Children's Health Tips : ಮಳೆಗಾಲದಲ್ಲಿ ಮಕ್ಕಳನ್ನು ರಕ್ಷಿಸಲು ಇಲ್ಲಿವೆ ಪ್ರಮುಖ ಸಲಹೆಗಳು..!

ಪ್ರಸ್ತುತ ದೇಶದಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಈ ಸಮಯದಲ್ಲಿ ಡೆಂಗ್ಯೂ, ಮಲೇರಿಯಾ, ಚಿಕನ್‌ಗುನ್ಯಾ, ಜ್ವರ, ಶೀತ ಹೀಗೆ ಮುಂತಾದ ರೋಗಗಳಿಗೆ ತುತ್ತಾಗುವ ಸಂಭವವಿರುತ್ತದೆ. ಈ ರೋಗಗಳು ವಯಸ್ಕರಿಗೆ ಮಾತ್ರವಲ್ಲದೆ ಮಕ್ಕಳಿಗೆ ತುಂಬಾ ಅಪಾಯವನ್ನು ಉಂಟು ಮಾಡುತ್ತವೆ. ಅದಕ್ಕಾಗಿಯೇ ಈ ಋತುವಿನಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ, ಇದಕ್ಕಾಗಿ ಅವರ ರಕ್ಷಣೆಗೆ ಇಲ್ಲಿವೆ ಕೆಲವು ಸಲಹೆಗಳು..

Written by - Channabasava A Kashinakunti | Last Updated : Jul 24, 2021, 12:55 PM IST
  • ಪ್ರಸ್ತುತ ದೇಶದಲ್ಲಿ ಮಳೆ ಅಬ್ಬರ ಮುಂದುವರೆದಿದೆ
  • ರೋಗಗಳು ವಯಸ್ಕರಿಗೆ ಅಲ್ಲದೆ ಮಕ್ಕಳಿಗೆ ಅಪಾಯವನ್ನು ಉಂಟು ಮಾಡುತ್ತವೆ
  • ಮಕ್ಕಳಿಗೆ ಕೈ ಕಾಲುಗಳು ಸಹ ಸಂಪೂರ್ಣವಾಗಿ ಮುಚ್ಚುವಂತಹ ಬಟ್ಟೆಗಳನ್ನ ಹಾಕಬೇಕು
Children's Health Tips : ಮಳೆಗಾಲದಲ್ಲಿ ಮಕ್ಕಳನ್ನು ರಕ್ಷಿಸಲು ಇಲ್ಲಿವೆ ಪ್ರಮುಖ ಸಲಹೆಗಳು..! title=

ಪ್ರಸ್ತುತ ದೇಶದಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಈ ಸಮಯದಲ್ಲಿ ಡೆಂಗ್ಯೂ, ಮಲೇರಿಯಾ, ಚಿಕನ್‌ಗುನ್ಯಾ, ಜ್ವರ, ಶೀತ ಹೀಗೆ ಮುಂತಾದ ರೋಗಗಳಿಗೆ ತುತ್ತಾಗುವ ಸಂಭವವಿರುತ್ತದೆ. ಈ ರೋಗಗಳು ವಯಸ್ಕರಿಗೆ ಮಾತ್ರವಲ್ಲದೆ ಮಕ್ಕಳಿಗೆ ತುಂಬಾ ಅಪಾಯವನ್ನು ಉಂಟು ಮಾಡುತ್ತವೆ. ಅದಕ್ಕಾಗಿಯೇ ಈ ಋತುವಿನಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ, ಇದಕ್ಕಾಗಿ ಅವರ ರಕ್ಷಣೆಗೆ ಇಲ್ಲಿವೆ ಕೆಲವು ಸಲಹೆಗಳು..

ಆರೋಗ್ಯ ತಜ್ಞರು ಏನು ಹೇಳುತ್ತಾರೆ? 

ಆಹಾರ ತಜ್ಞರಾದ ಡಾ.ರಂಜನಾ ಸಿಂಗ್ ಅವರ ಪ್ರಕಾರ, ಮಳೆಗಾಲ(Rainy season)ದಲ್ಲಿ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಣ್ಣೆಯುಕ್ತ ಮತ್ತು ಜಂಕ್ ಫುಡ್ ತಿನ್ನುವುದನ್ನು ತಡೆಯಿರಿ ಮತ್ತು ಆರೋಗ್ಯಕರ ಆಹಾರಗಳನ್ನ ಸೇವಿಸಲು ನೀಡಿ. ಇದಲ್ಲದೆ, ನೀವು ಅವರನ್ನ ನೋಡಿಕೊಳ್ಳಲು ಕೆಲವು ವಿಧಾನಗಳನ್ನು ಸಹ ಅಳವಡಿಸಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ : How To Remove Unwanted Facial Hairs: ಮುಖದ ಮೇಲಿನ ಅನಗತ್ಯ ಕೂದಲಿನ ಚಿಂತೆ ಬಿಡಿ, ಇದನ್ನೊಮ್ಮೆ ಟ್ರೈ ಮಾಡಿ

ಸರಿಯಾದ ಬಟ್ಟೆಗಳನ್ನು ಧರಿಸಿ : 

ಮಳೆಗಾಲದಲ್ಲಿ ತಾಪಮಾನ ಏರಿಳಿತವಾಗುತ್ತದೆ. ಇದರಿಂದ ಸೊಳ್ಳೆಗಳ ಭಯವೂ ಹೆಚ್ಚಾಗುತ್ತದೆ. ಇವುಗಳಿಂದ ರಕ್ಷಿಸಿಕೊಳ್ಳಲು ಮಕ್ಕಳಿಗೆ(Children's) ಕೈ ಕಾಲುಗಳು ಸಹ ಸಂಪೂರ್ಣವಾಗಿ ಮುಚ್ಚುವಂತಹ ಬಟ್ಟೆಗಳನ್ನ ಹಾಕಬೇಕು. ಅವರಿಗೆ ಹತ್ತಿ ಬಟ್ಟೆಗಳನ್ನು ಧರಿಸುವದು ಬಹಳ ಮುಖ್ಯ.

ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು : 

ಮಳೆಗಾಲದಲ್ಲಿ, ಮಕ್ಕಳನ್ನು ಸೊಳ್ಳೆಗಳಿಂದ ರಕ್ಷಿಸಲು ಮೈ ತುಂಬುವಂತಹ ಬಟ್ಟೆ ಹಾಕಿ. ಅಲ್ಲದೆ, ಕೋಣೆಯಲ್ಲಿ ಸೊಳ್ಳೆ ಬತ್ತಿ ಬಳಸಿ. ಸೊಳ್ಳೆ(Mosquito)ಗಳನ್ನು ಓಡಿಸಲು ನೀವು ಮನೆಯಲ್ಲಿ ಸೊಳ್ಳೆ ನಿವಾರಕ ಸಸ್ಯಗಳನ್ನು ನೆಡಬಹುದು.

ಇದನ್ನೂ ಓದಿ : Food For Strong Bones: ದುರ್ಬಲ ಮೂಳೆಗಳನ್ನು ಬಲಿಷ್ಠಗೊಳಿಸುವ ಪ್ರಮುಖ ಆಹಾರಗಳಿವು

ಪ್ರತಿದಿನ ಸ್ನಾನ ಮಾಡಿ :

ಮಳೆಗಾಲದಲ್ಲಿ ಮಕ್ಕಳು ಪ್ರತಿದಿನ ಸ್ನಾನ(Bath) ಮಾಡಬಾರದು ಎಂದು ಅನೇಕ ಜನರು ಭಾವಿಸುತ್ತಾರೆ, ಆದರೆ ಅದು ತಪ್ಪು. ಮಕ್ಕಳನ್ನು ಸೋಂಕಿನಿಂದ ರಕ್ಷಿಸಲು ಪ್ರತಿದಿನ ಸ್ನಾನ ಮಾಡಬೇಕು. ಮಕ್ಕಳ ಸ್ನಾನಕ್ಕೆ ತಾಪಮಾನಕ್ಕೆ ಅನುಗುಣವಾಗಿ ತಣ್ಣನೆಯ ಅಥವಾ ಬಿಸಿನೀರನ್ನು ಬಳಸಬೇಕು.

ಆರೋಗ್ಯಕರ ಆಹಾರ ಕ್ರಮ :

ಮಳೆಗಾಲದಲ್ಲಿ ಮಕ್ಕಳನ್ನು ರೋಗಗಳಿಂದ ರಕ್ಷಿಸಲು ಅವರಿಗೆ ರೋಗನಿರೋಧಕ ಶಕ್ತಿ(Immunity Power) ಬಲವಾಗಿರುವುದು ಮುಖ್ಯ. ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದಾಗ ಮಾತ್ರ ಇದು ಸಾಧ್ಯ. ಇದಕ್ಕಾಗಿ, ನೀವು ಮಕ್ಕಳಿಗೆ ಜಂಕ್ ಫುಡ್ ತಿನ್ನುವುದನ್ನು ತಪ್ಪಿಸಿ ಮತ್ತು ಹಣ್ಣು, ಬೇಳೆಕಾಳುಗಳು ಮತ್ತು ಹಸಿರು ತರಕಾರಿಗಳನ್ನು ಅವರಿಗೆ ತಿನ್ನಲು ನೀಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News