ಬೆಲ್ಲದ ಚಹಾ : ಹಿಂದೆಲ್ಲಾ 40 ವರ್ಷವಾದ ಬಳಿಕ ಬಿಪಿ, ಶುಗರ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂದು ಹೇಳಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಬಿಪಿ, ಮಧುಮೇಹ ಸಮಸ್ಯೆಗಳು ಕಾಡುತ್ತವೆ. ಬದಲಾಗುತ್ತಿರುವ ಜೀವನ ಶೈಲಿ ಹಾಗೂ ಕಳಪೆ ಆಹಾರ ಪದ್ಧತಿಯಿಂದಾಗಿ ಜನರು ಹೆಚ್ಚಾಗಿ ಮಧುಮೇಹ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ. ಮಧುಮೇಹಿಗಳು ತಮ್ಮ ಬ್ಲಡ್ ಶುಗರ್ ಲೆವೆಲ್ ಅನ್ನು ನಿಯಂತ್ರಿಸುವುದು ಬಹಳ ಮುಖ್ಯ. ಅದಕ್ಕಾಗಿ, ಅವರ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಯಾವ ಆಹಾರವನ್ನು ಸೇವಿಸಬೇಕು, ಯಾವುದನ್ನು ಸೇವಿಸಬಾರದು ಎಂಬ ಬಗ್ಗೆಯೂ ನಿಗಾವಹಿಸಬೇಕು.
ಸಾಮಾನ್ಯವಾಗಿ, ಮಧುಮೇಹಿಗಳು ಸಿಹಿ ಪದಾರ್ಥಗಳಿಂದ ದೂರ ಉಳಿಯಬೇಕು ಎಂದು ಹೇಳಲಾಗುತ್ತದೆ. ಆದರೆ, ನಮ್ಮಲ್ಲಿ ಕೆಲವರು ಹಲವು ಖಾದ್ಯಗಳಲ್ಲಿ ಸಕ್ಕರೆಗೆ ಪರ್ಯಾಯವಾಗಿ ಬೆಲ್ಲವನ್ನು ಬಳಸುತ್ತಾರೆ. ಹಾಗಿದ್ದರೆ ಮಧುಮೇಹ ರೋಗಿಗಳು ಸಕ್ಕರೆ ಚಹಾ ಬದಲಿಗೆ ಬೆಲ್ಲದ ಚಹಾ ಸೇವಿಸಬಹುದೇ? ಎಂಬ ಪ್ರಶ್ನೆ ಹಲವರಲ್ಲಿದೆ. ಈ ಲೇಖನದಲ್ಲಿ ಬೆಲ್ಲದ ಚಹಾ ಸೇವನೆಯ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಒಂದಿಷ್ಟು ಮಾಹಿತಿ ನೀಡಲಿದ್ದೇವೆ.
ಇದನ್ನೂ ಓದಿ- ನೀರು ಕುಡಿಯುವ ನಿಮ್ಮ ಈ ಅಭ್ಯಾಸವನ್ನು ಇಂದೇ ಸುಧಾರಿಸಿ, ಇಲ್ಲವೇ...
ಬೆಲ್ಲದ ಸೇವನೆಯ ಅನುಕೂಲಗಳು:
* ಬೆಲ್ಲದಲ್ಲಿ ರಂಜಕ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಇದೆ.
* ಬೆಲ್ಲದಲ್ಲಿ ಅನೇಕ ಜೀವಸತ್ವಗಳು ಮತ್ತು ಖನಿಜಗಳು ಕಂಡುಬರುತ್ತವೆ.
* ಚಳಿಗಾಲದಲ್ಲಿ ಬೆಲ್ಲವನ್ನು ಸೇವಿಸುವುದರಿಂದ ದೇಹದಲ್ಲಿ ಉಷ್ಣತೆ ಉಂಟಾಗುತ್ತದೆ. ಇದು ನಿಮ್ಮನ್ನು ಒಳಗಿನಿಂದ ಬೆಚ್ಚಗಿರಿಸುತ್ತದೆ.
ಮಧುಮೇಹಿಗಲು ಬೆಲ್ಲದ ಟೀ ಸೇವಿಸಬಹುದೇ?
ವಾಸ್ತವವಾಗಿ, ಸಕ್ಕರೆಗಿಂತ ಬೆಲ್ಲ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಹಾಗಾಗಿಯೇ ಮಧುಮೇಹದಿಂದ ಬಳಲುತ್ತಿರುವವರಿಗೆ ಬೆಲ್ಲದ ಚಹಾ ಸೇವಿಸುವಂತೆ ಸಲಹೆ ನೀಡಲಾಗುತ್ತದೆ.
ಇದನ್ನೂ ಓದಿ- ಕಿಡ್ನಿ ಹಾನಿಯಾಗುವುದನ್ನು ತಪ್ಪಿಸಲು ಈ ಆಹಾರಗಳಿಂದ ಅಂತರ ಕಾಯ್ದುಕೊಳ್ಳಿ
ಬೆಲ್ಲದ ಟೀ ಕುಡಿಯುವುದರಿಂದ ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗುತ್ತದೆಯೇ?
ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಬೆಲ್ಲದ ಟೀ ಪ್ರಯೋಜನಕಾರಿಯಾಗಿದೆ. ಆದರೆ, ಇದು ಹಿತ-ಮಿತವಾಗಿದ್ದರೆ ಮಾತ್ರ ನಿಮಗೆ ತೊಂದರೆಯಾಗುವುದಿಲ್ಲ. ಬ್ಲಡ್ ಶುಗರ್ ಲೆವೆಲ್ ನಿಯಂತ್ರಿಸಲು ಬೆಲ್ಲದ ಟೀ ಅನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದು ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.