ಮಧುಮೇಹಿಗಳ ಶುಗರ್ ಲೆವೆಲ್ ಹೆಚ್ಚಿಸುತ್ತದೆ ಈ ಹಿಟ್ಟಿನಿಂದ ತಯಾರಿಸಿದ ಚಪಾತಿ.! ನೀವು ಬಳಸುವ ಹಿಟ್ಟು ಯಾವುದು ?

Diabetic Diet Food List : ಮಧುಮೇಹವಿದ್ದಾಗ ಏನನ್ನು ತಿನ್ನುತ್ತೇವೆ, ಏನನ್ನು ತಿನ್ನಬೇಕು, ತಿನ್ನಬಾರದು ಎನ್ನುವುದರ ಬಗೆಗಿನ ಕಾಳಜಿ ಹೆಚ್ಚಿರಬೇಕು.  ಮಧುಮೇಹ ಬಂತು ಅಥವಾ ಮಧುಮೇಹದಿಂದ ಬಚಾವಗಬೇಕು ಎನ್ನುವ ಕಾರಣಕ್ಕೆ ಬಹಳಷ್ಟು ಮಂದಿ ಗೋಧಿಯನ್ನು ತಮ್ಮ ಆಹಾರದಲ್ಲಿ  ಸೇರಿಸಿಕೊಳ್ಳುತ್ತಾರೆ.  

Written by - Ranjitha R K | Last Updated : Dec 29, 2022, 10:32 AM IST
  • ಮಧುಮೇಹವಿದ್ದಾಗ ಆಹಾರದ ಬಗ್ಗೆ ಕಾಳಜಿ ವಹಿಸಬೇಕು
  • ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಿದ್ದರೆ ಅಪಾಯ ಗ್ಯಾರಂಟಿ
  • ಗೋಧಿ ಹಿಟ್ಟಿನಿಂದ ತಯಾರಿಸಿದ ಚಪಾತಿಯನ್ನು ಸೇವಿಸುತ್ತಾರೆ.
ಮಧುಮೇಹಿಗಳ ಶುಗರ್ ಲೆವೆಲ್ ಹೆಚ್ಚಿಸುತ್ತದೆ ಈ ಹಿಟ್ಟಿನಿಂದ ತಯಾರಿಸಿದ ಚಪಾತಿ.! ನೀವು ಬಳಸುವ ಹಿಟ್ಟು ಯಾವುದು ? title=

ಬೆಂಗಳೂರು : Diabetic Diet Food List : ಮಧುಮೇಹವಿದ್ದಾಗ ಏನನ್ನು ತಿನ್ನುತ್ತೇವೆ, ಏನನ್ನು ತಿನ್ನಬೇಕು, ತಿನ್ನಬಾರದು ಎನ್ನುವುದರ ಬಗೆಗಿನ ಕಾಳಜಿ ಹೆಚ್ಚಿರಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಪಶ್ಚಾತಾಪ ಪಡಬೇಕಾಗುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವು ದೀರ್ಘಕಾಲದವರೆಗೆ ಹೆಚ್ಚಿದ್ದರೆ, ಅದು ಶ್ವಾಸಕೋಶ, ಮೂತ್ರಪಿಂಡ ಮತ್ತು ಹೃದಯದ ಮೇಲೆ ಪರಿಣಾಮ ಬೀರುತ್ತದೆ. 

ಮಧುಮೇಹ ಬಂತು ಅಥವಾ ಮಧುಮೇಹದಿಂದ ಬಚಾವಗಬೇಕು ಎನ್ನುವ ಕಾರಣಕ್ಕೆ ಬಹಳಷ್ಟು ಮಂದಿ ಗೋಧಿಯನ್ನು ತಮ್ಮ ಆಹಾರದಲ್ಲಿ  ಸೇರಿಸಿಕೊಳ್ಳುತ್ತಾರೆ. ಗೋಧಿ ಹಿಟ್ಟಿನಿಂದ ತಯಾರಿಸಿದ ಚಪಾತಿಯನ್ನು ಸೇವಿಸುತ್ತಾರೆ.  ಹೀಗೆ ಗೋಧಿ ಹಿಟ್ಟಿನಿಂದ ಚಪಾತಿ ತಯಾರಿಸುವಾಗ ಹಿಟ್ಟನ್ನು ಜಾಡಿಸಿಕೊಳ್ಳುವ ಅಭ್ಯಾಸವೂ ಬಹಳಷ್ಟು ಮಂದಿಗೆ ಇದೆ. ಹೀಗೆ ಜಾಡಿಸಿ ತೆಗೆದ ಹಿಟ್ಟಿನಲ್ಲಿ ಉಳಿಯುವುದು ಮೈದಾ ಎನ್ನುವುದು ಬಹುತೇಕರಿಗೆ ಅರಿವಿರುವುದಿಲ್ಲ. ಇದು ಮಧುಮೇಹ ರೋಗಿಗಳಿಗೆ ವಿಷವಿದ್ದಂತೆ. ಅಲ್ಲದೆ, ಗೋಧಿ ಹಿಟ್ಟಿನ ಗ್ಲೈಸೆಮಿಕ್ ಸೂಚ್ಯಂಕವು ಅಧಿಕವಾಗಿರುತ್ತದೆ. ಈ ಕಾರಣದಿಂದಾಗಿ, ಗೋಧಿ ಹಿಟ್ಟಿನಿಂದ ಮಾಡಿದ ಚಪಾತಿ ತಿನ್ನುವುದರಿಂದ  ರಕ್ತದಲ್ಲಿನ ಸಕ್ಕರೆ ಮಟ್ಟ ವೇಗವಾಗಿ ಹೆಚ್ಚುತ್ತದೆ

ಇದನ್ನೂ ಓದಿ : Boiled Lemon Water: ಕುದಿಸಿದ ನಿಂಬೆ ನೀರಿನ ಲಾಭಗಳು ನಿಮಗೆಷ್ಟು ಗೊತ್ತು? ಈ ಸಮಯ ಸೇವಿಸಿದರೆ ಉತ್ತಮ

ಸಕ್ಕರೆ ರೋಗಿಗಳು ಯಾವ  ಹಿಟ್ಟು ಬಳಸಬೇಕು ? : 
 ಜೋಳದ ಹಿಟ್ಟು : 
ಮಧುಮೇಹಿಗಳು ಜೋಳದ ಹಿಟ್ಟಿನಿಂದ ತಯಾರಿಸಿದ ಚಪಾತಿಯನ್ನು ಸೇವಿಸುವಂತೆ ಸೂಚಿಸಲಾಗುತ್ತದೆ. ಜೋಳದ ಹಿಟ್ಟಿನ ರೊಟ್ಟಿಯನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರುತ್ತದೆ. ಜೋಳದಲ್ಲಿ ಡಯೆಟರಿ ಫೈಬರ್ ಇದೆ. ಇದಲ್ಲದೆ, ಇದರಲ್ಲಿ ಪ್ರೋಟೀನ್ ಮತ್ತು ಮೆಗ್ನೀಸಿಯಮ್ ಕೂಡ ಕಂಡುಬರುತ್ತವೆ. ಇದು ದೇಹವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

 ಕಡಲೆ ಹಿಟ್ಟು : 
ಕಡಲೆ ಹಿಟ್ಟಿನಿಂದ ತಯಾರಿಸಿದ ಚಪಾತಿ ಕೂಡಾ ಮಧುಮೇಹ ರೋಗಿಗಳಿಗೆ  ಪ್ರಯೋಜನಕಾರಿಯಾಗಿದೆ. ಈ ಹಿಟ್ಟು ಗ್ಲುಟನ್ ಮುಕ್ತವಾಗಿರುತ್ತದೆ. ಇದು ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು  ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Hair Fall Juice: ಕೂದಲುದುರುವ ಸಮಸ್ಯೆಯೇ? ಈ ಎಬಿಸಿ ಜ್ಯೂಸ್ ನಿಮ್ಮ ಆಹಾರದಲ್ಲಿರಲಿ

ರಾಗಿ  :
ರಾಗಿಯಲ್ಲಿ ಫೈಬರ್ ಹೇರಳವಾಗಿ ಕಂಡುಬರುತ್ತದೆ. ಆದ್ದರಿಂದ ಇದು ಸಕ್ಕರೆ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಈ ಹಿಟ್ಟಿನ ವಿಶೇಷತೆ ಎಂದರೆ ಇದನ್ನು ತಿನ್ನುವುದರಿಂದ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ. ಇದಲ್ಲದೆ, ತೂಕವನ್ನು ಕಾಪಾಡಿಕೊಳ್ಳಲು ಕೂಡಾ ಈ ಹಿಟ್ಟು ಸಹಾಯ ಮಾಡುತ್ತದೆ.

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News