Black Coffee with Lemon: ಬ್ಲ್ಯಾಕ್ ಕಾಫಿಯೊಂದಿಗೆ ನಿಂಬೆ ಬೆರೆಸಿ ಕುಡಿಯುವುದರಿಂದ ಹೊಟ್ಟೆಯ ಕೊಬ್ಬು ಮಾಯವಾಗುತ್ತಾ?

ಕಾಫಿ ಮತ್ತು ನಿಂಬೆ ಎರಡರಲ್ಲೂ ಅನೇಕ ಪೋಷಕಾಂಶಗಳಿವೆ ಮತ್ತು ಅವುಗಳನ್ನು ಸೇವಿಸುವುದರಿಂದ ನೀವು ವಿವಿಧ ಪ್ರಯೋಜನಗಳನ್ನು ಪಡೆಯುತ್ತೀರಿ.

Written by - Puttaraj K Alur | Last Updated : Nov 7, 2021, 06:38 AM IST
  • ತೂಕ ಕಡಿಮೆ ಮಾಡಲು ನೀವು ಬ್ಲ್ಯಾಕ್ ಕಾಫಿ & ನಿಂಬೆ ಎರಡನ್ನೂ ಸೇವಿಸಬಹುದು
  • ಕಾಫಿಯು ಕೆಫೀನ್ ಹೊಂದಿರುತ್ತದೆ, ಇದು ಚಯಾಪಚಯವನ್ನು ಹೆಚ್ಚಿಸುತ್ತದೆ
  • ಪ್ರತಿದಿನ ನಿಂಬೆ ಸೇವಿಸುವುದರಿಂದ ತೂಕ ನಷ್ಟದ ಜೊತೆಗೆ ಅನೇಕ ಆರೋಗ್ಯ ಪ್ರಯೋಜನಗಳಿವೆ
Black Coffee with Lemon: ಬ್ಲ್ಯಾಕ್ ಕಾಫಿಯೊಂದಿಗೆ ನಿಂಬೆ ಬೆರೆಸಿ ಕುಡಿಯುವುದರಿಂದ ಹೊಟ್ಟೆಯ ಕೊಬ್ಬು ಮಾಯವಾಗುತ್ತಾ?   title=
ಬ್ಲ್ಯಾಕ್ ಕಾಫಿ & ನಿಂಬೆ ಎರಡನ್ನೂ ಸೇವಿಸಬಹುದು

ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ತೂಕ ಇಳಿಸುವ(Weight Loss) ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ನಿಂಬೆ ರಸದೊಂದಿಗೆ ಬ್ಲ್ಯಾಕ್ ಕಾಫಿಯನ್ನು ಕುಡಿಯುವುದು ತ್ವರಿತವಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಕಪ್ಪು ಕಾಫಿ ಮತ್ತು ನಿಂಬೆಯ ಸಂಯೋಜನೆಯು ತೂಕ ನಷ್ಟಕ್ಕೆ ನಿಜವಾಗಿಯೂ ಸಹಾಯಕವಾಗಿದೆಯೇ? ಇದರ ಬಗ್ಗೆ ತಜ್ಞರು ಏನು ಹೇಳುತ್ತಾರೆಂದು ತಿಳಿಯಿರಿ.

ನೀವು ನಿಂಬೆ & ಕಾಫಿ ಕುಡಿದರೆ ಏನಾಗುತ್ತದೆ?

ಆರೋಗ್ಯ ತಜ್ಞರ ಪ್ರಕಾರ, ಕಾಫಿ ಮತ್ತು ನಿಂಬೆ(Black Coffee With Lemon)ರಡರಲ್ಲೂ ಅನೇಕ ಪೋಷಕಾಂಶಗಳಿವೆ ಮತ್ತು ಅವುಗಳನ್ನು ಸೇವಿಸುವುದರಿಂದ ನೀವು ವಿವಿಧ ಪ್ರಯೋಜನಗಳನ್ನು ಪಡೆಯುತ್ತೀರಿ. ತೂಕವನ್ನು ಕಡಿಮೆ ಮಾಡಲು ನೀವು ಈ ಎರಡನ್ನೂ ಸೇವಿಸಬಹುದು. ಕಾಫಿಯು ಕೆಫೀನ್ ಅನ್ನು ಹೊಂದಿರುತ್ತದೆ, ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ಕೇಂದ್ರ ನರಮಂಡಲವನ್ನು ಉತ್ತೇಜಿಸುತ್ತದೆ ಮತ್ತು ಮನಸ್ಥಿತಿಯನ್ನು ಎಚ್ಚರಿಸುತ್ತದೆ. ಈ ಕಾರಣದಿಂದ ನಿಮ್ಮ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿದಂತಿರುತ್ತದೆ, ನೀವು ಮತ್ತೆ ಮತ್ತೆ ಆಹಾರ ಸೇವಿಸುವುದಿಲ್ಲ. ಇದರಿಂದ ನೀವು ಹೆಚ್ಚುವರಿ ಕ್ಯಾಲೊರಿಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸುತ್ತೀರಿ. ನಿಂಬೆ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ, ಇದು ಸ್ವತಂತ್ರ ರಾಡಿಕಲ್ ಹಾನಿಯಿಂದ ನಿಮ್ಮನ್ನು ರಕ್ಷಿಸುತ್ತದೆ.

ಇದನ್ನೂ ಓದಿ: Banana: ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ಸೇವನೆಯಿಂದ ಆಗುವ ಪರಿಣಾಮ ತಿಳಿದಿದೆಯೇ?

ಈ ಎರಡೂ ವಸ್ತುಗಳು ಆರೋಗ್ಯಕರವಾಗಿವೆ, ಆದರೆ ಇವೆರಡೂ ತೂಕವನ್ನು ಕಳೆದುಕೊಳ್ಳುವ ಮಾಂತ್ರಿಕ ಮಾರ್ಗವಲ್ಲ. ಕಾಫಿಯೊಂದಿಗೆ ನಿಂಬೆ ಬೆರೆಸಿ ಕುಡಿಯುವುದರಿಂದ ಹಸಿವು ಕಡಿಮೆಯಾಗುವುದು ಮತ್ತು ಖಂಡಿತವಾಗಿಯೂ ಚಯಾಪಚಯವನ್ನು ಹೆಚ್ಚಿಸುತ್ತದೆ. ಆದರೆ ಕೊಬ್ಬನ್ನು ಕರಗಿಸಲು ಇದು ತುಂಬಾ ಪರಿಣಾಮಕಾರಿ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ತೂಕವನ್ನು ಕಳೆದುಕೊಳ್ಳಲು(Weight Loss) ನೀವು ಇತರ ಅನೇಕ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ನಿಮ್ಮ ಜೀವನಶೈಲಿಯ ಅಭ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು.

ತೂಕ ಕಡಿಮೆ ಮಾಡಲು ಕಾಫಿ ಎಷ್ಟು ಪರಿಣಾಮಕಾರಿ?

ಕಾಫಿ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ ಎಂದು ಹಲವು ಅಧ್ಯಯನಗಳಲ್ಲಿ ತಿಳಿದುಬಂದಿದೆ. ಆದರೆ ಕಾಫಿ(Black Coffee)ಯಲ್ಲಿ ಹಾಲು ಮತ್ತು ಸಕ್ಕರೆ ಮಿಶ್ರಣ ಮಾಡಬೇಡಿ. ಇದರಿಂದ ನಿಮಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಕಾಫಿಯಲ್ಲಿ ಕೆಫೀನ್, ಥಿಯೋಬ್ರೊಮಿನ್, ಥಿಯೋಫಿಲಿನ್ ಮತ್ತು ಕ್ಲೋರೊಜೆನಿಕ್ ಆಮ್ಲದಂತಹ ಅಂಶಗಳಿವೆ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಂಬೆ(Lemon) ದೇಹವನ್ನು ನಿರ್ವಿಷಗೊಳಿಸುತ್ತದೆ, ಜೊತೆಗೆ ಜೀರ್ಣಕ್ರಿಯೆಯನ್ನು ಸರಿಯಾಗಿ ಇರಿಸುತ್ತದೆ.

ಇದನ್ನೂ ಓದಿ: Tulsi Leaves: ಈ ಸಮಸ್ಯೆ ಇರುವವರು ತಪ್ಪಿಯೂ ತುಳಸಿ ಎಲೆಯನ್ನು ತಿನ್ನಲೇಬಾರದು

ಹೆಚ್ಚು ಕಾಫಿ ಕುಡಿಯಬೇಡಿ

ನಿಮ್ಮ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಕಾಫಿ ಕುಡಿಯಬೇಡಿ. ಅತಿಯಾಗಿ ಕಾಫಿ ಸೇವನೆಯು ನಿರ್ಜಲೀಕರಣ, ತಲೆಸುತ್ತು ಮತ್ತು ತಲೆನೋವಿನಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದಲ್ಲದೆ ನಿಮಗೆ ಅಸಿಡಿಟಿ ಸಮಸ್ಯೆ ಇದ್ದರೆ ನಿಂಬೆಯನ್ನು ನಿಯಮಿತವಾಗಿ ಸೇವಿಸಬೇಕು.   

(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಈ ಸಲಹೆಗಳನ್ನು ಪಾಲಿಸುವ ಮೊದಲು ದಯವಿಟ್ಟು ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಿ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News