಸರಿನ ಈ ರೋಗದಿಂದ ರೋಗಿಗಳ ಸಾವು ಸಂಭವಿಸುವ ಸಾಧ್ಯತೆ ಶೇ.50ರಷ್ಟಿರುತ್ತದೆ.

Last Updated : Dec 18, 2020, 02:16 PM IST
  • ಕೊರೊನಾ ರೋಗದಿಂದ ಚೆತರಿಸಿಕೊಂದವರಲ್ಲಿ ಫಂಗಲ್ ಇನ್ಫೆಕ್ಷನ್ ಕಾಣಿಸಿಕೊಳ್ಳುತ್ತಿದೆ.
  • ಮ್ಯೂಕರ್ಮೈಕೊಸಿಸ್ ಹೆಸರಿನ ಈ ಕಾಯಿಲೆ ದೃಷ್ಟಿಯ ಮೇಲೆ ನೇರ ಪರಿಣಾಮ ಬೀರುತ್ತದೆ.
  • ಈ ಕಾಯಿಲೆಯಿಂದ ಇದುವರೆಗೆ 5 ರೋಗಿಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
Mucormycosis: Covid-19ನಿಂದ ಚೇತರಿಸಿಕೊಂಡ ರೋಗಿಗಳು ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ, ಇಬ್ಬರ ಸಾವು title=
Mucormycosis

ನವದೆಹಲಿ: Mucormycosis: ಕೊರೊನಾದಿಂದ (Covid-19) ಗುಣಮುಖರಾಗಿರುವ ರೋಗಿಗಳಲ್ಲಿ ಹಲವು ಬಾರಿ ಕೆಮ್ಮು, ಜ್ವರ, ನೆಗಡಿಗಳಂತಹ ಲಕ್ಷಣಗಳು ಪದೇ ಪದೇ ಕಾಣಿಸಿಕೊಳ್ಳುತ್ತವೆ. ಆದರೆ, ಇದರಿಂದ ಕೆಲ ಸಮಯದ ನಂತರ ಜನರು ಚೇತರಿಸಿಕೊಳ್ಳುತ್ತಾರೆ. ಆದರೆ, ಇದೀಗ ಭಾರತದಲ್ಲಿ ಕಾಣಿಸಿಕೊಂಡಿರುವ ಕೆಲ ಪ್ರಕರಣಗಳು ಬೀಚ್ಚಿಬೀಳಿಸಿವೆ. ಈ ಪ್ರಕರಣಗಳಲ್ಲಿ ಕೊರೊನಾದಿಂದ ಗುಣಮುಖರಾಗಿರುವ ರೋಗಿಗಳು ಹೊಸ ಮಾರಕ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಈ ರೋಗದಲ್ಲಿ ರೋಗಿಗಳು ಸಾವನ್ನಪ್ಪುವ ಸಾಧ್ಯತೆ ಶೇ.50 ರಷ್ಟಿರುತ್ತದೆ ಎನ್ನಲಾಗಿದೆ. ಈ ಹೊಸ ರೋಗಕ್ಕೆ ಮ್ಯೂಕರ್ಮೈಕೊಸಿಸ್ (Mucormycosis) ಎಂದು ಹೆಸರಿಸಲಾಗಿದೆ.

ಏನಿದು ಮ್ಯೂಕರ್ಮೈಕೊಸಿಸ್ (Mucormycosis)?
ಮ್ಯೂಕರ್ಮೈಕೊಸಿಸ್ (Mucormycosis) ಒಂದು ಫಂಗಲ್ ಇನ್ಫೆಕ್ಷನ್ ಕಾಯಿಲೆಯಾಗಿದೆ. ಇದರಿಂದ ರೋಗಿಗಳು ಬದುಕುಳಿಯುವ ಸಾಧ್ಯತೆ ಕೇವಲ ಶೇ.50 ರಷ್ಟು ಇರುತ್ತದೆ. ಕೊರೊನಾ ರೋಗದಿಂದ ಚೇತರಿಸಿಕೊಂಡ ಜನರಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿದೆ. ಇದರಲ್ಲಿ ಜನರ ಕಣ್ಣಿನ ಗುಡ್ಡೆಗಳು ಹೊರಬರುತ್ತವೆ.  ಒಂದು ವೇಳೆ ರೋಗಿ ಈ ರೋಗದಿಂದ ಗುಣಮುಖನಾದರೂ ಕೂಡ ಆತ ದೃಷ್ಟಿ ಕಳೆದುಕೊಳ್ಳುತ್ತಾನೆ ಎನ್ನಲಾಗಿದೆ

5 ರಲ್ಲಿ ಇಬ್ಬರು ರೋಗಿಗಳು ಸಾವು
ಆಂಗ್ಲ ವೃತ್ತಪತ್ರಿಕೆ 'ದಿ ಟೈಮ್ಸ್ ಆಫ್ ಇಂಡಿಯಾ'ದಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಅಹ್ಮದಾಬಾದ್ ರೆಟಿನಾ ಅಂಡ್ ಆಕ್ಯುಲರ್ ಟ್ರಾಮಾ ಸರ್ಜನ್ ಡಾ.ಪಾರ್ಥ್ ರಾಣಾ ಈ ರೋಗದಿಂದ ಬಳಲುತ್ತಿರುವವರ ಕುರಿತು ಮಾಹಿತಿ ನೀಡಿದ್ದಾರೆ. ರೋಗದ ಕುರಿತು ಮಾಹಿತಿ ನೀಡಿರುವ ಅವರು, ಈ ರೋಗದಿಂದ ಬಳಲುತ್ತಿದ್ದ ಐವರು ರೋಗಿಗಳ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದಿದ್ದಾರೆ. ಬದುಕುಳಿದ ಇಬ್ಬರು ತಮ್ಮ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ಈ ಎಲ್ಲಾ ರೋಗಿಗಳು ಕೊವಿಡ್ 19 (Covid-19) ರೋಗದಿಂದ ಚೇತರಿಸಿಕೊಂಡಿದವರಾಗಿದ್ದರು.

ಇದನ್ನು ಓದಿ- African Malaria Genus Plasmodium Ovale: ಕೇರಳದಲ್ಲಿ Plasmodium Ovale ವೈರಸ್ ಪತ್ತೆ, ಸುಡಾನ್ ನಿಂದ ಮರಳಿದ ಸೈನಿಕನಿಗೆ ಸೋಂಕು

ಡಯಾಬಿಟಿಸ್ ರೋಗಿಗಳಿಗೆ ಹೆಚ್ಚು ಅಪಾಯ
ಈ ರೋಗಕ್ಕೆ ತುತ್ತಾದ ರೋಗಿಗಳು ಸಕ್ಕರೆ ಕಾಯಿಲೆಗೆ ಗುರಿಯಾದ ರೋಗಿಗಳಾಗಿದ್ದರು ಅಥವಾ ಯಾವುದಾದರೊಂದು ಚಟಕ್ಕೆ ಬಲಿಯಾಗಿದ್ದರು. ಇವರಲ್ಲಿ ರೋಗ ಪ್ರತಿರೋಧಕ ಶಕ್ತಿ ತುಂಬಾ ಕಡಿಮೆಯಾಗಿತ್ತು. ಕೊರೊನಾ ಕಾಲಕ್ಕೂ ಮೊದಲು ಮ್ಯೂಕರ್ಮೈಕೊಸಿಸ್ (Mucormycosis)ಕಾಯಿಲೆ ಹರಡಲು 15 ರಿಂದ 30 ದಿನಗಳ ಕಾಲಾವಕಾಶ ಬೇಕಾಗುತ್ತಿತ್ತು. ಆದರೆ ಈ ಎಲ್ಲಾ ರೋಗಿಗಳಲ್ಲಿ ಈ ರೋಗ ಕೇವಲ 2-3 ದಿನಗಳಲ್ಲಿ ಗಂಭೀರ ಸ್ವರೂಪ ಪಡೆದುಕೊಂಡಿದೆ ಎಂದು ಡಾ.ರಾಣಾ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ-No Alcohol after Covid Vaccine: ಕೊರೊನಾ ಲಸಿಕೆ ಹಾಕಿಸಿಕೊಂಡ 2 ತಿಂಗಳು ಮದ್ಯ ಸೇವಿಸಬಾರದೇ? ಇಲ್ಲಿದೆ Experts Advise

ಕಳೆದ ಮೂರು ತಿಂಗಳಿನಲ್ಲಿ 19 ಪ್ರಕರಣಗಳು
ಮ್ಯೂಕರ್ಮೈಕೊಸಿಸ್ (Mucormycosis) ಕಾಯಿಲೆಯ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಅಧ್ಯಯನ ನಡೆಸುತ್ತಿರುವ ಡಾ. ಅತುಲ್ ಪಟೇಲ್ ಹೇಳುವ ಪ್ರಕಾರ, ಕೊರೊನಾ ರೋಗಿಗಳಲ್ಲಿ ಈ ರೋಗ ವ್ಯಾಪಕವಾಗಿ ಹರಡುತ್ತಿದೆ ಎಂದಿದ್ದಾರೆ. ಕಳೆದ ಮೂರು ತಿಂಗಳಿನಲ್ಲಿ ಮ್ಯೂಕರ್ಮೈಕೊಸಿಸ್ (Mucormycosis)ನ ಒಟ್ಟು 19 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಅವರು ಹೇಳಿದ್ದಾರೆ. ಕೊರೊನಾ ರೋಗದಿಂದ ರೋಗ ಪ್ರತಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಡಯಾಬಿಟಿಸ್ ಹಾಗೂ ಚಟಕ್ಕೆ ಬಲಿಯಾದ ವ್ಯಕ್ತಿಗಳಲ್ಲಿಯೂ ಈ ಇನ್ಫೆಕ್ಷನ್ ಹರಡುವ ಸಾಧ್ಯತೆ ಹೆಚ್ಚು ಎಂದು ಡಾ.ಪಟೇಲ್ ಹೇಳಿದ್ದಾರೆ.

Trending News