Black Fungus: ಖಾಸಗಿ ಅಂಗಗಳ ಮೇಲೂ Mucormycosis ದಾಳಿ ಇಡುತ್ತಂತೆ ಎಚ್ಚರ!

Black Fungus: ಈ ಕುರಿತು ಹೇಳಿಕೆ ನೀಡಿರುವ ಡಾ. ರಣದೀಪ್ ಗುಲೇರಿಯಾ, ಮ್ಯೂಕರ್ ಮೈಕೊಸಿಸ್ ಪ್ರಮುಖವಾಗಿ ಮಣ್ಣಿನಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಇದು ಒಂದು ವ್ಯಕ್ತಿಯಿಂದ ಇನ್ನೊಂದು ವ್ಯಕ್ತಿಗೆ ಹರಡುವುದಿಲ್ಲ. ಸ್ಟೇರಾಯಿಡ್ ನೀಡದ ಜನರಲ್ಲಿ ಈ ಸೋಂಕು ಕಾಣುವ ಸಾಧ್ಯತೆ ತುಂಬಾ ಕಡಿಮೆಯಾಗಿದೆ. 

Written by - Nitin Tabib | Last Updated : May 24, 2021, 06:41 PM IST
  • ಮ್ಯೂಕರ್ಮೈಕೊಸಿಸ್ ಗೆ ಸಂಬಂಧಿಸಿದಂತೆ AIIMS ಅಧ್ಯಕ್ಷ ಡಾ. ರಣದೀಪ್ ಗುಲೇರಿಯಾ ಹೇಳಿದ್ದೇನು?
  • ಸ್ಟೆರಾಯಿಡ್ ಇಂಜೆಕ್ಷನ್ ಪಡೆದವರಲ್ಲಿ ಇದು ಹೆಚ್ಚಿಗೆ ಕಾಣಿಸಿಕೊಳ್ಳುತ್ತಿದೆ.
  • ಇದು ವ್ಯಕ್ತಿಗಳ ಖಾಸಗಿ ಅಂಗಗಳ ಮೇಲೂ ಕೂಡ ದಾಳಿ ಇಡುತ್ತದೆ.
Black Fungus: ಖಾಸಗಿ ಅಂಗಗಳ ಮೇಲೂ Mucormycosis ದಾಳಿ ಇಡುತ್ತಂತೆ ಎಚ್ಚರ! title=
Black Fungus Attacks Private Parts (Courtesy - India.com)

ನವದೆಹಲಿ: Black Fungus - ಕೊರೊನಾ ವೈರಸ್ (Coronavirus) ಬಳಿಕ ಮ್ಯೂಕರ್ ಮೈಕೊಸಿಸ್ ಅಥವಾ ಬ್ಲಾಕ್ ಫಂಗಸ್ (Black Fungus) ಪ್ರಕರಣಗಳಲ್ಲಿ ನಿರಂತರ ಏರಿಕೆಯಾಗುತ್ತಿದೆ. ಪ್ರಸ್ತುತ ಆರಂಭಿಕ ಹಂತದಲ್ಲಿರುವ ಕಾರಣ ಜನರ ಮನಸ್ಸಿನಲ್ಲಿ ಈ ರೋಗಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳಿವೆ. ಏತನ್ಮಧ್ಯೆ ತಜ್ಞರು ಮತ್ತೊಮ್ಮೆ ಬ್ಲಾಕ್ ಫಂಗಸ್ ಕುರಿತು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.

Immunity ಕಡಿಮೆ ಇರುವವರಲ್ಲಿ ಇದು ದಾಳಿ ಇಡುತ್ತಿದೆ
ಈ ಕುರಿತು ಹೇಳಿಕೆ ನೀಡಿರುವ AIIMS ಡಾ. ರಣದೀಪ್ ಗುಲೇರಿಯಾ, ಬ್ಲಾಕ್ ಫಂಗಸ್ ನ ತನ್ನದೇ ಆದ ಫ್ಯಾಮಿಲಿ ಹೊಂದಿದೆ ಎಂದಿದ್ದಾರೆ. Immunity ಕಡಿಮೆ ಇರುವ ಜನರಲ್ಲಿ ಮ್ಯೂಕರ್ಮೈಕೊಸಿಸ್ (Mucormycosis) ಹೆಚ್ಚು ಕಂಡುಬರುತ್ತಿದೆ. ಇದು ಪ್ರಮುಖವಾಗಿ ಸೈನಸ್ ನಲ್ಲಿ ಕಂಡುಬರುತ್ತಿದೆ. ಕೆಲವೊಮ್ಮೆ ಇದು ಶ್ವಾಸಕೋಶದಲ್ಲಿಯೂ (Lungs) ಕೂಡ ಕಾಣಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಖಾಸಗಿ ಅಂಗದ ಮೇಲೆ ಪ್ರಭಾವ
ಇದಲ್ಲದೆ ಬ್ಲಾಕ್ ಫಂಗಸ್ ಖಾಸಗಿ ಅಂಗಳಗಳಲ್ಲಿಯೂ (Private Part) ಕೂಡ ಇನ್ಫೆಕ್ಷನ್ (Fungal Infection) ಹರಡುವ ಸಾಧ್ಯತೆ ಇದೆ ಎಂದು AIIMS ಅಧ್ಯಕ್ಷ ಡಾ. ರಣದೀಪ್ ಗುಲೇರಿಯಾ (Dr. Ranadeep Guleria) ಹೇಳಿದ್ದಾರೆ. ಮ್ಯೂಕರ್ ಮೈಕೊಸಿಸ್ ಪ್ರಮುಖವಾಗಿ ಮಣ್ಣಿನಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಒಂದು ವ್ಯಕ್ತಿಯಿಂದ ಇನ್ನೊಂದು ವ್ಯಕ್ತಿಗೆ ಹರಡುವುದಿಲ್ಲ. ಸ್ಟೆರಾಯಿಡ್ ನೀಡದೆ ಇರುವ ರೋಗಿಗಳಲ್ಲಿ ಈ ಸೋಂಕು ತೀರಾ ಕಡಿಮೆ ಕಾಣಿಸಿಕೊಂಡಿದೆ. ಇದಲ್ಲದೆ ಈ ರೋಗ ಹರಡುವಿಕೆಗೆ ಆಕ್ಸಿಜನ್ ಒಂದೇ ಕಾರಣ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ-K Sudhakar : 'ರಾಜ್ಯದಲ್ಲಿ 300ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ'

ಮ್ಯೂಕರ್ಮೈಕೊಸಿಸ್ ಲಕ್ಷಣಗಳೇನು?
ಇದರ ಚಿಕಿತ್ಸೆ ಒಂದು ದೀರ್ಘಕಾಲದ ಪ್ರಕ್ರಿಯೆಯಾಗಿದೆ. ಇದರ ಲಕ್ಷಣಗಳಲ್ಲಿ ಮೂಗು ಬಿಗಿದುಕೊಳ್ಳುತ್ತದೆ. ಮೂಗಿನಿಂದ ರಕ್ತಶ್ರಾವ, ಕನ್ನಿದಿಂದ ಮೂಗಿನವರೆಗೆ ಬಾವು ಕಾಣಿಸಿಕೊಳ್ಳುವುದು. ಒಂದೇ ಬದಿಗೆ ನೋವು ಕಾಣಿಸಿಕೊಳ್ಳುವುದು, ಮುಖದ ಮೇಲಿನ ಸಂವೇದನೆ ಕಳೆದುಕೊಳ್ಳುವುದು ಇವು ಈ ಸೋಂಕಿನ ಲಕ್ಷಣಗಳಾಗಿವೆ. ಇದೊಂದು ಸಿಂಪಲ್ ಟೆಸ್ಟ್ ಆಗಿದ್ದು ಇದನ್ನು ಫಂಗಲ್ ಇನ್ಫೆಕ್ಷನ್ ಕರೆಯುವುದು ಹೆಚ್ಚು ಸೂಕ್ತ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Corona: ಮೂರು ರಾಜ್ಯಗಳಲ್ಲಿ ಮಕ್ಕಳಲ್ಲಿ ಹೆಚ್ಚಾದ ಕರೋನಾ ಸೋಂಕು, ಇದರ ಲಕ್ಷಣಗಳೇನು?

ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಸತತ ಇಳಿಕೆಯಾಗುತ್ತಿದೆ
ಇನ್ನೊಂದೆಡೆ ಈ ಕುರಿತು ಹೇಳಿಕೆ ನೀಡಿರುವ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್, ಕೊರೊನಾ (Covid-19) ಡೆಲಿ ಪ್ರಕರಣಗಳ ಸಂಖ್ಯೆಯಲ್ಲಿ ಕಳೆದ ಎರಡು ದಿನಗಳಲ್ಲಿ 5 ಲಕ್ಷಕ್ಕೂ ಕಡಿಮೆ ಇಳಿಕೆಯಾಗಿದೆ. ಕಳೆದ 40 ದಿನಗಳ ಕುರಿತು ಹೇಳುವುದಾದರೆ, ಈ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಜಿಲ್ಲಾ ಮಟ್ಟದಲ್ಲಿಯೂ ಕೂಡ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು ಚೇತರಿಕೆಯ ಪ್ರಮಾಣ ಕೂಡ ಏರಿಕೆಯಾಗಿದೆ. ಪ್ರಸ್ತುತ ರಿಕವರಿ ರೇಟ್ ಶೇ.81 ರಿಂದ ಶೇ.88ಕ್ಕೆ ಏರಿಕೆಯಾಗಿದೆ. ಇಲ್ಲಿ ವಿಶೇಷ ಎಂದರೆ ಕಳೆದ 11 ದಿನಗಳಲ್ಲಿ ರಿಕವರಿ ರೇಟ್ ಹೆಚ್ಚಾಗಿದೆ. ಕಳೆದ 22 ದಿನಗಳಲ್ಲಿ ಅತ್ಯಂತ ವೇಗವಾಗಿ ಪ್ರಕರಣಗಳು ಕಡಿಮೆಯಾಗುವುದನ್ನು ನಾವು ಗಮನಿಸಬಹುದು ಎಂದು ಅವರು ಹೇಳಿದ್ದಾರೆ. ಮೇ 10 ರಂದು 37 ಲಕ್ಷ 44 ಸಾವಿರ ಕೊರೊನಾ ಪ್ರಕರಣಗಳಿದ್ದವು, ಮೇ 16 ರಂದು ಈ ಸಂಖ್ಯೆ 36 ಲಕ್ಷಕ್ಕೆ ಇಳಿಕೆಯಾಗಿದ್ದರೆ, ಪ್ರಸ್ತುತ ಹೊಸ ಪ್ರಕರಣಗಳ ಸಂಖ್ಯೆ 27 ಲಕ್ಷಗಳಷ್ಟಾಗಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಟೆಸ್ಟಿಂಗ್ ಕೂಡ ಹೆಚ್ಚಿಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ-Corona ಹರಡುವುದಕ್ಕು ಮುನ್ನ ಅನಾರೋಗ್ಯಕ್ಕೆ ತುತ್ತಾಗಿದ್ದರಂತೆ Wuhan Labನ ಮೂವರು ಸಿಬ್ಬಂದಿಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News