Food For Blood Purification: ರಕ್ತವು ದೇಹದ ಅತ್ಯಂತ ಮಹತ್ವದ ವಾಹಕವಾಗಿದೆ. ರಕ್ತವು ನಮ್ಮ ಎಲ್ಲಾ ಅಂಗಗಳಿಗೆ ಪೌಷ್ಟಿಕಾಂಶವನ್ನು ಒದಗಿಸುವ ಕೆಲಸವನ್ನು ಮಾಡುತ್ತದೆ. ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ, ಕೆಲವು ಕಲ್ಮಶಗಳು ರಕ್ತದಲ್ಲಿ ಶೇಖರಗೊಳ್ಳುತ್ತವೆ. ರಕ್ತದ ಅಶುದ್ಧತೆಯು ರೋಗಗಳಿಗೆ ಕಾರಣವಾಗುತ್ತದೆ. ರಕ್ತದ ಕಲ್ಮಶಗಳಿಂದಾಗಿ ಅನೇಕ ಚರ್ಮದ ಸಮಸ್ಯೆಗಳು ಸಹ ಕಾಣಿಸಿಕೊಳ್ಳಲು ಆರಂಭಿಸುತ್ತವೆ. ನೀವು ಆರೋಗ್ಯವಾಗಿರಲು ಬಯಸಿದರೆ ರಕ್ತವನ್ನು ಶುದ್ಧೀಕರಿಸುವುದು ತುಂಬಾ ಮುಖ್ಯ. ನಮ್ಮ ದೈನಂದಿನ ಆಹಾರದಲ್ಲಿ ನಾವು ಕೆಲವು ಆರೋಗ್ಯಕರ ವಸ್ತುಗಳನ್ನು ಸೇರಿಸಿಕೊಳ್ಳುವ ಮೂಲಕ ರಕ್ತವನ್ನು ಸ್ವಚ್ಛಗೊಳಿಸಬಹುದು.
ತುಳಸಿ
ತುಳಸಿ ಪೋಷಕಾಂಶಗಳ ಆಗರವಾಗಿದೆ. ರಕ್ತವನ್ನು ಶುದ್ಧೀಕರಿಸಲು ಕೆಲಸ ಮಾಡುವ ತುಳಸಿ ಎಲೆಗಳಲ್ಲಿ ಆಮ್ಲಜನಕ ಇರುತ್ತದೆ. ಇದು ನಂಜುನಿರೋಧಕ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ, ಇದು ರೋಗಗಳನ್ನು ದೂರವಿರಿಸಲು ಕೆಲಸ ಮಾಡುತ್ತದೆ. ತುಳಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಕೆಲಸ ಮಾಡುತ್ತದೆ.
ಬೇವು
ಬೇವು ರಕ್ತವನ್ನು ಶುದ್ಧೀಕರಿಸುವ ಕೆಲಸ ಮಾಡುತ್ತದೆ. ಇದು ಆಂಟಿ ಸೆಪ್ಟಿಕ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಬೇವಿನ ಎಲೆಗಳನ್ನು ಜಗಿಯುವುದರಿಂದ ದೇಹವು ನಿರ್ವಿಷಗೊಳ್ಳುತ್ತದೆ. ರಕ್ತದ ಕೊಳೆ ನಿವಾರಣೆಯಾಗುತ್ತದೆ. ಈ ರೀತಿಯಾಗಿ ಬೇವಿನ ಎಲೆಗಳು ಇಡೀ ದೇಹವನ್ನು ನಿರೋಗಿಯನ್ನಾಗಿಸುತ್ತವೆ.
ಬೀಟ್ರೂಟ್
ಬೀಟ್ರೂಟ್ ಆರೋಗ್ಯಕ್ಕೆ ಹಲವರು ಲಾಭಗಳನ್ನು ನೀಡುತ್ತದೆ. ಇದು ಉತ್ಕರ್ಷಣ ನಿರೋಧಕಗಳು ಮತ್ತು ಕಬ್ಬಿಣಾಂಶಗಳಿಂದ ಸಮೃದ್ಧವಾಗಿದೆ. ಬೀಟ್ ಗೆಡ್ಡೆಯಲ್ಲಿ ಬೆಟಾಸಯಾನಿನ್ ಇರುತ್ತದೆ, ಇದು ರಕ್ತವನ್ನು ಶುದ್ಧೀಕರಿಸುವ ಕೆಲಸ ಮಾಡುತ್ತದೆ. ಬೀಟ್ರೂಟ್ ಜ್ಯೂಸ್ ಅಥವಾ ಸಲಾಡ್ ಅನ್ನು ಸೇವಿಸುವುದರಿಂದ ಅನೇಕ ರೋಗಗಳಿಂದ ನೀವು ಮುಕ್ತಿ ಪಡೆಯಬಹುದು.
ಅರಿಶಿನ
ಅರಿಶಿನವು ಹಲವಾರು ಔಷಧೀಯ ಗುಣಗಳಿಂದ ಕೂಡಿದೆ. ಇದರಲ್ಲಿರುವ ನಂಜುನಿರೋಧಕ ಗುಣಗಳು ರಕ್ತವನ್ನು ಶುದ್ಧಗೊಳಿಸುತ್ತವೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಕರ್ಕ್ಯುಮಿನ್ ಅನ್ನು ಹೊಂದಿರುತ್ತದೆ. ಅರಿಶಿನದ ಸೇವನೆಯು ಕೆಂಪು ರಕ್ತ ಕಣಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ಕಬ್ಬಿಣದ ಕೊರತೆಯನ್ನು ನೀಗಿಸಲು ಕೂಡ ಸಹಾಯ ಮಾಡುತ್ತವೆ.
ಬೆಲ್ಲ
ಬೆಲ್ಲದಲ್ಲಿ ಕಬ್ಬಿಣದ ಅಂಶ ಹೇರಳ ಪ್ರಮಾಣದಲ್ಲಿದೆ. ಇದು ರಕ್ತದಲ್ಲಿ ಸಂಗ್ರಹವಾಗುವ ಕೊಳೆಯನ್ನು ಹೊರಹಾಕಲು ಸಹಾಯ ಮಾಡುತ್ತದೆ. ಬೆಲ್ಲ ತಿನ್ನುವುದರಿಂದ ಕಬ್ಬಿಣದ ಕೊರತೆ ನಿವಾರಣೆಯಾಗುತ್ತದೆ. ಬೆಲ್ಲವು ಅಜೀರ್ಣ ಮತ್ತು ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗಳಲ್ಲಿ ಸಹ ಪ್ರಯೋಜನಕಾರಿಯಾಗಿದೆ. ಬೆಲ್ಲವನ್ನು ತಿನ್ನುವುದರಿಂದ ಹಿಮೋಗ್ಲೋಬಿನ್ ಹೆಚ್ಚಾಗುತ್ತದೆ ಮತ್ತು ತ್ಯಾಜ್ಯ ತುಪನ್ನಗಳು ದೇಹದಿಂದ ಹೊರಹೋಗುತ್ತವೆ.
ಇದನ್ನೂ ಓದಿ-Milk Tea Side Effects: ಹಾಲಿನ ಚಹಾ ಸೇವನೆ ಸರಿಯಲ್ಲ..7 ಕಾಯಿಲೆಗಳ ಅಪಾಯ
ಬೆಳ್ಳುಳ್ಳಿ
ಬೆಳ್ಳುಳ್ಳಿ ರಕ್ತಕ್ಕೆ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಆ್ಯಂಟಿ ಫಂಗಲ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಾ ಗುಣಗಳು ಕಂಡುಬರುತ್ತವೆ. ಬೆಳ್ಳುಳ್ಳಿಯ ಬಳಕೆಯಿಂದ ರಕ್ತ ಶುದ್ಧವಾಗುತ್ತದೆ. ಇದು ರಕ್ತದೊತ್ತಡವನ್ನೂ ನಿಯಂತ್ರಣದಲ್ಲಿಡುತ್ತದೆ.
ಇದನ್ನೂ ಓದಿ-Pomegranate Peel For Health: ದಾಳಿಂಬೆ ಸಿಪ್ಪೆಯಿಂದ ಆರೋಗ್ಯಕ್ಕೆ ಆಗುವ ಈ ಲಾಭಗಳು ನಿಮಗೂ ತಿಳಿದಿರಲಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.