Anjeer Milk: ಅಂಜೂರದ ಹಣ್ಣುಗಳನ್ನು ಹಾಲಿನಲ್ಲಿ ಕುದಿಸಿ ಕುಡಿಯಿರಿ; ಸಿಗುತ್ತೆ 4 ಅದ್ಭುತ ಪ್ರಯೋಜನ

Anjeer Milk: ಪೌಷ್ಟಿಕಾಂಶ-ಭರಿತ ಅಂಜೂರದ ಹಣ್ಣುಗಳನ್ನು ಸೂಪರ್ ಫುಡ್ ಎಂದು ಪರಿಗಣಿಸಲಾಗುತ್ತದೆ. ಚಳಿಗಾಲದಲ್ಲಿ ಅಂಜೂರದ ಹಾಲನ್ನು ಅಂದರೆ ಅಂಜೀರ್ ಹಾಲು ಕುಡಿಯುವುದರಿಂದ ನಿಮಗೆ ಹಲವಾರು ರೀತಿಯಲ್ಲಿ ಪ್ರಯೋಜನವಾಗುತ್ತದೆ.  

Written by - Yashaswini V | Last Updated : Nov 18, 2021, 11:41 AM IST
  • ಶೀತ ವಾತಾವರಣದಲ್ಲಿ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ
  • ಅಂಜೂರದ ಹಾಲನ್ನು ಕುಡಿಯುವುದರಿಂದ ನಿಮಗೆ ಅನೇಕ ರೀತಿಯಲ್ಲಿ ಪ್ರಯೋಜನವಾಗುತ್ತದೆ
  • ಇದನ್ನು ನಿಯಮಿತವಾಗಿ ಸೇವಿಸಿ
Anjeer Milk: ಅಂಜೂರದ ಹಣ್ಣುಗಳನ್ನು ಹಾಲಿನಲ್ಲಿ ಕುದಿಸಿ ಕುಡಿಯಿರಿ; ಸಿಗುತ್ತೆ 4 ಅದ್ಭುತ ಪ್ರಯೋಜನ title=
Anjeer Milk Benefits

Anjeer Milk: ಚಳಿಗಾಲದಲ್ಲಿ ನಿಮ್ಮ ಆಹಾರ ಕ್ರಮವನ್ನು ಬದಲಾಯಿಸುವುದು ಮುಖ್ಯ. ಈ ಋತುವಿನಲ್ಲಿ, ನೀವು  ನಿಮ್ಮನ್ನು ಆರೋಗ್ಯಕರವಾಗಿ ಮತ್ತು ಬೆಚ್ಚಗಾಗಿ ಇರಿಸುವಂತಹ ಆಹಾರಗಳನ್ನು ಬಳಸುವುದು ತುಂಬಾ ಮುಖ್ಯ.  ಅಂತಹ ಪರಿಸ್ಥಿತಿಯಲ್ಲಿ, ನೀವು ಆಹಾರದಲ್ಲಿ ಅಂಜೀರ್ ಹಾಲನ್ನು ಸೇರಿಸಿಕೊಳ್ಳಬಹುದು. ಪೌಷ್ಟಿಕಾಂಶ-ಭರಿತ ಅಂಜೂರದ ಹಣ್ಣುಗಳನ್ನು ಸೂಪರ್ಫುಡ್ ಎಂದು ಪರಿಗಣಿಸಲಾಗುತ್ತದೆ. ಚಳಿಗಾಲದಲ್ಲಿ ಅಂಜೂರದ ಹಾಲನ್ನು ಕುಡಿಯುವುದರಿಂದ ನಿಮಗೆ ಹಲವಾರು ರೀತಿಯಲ್ಲಿ ಲಾಭವಾಗುತ್ತದೆ. ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ, ಈ ಋತುವಿನಲ್ಲಿ ಶೀತ, ಜ್ವರ, ಸೋಂಕು ಮತ್ತು ಮಲಬದ್ಧತೆಯ ಸಮಸ್ಯೆ ಉಂಟಾಗಬಹುದು. ಅಂಜೂರದ ಹಾಲು ಕುಡಿಯುವುದರಿಂದ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ. 

ಬಿಸಿ ಹಾಲಿನೊಂದಿಗೆ ಅಂಜೂರದ ಹಣ್ಣುಗಳನ್ನು ಬೆರೆಸಿ ಕುಡಿಯಿರಿ :
ಅಂಜೂರದಲ್ಲಿ ಕರಗುವ ಫೈಬರ್ ಮತ್ತು ಫೈಟೊನ್ಯೂಟ್ರಿಯೆಂಟ್‌ಗಳು ಸಮೃದ್ಧವಾಗಿವೆ. ಇದು ಕಬ್ಬಿಣ, ತಾಮ್ರ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಅನೇಕ ರೀತಿಯ ವಿಟಮಿನ್ಗಳನ್ನು ಸಹ ಒಳಗೊಂಡಿದೆ. ನೀವು ಅಂಜೂರವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ, ಅದು ಮಲಬದ್ಧತೆ, ಕಫ, ಅಸ್ತಮಾ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ, ಬೆಚ್ಚಗಿನ ಹಾಲಿನೊಂದಿಗೆ ಅಂಜೂರದ ಹಣ್ಣುಗಳನ್ನು ಬೆರೆಸಿ ಕುಡಿಯುವುದು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಅಂಜೂರದ ಹಾಲನ್ನು ತಯಾರಿಸುವುದು ಹೇಗೆ?
ಅಂಜೂರದ ಹಾಲನ್ನು (Anjeer Milk) ತಯಾರಿಸಲು, ಅಂಜೂರವನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ ಅದರ ಪೇಸ್ಟ್ ತಯಾರಿಸಿ ಮತ್ತು ಬೆಚ್ಚಗಿನ ಹಾಲಿನೊಂದಿಗೆ ಈ ಪೇಸ್ಟ್ ಅನ್ನು ಬೆರೆಸಿ ಕುಡಿಯಿರಿ. ನೀವು ಬೇಕಿದ್ದರೆ ಅಂಜೂರದ ಹಾಲಿಗೆ ಕೇಸರಿ ಸೇರಿಸಬಹುದು.

ಇದನ್ನೂ ಓದಿ- Diabetes: ಮಧುಮೇಹಿಗಳು ಬೆಳಗ್ಗಿನ ಉಪಾಹಾರದಲ್ಲಿ ಮರೆತೂ ಸಹ ಈ ಆಹಾರಗಳನ್ನು ತಿನ್ನಬಾರದು

ಅಂಜೂರದ ಹಾಲಿನ ಪ್ರಯೋಜನಗಳು:
ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ:

ಅಂಜೂರದ ಹಾಲು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಅಂಜೂರದಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಚಯಾಪಚಯವನ್ನು ನಿಯಂತ್ರಿಸುತ್ತದೆ. ಚಳಿಗಾಲದಲ್ಲಿ ಮಲಬದ್ಧತೆ ಹೆಚ್ಚಾಗಿ ಕಾಡುತ್ತದೆ. ಅಂಜೂರದ ಹಾಲು ಅಂದರೆ ಅಂಜೀರ್ ಹಾಲು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. 

ತೂಕವನ್ನು ಕಡಿಮೆ ಮಾಡಲು ಪರಿಣಾಮಕಾರಿ :
ಚಳಿಗಾಲದಲ್ಲಿ, ನಿಮ್ಮ ತೂಕವನ್ನು ಹೆಚ್ಚಿಸುವ (Weight Gain) ಇಂತಹ ಅನೇಕ ಪದಾರ್ಥಗಳನ್ನು ನೀವು ಸೇವಿಸುತ್ತೀರಿ. ಲಡ್ಡು, ಪಂಜಿರಿ ಮತ್ತು ಹಲ್ವದಂತಹ ಪದಾರ್ಥಗಳನ್ನು ನೀವು ತಿನ್ನುತ್ತೀರಿ, ಆದರೆ ನಂತರ ನೀವು ತೂಕವನ್ನು ಹೆಚ್ಚಾಗುವ ಬಗ್ಗೆ ಚಿಂತಿಸಲು ಪ್ರಾರಂಭಿಸುತ್ತೀರಿ. ತೂಕ ಹೆಚ್ಚಾಗುವುದರಿಂದ ನೀವು ತೊಂದರೆಗೊಳಗಾಗಿದ್ದರೆ, ನಂತರ ಅಂಜೂರದ ಹಾಲನ್ನು ಕುಡಿಯಿರಿ. ಇದನ್ನು ಕುಡಿಯುವುದರಿಂದ ನಿಮ್ಮ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ ಮತ್ತು ನೀವು ಮತ್ತೆ ಮತ್ತೆ ತಿನ್ನುವುದನ್ನು ತಪ್ಪಿಸಬಹುದು.

ಚೆನ್ನಾಗಿ ನಿದ್ದೆ ಮಾಡಬಹುದು: 
ರಾತ್ರಿ ಅಂಜೂರದ ಹಾಲನ್ನು ಕುಡಿದರೆ ಚಳಿಗಾಲದಲ್ಲಿ ದೇಹಕ್ಕೆ ಬೆಚ್ಚಗಿರುತ್ತದೆ ಮತ್ತು ಚೆನ್ನಾಗಿ ನಿದ್ದೆ ಬರುತ್ತದೆ. ಇದರೊಂದಿಗೆ ನೀವು ಚಳಿಗಾಲದಲ್ಲಿ ಸೋಂಕನ್ನು ತಪ್ಪಿಸಬಹುದು. ಈ ಋತುವಿನಲ್ಲಿ ಅನೇಕರಿಗೆ ಶೀತ ಮತ್ತು ಜ್ವರದ ಸಮಸ್ಯೆ ಇರುತ್ತದೆ. ಅಂಜೂರದ ಹಣ್ಣುಗಳ ಸೇವನೆಯು ಇದರಲ್ಲಿ ಪ್ರಯೋಜನವನ್ನು ನೀಡುತ್ತದೆ. 

ಇದನ್ನೂ ಓದಿ- Tea Benefits: ಚಹಾ ಕುಡಿಯುವುದರಿಂದ ಆಗುವ ಈ ಪ್ರಯೋಜನಗಳನ್ನು ನೀವು ಎಂದಿಗೂ ಕೇಳಿರಲಿಕ್ಕಿಲ್ಲ

ರೋಗಗಳು ದೂರವಾಗುತ್ತವೆ:
ತಜ್ಞರ ಪ್ರಕಾರ, ತಾಪಮಾನದಲ್ಲಿನ ಇಳಿಕೆಯಿಂದಾಗಿ, ನಿಮ್ಮ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತವೆ ಮತ್ತು ನೀವು ಹೆಚ್ಚಾಗಿ ಕೊಬ್ಬಿನ ಮತ್ತು ಕರಿದ ಆಹಾರಗಳಂತಹ ಅನಾರೋಗ್ಯಕರ ವಸ್ತುಗಳನ್ನು ಸೇವಿಸುತ್ತೀರಿ. ಕಡಿಮೆ ನೀರು ಕುಡಿಯುವುದರಿಂದ ರೋಗಗಳೂ ಬರುತ್ತವೆ. ಶೀತ ವಾತಾವರಣದಲ್ಲಿ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ. ಚಳಿಗಾಲದಲ್ಲಿ, ನೀವು ಕಾಲೋಚಿತ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುತ್ತೀರಿ. ಇದರೊಂದಿಗೆ, ನಿಮ್ಮ ದೈನಂದಿನ ಆಹಾರದಲ್ಲಿ ಒಣ ಹಣ್ಣುಗಳು ಮತ್ತು ಬೀಜಗಳನ್ನು ಸೇರಿಸಿ. ಒಣ ಹಣ್ಣುಗಳಲ್ಲಿ ಇಂತಹ ಅನೇಕ ಪೋಷಕಾಂಶಗಳಿವೆ, ಇದು ರೋಗಗಳನ್ನು ದೂರವಿಡುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News