Weight Loss Without Workout: ಸದ್ಯದ ಲೈಫ್ ಸ್ಟೈಲ್ ನಿಂದಾಗಿ ಪ್ರತಿಯೊಬ್ಬರಿಗೂ ಒಂದಿಲ್ಲ ಒಂದು ರೀತಿಯ ಆರೋಗ್ಯದ ಸಮಸ್ಯೆ ಇದೆ. ಅದರಲ್ಲಿ ಬಹುಪಾಲು ಜನರಿಗೆ ವೈದ್ಯರು ನೀಡುವ ಮೊದಲ ಸಲಹೆಯೇ ‘ತೂಕ ಕಡಿಮೆ ಮಾಡಿ’ ಎಂದು. ಆದರೆ ತೂಕ ಕಡಿಮೆ ಮಾಡುವುದು ಅಷ್ಟು ಸಣ್ಣ ವಿಷಯವಲ್ಲ, ವರ್ಷಾನುಗಟ್ಟಲೆ ಪ್ರಯತ್ನ ಮಾಡಿದರೂ, ಸಾವಿರಾರು-ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಪ್ರಯೋಜನ ಆಗಿರುವುದಿಲ್ಲ. ಅನೇಕ ಬಾಲಿವುಡ್ ಬೆಡಗಿಯರು ಇಂಥದ್ದೇ ಹತ್ತು-ಹಲವು ಪ್ರಯತ್ನ-ಪ್ರಯೋಗ ಮಾಡಿ ಫೇಲ್ ಆಗಿದ್ದರು. ಇದೀಗ ಸಮಂತಾ ರುತು ಪ್ರಭು, ವಿದ್ಯಾಬಾಲನ್ ಮತ್ತಿತರರು ಸಕ್ಸಸ್ ಆಗಿದ್ದಾರೆ. ಅದ್ಹೇಗೆ ಅಂತಾ ನೋಡೋಣ.
ದೇಹದ ತೂಕ ಹೆಚ್ಚಾಗುತ್ತಿದ್ದಂತೆ ಬೆನ್ನು ನೋವು, ಮಂಡಿ ನೋವು, ಹಿಮ್ಮಡಿ ನೋವು, ಪಾದದ ನೋವು, ಪಾದ ಉರಿ ಮತ್ತಿತರ ಕಾಯಿಲೆಗಳು ಒಕ್ಕರಿಸಿಕೊಳ್ಳುತ್ತವೆ. ಮಹಿಳೆಯರಿಗೆ ಋತುಚಕ್ರದಲ್ಲಿ ವ್ಯತ್ಯಾಸವನ್ನು ಉಂಟುಮಾಡುವುದು ಸೇರಿ ಇನ್ನೂ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಈ ಹಂತದಲ್ಲಿ ಸಾಮಾನ್ಯವಾಗಿ ಬಹುತೇಕ ಜನ ಕಾರ್ಬೋಹೈಡ್ರೇಡ್ ಸೇವನೆಗೆ ಕಡಿವಾಣ ಹಾಕಿ ಪ್ರೊಟೀನ್ ಇನ್ ಟೆಕ್ ಅನ್ನು ಜಾಸ್ತಿ ಮಾಡುತ್ತಾರೆ. ಹೆಚ್ಚೆಚ್ಚು ಪ್ರೊಟೀನ್ ಸೇವನೆಯಿಂದ ಕ್ಯಾಲೋರಿ ಜಾಸ್ತಿಯಾಗಿ ಅದು ಮತ್ತೊಂದು ರೀತಿಯ ಸಮಸ್ಯೆಗೆ ಮುನ್ನುಡಿ ಬರೆಯುತ್ತದೆ. ಮುಖ್ಯವಾಗಿ ಉರಿಯೂತ ಎನ್ನುವ ಸಮಸ್ಯೆಯನ್ನು ಸೃಷ್ಟಿಸುತ್ತದೆ.
ಈ ಹಿನ್ನೆಲೆಯಲ್ಲಿ ದೇಹದ ತೂಕ ಹೆಚ್ಚಾದಾಗ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಸರಿಯಾದ ನ್ಯೂಟ್ರಿಷಿಯನ್ ಗಳನ್ನೇ ಸಂಪರ್ಕಿಸಿ ಅವರ ಸಲಹೆಯಂತೆಯೇ ಆಹಾರ ಪದ್ದತಿಯನ್ನು ರೂಪಿಸಿಕೊಳ್ಳಬೇಕು. ಇದನ್ನೇ ಒಂದು ಕಾಲದಲ್ಲಿ ದಪ್ಪಕ್ಕಿದ್ದು ಈಗ ಸಪೂರವಾಗಿರುವ ಬಾಲಿವುಡ್ ನಟಿಯರಾದ ಸಮಂತಾ ರುತು ಪ್ರಭು ಮತ್ತು ವಿದ್ಯಾಬಾಲನ್ ಹೇಳಿರುವುದು.
ಇದನ್ನೂ ಓದಿ- ವಿಟಮಿನ್ B12 ಕೊರತೆಯನ್ನು ಏಕೆ ಅಪಾಯಕಾರಿ? ರೋಗಲಕ್ಷಣ ಕಾಣಿಸಿಕೊಂಡ ತಕ್ಷಣವೇ ಈ ಆಹಾರ ಸೇವಿಸಿ
‘ಗಲಟ್ಟಾ ಪ್ಲಸ್’ ಜೊತೆ ನಡೆಸಿರುವ ಸಂಭಾಷಣೆಯಲ್ಲಿ ವಿದ್ಯಾಬಾಲನ್, ತಾನು ಅಧಿಕ ತೂಕದಿಂದ ಬಳಲುತ್ತಿದ್ದದ್ದು, ಅದರಿಂದಾಗಿ ನಾನಾ ರೀತಿಯ ಒತ್ತಡಗಳು ಆಗುತ್ತಿದ್ದದ್ದು, ತೂಕ ಇಳಿಸಿಕೊಳ್ಳಲು ಏನೆಲ್ಲಾ ಮಾಡಬೇಕಾಯಿತು ಎಂಬುದನ್ನು ಹಾಗು ಕಡೆಗೆ ಏನೂ ವರ್ಕ್ ಔಟ್ ಮಾಡದೆಯೂ ತೂಕ ಇಳಿಸುವ ಮಾರ್ಗ ಕಂಡುಕೊಂಡ ಬಗೆಯನ್ನು ಹೇಳಿದ್ದಾರೆ.
ನಾನು ಜೀವನದುದ್ದಕ್ಕೂ ತೂಕ ಇಳಿಸಲು ಹೆಣಗಾಡಿದ್ದೇನೆ. ನಾನಾ ರೀತಿಯ ಡಯಟ್ ಮಾಡಿದ್ದೇನೆ. ಪಟ್ಟು ಬಿಡದೆ ವ್ಯಾಯಾಮ ಮಾಡಿದ್ದೇನೆ. ಇದರಿಂದಾಗಿ ಕೆಲವೊಮ್ಮೆ ಪ್ರಯೋಜನವಾಗಿದೆ, ತೂಕ ಇಳಿದಿದೆ. ಆದರೆ ಸ್ವಲ್ಪ ದಿನಗಳ ಬಳಿಕ ಮತ್ತೆ ತೂಕ ಹೆಚ್ಚಾಗುತ್ತಿತ್ತು. ಇದರಿಂದ ಬೇಸತ್ತಿದ್ದ ನಾನು ಇತ್ತೀಚಿಗೆ ಚೆನ್ನೈನಲ್ಲಿ ನ್ಯೂಟ್ರಿಷಿಯನ್ ಒಬ್ಬರನ್ನು ಸಂಪರ್ಕಿಸಿದೆ. ಅವರು ‘ನಿಮ್ಮದು ಕೇವಲ ಉರಿಯೂತ, ಕೊಬ್ಬಿನ ಸಮಸ್ಯೆ ಅಲ್ಲ, ಇದಕ್ಕೆ ಬೇರೆಯದೇ ರೀತಿಯ ಆಹಾರ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. ಅವರ ಸಲಹೆಯ ಪ್ರಕಾರವೇ ಆಹಾರ ಸೇವನೆ ಮಾಡುತ್ತಿದ್ದೇನೆ. ಇದರ ಪರಿಣಾಮವಾಗಿ ವ್ಯಾಯಾಮ ಮಾಡುವುದನ್ನು ಬಿಟ್ಟಿದ್ದರೂ ನನ್ನ ತೂಕ ಕಡಿಮೆಯಾಗಿದೆ. ಜೊತೆಗೆ ನನ್ನನ್ನು ಕಾಡುತ್ತಿದ್ದ ಉರಿಯೂತದ ಸಮಸ್ಯೆಯೂ ನಿವಾರಣೆಯಾಗಿದೆ ಎಂದು ವಿದ್ಯಾ ಬಾಲನ್ ಹೇಳಿಕೊಂಡಿದ್ದಾರೆ.
ಇದೇ ರೀತಿ ಸಮಂತಾ ರುತು ಪ್ರಭು ಕೂಡ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಪ್ರಶ್ನೋತ್ತರದಲ್ಲಿ ಮಾತನಾಡಿರುವ ಸಮಂತಾ, ನಾನು ಕೂಡ ತೂಕ ಇಳಿಸಿಕೊಳ್ಳಲು ಮತ್ತು ಉರಿಯೂತ ಸಮಸ್ಯೆಯಿಂದ ಪಾರಾಗಲು ನಾನಾ ರೀತಿಯ ಪ್ರಯತ್ನ ಪಟ್ಟಿದ್ದೆ. ಆದರೆ ಸಾಧ್ಯವಾಗಿರಲಿಲ್ಲ. ಕಡೆಗೆ ನ್ಯೂಟ್ರಿಷಿಯನ್ ಸಲಹೆಯ ಪ್ರಕಾರ ‘Anti-inflammatory Diet’ ಆಹಾರ ಪದ್ಧತಿ ಅಳವಡಿಸಿಕೊಂಡೆ. ನಂತರ ನನಗೆ ತೂಕ ಇಳಿಸುವುದಕ್ಕೂ ಸಾಧ್ಯವಾಯಿತು. ನನ್ನ ಉರಿಯೂತ ಸಮಸ್ಯೆಗೂ ಪರಿಹಾರ ಸಿಕ್ಕಂತಾಯಿತು ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ- Uric Acid: ಈ ತರಕಾರಿ ಕೇವಲ 1-2 ತಿಂಗಳಲ್ಲೇ ಯೂರಿಕ್ ಆಮ್ಲವನ್ನ ನಿವಾರಿಸುತ್ತೆ;ಸೇವಿಸುವುದು ಹೇಗೆ?
ತೂಕ ಇಳಿಕೆಗೆ ಬಹಳ ಮುಖ್ಯ ನಿಮ್ಮ ದೇಹದ ಸ್ಥಿತಿಗೆ ಅನುಗುಣವಾದ ಆಹಾರ ಪದ್ಧತಿ!
ಸಾಮಾನ್ಯವಾಗಿ ತೂಕ ಹೆಚ್ಚಾಯಿತು ಎಂದ ಕೂಡಲೇ ಎಲ್ಲರೂ ಕಾರ್ಬೋಹೈಡ್ರೇಟ್ ಇರುವ ಅಕ್ಕಿಯಿಂದ ಮಾಡಿರುವ ಆಹಾರಗಳನ್ನು ತ್ಯಜಿಸುತ್ತಾರೆ. ಜೊತೆಗೆ ಕಾರ್ಬೋಹೈಡ್ರೇಟ್ ಇರುವ ಇತರೆ ಆಹಾರಗಳನ್ನು ಬಿಟ್ಟು ಬಿಡುತ್ತಾರೆ. ಈ ರೀತಿ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ನಮ್ಮ ದೇಹ ಯಾವ ಪರಿಸ್ಥಿತಿಯಲ್ಲಿ ಇದೆ. ಯಾವ ಅಂಶದ ಕೊರತೆಯನ್ನು ಎದುರಿಸುತ್ತಿದೆ? ನಾವು ಯಾವ ರೀತಿಯ ಆಹಾರ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಎಂಬವುದನ್ನು ನಾವೇ ಸ್ವತಃ ನಿರ್ಧರಿಸುವುದಕ್ಕಿಂತ ನುರಿತ ವೈದ್ಯರು ಅಥವಾ ನ್ಯೂಟ್ರಿಷಿಯನ್ ಅವರನ್ನು ಸಂಪರ್ಕಿಸಿ ಅವರ ಸಲಹೆಯಂತೆ ನಡೆಯುವುದು ಕ್ಷೇಮ. ಇದರಿಂದ ಯಾವುದೇ ವರ್ಕ್ ಔಟ್ ಮಾಡದೆಯೂ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.