ನ್ಯೂಯಾರ್ಕ್: ನೀವು ಬೆಳಿಗ್ಗೆ ಕುಡಿಯುವ ಒಂದು ಕಪ್ ಚಹಾ ತುಂಬಾ ಪವರ್ ಫುಲ್ ಅಂತೆ. ಹಾಗಂತ ಸಂಶೋಧನೆಯೊಂದು ಹೇಳಿದೆ. ದಿನಕ್ಕೆ ಒಂದು ಬಾರಿ ಬಿಸಿ ಟೀ ಕುಡಿಯುವುದರಿಂದ ಕುರುಡುತನಕ್ಕೆ ಮುಖ್ಯ ಕಾರಣವಾದ ಗ್ಲುಕೊಮಾ ಆಗುವ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದು ಬಂದಿದೆ.
ಗ್ಲೋಕೋಮಾ ಕಣ್ಣಿನ ಒಳಗೆ ದ್ರವದ ಒತ್ತಡವನ್ನು ಹೆಚ್ಚಿಸಿ ಕಣ್ಣಿನ ನರಕ್ಕೆ ಹಾನಿ ಉಂಟುಮಾಡುತ್ತದೆ. ಪ್ರಸ್ತುತ ಜಗತ್ತಿನಾದ್ಯಂತ 57.5 ದಶಲಕ್ಷ ಜನರು ಈ ಸಮಸ್ಯೆ ಎದುರಿಸುತ್ತಿದ್ದು, 2020ರ ವೇಳೆಗೆ ಈ ಸಂಖ್ಯೆ 65.5 ದಶಲಕ್ಷಕ್ಕೆ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಬ್ರಿಟೀಷ್ ಜರ್ನಲ್ ಆಫ್ ಆಫ್ತಮಾಲಾಜಿ(ನೇತ್ರಶಾಸ್ತ್ರ) ಆನ್ಲೈನ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಪ್ರತಿ ದಿನ ಬಿಸಿ ಚಹಾವನ್ನು ಸೇವಿಸುವವರನ್ನು, ಚಹಾ ಸೇವಿಸದೆ ಇರುವವರೊಂದಿಗೆ ಹೋಲಿಸಿದಾಗ ಕಡಿಮೆ ಗ್ಲೋಕೊಮಾ ಅಪಾಯವನ್ನು ಹೊಂದಿರುವುದಾಗಿ ತಿಳಿದು ಬಂದಿದೆ.
ಗ್ಲೋಕೊಮಾದಿಂದ ದೃಷ್ಟಿ ನಷ್ಟವನ್ನು ತಡೆಯಲು ಜೀವನಶೈಲಿಯ ಬದಲಾವಣೆಗಳು ಸಹಾಯವಾಗಬಹುದೆಂದು ಲಾಸ್ ಎಂಜಲೀಸ್ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಪ್ರಮುಖ ಅಧ್ಯಯನದ ಲೇಖಕ ಅನ್ನಿ ಕೋಲ್ಮನ್ ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಪ್ರತಿನಿಧಿ ವಾರ್ಷಿಕ ಸಮೀಕ್ಷೆಯಲ್ಲಿ ಸುಮಾರು 10,000 ಜನರ ಸಂದರ್ಶನಗಳು, ದೈಹಿಕ ಪರೀಕ್ಷೆಗಳು ಮತ್ತು ರಕ್ತ ಮಾದರಿಗಳನ್ನು ಅವರ ಆರೋಗ್ಯ ಮಾತು ಪೌಷ್ಟಿಕಾಂಶದ ಸ್ಥಿತಿಯನ್ನು ಅಳೆಯಲಾಯಿತು.
ಈ ಸಮೀಕ್ಷೆಯಲ್ಲಿ ಕಣ್ಣಿನ ಗ್ಲುಕೊಮಾ ಪರೀಕ್ಷೆಯೂ ಸೇರಿತ್ತು. ಫೋಟೋಗಳನ್ನು ಒಳಗೊಂಡಂತೆ ಒಟ್ಟು ಕಣ್ಣಿನ ಪರೀಕ್ಷಾ ಫಲಿತಾಂಶ ಹೊಂದಿರುವ 1,678 ಜನರ ಪೈಕಿ, 84 (ಐದು ಪ್ರತಿಶತ) ವಯಸ್ಕರ ಪರಿಸ್ಥಿತಿ ಸುಧಾರಿಸಿತ್ತು.
12 ತಿಂಗಳುಗಳ ಅಂತರದಲ್ಲಿ ಈ ಜನರು ಮೃದು ಪಾನೀಯಗಳು ಮತ್ತು ತಂಪಾಗಿಸಿದ ಚಹಾ ಸೇರಿದಂತೆ ಕೆಫೀನ್ ಮತ್ತು ಡೀಕೆಫಿನೇಟೆಡ್ ಪಾನೀಯಗಳನ್ನು ಎಷ್ಟು ಬಾರಿ ಕುಡಿಯುತ್ತಿದ್ದಾರೆ ಎಂದು ಪ್ರಶ್ನಾವಳಿಗಳ ಮೂಲಕ ಅವರಿಗೆ ಕೇಳಲಾಯಿತು.
ಇದರ ಫಲಿತಾಂಶವಾಗಿ ಬಿಸಿ ಚಹಾ ಕುಡಿಯುವವರಲ್ಲಿ ಶೇ.74ರಷ್ಟು ಗ್ಲುಕೊಮಾ ಕಂಡುಬರುವುದಿಲ್ಲ ಎಂಬುದು ಸಾಬೀತಾಯಿತು.
ಆದರೆ ಕಾಫಿ - ಕೆಫೀನ್ ಅಥವಾ ಡೀಕೆಫಿನೇಟೆಡ್ - ಡಿಕೆಫೀನೇಟೆಡ್ ಚಹಾ, ತಂಪಾಗಿಸಿದ ಚಹಾ ಅಥವಾ ಮೃದು ಪಾನೀಯಗಳು ಇದಕ್ಕೆ ಸಂಬಂಧಿಸಿಲ್ಲ.
ಟೀಯಲ್ಲಿ ಆಂಟಿಆಕ್ಸಿಡೆಂಟ್ಗಳು ಮತ್ತು ಉರಿಯೂತ ವಿರೋಧಿ ಅಂಶಗಳು ಮತ್ತು ನರಸಂರಕ್ಷಣಾ ರಾಸಾಯನಿಕಗಳಿವೆ. ಇದು ಹೃದಯ ರೋಗ, ಕ್ಯಾನ್ಸರ್ ಮತ್ತು ಮಧುಮೇಹ ಸೇರಿದಂತೆ ಗಂಭೀರ ಸಮಸ್ಯೆಗಳ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.