ಬೆಳಿಗ್ಗೆ ಎದ್ದಾಗ ಇದನ್ನು ಅಗಿದರೆ ಸಾಕು, ದಿನವಿಡೀ ಬಾಯಿಯ ದುರ್ನಾತ ಬರುವುದಿಲ್ಲ.. ಶುಗರ್‌ ಕೂಡ ಕಂಟ್ರೋಲ್‌ ಆಗುತ್ತದೆ!

ಪ್ರತಿನಿತ್ಯ ಹಲ್ಲುಜ್ಜಿದ ನಂತರವೂ ಅನೇಕರಿಗೆ ಬಾಯಿ ದುರ್ವಾಸನೆ ಬರಲು ಪ್ರಾರಂಭಿಸುತ್ತದೆ. 

Written by - Chetana Devarmani | Last Updated : Sep 19, 2024, 11:52 AM IST
    • ಬಾಯಿ ದುರ್ವಾಸನೆಗೆ ಮನೆಮದ್ದು
    • ಬಾಯಿ ಕೆಟ್ಟ ವಾಸನೆ ಬರಲು ಕಾರಣ
    • ಬಾಯಿಯಿಂದ ದುರ್ವಾಸನೆ ತೊಲಗಿಸುವುದು ಹೇಗೆ ?
ಬೆಳಿಗ್ಗೆ ಎದ್ದಾಗ ಇದನ್ನು ಅಗಿದರೆ ಸಾಕು, ದಿನವಿಡೀ ಬಾಯಿಯ ದುರ್ನಾತ ಬರುವುದಿಲ್ಲ.. ಶುಗರ್‌ ಕೂಡ ಕಂಟ್ರೋಲ್‌ ಆಗುತ್ತದೆ!  title=

ದಿನನಿತ್ಯ ಹಲ್ಲುಜ್ಜುತ್ತಿದ್ದರೂ ಬಾಯಿಯಿಂದ ದುರ್ವಾಸನೆ ಬರುತ್ತದೆ. ಇದು ಕೆಲವರನ್ನು ಅತಿಯಾಗಿ ಕಾಡುವ ಸಮಸ್ಯೆಯಾಗಿದೆ. ಅನೇಕ ಬಾರಿ ಬಾಯಿಯ ದರ್ವಾಸ‌ನೆಯಿಂದಾಗಿ ಎದುರಿಗಿರುವ ವ್ಯಕ್ತಿಯೇ ನಿಮ್ಮಿಂದ ದೂರವಿರುತ್ತಾರೆ. ಇದರಿಂದ ಹಲವೆಡೆ ಮುಜುಗರ ಅನುಭವಿಸಬೇಕಾಗುತ್ತದೆ. ಬ್ರಷ್‌ ಮಾಡಿದ ಬಳಿಕವೂ ನಿಮ್ಮ ಬಾಯಿಯಿಂದ ದುರ್ವಾಸನೆ ಬರುತ್ತಿದ್ದರೆ ಈ 5 ಮನೆಮದ್ದುಗಳನ್ನು ಅಳವಡಿಸಿಕೊಳ್ಳಿ. 

ಸಾಕಷ್ಟು ನೀರು ಕುಡಿಯಿರಿ:

ಪ್ರತಿನಿತ್ಯ ಹಲ್ಲುಜ್ಜಿದ ನಂತರವೂ ಅನೇಕರಿಗೆ ಬಾಯಿ ದುರ್ವಾಸನೆ ಬರಲು ಪ್ರಾರಂಭಿಸುತ್ತದೆ. ಇದನ್ನು ಹೋಗಲಾಡಿಸಲು ಪ್ರತಿದಿನ ಸಾಕಷ್ಟು ನೀರು ಕುಡಿಯಬೇಕು. ನೀರು ಕುಡಿಯುವುದರಿಂದ ಬಾಯಿ ದುರ್ವಾಸನೆಯಿಂದ ಮುಕ್ತಿ ಪಡೆಯಬಹುದು.

ಲವಂಗವನ್ನು ಅಗಿಯಿರಿ: 

ಬೆಳಿಗ್ಗೆ ಎದ್ದ ಬಳಿಕ ಬ್ರಷ್‌ ಮಾಡಿ ಬಳಿಕ ಲವಂಗವನ್ನು ಅಗಿಯಿರಿ. ಇದು ಬಾಯಿಯ ದುರ್ವಾಸನೆಯನ್ನೂ ಹೋಗಲಾಡಿಸುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಲವಂಗವನ್ನು ಜಗಿಯುವುದರಿಂದ ಬ್ಲಡ್‌ ಶುಗರ್‌ ಕೂಡ ಹೆಚ್ಚಾಗುವುದಿಲ್ಲ. 

ಇದನ್ನೂ ಓದಿ: ಮುಖದಲ್ಲಿ ಈ 6 ಬದಲಾವಣೆ ಕಂಡರೆ.. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದರ್ಥ!

ತೆಂಗಿನ ಎಣ್ಣೆ:

ತೆಂಗಿನ ಎಣ್ಣೆ ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಸ್ವಲ್ಪ ಸಮಯದವರೆಗೆ ಅದನ್ನು ಬಾಯಿಯಲ್ಲಿ ಇಟ್ಟುಕೊಂಡ ನಂತರ ಅದನ್ನು ತೊಳೆಯಿರಿ. ಇದು ವಾಸನೆಯನ್ನು ಮಾಯವಾಗಿಸುತ್ತದೆ.

ಸಾಸಿವೆ ಎಣ್ಣೆ:

ಸಾಸಿವೆ ಎಣ್ಣೆಗೆ ಉಪ್ಪನ್ನು ಬೆರೆಸಿ ಒಸಡುಗಳನ್ನು ಚೆನ್ನಾಗಿ ಮಸಾಜ್ ಮಾಡಿ. ಇದರಿಂದ ಬಾಯಿಯ ದುರ್ವಾಸನೆಯೂ ನಿಲ್ಲುತ್ತದೆ. ನಿಮ್ಮ ಹಲ್ಲುಗಳು ಸಹ ಹೊಳೆಯುತ್ತವೆ. 

ಪುದೀನ ಎಲೆಗಳು:

ಪುದೀನ ಎಲೆಗಳನ್ನು ಅಗಿಯಬೇಕು. ಇದರಿಂದ ಬಾಯಿ ತುಂಬಾ ತಂಪಾಗಿರುತ್ತದೆ ಮತ್ತು ಕೆಟ್ಟ ವಾಸನೆಯ ಸಮಸ್ಯೆ ಶಾಶ್ವತವಾಗಿ ದೂರವಾಗುತ್ತದೆ.

ಇದನ್ನೂ ಓದಿ: ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿದರೆ ಕೀಲುಗಳಲ್ಲಿ ಅಂಟಿದ ಯುರಿಕ್‌ ಆಸಿಡ್‌ ಕರಗಿ ಹೋಗಿ, ಕಿಡ್ನಿ ಸ್ಟೋನ್‌ ಸಹ ಪುಡಿಯಾಗುವುದು!

 ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News