Booster Dose: ದೇಶದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ, ಏಪ್ರಿಲ್ 10 ರಿಂದ, ಬೂಸ್ಟರ್ ಡೋಸ್ ಅಭಿಯಾನ ಪ್ರಾರಂಭವಾಗಲಿದೆ. ಜನರು ತಮ್ಮ ಹತ್ತಿರದ ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಮೂಲಕ ಈ ಡೋಸ್ ಅನ್ನು ಪಡೆಯಲು ಸಾಧ್ಯವಾಗಲಿದೆ. ಇದಕ್ಕೂ ಒಂದು ದಿನ ಮುಂಚಿತವಾಗಿ, ಬೂಸ್ಟರ್ ಡೋಸ್‌ಗಳನ್ನು ತಯಾರಿಸುವ ಎರಡೂ ದೇಶೀಯ ಕಂಪನಿಗಳು ವ್ಯಾಕ್ಸಿನ್ ಬೆಲೆಗಳ ಕಡಿತದ ಬಗ್ಗೆ ಭಾರಿ ಘೋಷಣೆಯನ್ನು ಮೊಳಗಿಸಿವೆ.
ಕೋವಿಶೀಲ್ಡ್ ಬೂಸ್ಟರ್ ಡೋಸ್‌ನ ಕಡಿಮೆ ವೆಚ್ಚ
ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ SII CEO ಆದರ್ ಪೂನವಾಲಾ, “ಕೇಂದ್ರ ಸರ್ಕಾರದೊಂದಿಗಿನ ಚರ್ಚೆಯ ಬಳಿಕ, ಎಸ್‌ಐಐ ಖಾಸಗಿ ಆಸ್ಪತ್ರೆಗಳಿಗೆ ವಿತರಿಸುವ ಕೋವಿಡ್‌ಶೀಲ್ಡ್ ಬೂಸ್ಟರ್ ಡೋಸ್‌ನ (Booster Dose) ಬೆಲೆಯನ್ನು ಪ್ರತಿ ಡೋಸ್‌ಗೆ 600 ರಿಂದ 225 ಕ್ಕೆ ಇಳಿಕೆ ಮಾಡಲು ನಿರ್ಧರಿಸಿದೆ ಎಂದು ಘೋಷಿಸಲು ನಮಗೆ ಸಂತೋಷವಾಗುತ್ತಿದೆ. ಎಲ್ಲಾ 18+ ಜನರಿಗೆ ಮುನ್ನೆಚ್ಚರಿಕೆಯ ಪ್ರಮಾಣವನ್ನು ವಿಧಿಸುವ ಸರ್ಕಾರದ ಈ ನಿರ್ಧಾರವನ್ನು ನಾವು ಮತ್ತೊಮ್ಮೆ ಶ್ಲಾಘಿಸುತ್ತೇವೆ" ಎಂದು ಹೇಳಿದ್ದಾರೆ.
We are pleased to announce that after discussion with the Central Government, SII has decided to revise the price of COVISHIELD vaccine for private hospitals from Rs.600 to Rs 225 per dose. We once again commend this decision from the Centre to open precautionary dose to all 18+.
— Adar Poonawalla (@adarpoonawalla) April 9, 2022
ಇದನ್ನೂ ಓದಿ-ಜನಗಳೇ ಎಚ್ಚರ : ಭಾರತದಲ್ಲಿ ಶೀಘ್ರದಲ್ಲಿ 'ಕೊರೋನಾ ನಾಲ್ಕನೇ ಅಲೆ'
ಕೊವ್ಯಾಕ್ಸಿನ್ ಬೆಲೆಯೂ ಕೂಡ ರೂ.225ಕ್ಕೆ ಇಳಿಕೆಯಾಗಿದೆ
ಮತ್ತೊಂದೆಡೆ ಭಾರತ್ ಬಯೋಟೆಕ್ ಸಂಸ್ಥಾಪಕಿ ಸುಚಿತ್ರಾ ಅಲ್ಲಾ ಕೂಡ ಟ್ವೀಟ್ ಮಾಡುವ ಮೂಲಕ ಇದೇ ಘೋಷಣೆ ಮಾಡಿದ್ದಾರೆ. ಎಲ್ಲಾ ವಯಸ್ಕರಿಗೆ ಬೂಸ್ಟರ್ ಡೋಸ್ ಪರಿಚಯಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸಿದ ಬಳಿಕ ಖಾಸಗಿ ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್‌ನ ದರವನ್ನು 1200 ರೂ.ನಿಂದ 225 ರೂ.ಗೆ ಇಳಿಸಿದ್ದೇವೆ ಎಂದು ಅವರು ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.
Announcing #CovaxinPricing .
We welcome the decision to make available precautionary dose for all adults. In consultation with the Central Government, we have decided to revise the price of #COVAXIN from Rs 1200 to Rs 225 per dose, for #privatehospitals.🇮🇳💉💉💉😷— Suchitra Ella (@SuchitraElla) April 9, 2022
ಇದನ್ನೂ ಓದಿ-China: ಚೀನಾದಲ್ಲಿ ಮತ್ತೆ ಕೊರೊನಾ ಅಬ್ಬರ: ಶಾಂಘೈನಲ್ಲಿ ಅಂಗಡಿಗಳು ಬಂದ್
60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಬೂಸ್ಟರ್ ಡೋಸ್
60 ವರ್ಷ ಮೇಲ್ಪಟ್ಟವರು, ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯಕೀಯ ಸಿಬ್ಬಂದಿಗಳಿವೆ ಬೂಸ್ಟರ್ ಡೋಸ್ ವಿಧಿಸುವ ಅಭಿಯಾನ ಈಗಾಗಲೇ ಮುಂದುವರೆದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅವರಿಗೆ ಈ ಡೋಸ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ. ಇದೀಗ ಸರ್ಕಾರ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರಿಗೆ ಬೂಸ್ಟರ್ ಡೋಸ್ ನೀಡುವ ಅಭಿಯಾನವನ್ನು ಪ್ರಾರಂಭಿಸಲು ನಿರ್ಧರಿಸಿದೆ.ಆದರೆ, ಅದೇನೇ ಇರಲಿ ಬೆಲೆ ಇಳಿಕೆಯಾದರೂ ಕೂಡ 18 ವರ್ಷಕ್ಕಿಂತ ಮೇಲ್ಪಟ್ಟವರು ಬೂಸ್ಟರ್ ಡೋಸ್ ಹಾಕಿಸಿಕೊಳ್ಳಲು ಹಣ ಪಾವತಿಸಬೇಕಾಗಲಿದೆ ಎಂಬುದು ಮಾತ್ರ ನಿಜ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.