CoronaVirus: ನಾವು 3ನೇ ಹಂತ ತಲುಪುವ ಮೊದಲು, ಮನೆಯಲ್ಲಿ ಈ 14 ಮುನ್ನೆಚ್ಚರಿಕೆ ಕೈಗೊಳ್ಳಿ

ನಾವು ಶೀಘ್ರದಲ್ಲೇ ಕರೋನಾ ವೈರಸ್ ಹಂತ III ಅನ್ನು ಪ್ರವೇಶಿಸಲಿದ್ದೇವೆ.

Written by - Yashaswini V | Last Updated : Mar 20, 2020, 09:46 AM IST
CoronaVirus: ನಾವು 3ನೇ ಹಂತ ತಲುಪುವ ಮೊದಲು, ಮನೆಯಲ್ಲಿ ಈ 14 ಮುನ್ನೆಚ್ಚರಿಕೆ ಕೈಗೊಳ್ಳಿ title=

ನವದೆಹಲಿ: ನಾವು ಶೀಘ್ರದಲ್ಲೇ ಮೂರನೇ ಹಂತದ ಕೊರೊನಾವೈರಸ್‌ನ(Coronavirus) ಗೆ ಪ್ರವೇಶಿಸಲಿರುವ ಕಾರಣ ನಾವೆಲ್ಲರೂ ಜಾಗರೂಕರಾಗಿರುವುದು ಬಹಳ ಮುಖ್ಯ. ಕರೋನಾ ವೈರಸ್ ತಪ್ಪಿಸಲು ಮನೆಯಲ್ಲಿ ಕೆಲವು ಮುನ್ನೆಚ್ಚರಿಕೆಗಳು ಅವಶ್ಯಕ -

ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ-

1. ಪ್ಯಾಕೆಟ್ ಹಾಲನ್ನು ತಂದ ಬಳಿಕ ಪ್ಯಾಕೆಟ್ ಮತ್ತು ನಿಮ್ಮ ಕೈಗಳನ್ನು ತೊಳೆಯಿರಿ.

2. ನಿಮ್ಮ ಮನೆ ಅಥವಾ ಕಚೇರಿಗೆ ಬರುವ ಸುದ್ದಿಪತ್ರವನ್ನು ರದ್ದುಗೊಳಿಸುವುದನ್ನು ಪರಿಗಣಿಸಿ.

3. ಕೊರಿಯರ್ಗಳಿಗಾಗಿ ಪ್ರತ್ಯೇಕ ಟ್ರೇ ಇರಿಸಿ. ಆದ್ದರಿಂದ ಕೊರಿಯರ್ ಅನ್ನು ತರುವ ವ್ಯಕ್ತಿಯು ಸರಕುಗಳನ್ನು (ಹೊದಿಕೆ ಅಥವಾ ಪ್ಯಾಕೆಟ್) ಟ್ರೇನಲ್ಲಿ ಇಡುತ್ತಾನೆ. ಇದರ ನಂತರ, ಮುಂದಿನ 24 ಗಂಟೆಗಳ ಕಾಲ ಕೊರಿಯರ್ ಅನ್ನು ಸ್ಪರ್ಶಿಸಬೇಡಿ.

4. ನಿಮ್ಮ ಮನೆಕೆಲಸದಾಕೆ ಅಥವಾ ಸೇವಕಿಗೆ ಬಾಗಿಲು ಮುಟ್ಟದಂತೆ ಹೇಳಿ. ಯಾವುದನ್ನೂ ಮುಟ್ಟುವ ಮೊದಲು, ಮನೆಗೆ ಪ್ರವೇಶಿಸುವಾಗ ತಕ್ಷಣ ಕೈ ತೊಳೆಯಲು ಹೇಳಿ. ಯಾವುದೇ ದ್ರವ(ಲಿಕ್ವಿಡ್)ದಿಂದ ಕಾಲಿಂಗ್ ಬೆಲ್ ಸ್ವಿಚ್ ಅನ್ನು ಸಹ ಸ್ವಚ್ಛಗೊಳಿಸಿ.

5. ಸಾಧ್ಯವಾದಷ್ಟು ಆಹಾರವನ್ನು ಆನ್‌ಲೈನ್‌ನಲ್ಲಿ ಆದೇಶಿಸುವ ಅಭ್ಯಾಸವನ್ನು ಬಿಡಿ.

6. ಹಣ್ಣುಗಳು ಮತ್ತು ತರಕಾರಿಗಳನ್ನು ಮಾರುಕಟ್ಟೆಯಿಂದ ತಂದ ನಂತರ ತೊಳೆಯಿರಿ.

7. ರಿಮೋಟ್, ಮೊಬೈಲ್ ಫೋನ್‌ಗಳು ಮತ್ತು ಕೀಬೋರ್ಡ್‌ಗಳು ವೈರಸ್‌ಗಳಿಂದ ಹೆಚ್ಚು ಸೋಂಕಿಗೆ ಒಳಗಾಗಬಹುದು, ಆದ್ದರಿಂದ ಯಾವುದಾದರು ಲಿಕ್ವಿಡ್ ನಿಂದ ಇವುಗಳನ್ನು ಸ್ವಚ್ಛಗೊಳಿಸಿ.

8. ಮನೆಯಲ್ಲಿ ಅಥವಾ ಕಚೇರಿಯಲ್ಲಿರಿ, ಪ್ರತಿ 1 ಗಂಟೆಗೆ ಕೈ ತೊಳೆಯಿರಿ.

9. ಸಾರ್ವಜನಿಕ ಸಾರಿಗೆಯ ಮೂಲಕ ಪ್ರಯಾಣಿಸಬೇಡಿ. ಎಲ್ಲೋ ಹೋಗುವುದು ಬಹಳ ಮುಖ್ಯವಾದರೆ, ಆನ್‌ಲೈನ್ ಟ್ಯಾಕ್ಸಿ ತೆಗೆದುಕೊಂಡು ಅದರಲ್ಲಿ ಪ್ರಯಾಣಿಸಿ.

10. ಈ ಸಮಯದಲ್ಲಿ, ಸೋಂಕಿನ ಸಾಧ್ಯತೆ ಇರುವ ಜಿಮ್, ಈಜುಕೊಳ ಅಥವಾ ವ್ಯಾಯಾಮದ ಯಾವುದೇ ಸ್ಥಳಕ್ಕೆ ಹೋಗಬೇಡಿ.

11. ಕೋಚಿಂಗ್, ಡ್ಯಾನ್ಸ್ ಕ್ಲಾಸ್, ಮ್ಯೂಸಿಕ್ ಕ್ಲಾಸ್ ಮತ್ತು ಶಾಲೆಗೆ ಹೋಗುವುದನ್ನು ರದ್ದುಗೊಳಿಸಿ.

12. ನೀವು ಕಚೇರಿಯಿಂದ ಅಥವಾ ಶಾಪಿಂಗ್‌ನಿಂದ ಮನೆಗೆ ಹಿಂದಿರುಗಿದಾಗಲೆಲ್ಲಾ, ನಿಮ್ಮ ಬಟ್ಟೆಗಳನ್ನು ತೆಗೆದ ನಂತರ ಕೈ ಕಾಲುಗಳನ್ನು ತೊಳೆಯಿರಿ.

13. ಅತ್ಯಂತ ಮುಖ್ಯವಾದ ವಿಷಯವೆಂದರೆ ನಿಮ್ಮ ಮುಖವನ್ನು ಕೈಗಳಿಂದ ಮುಟ್ಟಬಾರದು. ಇದನ್ನು ಮನೆಯಲ್ಲಿರುವ ಪೋಷಕರು ಮತ್ತು ಮಕ್ಕಳಿಗೆ ವಿವರಿಸಿ.

14. ವಯಸ್ಸಾದವರಿಗೆ ವಾಕ್ ಹೋಗುವುದನ್ನು ನಿಲ್ಲಿಸುವಂತೆ ಕ್ರಮ ವಹಿಸಿ.

ಕೊರೊನಾವೈರಸ್‌ನ(Coronavirus) 

Trending News