Home Remedies For LDL Cholesterol: ಕೊಲೆಸ್ಟ್ರಾಲ್ ಒಂದು ರೀತಿಯ ಕೊಬ್ಬು. ಇದು ದೇಹಕ್ಕೆ ಜೀವಕೋಶಗಳು ಮತ್ತು ಹಾರ್ಮೋನುಗಳನ್ನು ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ.ಆದರೆ, ದೇಹದಲ್ಲಿ ಇದರ ಪ್ರಮಾಣ ಹೆಚ್ಚಾದಾಗ ಅನೇಕ ಆರೋಗ್ಯ ಸಮಸ್ಯೆಗಳೂ ಬರಲಾರಂಭಿಸುತ್ತವೆ.ದೇಹದಲ್ಲಿನ ಕೊಲೆಸ್ಟ್ರಾಲ್ ಸುರಕ್ಷಿತ ಮಟ್ಟ ವಯಸ್ಸಿಗೆ ಅನುಗುಣವಾಗಿ ಬದಲಾಗುತ್ತದೆ.
ಕೆಟ್ಟ ಜೀವನಶೈಲಿಯ ಪರಿಣಾಮವಾಗಿಯೇ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ.ಆದರೆ, ಔಷಧಿಗಳನ್ನು ತೆಗೆದುಕೊಳ್ಳುವ ಮೂಲಕ ಅದನ್ನು ನಿಯಂತ್ರಿಸಬಹುದು.ಆದರೆ, ಈ ಔಷಧಿಯನ್ನು ಪ್ರತಿದಿನ ಸೇವಿಸಬೇಕು. ಇದರಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಇರಬಾರದು.ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು.
ಇದನ್ನೂ ಓದಿ : Diabetes: ಮಧುಮೇಹ ರೋಗಿಗಳಿಗೆ ತುಂಬಾ ಅಪಾಯಕಾರಿ ಈ ಹಣ್ಣುಗಳು
ಕರಿಬೇವಿನ ಎಲೆಗಳು :
ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಕರಿಬೇವಿನ ಎಲೆಗಳು ತುಂಬಾ ಪರಿಣಾಮಕಾರಿ ಕೆಲಸ ಮಾಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಇದು ಅವಶ್ಯಕವಾಗಿದೆ.
ಸೇವನೆಯ ವಿಧಾನ:
ಕರಿಬೇವಿನ ಎಲೆಗಳ ಪ್ರಯೋಜನಗಳನ್ನು ಪಡೆಯಲು, ಪ್ರತಿದಿನ 8-10 ಎಲೆಗಳನ್ನು ಅಡುಗೆಯಲ್ಲಿ ಬಳಸಬಹುದು.ಈ ಎಲೆಗಳ ಜ್ಯೂಸ್ ಅನ್ನು ಕೂಡಾ ತಯಾರಿಸಿ ಕುಡಿಯಬಹುದು.
ಕೊತ್ತಂಬರಿ ಸೊಪ್ಪು :
ಪ್ರತಿ ಮನೆಯಲ್ಲೂ ಅಡುಗೆಗೆ ಕೊತ್ತಂಬರಿ ಸೊಪ್ಪನ್ನು ಬಳಸುತ್ತಾರೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯವನ್ನು ಸುಧಾರಿಸಲು ಕೂಡಾ ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯನ್ನು ನಿವಾರಿಸಬಹುದು.
ಸೇವಿಸುವ ವಿಧಾನ:
ಕೊತ್ತಂಬರಿ ಸೊಪ್ಪನ್ನು ಸಲಾಡ್‌ಗೆ ಸೇರಿಸಿ ಅಥವಾ ಚಟ್ನಿ ಮಾಡಿ ತಿನ್ನಬಹುದು.
ಇದನ್ನೂ ಓದಿ : Health Tips: ಯಾವ ಸಮಯದಲ್ಲಿ ಕಾಫಿ ಕುಡಿಯುವುದು ಆರೋಗ್ಯಕ್ಕೆ ಉತ್ತಮ..?
ಜಾಮೂನ್ ಎಲೆಗಳು:
ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಬೆಸ್ಟ್ ಮನೆ ಮದ್ದು ಎಂದರೆ ಅದು ಜಾಮೂನ್ ಎಲೆಗಳು. ಇದು ಉತ್ಕರ್ಷಣ ನಿರೋಧಕ ಮತ್ತು ಆಂಥೋಸಯಾನಿನ್‌ನಂತಹ ಗುಣಲಕ್ಷಣಗಳನ್ನು ಹೊಂದಿದೆ. ಇದು ರಕ್ತನಾಳಗಳಲ್ಲಿ ಸಂಗ್ರಹವಾದ ಕೊಬ್ಬನ್ನು ಅತ್ಯಂತ ಕಡಿಮೆ ಸಮಾಯ್ದಲ್ಲಿ ಕರಗಿಸುವ ಕೆಲಸವನ್ನು ಮಾಡುತ್ತದೆ.
ಸೇವನೆಯ ವಿಧಾನ:
ಜಾಮೂನ್ ಎಲೆಗಳನ್ನು ಪುಡಿಯ ರೂಪದಲ್ಲಿ ಸೇವಿಸಬಹುದು. ಈ ಎಲೆಗಳ ಚಹಾ ಅಥವಾ ಕಷಾಯವನ್ನು ಕೂಡಾ ತಯಾರಿಸಿ ಕುಡಿಯಬಹುದು. ಆದರೆ ಈ ನೀರನ್ನು ದಿನಕ್ಕೆ 1-2 ಬಾರಿ ಮಾತ್ರ ಕುಡಿಯಬಹುದು.
ಮೆಂತ್ಯೆ ಸೊಪ್ಪು :
ಒಂದು ಅಧ್ಯಯನದಲ್ಲಿ, ಮೆಂತ್ಯ ಎಲೆಗಳಲ್ಲಿರುವ ಔಷಧೀಯ ಗುಣಗಳು ದೇಹದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಆಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಅಧಿಕ ಕೊಲೆಸ್ಟ್ರಾಲ್ ಅನ್ನು ಸಾಮಾನ್ಯಗೊಳಿಸಲು ನಿತ್ಯ ಮೆಂತ್ಯೆ ಎಲೆಗಳನ್ನು ಸೇವಿಸಬಹುದು.
ಸೇವನೆಯ ವಿಧಾನ:
ಮೆಂತ್ಯ ಸೊಪ್ಪನ್ನು ಸಾಮಾನ್ಯ ತರಕಾರಿಯಂತೆ ಸೇವಿಸಬಹುದು.
ಇದನ್ನೂ ಓದಿ : Heart Disease: ಹೃದ್ರೋಗವನ್ನು ತಡೆಗಟ್ಟಲು ಈ ಸರಳ ಸಲಹೆಗಳನ್ನು ಪಾಲಿಸಿ
ತುಳಸಿ :
ತುಳಸಿ ಎಲೆಗಳು ಕೊಲೆಸ್ಟ್ರಾಲ್ ಮಟ್ಟವನ್ನು ಸಾಮಾನ್ಯಗೊಳಿಸುವಲ್ಲಿ ಬಹಳ ಪ್ರಯೋಜನಕಾರಿ. ಅದರಲ್ಲಿರುವ ಗುಣಲಕ್ಷಣಗಳು ಚಯಾಪಚಯ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಇದು ದೇಹದ ತೂಕ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತದೆ.
ಸೇವಿಸುವ ವಿಧಾನ:
ತುಳಸಿ ಎಲೆಗಳನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು.ಇದಕ್ಕಾಗಿ, 5-6 ಎಲೆಗಳನ್ನು ಚೆನ್ನಾಗಿ ತೊಳೆದು ಹಾಗೆಯೇ ಅಗಿದು ತಿನ್ನಬಹುದು. ಅಥವಾ ತುಳಸಿ ಎಲೆಗಳನ್ನು ಕುಡಿಸಿದ ನೀರನ್ನು ಸೇವಿಸಬಹುದು.
(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ